Asia Cup 2025: ಮಿಂಚಿದ ನಿಜಾಕತ್ ಖಾನ್! ಬಾಂಗ್ಲಾದೇಶಕ್ಕೆ 144ರನ್​ಗಳ ಗುರಿ ನೀಡಿದ ಹಾಂಗ್​ ಕಾಂಗ್​ | Asia Cup: Hong Kong Challenges Bangladesh with 144-Run Target | ಕ್ರೀಡೆ

Asia Cup 2025: ಮಿಂಚಿದ ನಿಜಾಕತ್ ಖಾನ್! ಬಾಂಗ್ಲಾದೇಶಕ್ಕೆ 144ರನ್​ಗಳ ಗುರಿ ನೀಡಿದ ಹಾಂಗ್​ ಕಾಂಗ್​ | Asia Cup: Hong Kong Challenges Bangladesh with 144-Run Target | ಕ್ರೀಡೆ

Last Updated:

ನಿಜಾಕತ್ ಖಾನ್​ರ 42 ರನ್​ಗಳ ನೆರವಿನಿಂದ ಬಾಂಗ್ಲಾದೇಶಕ್ಕೆ 144 ರನ್​ಗಳ ಸ್ಪರ್ಧಾತ್ಮಕ ಮೊತ್ತ ದಾಖಲಿಸಿದೆ. ಮೊದಲ ಪಂದ್ಯದಲ್ಲಿ 94 ರನ್​ಗಳಿಸಲಷ್ಟೇ ಶಕ್ತವಾಗಿದ್ದ ಹಾಂಗ್​ ಕಾಂಗ್ ತಂಡ ಈ ಪಂದ್ಯದಲ್ಲಿ ತಮ್ಮ ಪ್ರದರ್ಶನವನ್ನ ಉತ್ತಪಡಿಸಿಕೊಂಡು 150ರ ಸನಿಹ ಬಂದಿದೆ.

ಹಾಂಕ್​ ಕಾಂಗ್​ಹಾಂಕ್​ ಕಾಂಗ್​
ಹಾಂಕ್​ ಕಾಂಗ್​

ಏಷ್ಯಾಕಪ್ 2025 ರ ಮೂರನೇ ಪಂದ್ಯ ಗುರುವಾರ ಬಾಂಗ್ಲಾದೇಶ ಮತ್ತು ಹಾಂಗ್ ಕಾಂಗ್ ನಡುವೆ ನಡೆಯುತ್ತಿದೆ. ಬಾಂಗ್ಲಾದೇಶ ನಾಯಕ ಲಿಟನ್ ದಾಸ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಅಬುಧಾಬಿಯ ಶೇಖ್ ಜಾಯೆದ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಆರಂಭಿಕ ಜೀಶನ್ ಅಲಿ 30 ರನ್, ನಾಯಕ ಯಾಸಿಮ್ ಮುರ್ತಾಜಾ 28 ರನ್ ಹಾಗೂ ನಿಜಾಕತ್ ಖಾನ್​ರ 42 ರನ್​ಗಳ ನೆರವಿನಿಂದ ಬಾಂಗ್ಲಾದೇಶಕ್ಕೆ 144 ರನ್​ಗಳ ಸ್ಪರ್ಧಾತ್ಮಕ ಮೊತ್ತ ದಾಖಲಿಸಿದೆ. ಮೊದಲ ಪಂದ್ಯದಲ್ಲಿ 94 ರನ್​ಗಳಿಸಲಷ್ಟೇ ಶಕ್ತವಾಗಿದ್ದ ಹಾಂಗ್​ ಕಾಂಗ್ ತಂಡ ಈ ಪಂದ್ಯದಲ್ಲಿ ತಮ್ಮ ಪ್ರದರ್ಶನವನ್ನ ಉತ್ತಪಡಿಸಿಕೊಂಡು 150ರ ಸನಿಹ ಬಂದಿದೆ.

ಹಾಂಗ್ ಕಾಂಗ್ ಪಂದ್ಯಾವಳಿಯನ್ನು ಸೋಲಿನೊಂದಿಗೆ ಆರಂಭಿಸಿತು. ಪಂದ್ಯಾವಳಿಯ ಮೊದಲ ಪಂದ್ಯದಲ್ಲಿಯೇ ಅಫ್ಘಾನಿಸ್ತಾನ ತಂಡವು ಹಾಂಗ್ ಕಾಂಗ್ ಅನ್ನು 94 ರನ್‌ಗಳ ಭಾರೀ ಅಂತರದಿಂದ ಸೋಲಿಸಿತು.  ಮೊದಲ ಪಂದ್ಯದ ಆಘಾತಕಾರಿ ಸೋಲಿನಿಂದ ಹೊರಬಂದು ಬ್ಯಾಟಿಂಗ್ ಮಾಡಿದ ಹಾಂಗ್​ ಕಾಂಗ್​ ನಿರೀಕ್ಷಿತ ಆರಂಭ ಪಡೆಯಲಿಲ್ಲ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಹಾಂಗ್ ಕಾಂಗ್ ತಂಡ ಕಳಪೆ ಆರಂಭ ಕಂಡಿತು. ಎರಡನೇ ಓವರ್ ನಲ್ಲೇ ತಸ್ಕಿನ್ ಅಹ್ಮದ್, ಅನ್ಶುಮಾನ್ ರಥ್ ಅವರನ್ನು ತಮ್ಮ ಬಲೆಗೆ ಬೀಳಿಸಿದರು. ರಥ್ 5 ಎಸೆತಗಳಲ್ಲಿ 4 ರನ್ ಗಳಿಸಿ ಔಟ್ ಆದರೆ.  ಅನುಭವಿ ಬಾಬರ್ ಹಯಾತ್ ತಂಜಿಮ್ ಹಸನ್ ಸಾಕಿಬ್  ಬೌಲಿಂಗ್​​​ನಲ್ಲಿ ಕೇವಲ 12 ರನ್​ಗಳಿಸಿ ಔಟ್ ಮಾಡಿದರು. ಬಾಬರ್ 12 ಎಸೆತಗಳಲ್ಲಿ ಒಂದು ಸಿಕ್ಸರ್ ಸಹಿತ 14 ರನ್ ಗಳಿಸಿದರು.

ನಂತರ ಒಂದಾದ ಜೀಸನ್ ಅಲಿ ಹಾಗೂ ನಿಜಾಕತ್ ಖಾನ್ 41 ರನ್​ಗಳ ಜೊತೆಯಾಟ ನೀಡಿದರು. ಆದರೆ 12 ನೇ ಓವರ್​​ನಲ್ಲಿ ಜೀಶನ್ ಅಲಿ ತಂಜಿಮ್ಗೆ ಎರಡನೇ ಬಲಿಯಾದರು. 34 ಎಸೆತಗಳನ್ನು ಎದುರಿಸಿ 30 ರನ್ ಗಳಿಸಿದ್ದರು. ಈ ಸಮಯದಲ್ಲಿ ಅವರು 3 ಬೌಂಡರಿ ಮತ್ತು 1 ಸಿಕ್ಸರ್ ಬಾರಿಸಿದರು. ನಂತರ ಬಂದ ನಾಯಕ ಯಾಸಿಮ್ ಮುರ್ತಾಜಾ ರನೌಟ್ ಆದರು, ಅವರು 19 ಎಸೆತಗಳಲ್ಲಿ 2 ಬೌಂಡರಿ ಮತ್ತು 2 ಸಿಕ್ಸರ್‌ಗಳ ಸಹಿತ 28 ರನ್ ಗಳಿಸಿದರು. ನಿಜಾಕತ್ ಖಾನ್ 40 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ಸಹಿತ 42 ರನ್​ಗಳಿಸಿ 19ನೇ ಓವರ್​​ನಲ್ಲಿ ಔಟ್ ಆದರು.

ಬಾಂಗ್ಲಾದೇಶದ ಪರ ತಸ್ಕಿನ್ ಅಹ್ಮದ್ 38ಕ್ಕೆ2, ರಿಷದ್ ಹೊಸೇನ್ 31ಕ್ಕೆ 2, ತಂಜಿಮ್ ಹಸನ್ ಸಕಿಬ್ 21ಕ್ಕೆ 2 ವಿಕೆಟ್ ಪಡೆದು ಮಿಂಚಿದರು.

ಮುಖಾಮುಖಿ

ಬಾಂಗ್ಲಾದೇಶ ಮತ್ತು ಹಾಂಗ್ ಕಾಂಗ್ ತಂಡಗಳು ಇದುವರೆಗೆ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಒಮ್ಮೆ ಮುಖಾಮುಖಿಯಾಗಿವೆ. ಅಚ್ಚರಿಯೆಂದರೆ ಹಾಂಗ್ ಕಾಂಗ್ ತಂಡ ಗೆಲುವು ಸಾಧಿಸಿದೆ. ಎರಡೂ ತಂಡಗಳು 2014 ರಲ್ಲಿ ಮುಖಾಮುಖಿಯಾಗಿದ್ದವು.   ಹಾಂಗ್ ಕಾಂಗ್ ತಂಡವು ಬಾಂಗ್ಲಾದೇಶವನ್ನು 2 ವಿಕೆಟ್‌ಗಳಿಂದ ಸೋಲಿಸಿತ್ತು. ಇದೀಗ ಬಾಂಗ್ಲಾದೇಶ ತಂಡವು 11 ವರ್ಷಗಳ ಹಿಂದಿನ ಸೋಲಿಗೆ ಇಂದು ಸೇಡು ತೀರಿಸಿಕೊಳ್ಳಲು ಬಯಸುತ್ತದೆ.

ಇದನ್ನೂ ಓದಿ: Team India: ಭಾರತ ಅತ್ಯುತ್ತಮ ಟಿ20 ನಾಯಕ! ರೋಹಿತ್ , ಕೊಹ್ಲಿ, ಧೋನಿಯನ್ನೇ ಮೀರಿಸಿದ ಸೂರ್ಯಕುಮಾರ್

ಬಾಂಗ್ಲಾದೇಶ (ಪ್ಲೇಯಿಂಗ್ XI): ಪರ್ವೇಜ್ ಹೊಸೈನ್ ಎಮನ್, ತಂಜಿದ್ ಹಸನ್ ತಮೀಮ್, ಲಿಟ್ಟನ್ ದಾಸ್ (w/c), ತೌಹಿದ್ ಹೃದೋಯ್, ಶಮೀಮ್ ಹೊಸೈನ್, ಜೇಕರ್ ಅಲಿ, ಮಹೇದಿ ಹಸನ್, ರಿಶಾದ್ ಹೊಸೈನ್, ತಂಝಿಮ್ ಹಸನ್ ಸಾಕಿಬ್, ತಸ್ಕಿನ್ ಅಹ್ಮದ್, ಮುಸ್ತಾಫಿಜುರ್ ರಹಮಾನ್

ಹಾಂಗ್ ಕಾಂಗ್ (ಪ್ಲೇಯಿಂಗ್ XI): ಜೀಶನ್ ಅಲಿ (ವಿಕೀ), ಅಂಶುಮಾನ್ ರಾತ್, ಬಾಬರ್ ಹಯಾತ್, ನಿಜಾಕತ್ ಖಾನ್, ಕಲ್ಹನ್ ಚಲ್ಲು, ಕಿಂಚಿತ್ ಶಾ, ಯಾಸಿಮ್ ಮುರ್ತಾಜಾ (ನಾಯಕ), ಐಜಾಜ್ ಖಾನ್, ಎಹ್ಸಾನ್ ಖಾನ್, ಆಯುಷ್ ಶುಕ್ಲಾ, ಅತೀಕ್ ಇಕ್ಬಾಲ್