Asia Cup 2025: ಐಪಿಎಲ್​​ನಲ್ಲಿ ಅದ್ಭುತ ಪ್ರದರ್ಶನ! ಟೀಮ್ ಇಂಡಿಯಾಗೆ ಆರ್‌ಸಿಬಿ ಸ್ಟಾರ್ ಆಟಗಾರ ರೀಎಂಟ್ರಿ ಸಾಧ್ಯತೆ |Krunal Pandya Set for Team India Return? Likely to Re-Enter Squad for Asia Cup 2025 | ಕ್ರೀಡೆ

Asia Cup 2025: ಐಪಿಎಲ್​​ನಲ್ಲಿ ಅದ್ಭುತ ಪ್ರದರ್ಶನ! ಟೀಮ್ ಇಂಡಿಯಾಗೆ ಆರ್‌ಸಿಬಿ ಸ್ಟಾರ್ ಆಟಗಾರ ರೀಎಂಟ್ರಿ ಸಾಧ್ಯತೆ |Krunal Pandya Set for Team India Return? Likely to Re-Enter Squad for Asia Cup 2025 | ಕ್ರೀಡೆ

Last Updated:

ಟೀಮ್ ಇಂಡಿಯಾದ ಎಲ್ಲಾ ಆಟಗಾರರು ಈ ವಿರಾಮವನ್ನು ತಮ್ಮ ಕುಟುಂಬ ಸದಸ್ಯರೊಂದಿಗೆ ಕಳೆಯುವ ಚಿಂತನೆಯಲ್ಲಿರುವಾಗ, ಆಯ್ಕೆದಾರರು ಏಷ್ಯಾ ಕಪ್ 2025 ಕ್ಕೆ ಆಯ್ಕೆಯಾಗುವ ತಂಡದ ಮೇಲೆ ಕೇಂದ್ರೀಕರಿಸಿದ್ದಾರೆ.

ಕೃನಾಲ್ ಪಾಂಡ್ಯಕೃನಾಲ್ ಪಾಂಡ್ಯ
ಕೃನಾಲ್ ಪಾಂಡ್ಯ

ಇಂಗ್ಲೆಂಡ್ ಪ್ರವಾಸವನ್ನು (India tour Of England) ಗೆಲುವಿನೊಂದಿಗೆ ಕೊನೆಗೊಳಿಸಿದ ಟೀಮ್ ಇಂಡಿಯಾಗೆ 35 ದಿನಗಳ ವಿರಾಮ ನೀಡಲಾಗಿದೆ. ಏಷ್ಯಾ ಕಪ್ 2025 (Asia cup 2025) ರೊಂದಿಗೆ ಮತ್ತೆ ಮೈದಾನಕ್ಕೆ ಇಳಿಯಲಿದೆ. ಸೆಪ್ಟೆಂಬರ್ 9 ರಿಂದ ಪ್ರಾರಂಭವಾಗಲಿರುವ ಈ ಟೂರ್ನಮೆಂಟ್ ಟಿ20 ಸ್ವರೂಪದಲ್ಲಿ ನಡೆಯಲಿದೆ. ಒಟ್ಟು 8 ತಂಡಗಳು ಕಣಕ್ಕೆ ಇಳಿಯಲಿವೆ. ಎಲ್ಲಾ 19 ಪಂದ್ಯಗಳು ಅಬುಧಾಬಿ ಮತ್ತು ದುಬೈನಲ್ಲಿ ನಡೆಯಲಿವೆ. ಸೆಪ್ಟೆಂಬರ್ 10ರಂದು ಆತಿಥೇಯ ಯುಎಇ ವಿರುದ್ಧದ ಪಂದ್ಯದೊಂದಿಗೆ ಟೀಮ್ ಇಂಡಿಯಾ ತನ್ನ ಏಷ್ಯಾ ಕಪ್ ಅಭಿಯಾನವನ್ನು ಪ್ರಾರಂಭಿಸಲಿದೆ. ಸೆಪ್ಟೆಂಬರ್ 14 ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು (India vs Pakistan) ಎದುರಿಸಲಿದೆ. ಸೆಪ್ಟೆಂಬರ್ 28 ರಂದು ನಡೆಯುವ ಫೈನಲ್‌ನೊಂದಿಗೆ ಟೂರ್ನಮೆಂಟ್ ಕೊನೆಗೊಳ್ಳಲಿದೆ.