ಫೈನಲ್ ಪ್ರವೇಶಿಸಲು ನಿರ್ಣಾಯಕವಾಗಿದ್ದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಶ್ರೀಲಂಕಾ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು ಕೇವಲ 134 ರನ್ಗಳಿಸಿತ್ತು. ಗುರಿ ಬೆನ್ನಟ್ಟಿದ ಪಾಕಿಸ್ತಾನ ಉತ್ತಮ ಆರಂಭ ಪಡೆಯಿತು. ಮೊದಲ ವಿಕೆಟ್ಗೆ ಪಾಕಿಸ್ತಾನ 45 ರನ್ಗಳ ಜೊತೆಯಾಟ ಸಾಧಿಸಿತು. ಸಾಹಿಬ್ಜಾದಾ ಫರ್ಹಾನ್ 15 ಎಸೆತಗಳಲ್ಲಿ 1 ಬೌಂಡರಿ, 2 ಸಿಕ್ಸರ್ ಸಹಿತ 24 ಹಾಗೂ ಫಖರ್ ಜಮಾನ್ 19 ಎಸೆತಗಳಲ್ಲಿ 17 ರನ್ಗಳಿಸಿದರು. ತೀಕ್ಷಣ ಇಬ್ಬರನ್ನಒಂದೇ ಓವರ್ನಲ್ಲಿ ಔಟ್ ಮಾಡಿ ಶ್ರೀಲಂಕಾಗೆ ಬಿಗ್ ಬ್ರೇಕ್ ತಂದುಕೊಟ್ಟರು.
ನಂತರದ ಓವರ್ನಲ್ಲೇ ಟೂರ್ನಿಯಲ್ಲಿ ಕಳಪೆ ಫಾರ್ಮ್ನಲ್ಲಿರುವ ಸೈಮ್ ಆಯುಬ್ ಕೇವಲ 2 ರನ್ಗಳಿಸಿ ಹಸರಂಗ ಬೌಲಿಂಗ್ನಲ್ಲಿ ಬೌಲ್ಡ್ ಆದರು. ಮತ್ತೆ ಹಸರಂತ ತಮ್ಮ 2ನೇ ಓವರ್ನಲ್ಲಿ ಪಾಕಿಸ್ತಾನ ತಂಡದ ನಾಯಕ ಸಲ್ಮಾನ್ ಅಲಿ ಆಘಾ (5) ರನ್ನ ಕೂಡ ಪೆವಿಲಿಯನ್ಗಟ್ಟು ಮೂಲಕ ಪಂದ್ಯದಲ್ಲಿ ಶ್ರೀಲಂಕಾ ತಂಡ ಕಮ್ಬ್ಯಾಕ್ ಮಾಡುವಂತೆ ಮಾಡಿದರು. ನಂತರ ಬಂದ ವಿಕೆಟ್ ಕೀಪರ್ ಮೊಹಮ್ಮದ್ ಹಾರಿಸ್ 11 ಎಸೆತಗಳಲ್ಲಿ 13 ರನ್ಗಳಿಸಿ ಚಮೀರಾ ಬೌಲಿಂಗ್ನಲ್ಲಿ ಬೌಲ್ಡ್ ಆದರು.
ಶ್ರೀಲಂಕಾ ಪರ ವನಿಂದು ಹಸರಂಗ 27ಕ್ಕೆ 2, ಮಹೀಶ್ ತೀಕ್ಷಣ 24ಕ್ಕೆ2, ದುಷ್ಮಂತ ಚಮೀರಾ 31ಕ್ಕೆ1 ವಿಕೆಟ್ ಪಡೆದರಾದರೂ ಅವರ ಬೌಲಿಂಗ್ ಗೆಲುವಿಗೆ ಸಾಕಾಗಲಿಲ್ಲ.
ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ಭಾರೀ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ಮೊದಲ ಓವರ್ನ 2ನೇ ಎಸೆತದಲ್ಲೇ ಕುಸಾಲ್ ಮೆಂಡಿಸ್ (0) ವಿಕೆಟ್ ಕಳೆದುಕೊಂಡಿತು. ಮೆಂಡಿಸ್ ಖಾತೆ ತೆರೆಯದೇ ಶಾಹೀನ್ ಅಫ್ರಿದಿ ಬೌಲಿಂಗ್ನಲ್ಲಿ ಗೋಲ್ಡನ್ ಡಕ್ ಆದರು. ನಂತರ ಮತ್ತೊಬ್ಬ ಆರಂಭಿಕ ಬ್ಯಾಟರ್ ಪಾತುಮ್ ನಿಸ್ಸಾಂಕ ಕೇವಲ 8 ರನ್ಗಳಿಸಿ 3ನೇ ಓವರ್ನಲ್ಲಿ ಅಫ್ರಿದಿಗೆ 2ನೇ ಬಲಿಯಾದರು. 3ನೇ ವಿಕೆಟ್ಗೆ ಒಂದಾದ ಕುಸಾಲ್ ಪೆರೆರಾ ಹಾಗೂ ನಾಯಕ ಚರಿತ್ ಅಸಲಂಕಾ 25 ರನ್ ಸೇರಿಸಿದರು. ಆದರೆ 15 ರನ್ಗಳ ಅಂತರದಲ್ಲಿ ಇಬ್ಬರು ಔಟ್ ಆದರು.
ಪೆರೆರಾ 12 ಎಸೆತಗಳಲ್ಲಿ 15 ರನ್ಗಳಿಸಿ ಹ್ಯಾರಿಸ್ ರೌಫ್ಗೆ ವಿಕೆಟ್ ಒಪ್ಪಿಸಿದರೆ, ಚರಿತ್ ಅಸಲಂಕಾ 19 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ಸಹಿತ 20 ರನ್ಗಳಿಸಿ ಹುಸೇನ್ ತಲತ್ ಬೌಲಿಂಗ್ನಲ್ಲಿ ರೌಫ್ಗೆ ಕ್ಯಾಚ್ ನೀಡಿ ಔಟ್ ಆದರು. ನಂತರ ಬಂದ ಕಳೆದ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಸ್ಫೋಟಕ ಅರ್ಧಶತಕ ಸಿಡಿಸಿದ್ದ ಶನಕ ಖಾತೆ ತೆರೆಯದೇ ತಲತ್ ಬೌಲ್ಡ್ ಆದರು.
ನಂತರ ಬಂದ ವನಿಂದು ಹಸರಂಗ 13 ಎಸೆತಗಳಲ್ಲಿ 15 ರನ್ಗಳಿಸಿದರು. ಚಮಿಕಾ ಕರುಣರತ್ನೆ ಹಾಗೂ ಕಮಿಂದು ಮೆಂಡಿಸ್ 7ನೇ ವಿಕೆಟ್ ಜೊತೆಯಾಟದಲ್ಲಿ 43 ರನ್ಗಳಿಸಿಗಳ ಜೊತೆಯಾಟ ನೀಡಿ ತಂಡದ ಮೊತ್ತವನ್ನ 100ರ ಗಡಿ ದಾಟಿಸಿದರು. ಮೆಂಡಿಸ್ 44 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್ ಸಹಿತ 50 ರನ್ಗಳಿಸಿದರು. ಆದರೆ ಕರುಣರತ್ನೆ 21 ಎಸೆತಗಳಲ್ಲಿ 2 ಬೌಂಡರಿ ಸಹಿತ ಕೇವಲ 17 ರನ್ಗಳಿಸಿದರು.
ಹುಸೇನ್ ತಲಾತ್ 18ಕ್ಕೆ2, ಅಬ್ರಾರ್ ಅಹ್ಮದ್ 4 ಓವರ್ಗಳಲ್ಲಿ 8 ರನ್ ನೀಡಿ 1 ವಿಕೆಟ್, ಹ್ಯಾರಿಸ್ ರೌಫ್ 37ಕ್ಕೆ2, ಶಾಹೀನ್ ಅಫ್ರಿದಿ 28ಕ್ಕೆ3 ವಿಕೆಟ್ ಪಡೆದು ಮಿಂಚಿದರು.
ಭಾರತದ ವಿರುರ್ಧ ಲೀಗ್ ಹಾಗೂ ಸೂಪರ್ 4 ಹಂತದಲ್ಲಿ ಸೋಲು ಕಂಡಿರುವ ಪಾಕಿಸ್ತಾನ ಈ ಪಂದ್ಯದ ಗೆಲುವಿನೊಂದಿಗೆ ಮತ್ತೆ ಫೈನಲ್ ಪ್ರವೇಶಿಸುವ ಆಸೆಯನ್ನ ಜೀವಂತವಾಗಿರಿಸಿಕೊಂಡಿದೆ. ಮುಂದಿನ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನ ಮಣಿಸಿದರೆ ಮತ್ತೊಂದು ಹೈವೋಲ್ಟೇಜ್ ಪಂದ್ಯದಲ್ಲಿ ಭಾರತವನ್ನ ಎದುರಿಸಲಿದೆ. ಇನ್ನು ಶ್ರೀಲಂಕಾ ತಂಡ ಈ ಸೋಲಿನೊಂದಿಗೆ ಟೂರ್ನಿಯಿಂದಲೇ ಹೊರಬಿದ್ದಿದೆ.
ನಾಳೆ ಭಾರತ-ಬಾಂಗ್ಲಾದೇಶದ ವಿರುದ್ಧ ಮತ್ತೊಂದು ಪಂದ್ಯ ನಡೆಯಲಿದ್ದು, ಈ ಪಂದ್ಯವನ್ನ ಭಾರತ ಗೆದ್ದರೆ ಫೈನಲ್ ಸ್ಥಾನವನ್ನ ಬಹುತೇಕ ಖಚಿತಪಡಿಸಿಕೊಳ್ಳಲಿದೆ.
September 24, 2025 12:21 AM IST