Last Updated:
ಅಬುಧಾಬಿಯ ಶೇಖ್ ಜಾಯೆದ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 9ನೇ ಪಂದ್ಯದಲ್ಲಿ ಬಾಂಗ್ಲಾದೇಶ ತಂಡ ರೋಚಕ ಜಯ ಸಾಧಿಸಿ ಏಷ್ಯಾಕಪ್ನಲ್ಲಿ ಸೂಪರ್ 4 ಪ್ರವೇಶಿಸುವ ಆಸೆಯನ್ನ ಜೀವಂತವಾಗಿರಿಸಿಕೊಂಡಿದೆ
ಅಬುಧಾಬಿಯ ಶೇಖ್ ಜಾಯೆದ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 9ನೇ ಪಂದ್ಯದಲ್ಲಿ ಬಾಂಗ್ಲಾದೇಶ ತಂಡ ರೋಚಕ ಜಯ ಸಾಧಿಸಿ ಏಷ್ಯಾಕಪ್ನಲ್ಲಿ ಸೂಪರ್ 4 ಪ್ರವೇಶಿಸುವ ಆಸೆಯನ್ನ ಜೀವಂತವಾಗಿರಿಸಿಕೊಂಡಿದೆ. 155 ರನ್ಗಳ ಸಾಧಾರಣ ಗುರಿ ಬೆನ್ನಟ್ಟಿದ ಅಫ್ಘಾನಿಸ್ತಾನ ತಂಡ 20 ಓವರ್ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 146 ರನ್ಗಳಿಸಲಷ್ಟೇ ಶಕ್ತವಾಯಿತು. ರಹ್ಮಾನುಲ್ಲಾ ಗುರ್ಬಜ್ 35, ಒಮರ್ಝಾಯ್ 30 ರನ್ಗಳಿಸಿ ಹೋರಾಟ ನಡೆಸಿದರಾದರೂ, ಪಂದ್ಯವನ್ನ ಗೆಲ್ಲಿಸಲು ಇವರ ಹೋರಾಟ ಸಾಕಾಗಲಿಲ್ಲ. ರಶೀದ್ ಖಾನ್, ನೂರ್ ಅಹ್ಮದ್ ಕೊನೆಯಲ್ಲಿ ಒಂದೆರಡು ಬೌಂಡರಿಗಳನ್ನ ಸಿಡಿಸಿ ಸೋಲಿನ ಅಂತರವನ್ನ 8ಕ್ಕಿಳಿಸಿ ರನ್ರೇಟ್ ಉಳಿಸಿಕೊಂಡರು.
155 ರನ್ಗಳ ಸಾಧಾರಣ ಗುರಿಯನ್ನ ಬೆನ್ನಟ್ಟಿದ ಅಫ್ಘಾನಿಸ್ತಾನ ತಂಡ ಮೊದಲ ಓವರ್ನಲ್ಲೇ ಮೊದಲ ಎಸೆತದಲ್ಲೇ ವಿಕೆಟ್ ಕಳೆದುಕೊಂಡು ಆಘಾತ ಎದುರಿಸಿತು. ಸೆದಿಕುಲ್ಲಾ ಅಟಲ್ ಖಾತೆ ತೆರೆಯದೇ ನಾಸುಮ್ ಅಹ್ಮದ್ಗೆ ವಿಕೆಟ್ ಒಪ್ಪಿಸಿದರು. 3ನೇ ಕ್ರಮಾಂಕದಲ್ಲಿ ಬಂದ ತಂಡದ ಸ್ಟಾರ್ ಬ್ಯಾಟರ್ ಇಬ್ರಾಹಿಂ ಜದ್ರಾನ್ 12 ಎಸೆತಗಳಲ್ಲಿ ಕೇವಲ 5 ರನ್ಗಳಿಸಿ ನಾಸುಮ್ ಅಹ್ಮದ್ಗೆ 2ನೇ ಬಲಿಯಾದರು. ಅಫ್ಘಾನ್ ಪವರ್ ಪ್ಲೇನಲ್ಲಿ ಕೇವಲ 27 ರನ್ಗಳಿಸಿ ಔಟ್ ಆದರು.
September 17, 2025 12:07 AM IST