Asia Cup 2025: ಏಷ್ಯಾಕಪ್​​ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಏಕೈಕ ನಾಯಕ ಧೋನಿ! ಬೇರೆ ದೇಶ ಬಿಡಿ, ಭಾರತದ ಬೇರೆ ನಾಯಕರಿಂದಲೂ ಸಾಧ್ಯವಾಗಿಲ್ಲ! | MS Dhoni s Unmatched Asia Cup Record A Feat No Other Captain Can Match | ಕ್ರೀಡೆ

Asia Cup 2025: ಏಷ್ಯಾಕಪ್​​ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಏಕೈಕ ನಾಯಕ ಧೋನಿ! ಬೇರೆ ದೇಶ ಬಿಡಿ, ಭಾರತದ ಬೇರೆ ನಾಯಕರಿಂದಲೂ ಸಾಧ್ಯವಾಗಿಲ್ಲ! | MS Dhoni s Unmatched Asia Cup Record A Feat No Other Captain Can Match | ಕ್ರೀಡೆ

Last Updated:

ಭಾರತವು ಏಷ್ಯಾ ಕಪ್‌ನಲ್ಲಿ 1984ರಿಂದ 2023ರವರೆಗೆ ಒಟ್ಟು 8 ಬಾರಿ ಟೈಟಲ್ ಗೆದ್ದಿದೆ, ಇದು ಟೂರ್ನಮೆಂಟ್‌ನ ಇತಿಹಾಸದಲ್ಲಿ ದಾಖಲೆಯಾಗಿದೆ. ಶ್ರೀಲಂಕಾ 6 ಬಾರಿ ಮತ್ತು ಪಾಕಿಸ್ತಾನ 2 ಬಾರಿ ಗೆದ್ದಿವೆ.

ಎಂಎಸ್ ಧೋನಿಎಂಎಸ್ ಧೋನಿ
ಎಂಎಸ್ ಧೋನಿ

ಏಷ್ಯಾ ಕಪ್ (Asia Cup) ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಭಾರತ ತಂಡ (Team India) ಎಂಟು ಬಾರಿ ಚಾಂಪಿಯನ್ ಆಗಿ ದಾಖಲೆ ಮೆರೆದಿದೆ. ಇದು ಟೂರ್ನಿ ಇತಿಹಾಸದಲ್ಲಿ ಅತಿ ಹೆಚ್ಚು ಟೈಟಲ್‌ ಗೆದ್ದ ತಂಡವಾಗಿದೆ. ಈ ಯಶಸ್ಸಿನ ಹಿಂದೆ ದಂತಕಥೆಯ ನಾಯಕರಾದ ಸುನಿಲ್ ಗವಾಸ್ಕರ್, ದಿಲೀಪ್ ವೆಂಗ್‌ಸರ್ಕಾರ್, ಮೊಹಮ್ಮದ್ ಅಜರುದ್ದೀನ್, ಮಹೇಂದ್ರ ಸಿಂಗ್ ಧೋನಿ, ಮತ್ತು ರೋಹಿತ್ ಶರ್ಮಾ ಪ್ರಮುಖ ಪಾತ್ರ ವಹಿಸಿದ್ದಾರೆ. ಈ ಬಾರಿ, ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಭಾರತ ತನ್ನ ಟೈಟಲ್ ರಕ್ಷಣೆಗಾಗಿ ಯುಎಇಯಲ್ಲಿ ಸೆಪ್ಟೆಂಬರ್ 10ರಂದು ಆರಂಭವಾದ ಏಷ್ಯಾ ಕಪ್ 2025ರಲ್ಲಿ ಸ್ಪರ್ಧಿಸುತ್ತಿದೆ.

ಭಾರತದ ಚಾಂಪಿಯನ್‌ಶಿಪ್ ಯಾತ್ರೆ

ಭಾರತವು ಏಷ್ಯಾ ಕಪ್‌ನಲ್ಲಿ 1984ರಿಂದ 2023ರವರೆಗೆ ಒಟ್ಟು 8 ಬಾರಿ ಟೈಟಲ್ ಗೆದ್ದಿದೆ, ಇದು ಟೂರ್ನಮೆಂಟ್‌ನ ಇತಿಹಾಸದಲ್ಲಿ ದಾಖಲೆಯಾಗಿದೆ. ಶ್ರೀಲಂಕಾ 6 ಬಾರಿ ಮತ್ತು ಪಾಕಿಸ್ತಾನ 2 ಬಾರಿ ಗೆದ್ದಿವೆ.

  1. 1984 – ಏಕದಿನ ಮಾದರಿಯಲ್ಲಿ ಯುಎಇಯಲ್ಲಿ ನಡೆದ ಉದ್ಘಾಟನಾ ಆವೃತ್ತಿಯಲ್ಲಿ ಸುನಿಲ್ ಗವಾಸ್ಕರ್ ನೇತೃತ್ವದಲ್ಲಿ ಭಾರತ ತಂಡ ಶ್ರೀಲಂಕಾವನ್ನು ಸೋಲಿಸಿ ಚಾಂಪಿಯನ್ ಆಗಿತ್ತು.
  2. 1988- ಬಾಂಗ್ಲಾದೇಶದಲ್ಲಿ ನಡೆದ ಪಂದ್ಯದಲ್ಲಿ ದಿಲೀಪ್ ವೆಂಗ್‌ಸರ್ಕಾರ್ ನಾಯಕತ್ವದಲ್ಲಿ ನಡೆದಿದ್ದ ಭಾರತ ಶ್ರೀಲಂಕಾವನ್ನು 6 ವಿಕೆಟ್‌ಗಳಿಂದ ಸೋಲಿಸಿತು.
  3. 1990-91- ಭಾರತದಲ್ಲಿ ನಡೆದ ಈ ಆವೃತ್ತಿಯಲ್ಲಿ ಮೊಹಮ್ಮದ್ ಅಜರುದ್ದೀನ್ ನೇತೃತ್ವದಲ್ಲಿ ಭಾರತ ತಂಡ ಶ್ರೀಲಂಕಾವನ್ನು 7 ವಿಕೆಟ್‌ಗಳಿಂದ ಸೋಲಿಸಿತ್ತು.
  4. 1995-ಯುಎಇಯಲ್ಲಿ ನಡೆದಿದ್ದ ಟೂರ್ನಿಯಲ್ಲಿ ಮೊಹಮ್ಮದ್ ಅಜರುದ್ದೀನ್ ನೇತೃತ್ವದ ಭಾರತ ತಂಡ ಶ್ರೀಲಂಕಾವನ್ನು 8 ವಿಕೆಟ್‌ಗಳಿಂದ ಸೋಲಿಸಿ ಭಾರತ ಟೈಟಲ್ ಉಳಿಸಿಕೊಂಡಿತು.
  5. 2010- ಶ್ರೀಲಂಕಾದಲ್ಲಿ ನಡೆದ ಫೈನಲ್‌ನಲ್ಲಿ ಭಾರತ ಶ್ರೀಲಂಕಾವನ್ನು 81 ರನ್‌ಗಳಿಂದ ಸೋಲಿಸಿತು. ಎಂಎಸ್ ಧೋನಿ ಭಾರತ ತಂಡವನ್ನು ಮುನ್ನಡೆಸಿದ್ದರು.
  6. 2016 ಬಾಂಗ್ಲಾದೇಶದಲ್ಲಿ ನಡೆದ T20 ಆವೃತ್ತಿಯಲ್ಲಿ ಧೋನಿ ನೇತೃತ್ವದಲ್ಲಿ ಭಾರತ ಬಾಂಗ್ಲಾದೇಶವನ್ನು 8 ವಿಕೆಟ್‌ಗಳಿಂದ ಸೋಲಿಸಿತ್ತು.
  7. 2018- ಯುಎಇಯಲ್ಲಿ ನಡೆದ ಟೂರ್ನಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ಫೈನಲ್​​ನಲ್ಲಿ ಬಾಂಗ್ಲಾದೇಶವನ್ನು 3 ವಿಕೆಟ್‌ಗಳಿಂದ ಸೋಲಿಸಿತ್ತು.
  8. 2023- ಶ್ರೀಲಂಕಾ ಮತ್ತು ಪಾಕಿಸ್ತಾನದಲ್ಲಿ ನಡೆದ ಈ ಆವೃತ್ತಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ಶ್ರೀಲಂಕಾವನ್ನು 10 ವಿಕೆಟ್‌ಗಳಿಂದ ಸೋಲಿಸಿತು.

ಧೋನಿಯ ವಿಶೇಷ ಸಾಧನೆ

ಮಹೇಂದ್ರ ಸಿಂಗ್ ಧೋನಿ ಏಷ್ಯಾ ಕಪ್‌ನ ಏಕದಿನ (2010) ಮತ್ತು T20I (2016) ಎರಡೂ ಸ್ವರೂಪಗಳಲ್ಲಿ ಟೈಟಲ್ ಗೆದ್ದ ಏಕೈಕ ನಾಯಕರಾಗಿದ್ದಾರೆ. ಅವರ ಕೂಲ್​ ಕ್ಯಾಪ್ಟೆನ್ಸಿ ಮತ್ತು ತಂತ್ರಗಾರಿಕೆ ಭಾರತವನ್ನು ಈ ಎರಡು ಆವೃತ್ತಿಗಳಲ್ಲಿ ಯಶಸ್ವಿಯಾಗಿಸಿತು. ಅಜರುದ್ದೀನ್ ಮತ್ತು ರೋಹಿತ್ ಶರ್ಮಾ ಕೂಡ ತಲಾ ಎರಡು ಏಕದಿನ ಟೈಟಲ್‌ಗಳನ್ನು ಗೆದ್ದರೂ, ಧೋನಿಯ ಎರಡು ಸ್ವರೂಪಗಳ ಯಶಸ್ಸು ವಿಶೇಷವಾಗಿದೆ.

ಇತರ ತಂಡಗಳ ಗೆಲುವುಗಳು

ಶ್ರೀಲಂಕಾ (6 ಟೈಟಲ್‌ಗಳು): 1986, 1997, 2004, 2008, 2014, ಮತ್ತು 2022ರಲ್ಲಿ ಗೆದ್ದಿತು. 2022ರ T20I ಆವೃತ್ತಿಯಲ್ಲಿ ದಾಸುನ್ ಶನಕ ನಾಯಕತ್ವದಲ್ಲಿ ಪಾಕಿಸ್ತಾನವನ್ನು 23 ರನ್‌ಗಳಿಂದ ಸೋಲಿಸಿತು.

ಪಾಕಿಸ್ತಾನ (2 ಟೈಟಲ್‌ಗಳು): 2000ರಲ್ಲಿ ಮೊಯಿನ್ ಖಾನ್ ಮತ್ತು 2012ರಲ್ಲಿ ಮಿಸ್ಬಾ-ಉಲ್-ಹಕ್ ನಾಯಕತ್ವದಲ್ಲಿ ಪಾಕಿಸ್ತಾನ 2 ಬಾರಿ ಚಾಂಪಿಯನ್ ಆಗಿದೆ.

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

Asia Cup 2025: ಏಷ್ಯಾಕಪ್​​ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಏಕೈಕ ನಾಯಕ ಧೋನಿ! ಬೇರೆ ದೇಶ ಬಿಡಿ, ಭಾರತದ ಬೇರೆ ನಾಯಕರಿಂದಲೂ ಸಾಧ್ಯವಾಗಿಲ್ಲ!