Last Updated:
ಅಭಿಷೇಕ್ ಶರ್ಮಾ ಕೇವಲ 37 ಎಸೆತಗಳಲ್ಲಿ 75 ರನ್ಗಳಿಸಿದರೂ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ವೈಫಲ್ಯದಿಂದ ಟೀಮ್ ಇಂಡಿಯಾ ಬಾಂಗ್ಲಾದೇಶಕ್ಕೆ 169 ರನ್ಗಳ ಸಾಧಾರಣ ಗುರಿ ನೀಡಿದೆ.
ಭಾರತ ತಂಡ ಏಷ್ಯಾಕಪ್ ಸೂಪರ್ 4 ಹಂತರ ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ನಿರೀಕ್ಷಿತ ಪ್ರದರ್ಶನ ತೋರಿವಲ್ಲಿ ವಿಫಲವಾಗಿದೆ. ಅಭಿಷೇಕ್ ಶರ್ಮಾ ಸಿಡಿಲಬ್ಬರದ ಹೊರತಾಗಿಯೂ ಟೀಮ್ ಇಂಡಿಯಾ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 168 ರನ್ಗಳ ಸಾಧಾರಣ ಗುರಿ ನೀಡಿದೆ. ಅಭಿಷೇಕ್ ಶರ್ಮಾ ಕೇವಲ 37 ಎಸೆತಗಳಲ್ಲಿ 75 ರನ್ಗಳಿಸಿದರು. ಮೊದಲ 10 ಓವರ್ಗಳಲ್ಲಿ ಟೀಮ್ ಇಂಡಿಯಾ 92 ರನ್ಗಳಿಸಿದರೆ, ನಂತರದ 10 ಓವರ್ಗಳಲ್ಲಿ ಕೇವಲ 76 ರನ್ ಮಾತ್ರ ಗಳಿಸಲು ಶಕ್ತವಾಯಿತು.
ಟಾಸ್ ಗೆದ್ದ ಬಾಂಗ್ಲಾದೇಶ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡು, ಭಾರತ ತಂಡಕ್ಕೆ ಬ್ಯಾಟಿಂಗ್ ಆಹ್ವಾನ ನೀಡಿತು. ಟೀಮ್ ಇಂಡಿಯಾ ಕೂ ಅದ್ಭುತ ಆರಂಭ ಪಡೆದುಕೊಂಡಿತು. ಮೊದಲ ವಿಕೆಟ್ ಜೊತೆಯಾಟದಲ್ಲಿ ಪಂಜಾಬ್ ಜೋಡೆತ್ತುಗಳಾದ ಅಭಿಷೇಕ್ ಶರ್ಮಾ ಹಾಗೂ ಶುಭ್ಮನ್ ಗಿಲ್ 77 ರನ್ಗಳ ಜೊತೆಯಾಟ ನೀಡಿದರು. ಗಿಲ್ 19 ಎಸೆತಗಳಲ್ಲಿ 2 ಬೌಂಡರಿ,1 ಸಿಕ್ಸರ್ ಸಹಿತ 29 ರನ್ಗಳಿಸಿ ರಿಷಾದ್ ಹೊಸೈನ್ ಬೌಲಿಂಗ್ನಲ್ಲಿ ಕ್ಯಾಚ್ ಔಟ್ ಆದರು. ಮೊದಲ ವಿಕೆಟ್ ಬ್ರೇಕ್ ನಂತರ ಭಾರತದ ರನ್ ಗತಿಗೆ ಕಡಿವಾಣ ಬಿದ್ದಿತು.
3ನೇ ಕ್ರಮಾಂಕದಲ್ಲಿ ಬಂದ ಶಿವಂ ದುಬೆ ಕೇವಲ 2 ರನ್ಗೆ ಔಟಾದರೆ, ಸ್ಫೋಟಕ ಆಟವಾಡುತ್ತಾ ಶತಕದತ್ತಯ ಮುನ್ನುಗ್ಗುತ್ತಿದ್ದ ಅಭಿಷೇಕ್ ಶರ್ಮಾರನ್ನ ಸೂರ್ಯಕುಮಾರ್ ಯಾದವ್ ಅಜಾಗರುಕತೆಯಿಂದ ರನ್ಔಟ್ ಆದರು. ಅಭಿಷೇಕ್ 37 ಎಸೆತಗಳಲ್ಲಿ 6 ಬೌಂಡರಿ, 5 ಸಿಕ್ಸರ್ಗಳ ಸಹಿತ 75 ರನ್ಗಳಿಸಿ ಬೇಸರದಲ್ಲಿ ಪೆವಿಲಿಯನ್ ಸೇರಿಕೊಂಡರು. ಅಭಿಷೇಕ್ ಶರ್ಮಾ ರನ್ಔಟ್ ಆದ ಬಳಿಕ, ಸೂರ್ಯಕುಮಾರ್ ಯಾದವ್ ಕೂಡ ಅದೇ ಓವರ್ನಲ್ಲಿ 11 ಎಸೆತಗಳಲ್ಲಿ ಕೇವಲ 5 ರನ್ಗಳಿಸಿ ಔಟ್ ಆದರು.
ನಂತರ ಬಂದ ತಿಲಕ್ ವರ್ಮಾ 7 ಎಸೆತಗಳಲ್ಲಿ ಕೇವಲ 5 ರನ್ಗಳಿಸಿ ಸಾಕಿಬ್ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿದರು. ಇನ್ನು 5 ಓವರ್ಗಳಿದ್ದರೂ ಮ್ಯಾನೇಜ್ಮೆಂಟ್ ಸಂಜು ಸ್ಯಾಮ್ಸನ್ ಬದಲಿಗೆ ಅಕ್ಷರ್ ಪಟೇಲ್ರನ್ನ ಕಳುಹಿಸಿ ಕೈಸುಟ್ಟುಕೊಂಡಿತು. ಅಕ್ಷರ್ ಪಟೇಲ್ 15 ಎಸೆತಗಳಲ್ಲಿ ಕೇವಲ 10 ರನ್ಗಳಿಸಿದರು. ಹಾರ್ದಿಕ್ ಪಾಂಡ್ಯ 29 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್ ಸಹಿತ 38 ರನ್ಗಳಿಸಿ ಕೊನೆಯ ಎಸೆತದಲ್ಲಿ ಔಟ್ ಆದರು.
ಬಾಂಗ್ಲಾದೇಶದ ಪರ ರಿಷಾದ್ ಹೊಸೈನ್ 27ಕ್ಕೆ2, ತಾಂಜಿಬ್ ಹಸನ್ ಸಾಕಿಬ್ 29ಕ್ಕೆ1, ಮುಸ್ತಫಿಜುರ್ ರೆಹಮಾನ್ 33ಕ್ಕೆ1, ಮೊಹಮ್ಮದ್ ಸೈಫುದ್ದೀನ್ 37ಕ್ಕೆ1 ವಿಕೆಟ್ ಪಡೆದರು.
September 24, 2025 9:49 PM IST