Last Updated:
ಏಷ್ಯಾಕಪ್ನಲ್ಲಿ ಭಾರತ ಪ್ರಚಂಡ ದಾಳಿಗೆ ತತ್ತರಿಸಿದ ಪಾಕಿಸ್ತಾನ ತಂಡ ಕೇವಲ 147 ರನ್ಗಳ ಸಾಧಾರಣ ಗುರಿ ನೀಡಿದೆ. ಆರಂಭದಲ್ಲಿ ಅಬ್ಬರಿಸಿದರೂ ಪಾಕಿಸ್ತಾನ ಮಧ್ಯಮ ಕ್ರಮಾಂಕ ದಿಢೀರ್ ಕುಸಿತ ಕಂಡು 146 ರನ್ಗಳಿಗೆ ಆಲ್ಔಟ್ ಆಗಿದೆ.
ಏಷ್ಯಾಕಪ್ನಲ್ಲಿ ಭಾರತ ಪ್ರಚಂಡ ದಾಳಿಗೆ ತತ್ತರಿಸಿದ ಪಾಕಿಸ್ತಾನ ತಂಡ ಕೇವಲ 147 ರನ್ಗಳ ಸಾಧಾರಣ ಗುರಿ ನೀಡಿದೆ. ಆರಂಭದಲ್ಲಿ ಅಬ್ಬರಿಸಿದರೂ ಪಾಕಿಸ್ತಾನ ಮಧ್ಯಮ ಕ್ರಮಾಂಕ ದಿಢೀರ್ ಕುಸಿತ ಕಂಡು 146 ರನ್ಗಳಿಗೆ ಆಲ್ಔಟ್ ಆಗಿದೆ. ಆರಂಭಿಕ ಓವರ್ಗಳಲ್ಲಿ ಅದ್ಬುತವಾಗಿ ಆಡಿದ್ದ ಪಾಕಿಸ್ತಾನ ಭಾರತೀಯ ಸ್ಪಿನ್ ಬೌಲರ್ಗಳ ದಾಳಿಗೆ ಉತ್ತರಿಸಲಾಗದೇ ಅಲ್ಪಮೊತ್ತಕ್ಕೆ ಆಲೌಟ್ ಆಯಿತು. ಪಾಕಿಸ್ತಾನ ಪರ ಆರಂಭಿಕರಾದ ಸಾಹಿಬ್ಜಾದಾ ಫರ್ಹಾನ್ 57 ಹಾಗೂ ಫಖರ್ ಜಮಾನ್ 46 ರನ್ಗಳಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಉಳಿದವರೆಲ್ಲಾ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು. ಕುಲ್ದೀಪ್ ಯಾದವ್ 4 ವಿಕೆಟ್ ಪಡೆದು ಮಿಂಚಿದರು.
ಟಾಸ್ ಸೋತು ಬ್ಯಾಟಿಂಗ್ ಇಳಿದ ಪಾಕಿಸ್ತಾನ ತಂಡಕ್ಕೆ ಆರಂಭಿ ಜೋಡಿ ಸಾಹಿಬ್ಜಾದಾ ಫರ್ಹಾನ್ ಮತ್ತು ಫಖರ್ ಜಮಾನ್ ಆಸರೆಯಾದರು. ಆರಂಭದಲ್ಲೇ ಟೀಮ್ ಇಂಡಿಯಾ ಲೆಕ್ಕಚಾರವನ್ನು ಪವರ್ ಪ್ಲೇನಲ್ಲಿ ಸಾಹಿಬ್ಜಾದಾ ಫರ್ಹಾನ್ ಮತ್ತು ಫಖರ್ ಜಮಾನ್ ಜೋಡಿ ಉಲ್ಟಾ ಮಾಡಿತು. ಫರ್ಹಾನ್ 38 ಎಸೆತಗಳಲ್ಲಿ 5 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಿಂದ 57 ರನ್ ಗಳಿಸಿ ತಂಡಕ್ಕೆ ಬಲ ತುಂಬಿದರು. ಬಿರುಸಿನ ಬ್ಯಾಟಿಂಗ್ ಮಾಡುತ್ತಿರುವಾಗಲೇ ವರುಣ್ ಚಕ್ರವರ್ತಿ ಬೌಲಿಂಗ್ನಲ್ಲಿ ಫರ್ಹಾನ್ ತಮ್ಮ ವಿಕೆಟ್ ಕಳೆದುಕೊಂಡರು.
ಆರಂಭದಲ್ಲಿ ವಿಕೆಟ್ ಹುಡುಕಾಟದಲ್ಲಿದ್ದ ಟೀಮ್ ಇಂಡಿಯಾ ಬೌಲರ್ಸ್ ಲಯ ಕಂಡುಕೊಳ್ಳುವಲ್ಲಿ ಯಶಸ್ವಿಯಾದರು. ಫರ್ಹಾನ್ ಬಳಿಕ ಫಖರ್ ಜಮಾನ್ (46) ಕೂಡ ವರುಣ್ ಸ್ಪಿನ್ ಮೋಡಿಗೆ ಬಲಿಯಾದರು. ಆರಂಭಿಕ ಜೋಡಿ ವಿಕೆಟ್ ಕಳೆದುಕೊಂಡ ನಂತರ ಪಾಕಿಸ್ತಾನ ತಂಡದ ಬ್ಯಾಟರ್ಸ್ ಪೆವಿಲಿಯನ್ ಪರೇಡ್ ನಡೆಸಿದರು.
ಈ ವಿಕೆಟ್ ನಂತರ ಪಾಕಿಸ್ತಾನದ ಬ್ಯಾಟರ್ಗಳು ರನ್ಗಳಿಸಲು ಪರದಾಡಿದರು. ಆರಂಭಿಕರನ್ನ ಬಿಟ್ಟರೆ ಸೈಮ್ ಅಯೂಬ್ (14) ಮಾತ್ರ ಎರಡಂಕಿ ರನ್ ಗಡಿ ದಾಟಿದರು. ಆ ನಂತರ ಬಂದ ನಾಯಕ ಸಲ್ಮಾನ್ ಅಘಾ (8), ಹುಸೇನ್ ತಲತ್ (1), ಮೊಹಮ್ಮದ್ ಹ್ಯಾರಿಸ್ (0), ಶಾಹೀನ್ ಅಫ್ರಿದಿ (0) ಮತ್ತು ಫಹೀಮ್ ಅಶ್ರಫ್ (0) ತಂಡದ ಪರ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾದರು. ಬಾಲಂಗೋಚಿಗಳಾದ ಹ್ಯಾರಿಸ್ ರೌಫ್ 6 ರನ್, ಮೊಹಮ್ಮದ್ ನವಾಜ್ 6 ರನ್ ಗಳಿಸಿ ವಿಕೆಟ್ ಕಳೆದುಕೊಂಡರು. ಅಬ್ರಾರ್ ಅಹ್ಮದ್ ಕೇವಲ 1 ರನ್ ಗಳಿಸಿ ಅಜೇಯರಾಗುಳಿದರು.
ಟೀಮ್ ಇಂಡಿಯಾ ಪರ ಬೌಲರ್ಸ್ ಸಂಘಟಿತ ಬೌಲಿಂಗ್ ಪ್ರದರ್ಶನ ತೋರಿದರು. ಕುಲ್ದೀಪ್ ಯಾದವ್ ಒಂದೇ ಓವರ್ನಲ್ಲಿ ಮೂರು ವಿಕೆಟ್ ಸೇರಿದಂತೆ ಒಟ್ಟಾರೆ 4 ವಿಕೆಟ್ ಪಡೆದು ಮಿಂಚಿದರೆ, ಜಸ್ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ ಮತ್ತು ಅಕ್ಸರ್ ಪಟೇಲ್ ತಲಾ 2 ವಿಕೆಟ್ ಉರುಳಿಸಿ ಪಾಕಿಸ್ತಾನ ತಂಡವನ್ನು ಆಲೌಟ್ ಮಾಡಿದರು.
September 28, 2025 9:53 PM IST