ಮೊದಲ ಸೂಪರ್ 4 ಪಂದ್ಯದಲ್ಲಿ ಟಾಸ್ ಗೆಲ್ಲುತ್ತಿದ್ದಂತೆ ಬಾಂಗ್ಲಾದೇಶ ನಾಯಕ ಲಿಟನ್ ದಾಸ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಇನ್ನು ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಬ್ಯಾಟಿಂಗ್ ಮಾಡಿದ ಶ್ರೀಲಂಕಾ ಮೊದಲ ವಿಕೆಟ್ಗೆ 5 ಓವರ್ಗಳಲ್ಲಿ 44 ರನ್ ಸೇರಿಸಿತು. ನಿಸ್ಸಾಂಕ 15 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ಸಹಿತ 22 ರನ್ಗಳಿಸಿ ತಸ್ಕಿನ್ ಅಹ್ಮದ್ ಬೌಲಿಂಗ್ನಲ್ಲಿ ಮೆಹಿದಿ ಹಸನ್ಗೆ ಕ್ಯಾಚ್ ನೀಡಿ ಔಟ್ ಆದರು. ನಂತರ ಬಂದ ಕಮಿಲ್ ಮಿಶಾರ 11 ಎಸೆತಗಲ್ಲಿ ಕೇವಲ 5 ರನ್ಗಳಿಸಿ ಮೆಹೆದಿ ಹಸನ್ ಬೌಲಿಂಗ್ನಲ್ಲಿ ಬೌಲ್ಡ್ ಆದರು.
4ನೇ ಕ್ರಮಾಂಕದಲ್ಲಿ ಬಂದ ಕುಸಾಲ್ ಪೆರೆರಾ 16 ಎಸೆತಗಳಲ್ಲಿ 16 ರನ್ಗಳಿಸಿ ಮುಸ್ತಫಿಜುರ್ ರೆಹಮಾನ್ ಬೌಲಿಂಗ್ನಲ್ಲಿ ಕೀಪರ್ ಲಿಟನ್ ದಾಸ್ಗೆ ಕ್ಯಾಚ್ ನೀಡಿದರು. 97ಕ್ಕೆ 4 ವಿಕೆಟ್ ಕಳೆದುಕೊಂಡಿದ್ದ ಶ್ರೀಲಂಕಾ 150ರ ಸನಿಹವೂ ಬರುವುದು ಅನುಮಾನ ಎನ್ನುವ ಸ್ಥಿತಿಯಲ್ಲಿತ್ತು. ಆದರೆ ಕೊನೆಯಲ್ಲಿ ದಾಸುನ್ ಶನಕ ಬಾಂಗ್ಲಾದೇಶ ಬೌಲರ್ಗಳ ಲೆಕ್ಕಾಚಾರವನ್ನ ಬುಡಮೇಲು ಮಾಡಿದರು. 5ನೇ ವಿಕೆಟ್ ಜೊತೆಯಾಟದಲ್ಲಿ ನಾಯಕ ಅಸಲಂಕಾ ಜೊತೆಗೂಡಿ 27 ಎಸೆತಗಳಲ್ಲಿ 57 ರನ್ಗಳ ಜೊತೆಯಾಟ ನೀಡಿ ತಂಡವ ಮೊತ್ತವನ್ನ ಹೆಚ್ಚಿಸಿದರು.
ಈ ಜೋಡಿ ತಂಡದ ಮೊತ್ತವನ್ನ 180ರ ತನಕ ತೆಗೆದುಕೊಂಡು ಹೋಗಬಹುದು ಎಂದೇ ನಿರೀಕ್ಷಿಸಲಾಗಿತ್ತು. ಆದರೆ 19ನೇ ಓವರ್ನಲ್ಲಿ ಮುಸ್ತಫಿಜುರ್ ಲೆಕ್ಕಾಚಾರ ಉಲ್ಟಾ ಮಾಡಿದರು. ಆ ಓವರ್ನಲ್ಲಿ 3 ವಿಕೆಟ್ ಪಡೆದು ಕೇವಲ 5 ರನ್ ಬಿಟ್ಟುಕೊಟ್ಟರು. 12 ಎಸೆತಗಳಲ್ಲಿ 21 ರನ್ಗಳಿಸಿದ್ದ ಅಸಲಂಕಾ 19ನೇ ಓವರ್ನ ಮೊದಲನೇ ಎಸೆತದಲ್ಲಿ ರನ್ಔಟ್ ಆದರು. ನಂತರ ಬಂದ ಕಮಿಂದು ಮೆಂಡಿಸ್ (1) ಹಾಗೂ ಹಸರಂಗ (2) ಅದೇ ಓವರ್ನಲ್ಲಿ ದೊಡ್ಡ ಹೊಡೆತಕ್ಕೆ ಯತ್ನಿಸಿ ವಿಕೆಟ್ ಒಪ್ಪಿಸಿದರು. ಇನ್ನು ಕೊನೆಯ ಓವರ್ನಲ್ಲಿ ತಸ್ನಿನ್ ಅಹ್ಮದ್ ಕೇವಲ 10 ರನ್ ಬಿಟ್ಟುಕೊಟ್ಟರು. ಶನಕ ಓವರ್ ಪೂರ್ತಿ ಆಡಿ ಒಂದು ಬೌಂಡರಿ, 1 ಸಿಕ್ಸರ್ ಸಹಿತ ಕೇವಲ 10 ರನ್ ಮಾತ್ರ ಸಿಡಿಸಿದರು. ಒಟ್ಟಾರೆ ಶನಕ 37 ಎಸೆತಗಳಲ್ಲಿ 3 ಬೌಂಡರಿ, 6 ಸಿಕ್ಸರ್ಗಳ ಸಹಿತ 64ರನ್ಗಳಿಸಿ ತಂಡದ ಮೊತ್ತವನ್ನು ಹೆಚ್ಚಿಸಿದರು.
ಬಾಂಗ್ಲಾದೇಶ (ಪ್ಲೇಯಿಂಗ್ XI) – ಸೈಫ್ ಹಸನ್, ತಂಝಿದ್ ಹಸನ್, ತೌಹಿದ್ ಹೃದಯ್, ಲಿಟ್ಟನ್ ದಾಸ್ (C/WK), ಶಮೀಮ್ ಹೊಸೈನ್, ಜಾಕರ್ ಅಲಿ, ಮಹೇದಿ ಹಸನ್ (ನೂರುಲ್ ಹಸನ್ ಬದಲಿಗೆ), ನಸುಮ್ ಅಹ್ಮದ್, ತಸ್ಕಿನ್ ಅಹ್ಮದ್, ಶೋರಿಫುಲ್ ಇಸ್ಲಾಂ (ರಿಶಾದ್ ಹೊಸೈನ್ ಬದಲಿಗೆ ),
ಶ್ರೀಲಂಕಾ (ಪ್ಲೇಯಿಂಗ್ XI) – ಪಾತುಮ್ ನಿಸ್ಸಾಂಕ, ಕುಸಲ್ ಮೆಂಡಿಸ್ (WK), ಕಮಿಲ್ ಮಿಶ್ರಾ, ಕುಸಲ್ ಪೆರೆರಾ, ಚರಿತ್ ಅಸಲಂಕಾ (ನಾಯಕ), ಕಮಿಂದು ಮೆಂಡಿಸ್, ದಸುನ್ ಶನಕ, ವನಿಂದು ಹಸರಂಗ, ದುನಿತ್ ವೆಲ್ಲಲಾಗೆ, ದುಷ್ಮಂತ ಚಮೀರ, ನುವಾನ್ ತುಷಾರ.
September 20, 2025 9:57 PM IST