ಈ ಬಾರಿಯ ಎಲ್ಲಾ ಪಂದ್ಯಗಳು ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್ ಚಾನೆಲ್‌ಗಳಲ್ಲಿ ನೇರಪ್ರಸಾರವಾಗಲಿದೆ.
ಟಿವಿ ಚಾನೆಲ್‌ಗಳು: ಸೋನಿ ಸ್ಪೋರ್ಟ್ಸ್ 1 (ಇಂಗ್ಲಿಷ್), ಸೋನಿ ಸ್ಪೋರ್ಟ್ಸ್ 3 (ಹಿಂದಿ), ಸೋನಿ ಸ್ಪೋರ್ಟ್ಸ್ 4 (ತಮಿಳು, ತೆಲುಗು) ಮತ್ತು ಸೋನಿ ಸ್ಪೋರ್ಟ್ಸ್ 5 (ಇಂಗ್ಲಿಷ್ HD) ಚಾನೆಲ್‌ಗಳಲ್ಲಿ ನೀವು ಪಂದ್ಯಗಳನ್ನು ವೀಕ್ಷಿಸಬಹುದು.
ಆನ್‌ಲೈನ್ ಸ್ಟ್ರೀಮಿಂಗ್: ಮೊಬೈಲ್ ಅಥವಾ ಲ್ಯಾಪ್ಟಾಪ್‌ನಲ್ಲಿ ನೋಡುವವರು ಸೋನಿ ಲಿವ್ (SonyLIV) ಆ್ಯಪ್ ಅಥವಾ ವೆಬ್‌ಸೈಟ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಮೂಲಕ ಪಂದ್ಯವನ್ನು ಆನಂದಿಸಬಹುದು. ಆದರೆ, ಇದಕ್ಕೆ ಚಂದಾದಾರಿಕೆ ಕಡ್ಡಾಯವಾಗಿದೆ.
ಸೋನಿ ಲಿವ್ ಸದ್ಯ ಮೂರು ಪ್ರಮುಖ ಪ್ಲಾನ್‌ಗಳನ್ನು ಹೊಂದಿದೆ: ₹699 (ಒಂದು ವರ್ಷ, ಮೊಬೈಲ್ ಮಾತ್ರ), ₹1,499 (LIV ಪ್ರೀಮಿಯಂ – ಒಂದು ವರ್ಷ) ಮತ್ತು ₹399 (LIV ಪ್ರೀಮಿಯಂ – ಒಂದು ತಿಂಗಳು).
ಎಲ್ಲರೂ ಉಸಿರು ಬಿಗಿಹಿಡಿದು ಕಾಯುವ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯವು ಸೆಪ್ಟೆಂಬರ್ 14 ರಂದು ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯವು ಭಾರತೀಯ ಕಾಲಮಾನ ರಾತ್ರಿ 8:00 ಗಂಟೆಗೆ ಆರಂಭವಾಗಲಿದ್ದು, 7:30 ಕ್ಕೆ ಟಾಸ್ ನಡೆಯಲಿದೆ.
ಈ ಬಾರಿ ಒಟ್ಟು 8 ತಂಡಗಳು ಕಣಕ್ಕಿಳಿಯಲಿದ್ದು, ಅವುಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ:
ಗುಂಪು A: ಭಾರತ, ಪಾಕಿಸ್ತಾನ, ಯುಎಇ, ಓಮನ್
ಗುಂಪು B: ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ, ಹಾಂಗ್ ಕಾಂಗ್
ಸೂರ್ಯಕುಮಾರ್ ಯಾದವ್ ನಾಯಕತ್ವದ ಟೀಂ ಇಂಡಿಯಾ, ಹಾಲಿ ಚಾಂಪಿಯನ್ ಆಗಿ ಕಣಕ್ಕಿಳಿಯುತ್ತಿದೆ. 2023ರಲ್ಲಿ ಶ್ರೀಲಂಕಾವನ್ನು ಮಣಿಸಿ ಪ್ರಶಸ್ತಿ ಗೆದ್ದಿದ್ದ ಭಾರತ, ಈ ಬಾರಿ 8ನೇ ಬಾರಿಗೆ ಏಷ್ಯಾದ ಚಾಂಪಿಯನ್ ಪಟ್ಟಕ್ಕೇರುವ ಗುರಿ ಹೊಂದಿದೆ.
ಭಾರತದ ಪಂದ್ಯಗಳ ವೇಳಾಪಟ್ಟಿ (ಗ್ರೂಪ್ ಹಂತ):
ಸೆಪ್ಟೆಂಬರ್ 10: ಭಾರತ vs ಯುಎಇ (ದುಬೈ)
ಸೆಪ್ಟೆಂಬರ್ 14: ಭಾರತ vs ಪಾಕಿಸ್ತಾನ (ದುಬೈ)
ಟೂರ್ನಿಯ ಉದ್ಘಾಟನಾ ಪಂದ್ಯ ಸೆಪ್ಟೆಂಬರ್ 9 ರಂದು ಅಫ್ಘಾನಿಸ್ತಾನ ಮತ್ತು ಹಾಂಗ್ ಕಾಂಗ್ ನಡುವೆಯೇ ನಡೆಯಿತು. ಫೈನಲ್ ಪಂದ್ಯವು ಸೆಪ್ಟೆಂಬರ್ 28 ರಂದು ದುಬೈನಲ್ಲಿ ನಡೆಯಲಿದೆ. ಎಲ್ಲಾ ಪಂದ್ಯಗಳು ರಾತ್ರಿ 8 ಗಂಟೆಗೆ ಪ್ರಾರಂಭವಾಗಲಿದ್ದು, ಕ್ರಿಕೆಟ್ ಅಭಿಮಾನಿಗಳು ಸೋನಿ ನೆಟ್‌ವರ್ಕ್‌ನಲ್ಲಿ ಈ ರೋಚಕ ಪಂದ್ಯಗಳನ್ನು ಕಣ್ತುಂಬಿಕೊಳ್ಳಬಹುದು. ನೀವು ಕೂಡ ಏಷ್ಯಾಕಪ್ ಪಂದ್ಯಗಳನ್ನು ನೋಡಿ ಕಣ್ತುಂಬಿಕೊಳ್ಳಿ.
September 10, 2025 10:23 AM IST