Asia Cup 2025: 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದ ಬಾಂಗ್ಲಾದೇಶ! ಟೂರ್ನಿಯಿಂದ ಬಹುತೇಕ ಹೊರಬಿದ್ದ ಹಾಂಗ್ ಕಾಂಗ್! | Asia Cup 2025: Bangladesh’s Convincing 7-Wicket Victory Over Hong Kong | ಕ್ರೀಡೆ

Asia Cup 2025: 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದ ಬಾಂಗ್ಲಾದೇಶ! ಟೂರ್ನಿಯಿಂದ ಬಹುತೇಕ ಹೊರಬಿದ್ದ ಹಾಂಗ್ ಕಾಂಗ್! | Asia Cup 2025: Bangladesh’s Convincing 7-Wicket Victory Over Hong Kong | ಕ್ರೀಡೆ

Last Updated:

ಹಾಂಗ್​ ಕಾಂಗ್​ ನೀಡಿದ್ದ 144 ರನ್​ಗಳ ಗುರಿಯನ್ನ ಬೆನ್ನಟ್ಟಿದ ಬಾಂಗ್ಲಾದೇಶ ತಂಡ ನಾಯಕ ಲಿಟನ್ ದಾಸ್ ಸಿಡಿಸಿದ ಅರ್ಧಶತಕ ಹಾಗೂ ಹೃದೋಯ್ ಅವರ 36 ರನ್​ಗಳ ಆಜೇಯ ಆಟದ ನೆರವಿನಿಂದ 17.4 ಓವರ್​ಗಳಲ್ಲಿ ಗುರಿ ತಲುಪಿತು.

ಬಾಂಗ್ಲಾದೇಶಕ್ಕೆ ಸುಲಭ ಜಯಬಾಂಗ್ಲಾದೇಶಕ್ಕೆ ಸುಲಭ ಜಯ
ಬಾಂಗ್ಲಾದೇಶಕ್ಕೆ ಸುಲಭ ಜಯ

ಏಷ್ಯಾಕಪ್ 2025 ರ ಮೂರನೇ ಪಂದ್ಯದಲ್ಲಿ ಬಾಂಗ್ಲಾದೇಶ ತಂಡ ಹಾಂಗ್ ಕಾಂಗ್ ವಿರುದ್ಧ 7 ವಿಕೆಟ್​ಗಳ ಸುಲಭ ಜಯ ಸಾಧಿಸಿ ಅಂಕಪಟ್ಟಿಯಲ್ಲಿ ಖಾತೆ ತೆರೆದಿದೆ. ಇತ್ತ ಸತತ 2 ಪಂದ್ಯಗಳಲ್ಲಿ ಸೋಲು ಕಂಡ ಹಾಂಗ್​ ಕಾಂಗ್ ತಂಡ ಬಹುತೇಕ ಟೂರ್ನಿಯಿಂದ ಹೊರಬಿದ್ದಂತಾಗಿದೆ. ಹಾಂಗ್​ ಕಾಂಗ್​ ನೀಡಿದ್ದ 144 ರನ್​ಗಳ ಗುರಿಯನ್ನ ಬೆನ್ನಟ್ಟಿದ ಬಾಂಗ್ಲಾದೇಶ ತಂಡ ನಾಯಕ ಲಿಟನ್ ದಾಸ್ ಸಿಡಿಸಿದ ಅರ್ಧಶತಕ ಹಾಗೂ ಹೃದೋಯ್ ಅವರ 36 ರನ್​ಗಳ ಆಜೇಯ ಆಟದ ನೆರವಿನಿಂದ 17.4 ಓವರ್​ಗಳಲ್ಲಿ ಗುರಿ ತಲುಪಿತು.

144 ರನ್​ಗಳ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ತಂಡದ ಮೊತ್ತ 24 ರನ್​ಗಳಾಗುವಷ್ಟರಲ್ಲಿ ಪರ್ವೇಜ್ ಹೊಸೇನ್ ವಿಕೆಟ್ ಕಳೆದುಕೊಂಡಿತು. ಪರ್ವೇಜ್ 14 ಎಸೆತಗಳಲ್ಲಿ  19 ರನ್​ಗಳಿಸಿ ಆಯುಷ್​ ಶುಕ್ಲಾ ಬೌಲಿಂಗ್​ನಲ್ಲಿ ಕ್ಯಾಚ್ ಔಟ್ ಆದರು. ಮತ್ತೊಬ್ಬ ಆರಂಭಿಕ ಬ್ಯಾಟರ್ ತಾಂಜಿದ್ ಹಸನ್  ಕೂಡ ಪವರ್​ ಪ್ಲೇನಲ್ಲೇ 18 ಎಸೆತಗಳಲ್ಲಿ 1 ಬೌಂಡರಿ ಸಹಿತ 14 ರನ್​ಗಳ ಸಪ್ಪೆ ಇನ್ನಿಂಗ್ಸ್ ಆಡಿ ಅತೀಕ್ ಇಕ್ಬಾಲ್​ಗೆ ವಿಕೆಟ್ ಒಪ್ಪಿಸಿದರು.

ದಾಸ್ ಅರ್ಧಶತಕದಾಟ

47ಕ್ಕೆ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಬಾಂಗ್ಲಾ ತಂಡವನ್ನ ಲಿಟನ್ ದಾಸ್​ ಅಮೋಘ ಪ್ರದರ್ಶನ ನೀರಿ ಮೇಲೆತ್ತಿದ್ದರು. 39 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್​ ಸಹಿತ 59 ರನ್​ಗಳಿಸಿ ತಂಡವನ್ನ ಗೆಲುವಿನ ಸನಿಹ ತಂದರು. ಗೆಲುವಿಗೆ 2 ರನ್​ಗಳ ಅಗತ್ಯವಿದ್ದಾಗ ದಾಸ್ ಇಕ್ಬಾಲ್ ಬೌಲಿಂಗ್​​ನಲ್ಲಿ ಬೌಲ್ಡ್ ಆದರು. 4ನೇ ಕ್ರಮಾಂಕದಲ್ಲಿ ಕ್ರೀಸ್​ಗೆ ಆಗಮಿಸಿ ಆ್ಯಂಕರ್ ಆಟವಾಡಿದ ಯುವ ಆಟಗಾರ ಹೃದೋಯ್ 36 ಎಸೆತಗಳಲ್ಲಿ 1 ಬೌಂಡರಿ ಸಹಿತ 35 ರನ್​ಗಳಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು.

ನಂತರ ಒಂದಾದ ಜೀಸನ್ ಅಲಿ ಹಾಗೂ ನಿಜಾಕತ್ ಖಾನ್ 41 ರನ್​ಗಳ ಜೊತೆಯಾಟ ನೀಡಿದರು. ಆದರೆ 12 ನೇ ಓವರ್​​ನಲ್ಲಿ ಜೀಶನ್ ಅಲಿ ತಂಜಿಮ್ಗೆ ಎರಡನೇ ಬಲಿಯಾದರು. 34 ಎಸೆತಗಳನ್ನು ಎದುರಿಸಿ 30 ರನ್ ಗಳಿಸಿದ್ದರು. ಈ ಸಮಯದಲ್ಲಿ ಅವರು 3 ಬೌಂಡರಿ ಮತ್ತು 1 ಸಿಕ್ಸರ್ ಬಾರಿಸಿದರು. ನಂತರ ಬಂದ ನಾಯಕ ಯಾಸಿಮ್ ಮುರ್ತಾಜಾ ರನೌಟ್ ಆದರು, ಅವರು 19 ಎಸೆತಗಳಲ್ಲಿ 2 ಬೌಂಡರಿ ಮತ್ತು 2 ಸಿಕ್ಸರ್‌ಗಳ ಸಹಿತ 28 ರನ್ ಗಳಿಸಿದರು. ನಿಜಾಕತ್ ಖಾನ್ 40 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ಸಹಿತ 42 ರನ್​ಗಳಿಸಿ 19ನೇ ಓವರ್​​ನಲ್ಲಿ ಔಟ್ ಆದರು.

ಬಾಂಗ್ಲಾದೇಶದ ಪರ ತಸ್ಕಿನ್ ಅಹ್ಮದ್ 38ಕ್ಕೆ2, ರಿಷದ್ ಹೊಸೇನ್ 31ಕ್ಕೆ 2, ತಂಜಿಮ್ ಹಸನ್ ಸಕಿಬ್ 21ಕ್ಕೆ 2 ವಿಕೆಟ್ ಪಡೆದು ಮಿಂಚಿದರು.

ಎರಡು ತಂಡಗಳ ಮುಖಾಮುಖಿ

ಬಾಂಗ್ಲಾದೇಶ ಮತ್ತು ಹಾಂಗ್ ಕಾಂಗ್ ತಂಡಗಳು ಇದುವರೆಗೆ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಒಮ್ಮೆ ಮುಖಾಮುಖಿಯಾಗಿವೆ. ಈ ಅವಧಿಯಲ್ಲಿ ಹಾಂಗ್ ಕಾಂಗ್ ತಂಡ ಗೆಲುವು ಸಾಧಿಸಿದೆ. ಎರಡೂ ತಂಡಗಳು 2014 ರಲ್ಲಿ ಮುಖಾಮುಖಿಯಾಗಿದ್ದವು. ಈ ಅವಧಿಯಲ್ಲಿ ಹಾಂಗ್ ಕಾಂಗ್ ತಂಡವು ಬಾಂಗ್ಲಾದೇಶವನ್ನು 2 ವಿಕೆಟ್‌ಗಳಿಂದ ಸೋಲಿಸಿತು. ಇಂತಹ ಪರಿಸ್ಥಿತಿಯಲ್ಲಿ, ಬಾಂಗ್ಲಾದೇಶ ತಂಡವು 11 ವರ್ಷಗಳ ಹಿಂದಿನ ಸೋಲಿಗೆ ಇಂದು ಸೇಡು ತೀರಿಸಿಕೊಂಡಿದೆ.

ಮುಂದಿನ ಪಂದ್ಯ

ಶುಭಾರಂಭ ಮಾಡಿರುವ ಬಾಂಗ್ಲಾದೇಶ ತಂಡ ಸೆಪ್ಟೆಂಬರ್ 13 ರಂದು ಶ್ರೀಲಂಕಾ ತಂಡದೆದುರು ತನ್ನ ಎರಡನೇ ಪಂದ್ಯವನ್ನಾಡಲಿದೆ. ಇತ್ತ ಸೋತು ಸುಣ್ಣವಾಗಿರುವ ಹಾಂಗ್​ ಕಾಂಗ್ ಕೂಡ ತನ್ನ ಕೊನೆಯ ಪಂದ್ಯವನ್ನ ಶ್ರೀಲಂಕಾ ವಿರುದ್ಧವೇ ಸೆಪ್ಟೆಂಬರ್ 15ರಂದು ಆಡಲಿದೆ. ಇನ್ನು ಶುಕ್ರವಾರದ ಪಂದ್ಯದಲ್ಲಿ ಪಾಕಿಸ್ತಾನ ತಂಡ ಕ್ರಿಕೆಟ್ ಶಿಶು ಒಮಾನ್ ತಂಡವನ್ನು ಎದುರಿಸಲಿದೆ.