Asia Cup Final: ಭಾರತದ ಗೆಲುವಿನ ಟರ್ನಿಂಗ್ ಪಾಯಿಂಟ್ ಆಯ್ತು ಆ ಒಂದೇ ಓವರ್‌ ! ಪಾಕಿಸ್ತಾನಕ್ಕೆ ಕನಸು ನುಚ್ಚುನೂರು ಮಾಡಿದ ಆ 6 ಎಸೆತ |17 Runs in One Over: Haris Rauf’s Misstep Hands India Victory in Asia Cup 2025 Final | ಕ್ರೀಡೆ

Asia Cup Final: ಭಾರತದ ಗೆಲುವಿನ ಟರ್ನಿಂಗ್ ಪಾಯಿಂಟ್ ಆಯ್ತು ಆ ಒಂದೇ ಓವರ್‌ ! ಪಾಕಿಸ್ತಾನಕ್ಕೆ ಕನಸು ನುಚ್ಚುನೂರು ಮಾಡಿದ ಆ 6 ಎಸೆತ |17 Runs in One Over: Haris Rauf’s Misstep Hands India Victory in Asia Cup 2025 Final | ಕ್ರೀಡೆ

Last Updated:

ಏಷ್ಯಾಕಪ್​ ಫೈನಲ್​ ಪಂದ್ಯದಲ್ಲಿ ಪಾಕಿಸ್ತಾನ ತಂಡವು ಈ ಬಾರಿ ಹಿಂದಿನ ಪಂದ್ಯಗಳಂತೆ ಸಂಪೂರ್ಣವಾಗಿ ಶರಣಾಗಲಿಲ್ಲ. ಭಾರತದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳನ್ನು ಕೆಡವಿದ ನಂತರ, ಪಾಕಿಸ್ತಾನ ಗೆಲುವಿನ ಕನಸು ಕಾಣುತ್ತಿತ್ತು. ಆದರೆ, ತಿಲಕ್ ವರ್ಮಾ (Tilak Varma) ಎಲ್ಲವನ್ನೂ ಬದಲಾಯಿಸಿದರು.

ಭಾರತ ತಂಡಭಾರತ ತಂಡ
ಭಾರತ ತಂಡ

ಏಷ್ಯಾ ಕಪ್ 2025ರ ಫೈನಲ್ (Asia Cup final) ಪಂದ್ಯವು ಅಭಿಮಾನಿಗಳಿಗೆ ರೋಮಾಂಚಕ ಕ್ಷಣಗಳನ್ನು ಒದಗಿಸಿತು. ಭಾರತ ತಂಡವು ಪಾಕಿಸ್ತಾನವನ್ನು (India vs Pakistan) 5 ವಿಕೆಟ್‌ಗಳಿಂದ ಸೋಲಿಸಿ 9ನೇ ಏಷ್ಯಾಕಪ್​ ತನ್ನದಾಗಿಸಿಕೊಂಡಿತು. ಆದರೆ ಪಾಕಿಸ್ತಾನ ತಂಡವು ಈ ಬಾರಿ ಹಿಂದಿನ ಪಂದ್ಯಗಳಂತೆ ಸಂಪೂರ್ಣವಾಗಿ ಶರಣಾಗಲಿಲ್ಲ. ಭಾರತದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳನ್ನು ಕೆಡವಿದ ನಂತರ, ಪಾಕಿಸ್ತಾನ ಗೆಲುವಿನ ಕನಸು ಕಾಣುತ್ತಿತ್ತು. ಆದರೆ, ತಿಲಕ್ ವರ್ಮಾ (Tilak Varma) ಎಲ್ಲವನ್ನೂ ಬದಲಾಯಿಸಿದರು. ಶಿವಂ ದುಬೆಯೊಂದಿಗೆ ಸೇರಿ, ಹ್ಯಾರಿಸ್ ರೌಫ್‌ರ ಒಂದೇ ಓವರ್‌ನಲ್ಲಿ 17 ರನ್‌ಗಳನ್ನು ಕಲೆಹಾಕಿ ಪಂದ್ಯದ ಗತಿಯನ್ನು ಸಂಪೂರ್ಣವಾಗಿ ಭಾರತದತ್ತಾ ತಿರುಗಿಸಿದರು. ಈ ಓವರ್‌ನ ಆರು ಎಸೆತಗಳು ಪಾಕಿಸ್ತಾನಕ್ಕೆ ಎಂದಿಗೂ ಮರೆಯಲಾಗದ ಕ್ಷಣವಾಯಿತು.

ಪಂದ್ಯದ ಗತಿ ಬದಲಿಸಿದ ತಿಲಕ್

ಏಷ್ಯಾ ಕಪ್ ಫೈನಲ್‌ನಲ್ಲಿ ಪಾಕಿಸ್ತಾನ ತಂಡವು ಭಾರತಕ್ಕೆ ಕಠಿಣ ಸವಾಲು ಒಡ್ಡಿತು. ಲೀಗ್ ಹಂತ ಮತ್ತು ಸೂಪರ್ 4ರಲ್ಲಿ ಸೋಲನುಭವಿಸಿದ್ದ ಪಾಕಿಸ್ತಾನಕ್ಕೆ ಈ ಪಂದ್ಯದಲ್ಲಿ ತೋರಿದ ಹೋರಾಟವು ಅಭಿಮಾನಿಗಳಿಗೆ ಸ್ವಲ್ಪ ಸಮಾಧಾನ ತಂದಿತು. ಭಾರತಕ್ಕೆ ಗೆಲುವು ಅಷ್ಟೇನು ಕಷ್ಟಕರವಾಗಿರಲಿಲ್ಲ, ಆದರೆ ಪಾಕಿಸ್ತಾನ ಒಂದು ಹಂತದಲ್ಲಿ ಪಂದ್ಯದ ಮೇಲೆ ಗಟ್ಟಿಯಾದ ಹಿಡಿತ ಸಾಧಿಸಿತ್ತು. ಆದರೆ, ತಿಲಕ್ ವರ್ಮಾ ಆರು ಎಸೆತಗಳಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿ ಪಾಕಿಸ್ತಾನವನ್ನು ಸ್ಪರ್ಧೆಯಿಂದ ಹೊರಗಿಟ್ಟರು. ಹ್ಯಾರಿಸ್ ರೌಫ್‌ರ ಈ ಓವರ್‌ನ ಆಟವನ್ನು ಪಾಕಿಸ್ತಾನ ತಂಡ ಮತ್ತು ಅದರ ಅಭಿಮಾನಿಗಳು ಎಂದಿಗೂ ಮರೆಯಲಾರದಂತೆ ಮಾಡಿತು.

ಭಾರತಕ್ಕೆ ಟರ್ನಿಂಗ್ ಪಾಯಿಂಟ್ ಆದ ಆ ಓವರ್

147 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತ ತಂಡವು 14 ಓವರ್‌ಗಳಲ್ಲಿ 4 ವಿಕೆಟ್‌ಗೆ 83 ರನ್ ಗಳಿಸಿತ್ತು. ಗೆಲುವಿಗೆ ಇನ್ನೂ 6 ಓವರ್‌ಗಳಲ್ಲಿ, ಅಂದರೆ 36 ಎಸೆತಗಳಲ್ಲಿ 64 ರನ್‌ಗಳ ಅಗತ್ಯವಿತ್ತು. 15ನೇ ಓವರ್‌ನಲ್ಲಿ ಬೌಲಿಂಗ್‌ಗೆ ಬಂದ ಹ್ಯಾರಿಸ್ ರೌಫ್‌ ವಿರುದ್ಧ ತಿಲಕ್ ವರ್ಮಾ ಮತ್ತು ಶಿವಂ ದುಬೆ ಒಟ್ಟಿಗೆ 17 ರನ್ ಕಲೆಹಾಕಿದರು. ಇದು ಪಂದ್ಯದ ಗತಿಯನ್ನ ಬದಲಿಸಿ, ಭಾರತದತ್ತ ತಿರುಗಿಸಿತು. ಆ ಓವರ್​​ನನ ಹೈಲೈಟ್ಸ್ ಹೀಗಿತ್ತು

– ಮೊದಲ ಎಸೆತ : ಶಿವಂ ದುಬೆ ಬೌಂಡರಿ ಬಾರಿಸಿದರು.

– ಎರಡನೇ ಎಸೆತ : ದುಬೆ ಒಂದು ರನ್ ತೆಗೆದುಕೊಂಡು ತಿಲಕ್ ವರ್ಮಾಗೆ ಸ್ಟ್ರೈಕ್ ನೀಡಿದರು.

– ಮೂರನೇ ಎಸೆತ : ತಿಲಕ್ ವರ್ಮಾ ಬೌಂಡರಿ ಹೊಡೆದರು.

– ನಾಲ್ಕನೇ ಎಸೆತ : ತಿಲಕ್ ಒಂದು ರನ್ ತೆಗೆದುಕೊಂಡು ದುಬೆಗೆ ಸ್ಟ್ರೈಕ್ ಕೊಟ್ಟರು.

– ಐದನೇ ಎಸೆತ : ದುಬೆ ಒಂದು ರನ್ ತೆಗೆದುಕೊಂಡರು

– ಆರನೇ ಎಸೆತ : ತಿಲಕ್ ವರ್ಮಾ ಭರ್ಜರಿ ಸಿಕ್ಸರ್ ಬಾರಿಸಿ 17 ರನ್​ ಸೂರೆಗೈದರು

ಈ ಪಂದ್ಯಕ್ಕೂ ಮುನ್ನ ಗೋಲ್ಡನ್ ಫಾರ್ಮ್​ನಲ್ಲಿದ್ದ ಅಭಿಷೇಕ್ ಶರ್ಮಅ 5 ರನ್​ಗೆ ವಿಕೆಟ್ ಒಪ್ಪಿಸಿದರೆ, ಶುಭ್​ಮನ್ ಗಿಲ್ (12) ಮತ್ತು ಸೂರ್ಯಕುಮಾರ್ ಯಾದವ್ (1) ಮತ್ತೊಮ್ಮೆ ನಿರಾಶೆ ಮೂಡಿಸಿದರು. ಸಂಜು ಸ್ಯಾಮ್ಸನ್​ 24ರನ್​ ಸಿಡಿಸಿ ತಂಡದ ಗೆಲುವಿಗೆ ಕಿರಿ ಕಾಣಿಕೆ ನೀಡಿದರು.