ಇದೀಗ ಬುಧವಾರ ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ನಡುವೆ ನಿರ್ಣಾಯಕ ಗ್ರೂಪ್ ಬಿ ಪಂದ್ಯ ನಡೆಯಲಿದೆ. ಈ ಪಂದ್ಯದ ನಂತರ, ಸೂಪರ್ ಫೋರ್ ಚಿತ್ರಣ ಸ್ಪಷ್ಟವಾಗಲಿದೆ, ಜೊತೆಗೆ ಟೂರ್ನಿಯಿಂದ ಹೊರಬಿದ್ದ ನಾಲ್ಕನೇ ತಂಡ ಯಾವುದು ಎಂಬುದು ಸ್ಪಷ್ಟವಾಗುತ್ತದೆ. ಇಲ್ಲಿಯವರೆಗೆ, ಭಾರತ ಮತ್ತು ಪಾಕಿಸ್ತಾನ ಮಾತ್ರ ಸೂಪರ್ ಫೋರ್‌ಗೆ ಅರ್ಹತೆ ಪಡೆದಿವೆ. ಗ್ರೂಪ್ ಬಿ ಯಿಂದ ಶ್ರೀಲಂಕಾ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶಗಳು ರೇಸ್‌ನಲ್ಲಿವೆ.