Last Updated:
ಏಷ್ಯಾಕಪ್ 2025ರ ಸೂಪರ್ 4 ಪಂದ್ಯದಲ್ಲಿ ಪಾಕಿಸ್ತಾನದ ಭಾರತದೆದರು ಉತ್ತಮ ಪ್ರದರ್ಶನ ನೀಡಿ 172 ರನ್ಗಳ ಸವಾಲಿನ ಗುರಿ ನೀಡಿದೆ.
ಏಷ್ಯಾಕಪ್ ಸೂಪರ್ 4 ಹಂತದ 2ನೇ ಪಂದ್ಯದಲ್ಲಿ ಪಾಕಿಸ್ತಾನ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದೆ. ಆರಂಭಿಕ ಬ್ಯಾಟರ್ ಸಹೀಬ್ಜಾದಾ ಫರ್ಹಾನ್ ಸಿಡಿಸಿದ ಅರ್ಧಶತಕದ ನೆರವಿನಿಂದ ಪಾಕಿಸ್ತಾನ ತಂಡ ಭಾರತಕ್ಕೆ 172 ರನ್ಗಳ ಸವಾಲಿನ ಗುರಿ ನೀಡಿದೆ. ಫರ್ಹಾನ್ ತಮಗೆ ಸಿಕ್ಕಂತಹ 2 ಜೀವದಾನವನ್ನ ಸದುಪಯೋಗಪಡಿಸಿಕೊಂಡು 58 ರನ್ಗಳಿಸಿ ಪಾಕಿಸ್ತಾನ 150ರ ಗಡಿ ದಾಟಲು ನೆರವಾದರು. ಕೊನೆಯಲ್ಲಿ ನಾಯಕ ಸಲ್ಮಾನ್ ಅಲಿ ಆಘಾ ಹಾಗೂ ಮೊಹಮ್ಮದ್ ನವಾಜ್ ವೇಗವಾಗಿ ರನ್ಗಳಿಸಿ 171ರ ಸವಾಲಿನ ಮೊತ್ತಕ್ಕೆ ಕಾರಣರಾದರು.
ಟಾಸ್ ಗೆದ್ದ ಭಾರತ ತಂಡ ನಿರೀಕ್ಷೆಯಂತೆ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಸತತ 3 ಡಕ್ ಔಟ್ ಆಗಿದ್ದ ಸೈಮ್ ಅಯೂಬ್ ಬದಲಿಗೆ ಇಂದು ಫಖರ್ ಜಮಾನ್ ಆರಂಭಿಕನಾಗಿ ಕಣಕ್ಕಿಳಿದಿದ್ದರು. ಹಾರ್ದಿಕ್ ಪಾಂಡ್ಯ ತಮ್ಮ ಮೊದಲ ಓವರ್ನ 3ನೇ ಎಸೆತದಲ್ಲೇ ಆರಂಭಿಕ ಫರ್ಹಾನ್ ವಿಕೆಟ್ ಪಡೆಯುವ ಅವಕಾಶ ಸೃಷ್ಟಿಸಿದ್ದರು. ಆದರೆ ಅಭಿಷೇಕ್ ಶರ್ಮಾ ಕೈಗೆ ಬಂದ ಕ್ಯಾಚ್ ಕೈಚೆಲ್ಲಿದರು. 3ನೇ ಓವರ್ನಲ್ಲಿ ಮತ್ತೆ ಹಾರ್ದಿಕ್ ಪಾಂಡ್ಯ 3 ಬೌಂಡರಿ ಸಹಿತ 15 ರನ್ಗಳಿಸಿ ಡೇಂಜರಸ್ ಆಗುತ್ತಿದ್ದ ಫಖರ್ ಜಮಾನ್ ವಿಕೆಟ್ ಉಡಾಯಿಸಿದರು.
ಆದರೆ ಆ ನಂತರ ಒಂದಾದ ಆಯೂಬ್-ಫರ್ಹಾನ್ ಜೋಡಿ 2ನೇ ವಿಕೆಟ್ ಜೊತೆಯಾಟದಲ್ಲಿ 72 ರನ್ಗಳ ಜೊತೆಯಾಟ ನೀಡಿ ಚೇತರಿಕೆ ನೀಡಿದರು. 17 ಎಸೆತಗಳಲ್ಲಿ 21 ರನ್ಗಳಿಸಿದ್ದ ಅಯೂಬ್ ಶಿವಂ ದುಬೆ ಬೌಲಿಂಗ್ನಲ್ಲಿ ಅಭಿಷೇಕ್ ಶರ್ಮಾ ಹಿಡಿದ ಅದ್ಭುತ ಕ್ಯಾಚ್ಗೆ ಬದಲಿಯಾದರು. ಆ ನಂತರ ಟೀಮ್ ಇಂಡಿಯಾ ಬೌಲರ್ಗಳು ಮೇಲುಗೈ ಸಾಧಿಸಿದರು. 4ನೇ ಕ್ರಮಾಂಕದಲ್ಲಿ ಬಂದ ಹುಸೇನ್ ತಲಾತ್ 11 ಎಸೆತಗಳಲ್ಲಿ 10 ರನ್ಗಳಿಸಿ ಕುಲ್ದೀಪ್ ಯಾದವ್ಗೆ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ 45 ಎಸೆತಗಳಲ್ಲಿ 5 ಬೌಂಡರಿ, 3 ಸಿಕ್ಸರ್ಗಳ ಸಹಿತ 58 ರನ್ಗಳಿಸಿದ್ದ ಆರಂಭಿಕ ಆಟಗಾರ ಸಾಹಿಬ್ಜಾದಾ ಫರ್ಹಾನ್ ದುಬೆ ಬೌಲಿಂಗ್ನಲ್ಲಿ ಸೂರ್ಯಕುಮಾರ್ ಯಾದವ್ಗೆ ಕ್ಯಾಚ್ ನೀಡಿ ಔಟ್ ಆದರು.
ಕೊನೆಯಲ್ಲಿ ಮೊಹಮ್ಮದ್ ನವಾಜ್ 19 ಎಸೆತಗಳಲ್ಲಿ ತಲಾ 1 ಬೌಂಡರಿ, ಸಿಕ್ಸರ್ ಸಹಿತ 21, ನಾಯಕ ಸಲ್ಮಾನ್ ಅಲಿ ಆಘಾ 13 ಎಸೆತಗಳಲ್ಲಿ 17, ಫಹೀಮ್ ಅಶ್ರಫ್ 8 ಎಸೆತಗಳಲ್ಲಿ 1 ಬೌಂಡರಿ, 2 ಸಿಕ್ಸರ್ಗಳ ಸಹಿತ 20 ರನ್ಗಳಿಸಿ ಸವಾಲಿನ ಮೊತ್ತಕ್ಕೆ ಕಾರಣರಾದರು.
September 21, 2025 10:02 PM IST