Asia Cup: ಸೂರ್ಯಕುಮಾರ್, ಬುಮ್ರಾ ಔಟ್, ಅಯ್ಯರ್ ಇನ್, ಆಲ್​ರೌಂಡರ್​​ಗೆ ನಾಯಕತ್ವ ; ಹೀಗಿರಲಿದೆ ಏಷ್ಯಾ ಕಪ್‌ಗೆ ಟೀಂ ಇಂಡಿಯಾ | india pakistan asia cup match september 7 dubai and here is the Possible team

Asia Cup: ಸೂರ್ಯಕುಮಾರ್, ಬುಮ್ರಾ ಔಟ್, ಅಯ್ಯರ್ ಇನ್, ಆಲ್​ರೌಂಡರ್​​ಗೆ ನಾಯಕತ್ವ ; ಹೀಗಿರಲಿದೆ ಏಷ್ಯಾ ಕಪ್‌ಗೆ ಟೀಂ ಇಂಡಿಯಾ | india pakistan asia cup match september 7 dubai and here is the Possible team
ಸೆಪ್ಟೆಂಬರ್ 5 ರಿಂದ ಪ್ರಾರಂಭ

ಮಾಧ್ಯಮ ವರದಿಯ ಪ್ರಕಾರ, ಏಷ್ಯಾಕಪ್ ಸೆಪ್ಟೆಂಬರ್ 5 ರಿಂದ ಪ್ರಾರಂಭವಾಗುವ ಸಾಧ್ಯತೆಯಿದೆ, ಸೆಪ್ಟೆಂಬರ್ 21 ರಂದು ಫೈನಲ್ ಪಂದ್ಯ ನಡೆಯಲಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಬ್ಲಾಕ್‌ಬಸ್ಟರ್ ಪಂದ್ಯ ಸೆಪ್ಟೆಂಬರ್ 7 ರಂದು ದುಬೈನಲ್ಲಿ ನಡೆಯಲಿದೆ. ಏಷ್ಯಾಕಪ್ ಅನ್ನು ಟಿ 20 ಸ್ವರೂಪದಲ್ಲಿ ಆಡಲಾಗುವುದು, ಮುಂದಿನ ವರ್ಷ ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿರುವ ಟಿ 20 ವಿಶ್ವಕಪ್ ಮೇಲೆ ಗಮನ ಹರಿಸುವ ಉದ್ದೇಶದಿಂದ ಈ ಟೂರ್ನಿ ಅನುಕೂಲವಾಗಲಿದೆ.

ಸೂರ್ಯ ರೆಸ್ಟ್, ಹಾರ್ದಿಕ್ ನಾಯಕ

ಏಷ್ಯಾ ಕಪ್‌ಗಾಗಿ ಭಾರತ ತಂಡವನ್ನು ಟಿ-20 ವಿಶ್ವಕಪ್ ಆಡುವ ಎಲ್ಲಾ ಆಟಗಾರರನ್ನು ಆಯ್ಕೆ ಮಾಡಬೇಕು. ಆದ್ರೆ, ನಾಯಕ ಸೂರ್ಯಕುಮಾರ್ ಯಾದವ್ ಇತ್ತೀಚೆಗೆ ಹರ್ನಿಯಾ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರಿಂದ ಅವರು ತಂಡದಿಂದ ಹೊರಗುಳಿಯುವ ಸಾಧ್ಯತೆಯಿದೆ. ಅವರ ಅನುಪಸ್ಥಿತಿಯಲ್ಲಿ ಹಾರ್ದಿಕ್ ಪಾಂಡ್ಯ ತಂಡದ ನಾಯಕನನ್ನಾಗಿ ನೇಮಿಸುವ ಸಾಧ್ಯತೆ ಇದೆ.

ಐಪಿಎಲ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ನಂತರ ಸಾಯಿ ಸುದರ್ಶನ್ ಅವರಿಗೆ ತಂಡದಲ್ಲಿ ಅವಕಾಶ ಪಡೆಯಬಹುದು ಎಂದು ಹೇಳಲಾಗುತ್ತಿದೆ. ಸಂಜು ಸ್ಯಾಮ್ಸನ್, ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ರಿಂಕು ಸಿಂಗ್, ಧ್ರುವ್ ಜುರೆಲ್ ಮತ್ತು ಶ್ರೇಯಸ್ ಅಯ್ಯರ್ ತಂಡದಲ್ಲಿ ಇತರ ಬ್ಯಾಟ್ಸ್‌ಮನ್‌ಗಳಾಗಿರುವ ಸಾಧ್ಯತೆ ಹೆಚ್ಚು.

ಏಷ್ಯಾಕಪ್‌ಗೆ ಸಂಭವನೀಯ ತಂಡ

ಏಷ್ಯಾಕಪ್‌ಗೆ ಭಾರತದ ಸಂಭಾವ್ಯ ತಂಡ: ಸಂಜು ಸ್ಯಾಮ್ಸನ್, ಅಭಿಷೇಕ್ ಶರ್ಮಾ, ಸಾಯಿ ಸುದರ್ಶನ್, ತಿಲಕ್ ವರ್ಮಾ, ರಿಂಕು ಸಿಂಗ್, ಶ್ರೇಯಸ್ ಅಯ್ಯರ್, ನಿತೀಶ್ ರೆಡ್ಡಿ, ಧ್ರುವ್ ಜುರೆಲ್, ವಾಷಿಂಗ್ಟನ್ ಸುಂದರ್, ಅಕ್ಸರ್ ಪಟೇಲ್, ಹಾರ್ದಿಕ್ ಪಾಂಡ್ಯ (ಸಿ), ಅರ್ಷ್‌ದೀಪ್ ಸಿಂಗ್, ಕುಲದೀಪ್ ಚಕ್ರವರ್ತಿ, ವರುಣ್ತ್ ಚಕ್ರವರ್ತಿ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ.