Asia Cup 2025: ಸೂಪರ್ ಓವರ್‌ನಲ್ಲಿ ದಾಸುನ್ ಶನಕ ರನ್‌ಔಟ್ ಆಗಿದ್ದರೂ ಏಕೆ ನಾಟ್ ಔಟ್ ಎಂದು ಘೋಷಿಸಿದ್ದೇಕೆ? ಇಲ್ಲಿದೆ ಮಹತ್ವದ ಮಾಹಿತಿ | Dasun Shanaka s Lucky Escape Why He Was Given Not Out Despite Run Out in Super Over | ಕ್ರೀಡೆ

Asia Cup 2025: ಸೂಪರ್ ಓವರ್‌ನಲ್ಲಿ ದಾಸುನ್ ಶನಕ ರನ್‌ಔಟ್ ಆಗಿದ್ದರೂ ಏಕೆ ನಾಟ್ ಔಟ್ ಎಂದು ಘೋಷಿಸಿದ್ದೇಕೆ? ಇಲ್ಲಿದೆ ಮಹತ್ವದ ಮಾಹಿತಿ | Dasun Shanaka s Lucky Escape Why He Was Given Not Out Despite Run Out in Super Over | ಕ್ರೀಡೆ

Last Updated:

ಭಾರತ -ಶ್ರೀಲಂಕಾ ನಡುವಿನ ಸೂಪರ್ 4 ಪಂದ್ಯ ಟೈನಲ್ಲಿ ಅಂತ್ಯವಾಗಿತ್ತು. ಸೂಪರ್​ ಓವರ್​ನಲ್ಲಿ ದಾಸುನ್ ಶನಕರನ್ನ ಕ್ಯಾಚ್ ಔಟ್ ಎಂದು ಅಂಪೈರ್ ತೀರ್ಪು ನೀಡಿದರು. ಅದೇ ಎಸೆತದಲ್ಲಿ ಶನಕ ರನ್​ಔಟ್ ಆಗಿದ್ದರು. ಕ್ಯಾಚ್ ಚೆಕ್ ಮಾಡಿದ ಮೂರನೇ ಅಂಪೈರ್ ನಾಟೌಟ್ ಎಂದು ತೀರ್ಪು ನೀಡಿದರು. ಆದರೆ ಸಂಜು ಸ್ಯಾಮ್ಸನ್​ ರನ್ಔಟ್ ಮಾಡಿದ್ದರೂ, ಅದನ್ನ ಪರಿಗಣಿಸದೇ ಮತ್ತೆ ಶನಕಾಗೆ ಬ್ಯಾಟಿಂಗ್ ಮಾಡಲು ಅವಕಾಶ ನೀಡಿರುವುದು ಗೊಂದಲಕ್ಕೆ ಕಾರಣವಾಗಿದೆ.

ಭಾರತ vs ಶ್ರೀಲಂಕಾಭಾರತ vs ಶ್ರೀಲಂಕಾ
ಭಾರತ vs ಶ್ರೀಲಂಕಾ

ಏಷ್ಯಾ ಕಪ್ 2025ರ (Asia Cup) ಸೂಪರ್ 4 ಪಂದ್ಯದಲ್ಲಿ ಭಾರತ ಮತ್ತು ಶ್ರೀಲಂಕಾ (India vs Sri Lanka) ನಡುವಿನ ರೋಚಕ ಪಂದ್ಯ ಸೂಪರ್ ಓವರ್‌ನಲ್ಲಿ ಅಂತ್ಯವಾಗಿದೆ. ಈ ಸೂಪರ್ ಓವರ್‌ನಲ್ಲಿ ಶ್ರೀಲಂಕಾದ ಆಲ್‌ರೌಂಡರ್ ಶನಕ ರನ್‌ಔಟ್ ಆಗಿದ್ದರೂ ಥರ್ಡ್​ ಅಂಪೈರ್‌ರಿಂದ ನಾಟ್ ಔಟ್ ಎಂದು ಘೋಷಿಸಲ್ಪಟ್ಟ ಘಟನೆ ಗೊಂದಲ ಸೃಷ್ಟಿಸಿತು. ಆದರೆ, ಕ್ರಿಕೆಟ್ ನಿಯಮಗಳ ಪ್ರಕಾರ ಈ ನಿರ್ಧಾರ ಸರಿಯಾಗಿತ್ತು.

ಸೂಪರ್ ಓವರ್‌ನಲ್ಲಿ ಏನಾಯಿತು?

ಭಾರತ ಮತ್ತು ಶ್ರೀಲಂಕಾ ನಡುವಿನ ಸೂಪರ್ 4 ಪಂದ್ಯ ಟೈ ಆಗಿದ್ದರಿಂದ ಸೂಪರ್ ಓವರ್‌ಗೆ ಮೊರೆ ಹೋಗಿತ್ತು. ಶ್ರೀಲಂಕಾ ಮೊದಲು ಬ್ಯಾಟಿಂಗ್ ಮಾಡಿತು. ಭಾರತದ ವೇಗಿ ಅರ್ಷದೀಪ್ ಸಿಂಗ್ ಎಸೆದ ಸೂಪರ್ ಓವರ್‌ನ 4ನೇ ಬಾಲ್‌ನಲ್ಲಿ ಶನಕ ಬೈ ತೆಗೆದುಕೊಳ್ಳುವಾಗ ಸಂಜು ಸ್ಯಾಮ್ಸನ್​ ರನ್​ ಔಟ್ ಮಾಡಿದರು.

ಡಿಆರ್‌ಎಸ್ ರಿವ್ಯೂ

ಆದರೆ ಅದೇ ಸಮಯದಲ್ಲಿ ಅರ್ಷದೀಪ್ ಸಿಂಗ್ ಕ್ಯಾಚ್​ ಔಟ್​ಗೆ ಮನವಿ ಮಾಡಿದರು. ಅಂಪೈರ್ ಕೂಡ ಔಟ್ ಎಂದು ತೀರ್ಪು ನೀಡಿದರು. ದಾಸುನ್ ಶನಕ ಆನ್-ಫೀಲ್ಡ್ ಅಂಪೈರ್‌ರ ನಿರ್ಧಾರವನ್ನು ಸವಾಲು ಮಾಡಿ ಡಿಆರ್‌ಎಸ್ (ಡಿಸಿಷನ್ ರಿವ್ಯೂ ಸಿಸ್ಟಮ್) ಕೇಳಿದರು. ಡಿಆರ್‌ಎಸ್‌ನಲ್ಲಿ ರಿಪ್ಲೇ ಮತ್ತು ಅಲ್ಟ್ರಾ-ಎಡ್ಜ್ ನಲ್ಲಿ ಬಾಲ್ ಬ್ಯಾಟ್‌ಗೆ ತಾಗಿರಲಿಲ್ಲ, ಯಾವುದೇ ಸ್ಪೈಕ್ ಕಾಣಿಸಲಿಲ್ಲ. ಆದ್ದರಿಂದ, ಶನಕ ಕ್ಯಾಚ್ ಔಟ್‌ನಿಂದ ಸೇವ್ ಆದರು.

ರನ್‌ಔಟ್ ರದ್ದಾಗಿದ್ದೇಕೆ?

ಕ್ಯಾಚ್ ಔಟ್ ರಿಪ್ಲೇ ನಲ್ಲಿ ನಾಟೌಟ್ ಎಂದು ತೀರ್ಪು ಬಂದಿತು. ಆದರೆ ರನ್​ ಔಟ್ ಔಟ್ ಪರಿಗಣಿಸದೇ ಮತ್ತೆ ಶನಕಗೆ ಆಡಲು ಅವಕಾಶ ನೀಡಿದ್ದು ಅಚ್ಚರಿಗೆ ಕಾರಣವಾಯಿತು. ಕ್ರಿಕೆಟ್ ನಿಯಮಗಳ ಪ್ರಕಾರ, ಆನ್-ಫೀಲ್ಡ್ ಅಂಪೈರ್ ಮೊದಲು ಶನಕನನ್ನು ಕ್ಯಾಚ್ ಔಟ್ ಎಂದು ಘೋಷಿಸಿದ್ದರಿಂದ, ಆ ಕ್ಷಣದಲ್ಲಿ ಬಾಲ್ “ಡೆಡ್ ಬಾಲ್” (ನಿಷ್ಕ್ರಿಯ ಚೆಂಡು) ಆಗುತ್ತದೆ. ಡಿಆರ್‌ಎಸ್‌ನಲ್ಲಿ ಕ್ಯಾಚ್ ಔಟ್ ನಿರ್ಧಾರದ ವಿರುದ್ಧ ತೀರ್ಪು ಬಂದಿದ್ದರಿಂದ, ರನ್‌ಔಟ್ ಅನ್ನ ಪರಿಗಣನೆಗೆ ತೆಗೆದುಕೊಳ್ಳಲಾಗಲ್ಲ, ಏಕೆಂದರೆ ಬ್ಯಾಟರ್ ಅಂಪೈರ್ ತೀರ್ಪಿನ ವಿರುದ್ಧ ಡಿಆರ್​ಎಸ್​ ತೆಗೆದುಕೊಂಡ ಕೂಡಲೇ ಆ ಚೆಂಡು ಡೆಡ್ ಆಗಿರುತ್ತದೆ. ಹಾಗಾಗಿ ಶನಕ ರನ್​ಔಟ್ನಿಂದ ಬಚಾವ್ ಆದರು. ಒಂದು ವೇಳೆ ಅರ್ಷದೀಪ್ ಕ್ಯಾಚ್​ಗೆ ಅಪೀಲ್ ಮಾಡದಿದ್ದರೆ ಅದು ರನ್​ಔಟ್ ಆಗುತ್ತಿತ್ತು.

ಆದರೆ ಈ ಜೀವದಾನದ ಲಾಭವನ್ನು ಶನಕ ಸಂಪೂರ್ಣವಾಗಿ ಪಡೆಯಲಿಲ್ಲ. ಮುಂದಿನ ಬಾಲ್‌ನಲ್ಲಿ (5ನೇ ಬಾಲ್), ಅರ್ಶದೀಪ್ ಸಿಂಗ್‌ರ ಎಸೆತದಲ್ಲಿ ದೊಡ್ಡ ಶಾಟ್ ಆಡಲು ಯತ್ನಿಸಿ, ಥರ್ಡ್ ಮ್ಯಾನ್‌ನಲ್ಲಿ ಜಿತೇಶ್ ಶರ್ಮಾಗೆ ಕ್ಯಾಚ್ ಕೊಟ್ಟರು. ಶ್ರೀಲಂಕಾ 5 ಬಾಲ್‌ಗಳಲ್ಲಿ ಕೇವಲ 2 ರನ್‌ಗಳನ್ನು ಗಳಿಸಿ, 2 ವಿಕೆಟ್‌ಗಳನ್ನು ಕಳೆದುಕೊಂಡು ತಮ್ಮ ಸೂಪರ್ ಓವರ್ ಮುಗಿಸಿತು.

ಭಾರತದ ಸುಲಭ ಗೆಲುವು

ಭಾರತಕ್ಕೆ ಸೂಪರ್ ಓವರ್‌ನಲ್ಲಿ 3 ರನ್‌ಗಳ ಸುಲಭ ಗುರಿ ದೊರೆಯಿತು. ಭಾರತದ ಬ್ಯಾಟ್‌ಸ್‌ಮನ್‌ಗಳು ಮೊದಲ ಬಾಲ್‌ನಲ್ಲೇ ಈ ಗುರಿಯನ್ನು ತಲುಪಿ, ಶ್ರೀಲಂಕಾ ವಿರುದ್ಧ ರೋಮಾಂಚಕ ಗೆಲುವು ಸಾಧಿಸಿದರು. ಈ ಗೆಲುವು ಏಷ್ಯಾ ಕಪ್ 2025ರಲ್ಲಿ ಭಾರತದ ಸತತ ಆರನೇ ಗೆಲುವಾಗಿದ್ದು, ತಂಡದ ಫಾರ್ಮ್‌ನ್ನು ತೋರಿಸಿತು.

ಫೈನಲ್‌ಗೆ ಭಾರತದ ತಯಾರಿ

ಈ ಗೆಲುವಿನೊಂದಿಗೆ ಭಾರತ ತಂಡವು ಸೆಪ್ಟೆಂಬರ್ 28, 2025ರಂದು ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪಾಕಿಸ್ತಾನ ವಿರುದ್ಧ ಫೈನಲ್‌ಗೆ ಸಜ್ಜಾಗಿದೆ. ಈ ಟೂರ್ನಿಯಲ್ಲಿ ಭಾರತ ಈಗಾಗಲೇ ಪಾಕಿಸ್ತಾನವನ್ನು ಎರಡು ಬಾರಿ (ಗ್ರೂಪ್ ಸ್ಟೇಜ್ ಮತ್ತು ಸೂಪರ್ 4) ಸೋಲಿಸಿದೆ. ಸೂರ್ಯಕುಮಾರ್ ಯಾದವ್ ನಾಯಕತ್ವದ ಭಾರತ ತಂಡವು ಈ ಫೈನಲ್‌ನಲ್ಲಿ ಮೂರನೇ ಗೆಲುವಿನೊಂದಿಗೆ 41 ವರ್ಷಗಳಲ್ಲಿ 9ನೇ ಬಾರಿಗೆ ಏಷ್ಯಾ ಕಪ್ ಟ್ರೋಫಿಯನ್ನು ಗೆಲ್ಲಲು ಕಾತರಗೊಂಡಿದೆ.