Last Updated:
ಗ್ರೂಪ್ ಬಿ ಭಾಗವಾಗಿರುವ ರಶೀದ್ ಖಾನ್ (Rashid Khan) ನೇತೃತ್ವದ ಅಫ್ಘಾನಿಸ್ತಾನ ತಂಡವು ಪಂದ್ಯಾವಳಿಯಲ್ಲಿ ಎರಡನೇ ಬಾರಿಗೆ ಆಡಲಿದ್ದು, ಸೂಪರ್ -4 ಗೆ ಟಿಕೆಟ್ ಪಡೆಯುವ ಗುರಿ ಹೊಂದಿದೆ. ಅಫ್ಘಾನ್ ಮೊದಲ ಪಂದ್ಯದಲ್ಲಿ ಹಾಂಗ್ ಕಾಂಗ್ ಅನ್ನು 94 ರನ್‌ಗಳಿಂದ ಸೋಲಿಸಿತ್ತು. ಅತ್ತ ಲಿಟನ್ ದಾಸ್ ನಾಯಕತ್ವದ ಬಾಂಗ್ಲಾದೇಶ ತಂಡವು ಗುಂಪು ಹಂತದ ತನ್ನ ಮೂರನೇ ಮತ್ತು ಕೊನೆಯ ಪಂದ್ಯವನ್ನು ಆಡಲಿದೆ.
ಮಂಗಳವಾರ ಏಷ್ಯಾಕಪ್ 2025ರ (Asia Cup) 9ನೇ ಪಂದ್ಯ ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ (Afghanistan-vs-Bangladesh) ನಡುವೆ ನಡೆಯುತ್ತಿದ್ದು ಎರಡೂ ತಂಡಗಳು ಅಬುಧಾಬಿಯ ಶೇಖ್ ಜಾಯೆದ್ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಿವೆ. ಈ ನಿರ್ಣಾಯಕ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ ತಂಡ ಬ್ಯಾಟಿಂಗ್ ಮಾಡಲು ನಿರ್ಧರಿಸಿದೆ. ಗ್ರೂಪ್ ಬಿ ಭಾಗವಾಗಿರುವ ರಶೀದ್ ಖಾನ್ (Rashid Khan) ನೇತೃತ್ವದ ಅಫ್ಘಾನಿಸ್ತಾನ ತಂಡವು ಪಂದ್ಯಾವಳಿಯಲ್ಲಿ ಎರಡನೇ ಬಾರಿಗೆ ಆಡಲಿದ್ದು, ಸೂಪರ್ -4 ಗೆ ಟಿಕೆಟ್ ಪಡೆಯುವ ಗುರಿ ಹೊಂದಿದೆ. ಅಫ್ಘಾನ್ ಮೊದಲ ಪಂದ್ಯದಲ್ಲಿ ಹಾಂಗ್ ಕಾಂಗ್ ಅನ್ನು 94 ರನ್‌ಗಳಿಂದ ಸೋಲಿಸಿತ್ತು. ಅತ್ತ ಲಿಟನ್ ದಾಸ್ ನಾಯಕತ್ವದ ಬಾಂಗ್ಲಾದೇಶ ತಂಡವು ಗುಂಪು ಹಂತದ ತನ್ನ ಮೂರನೇ ಮತ್ತು ಕೊನೆಯ ಪಂದ್ಯವನ್ನು ಆಡಲಿದೆ. ಇಂದು ಬಾಂಗ್ಲಾದೇಶ ಸೋತರೆ, ಅದು ಟೂರ್ನಿಯಿಂದ ಹೊರಗುಳಿಯುತ್ತದೆ. ಎರಡು ಪಂದ್ಯಗಳಲ್ಲಿ ಕೇವಲ ಎರಡು ಅಂಕಗಳನ್ನು ಹೊಂದಿದೆ. ಬಾಂಗ್ಲಾದೇಶ ತನ್ನ ಕೊನೆಯ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 6 ವಿಕೆಟ್‌ಗಳಿಂದ ಸೋಲು ಕಂಡಿದೆ.
ಅಫ್ಘಾನಿಸ್ತಾನ ಕಳೆದ ಪಂದ್ಯದ ತಂಡವನ್ನೇ ಮುಂದುವರಿಸಿದೆ. ಆದರೆ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಬಾಂಗ್ಲಾದೇಶ ತಂಡ 4 ಪ್ರಮುಖ ಬದಲಾವಣೆ ಮಾಡಿಕೊಂಡಿದೆ. ಬಾಂಗ್ಲಾದೇಶ ನಾಲ್ಕು ಬದಲಾವಣೆಗಳನ್ನು ಮಾಡಿದೆ. ಸೈಫ್ ಹಸನ್, ನೂರುಲ್ ಹಸನ್, ನಸುಮ್ ಅಹ್ಮದ್ ಮತ್ತು ತಸ್ಕಿನ್ ಅಹ್ಮದ್ ತಂಡ ಸೇರಿಕೊಂಡಿದ್ದು, ಪರ್ವೇಜ್ ಹೊಸೈನ್ ಎಮೋನ್, ಮಹೇದಿ ಹಸನ್, ತನ್ಜಿಮ್ ಹಸನ್ ಸಾಕಿಬ್ ಮತ್ತು ಶೋರಿಫುಲ್ ಇಸ್ಲಾಂ ನಿರ್ಣಾಯಕ ಪಂದ್ಯದಿಂದ ಹೊರಬಿದ್ದಿದ್ದಾರೆ.
ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ ಇಲ್ಲಿಯವರೆಗೆ 12 T20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿವೆ. ಈ ಸಮಯದಲ್ಲಿ ಅಫ್ಘಾನಿಸ್ತಾನ ಮೇಲುಗೈ ಸಾಧಿಸಿದೆ. ಅಫ್ಘಾನಿಸ್ತಾನ 7 ಪಂದ್ಯಗಳನ್ನು ಗೆದ್ದರೆ, ಬಾಂಗ್ಲಾದೇಶ 5 ಪಂದ್ಯಗಳನ್ನು ಗೆದ್ದಿದೆ.
ಅಫ್ಘಾನಿಸ್ತಾನ: ರಹಮಾನುಲ್ಲಾ ಗುರ್ಬಾಜ್ (ವಿಕೀ), ಸೆದಿಕುಲ್ಲಾ ಅಟಲ್, ಇಬ್ರಾಹಿಂ ಜದ್ರಾನ್, ಗುಲ್ಬದಿನ್ ನೈಬ್, ಅಜ್ಮತುಲ್ಲಾ ಒಮರ್ಜಾಯ್, ಮೊಹಮ್ಮದ್ ನಬಿ, ಕರೀಮ್ ಜನತ್, ರಶೀದ್ ಖಾನ್ (ನಾಯಕ), ನೂರ್ ಅಹ್ಮದ್, ಅಲ್ಲಾ ಘಝನ್‌ಫರ್, ಫಜಲಕ್ ಫರೂಕಿ
ಬಾಂಗ್ಲಾದೇಶ: ತಂಜಿದ್ ಹಸನ್ ತಮೀಮ್, ಸೈಫ್ ಹಸನ್, ಲಿಟನ್ ದಾಸ್ (ನಾಯಕ ಮತ್ತು ವಿಕೆಟ್ ಕೀಪರ್), ತೌಹಿದ್ ಹೃದೋಯ್, ನುರುಲ್ ಹಸನ್, ಜಾಕರ್ ಅಲಿ, ಶಮೀಮ್ ಹೊಸೈನ್, ನಸುಮ್ ಅಹ್ಮದ್, ತಸ್ಕಿನ್ ಅಹ್ಮದ್, ಮುಸ್ತಾಫಿಜುರ್ ರಹಮಾನ್, ರಿಶಾದ್ ಹೊಸೈನ್
September 16, 2025 7:51 PM IST