Asia Cup 2025: ಶೇಕ್ ಹ್ಯಾಂಡ್ ವಿವಾದ! ಪಾಕಿಸ್ತಾನ ಯುಎಇ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಿದರೆ ಏಷ್ಯಾಕಪ್ ಲೆಕ್ಕಾಚಾರ ಹೇಗಿರುತ್ತದೆ? | Pakistan’s Asia Cup Boycott Threat: What Does it Mean for the Tournament? | ಕ್ರೀಡೆ

Asia Cup 2025: ಶೇಕ್ ಹ್ಯಾಂಡ್ ವಿವಾದ! ಪಾಕಿಸ್ತಾನ ಯುಎಇ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಿದರೆ ಏಷ್ಯಾಕಪ್ ಲೆಕ್ಕಾಚಾರ ಹೇಗಿರುತ್ತದೆ? | Pakistan’s Asia Cup Boycott Threat: What Does it Mean for the Tournament? | ಕ್ರೀಡೆ

ಹಸ್ತಲಾಘವ ವಿವಾದದ ಹಿನ್ನೆಲೆ

ಭಾನುವಾರ (ಸೆಪ್ಟೆಂಬರ್ 14) ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಭಾರತ-ಪಾಕಿಸ್ತಾನ ಪಂದ್ಯದಲ್ಲಿ ಭಾರತ 7 ವಿಕೆಟ್‌ಗಳಿಂದ ಗೆದ್ದಿತು. ಈ ಪಂದ್ಯದಲ್ಲಿ ಭಾರತ ನಾಯಕ ಸೂರ್ಯಕುಮಾರ್ ಯಾದವ್ ಅವರು ಗೆಲುವನ್ನು ಭಾರತೀಯ ಸೇನೆಗೆ ಅರ್ಪಿಸಿ, ಪಹಾಲ್ಗಾಮ್ ಭಯೋತ್ಪಾದಕ ದಾಳಿಯ ಹುತಾತ್ಮರಿಕೆ ಸಹಾನುಭೂತಿ ತೋರಿಸಿದ್ದರು. ಇನ್ನು ಪಂದ್ಯ ಮುಗಿದ ನಂತರ, ಭಾರತ ಆಟಗಾರರು ಪಾಕಿಸ್ತಾನ ತಂಡದೊಂದಿಗೆ ಕೈಕುಲುಕಲಿಲ್ಲ. ಸೂರ್ಯಕುಮಾರ್ ಮತ್ತು ಶಿವಮ್ ದುಬೆ ನೇರವಾಗಿ ಡ್ರೆಸ್ಸಿಂಗ್ ರೂಮ್‌ಗೆ ತೆರಳಿದರು. ಟಾಸ್ ಸಮಯದಲ್ಲೂ ಸೂರ್ಯಕುಮಾರ್ ಮತ್ತು ಪಾಕಿಸ್ತಾನ ನಾಯಕ ಸಲ್ಮಾನ್ ಅಲಿ ಅಘಾ ನಡುವೆ ಕೈಕುಲುಕುವ ಸಂಪ್ರದಾಯ ಆಚರಿಸಿರಲಿಲ್ಲ.

ಈ ಘಟನೆಯಿಂದ ಪಾಕಿಸ್ತಾನ ನಾಯಕ ಸಲ್ಮಾನ್ ಅಘಾ ಮತ್ತು ಕೋಚ್ ಮೈಕ್ ಹೆಸ್ಸನ್ ತುಂಬಾ ಕೋಪಗೊಂಡಿದ್ದರು. ಸಲ್ಮಾನ್ ಪೋಸ್ಟ್-ಮ್ಯಾಚ್ ಪ್ರೆಸೆಂಟೇಶನ್‌ಗೆ ಬರಲಿಲ್ಲ, ಮತ್ತು ಮಾಜಿ ಭಾರತ ಆಟಗಾರ ಸಂಜಯ್ ಮಂಜ್ರೇಕರ್‌ರೊಂದಿಗೆ ಸಂವಾದ ಮಾಡಲಿಲ್ಲ. PCB ಈ ಘಟನೆಯನ್ನು “ಕ್ರಿಕೆಟ್​ಗೆ ವಿರುದ್ಧದ ನಡೆ” ಎಂದು ಕರೆದು, ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್ ವಿರುದ್ಧ ಆಕ್ರೋಶ ಹೊರಹಾಕಿದ್ದರು.

PCB ಅಧ್ಯಕ್ಷ ಮೊಹ್ಸಿನ್ ನಕ್ವಿ ಅವರು ಸಾಮಾಜಿಕ ಮಾಧ್ಯಮದಲ್ಲಿ, “ಮ್ಯಾಚ್ ರೆಫರಿ ICC ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಅವರನ್ನು ತಕ್ಷಣ ತೆಗೆದುಹಾಕಬೇಕು” ಎಂದು ಬರೆದಿದ್ದಾರೆ. PCB ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC)ಗೆ ದೂರು ನೀಡಿದ್ದು, ICC ಹಸ್ತಕ್ಷೇಪವನ್ನು ಕೋರಿದ್ದಾರೆ. ಗಮನಾರ್ಹವೆಂದರೆ, ACC ಅಧ್ಯಕ್ಷ ಮೊಹ್ಸಿನ್ ನಕ್ವಿ ಅವರೇ ಈ ದೂರು ದಾಖಲಿಸಿದ್ದಾರೆ. ಆದರೆ ಐಸಿಸಿ ಈ ಮನವಿಯನ್ನ ತಿರಸ್ಕರಿಸಿದೆ.

ಪಾಕಿಸ್ತಾನ ಬಹಿಷ್ಕಾರ ಹಾಕಿದರೆ ಏನಾಗುತ್ತದೆ?

ಪಾಕಿಸ್ತಾನ UAE ವಿರುದ್ಧದ ಪಂದ್ಯವನ್ನು (ಸೆಪ್ಟೆಂಬರ್ 17) ಬಹಿಷ್ಕರಿಸಿದರೆ (ಬಾಯ್‌ಕಾಟ್ ಮಾಡಿದರೆ), ಅದು “ವಾಕ್‌ಓವರ್” ಎಂದು ಪರಿಗಣಿಸಲಾಗುತ್ತದೆ. ಇದರರ್ಥ ಪಾಕಿಸ್ತಾನ ಸೋಲುತ್ತದೆ, ಮತ್ತು UAEಗೆ ಸ್ವಯಂಚಾಲಿತ ಗೆಲುವು ಸಿಗುತ್ತದೆ. ಪಾಕಿಸ್ತಾನ ಈಗ ಒಮಾನ್ ವಿರುದ್ಧದ ಗೆಲುವಿನಿಂದ 2 ಅಂಕಗಳನ್ನು ಹೊಂದಿದೆ. ಬಹಿಷ್ಕಾರದಿಂದ ಅವರ ಅಂಕಗಳು ಹೆಚ್ಚಾಗದೆ ಸೂಪರ್ 4ರ ಹಂತಕ್ಕೆ ಮುಂದುವರಿಯಲಾರರು. UAE ಈಗ ಒಮಾನ್ ವಿರುದ್ಧದ 42 ರನ್‌ಗಳ ಗೆಲುವಿನಿಂದ 2 ಅಂಕಗಳನ್ನು ಹೊಂದಿದ್ದು, ವಾಕ್‌ಓವರ್‌ನಿಂದ ಹೆಚ್ಚು 2 ಅಂಕಗಳನ್ನು ಪಡೆದು 4 ಅಂಕಗಳೊಂದಿಗೆ ಸೂಪರ್ 4ರ ಹಂತಕ್ಕೆ ಮುಂದುವರಿಯುತ್ತದೆ. ಭಾರತ ಈಗ UAE ಮತ್ತು ಪಾಕಿಸ್ತಾನ ವಿರುದ್ಧದ ಗೆಲುವುಗಳಿಂದ 4 ಅಂಕಗಳೊಂದಿಗೆ ಸೂಪರ್ 4ರ ಹಂತಕ್ಕೆ ಖಚಿತ. ಒಮಾನ್ 2 ಪಂದ್ಯಗಳಲ್ಲಿ ಸೋತು 0 ಅಂಕಗಳೊಂದಿಗೆ ಈಗಾಗಲೇ ಹೊರಬಿದ್ದಿದೆ.

ಬಹಿಷ್ಕಾರದಿಂದ ಪಾಕಿಸ್ತಾನಕ್ಕೆ ಭಾರಿ ಆರ್ಥಿಕ ನಷ್ಟ ಆಗುತ್ತದೆ. ಅವರು ಪ್ರಸಾರಕರು, ಪ್ರಾಯೋಜಕರು ಮತ್ತು ACC ಒಪ್ಪಂದಗಳನ್ನು ಉಲ್ಲಂಘಿಸಿದ್ದಕ್ಕಾಗಿ ದಂಡವನ್ನು ವಿಧಿಸುವ ಸಾಧ್ಯತೆ ಇರುತ್ತದೆ. ಒಂದು ವೇಳೆ ಇದು ಜರುಗಿದರೆ PCBಯ ಆರ್ಥಿಕ ಸ್ಥಿತಿ ಇನ್ನೂ ಕೆಟ್ಟದಾಗುತ್ತದೆ. ಇದಲ್ಲದೆ, ಭವಿಷ್ಯದ ICC/ACC ಈವೆಂಟ್‌ಗಳಲ್ಲಿ ಪಾಕಿಸ್ತಾನಕ್ಕೆ ಶಿಕ್ಷೆ ಬರಬಹುದು.

ಪಾಕಿಸ್ತಾನ UAE ಪಂದ್ಯವನ್ನು ಆಡಿದರೆ ಏನಾಗುತ್ತದೆ?

ಪಾಕಿಸ್ತಾನ UAE ಪಂದ್ಯವನ್ನು (ಸೆಪ್ಟೆಂಬರ್ 17) ಆಡಿದರೆ, ಅದು ಪಾಕಿಸ್ತಾನ ಮತ್ತು UAE ನಡುವಿನ ನೇರ ಹೋರಾಟವಾಗುತ್ತದೆ, ಏಕೆಂದರೆ ಭಾರತ ಈಗಾಗಲೇ 4 ಅಂಕಗಳೊಂದಿಗೆ ಸೂಪರ್ 4ರ ಹಂತಕ್ಕೆ ಎಂಟ್ರಿಕೊಟ್ಟಿದೆ.

ಪಾಕಿಸ್ತಾನ ಗೆದ್ದರೆ ಅದರ ಅಂಕಗಳು 4ಕ್ಕೆ ಏರಿಕೆಯಾಗಿ ಸೂಪರ್ 4ರ ಹಂತಕ್ಕೆ ಮುಂದುವರಿಯುತ್ತದೆ. UAE 2 ಅಂಕಗಳೊಂದಿಗೆ ಹೊರಬೀಳುತ್ತದೆ. ಒಂದು ವೇಳೆ UAE ಗೆದ್ದರೆ ಅದರ ಅಂಕಗಳು 4ಕ್ಕೆ ಏರಿಕೆಯಾಗಿ ಸೂಪರ್ 4ರ ಹಂತಕ್ಕೆ ಮುಂದುವರಿಯುತ್ತದೆ. ಪಾಕಿಸ್ತಾನ 2 ಅಂಕಗಳೊಂದಿಗೆ ಹೊರಬೀಳುತ್ತದೆ.