Asia Cup: UAE ವಿರುದ್ಧ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಭಾರತ! ಸ್ಯಾಮ್ಸನ್​ಗೆ​​ ಹಿಂಬಡ್ತಿ, ಪ್ಲೇಯಿಂಗ್ ಇಲೆವೆನ್ ಹೀಗಿದೆ ನೋಡಿ | Asia Cup 2025: Suryakumar Yadav’s Masterstroke – India to Bowl First Against UAE | ಕ್ರೀಡೆ

Asia Cup: UAE ವಿರುದ್ಧ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಭಾರತ! ಸ್ಯಾಮ್ಸನ್​ಗೆ​​ ಹಿಂಬಡ್ತಿ, ಪ್ಲೇಯಿಂಗ್ ಇಲೆವೆನ್ ಹೀಗಿದೆ ನೋಡಿ | Asia Cup 2025: Suryakumar Yadav’s Masterstroke – India to Bowl First Against UAE | ಕ್ರೀಡೆ

ಶುಭ್​ಮನ್ ಗಿಲ್ ತಂಡಕ್ಕೆ ಆಯ್ಕೆಯಾದಾಗಿನಿಂದ ಆರಂಭಿಕರಾಗಿ ಯಾರು ಆಡಲಿದ್ದಾರೆ ಎಂಬುದು ಕುತೂಹಲ ಕೆರಳಿಸಿತ್ತು. ಆದರೆ ಈ ಪಂದ್ಯದ ಮೂಲಕ ಗಿಲ್ ಹಾಗೂ ಅಭಿಷೇಕ್ ಶರ್ಮಾ ಓಪನರ್​ ಆಗುವುದು ಖಚಿತವಾಗಿದೆ. ಆದರೆ ಸಂಜು ಸ್ಯಾಮ್ಸನ್​​ಗೆ ಪ್ಲೇಯಿಂಗ್ ಇಲೆವೆನ್​​ನಲ್ಲಿ ಆಡುವ ಅವಕಾಶ ಸಿಕ್ಕಿರುವುದು ಸಮಾಧಾನಕರ ಸಂಗತಿಯಾಗಿದೆ. ಆದರೆ ಸಂಜು ಕಳೆದ 10 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 3 ಶತಕ ಸಿಡಿಸಿರುವುದರಿಂದ ಅವರಿಗೆ ಆರಂಭಿಕರಾಗಿ ಅವಕಾಶ ಸಿಗಬಹುದೆಂದು ಭಾವಿಸಲಾಗಿತ್ತು.

ಏಕೈಕ ಸ್ಪೆಷಲಿಸ್ಟ್ ವೇಗಿ

ಯುಎಇ ಸ್ಪಿನ್​ಗೆ ನೆರವು ನೀಡುವುದರಿಂದ ಟೀಮ್ ಇಂಡಿಯಾ ಏಕೈಕ ಸ್ಪೆಷಲಿಸ್ಟ್ ವೇಗಿಯೊಂದಿಗೆ ಕಣಕ್ಕಿಳಿದಿದೆ. ಬುಮ್ರಾ ಜೊತೆಗೆ ಹಾರ್ದಿಕ್ ಪಾಂಡ್ಯ 2ನೇ ವೇಗಿಯಾಗಿ ಆಡಲಿದ್ದಾರೆ. ಯುಎಇ ವಿಕೆಟ್​​ಗಳು ಸ್ಪಿನ್​ಗೆ ನೆರವಾಗುವುದರಿಂದ ಅಕ್ಷರ್ ಪಟೇಲ್, ವರುಣ್ ಚಕ್ರವರ್ತಿ ಹಾಗೂ ಕುಲ್ದೀಪ್ ಯಾದವ್ ಮೂವರು  ಅವಕಾಶ ಪಡೆದಿದ್ದಾರೆ.

ಪ್ಲೇಯಿಂಗ್ ಇಲೆವೆನ್​ ಗಮನಿಸುವುದಾದರೆ ಆರಂಭಿಕರಾಗಿ ಗಿಲ್, ಅಭಿಷೇಕ್, 3-4ರಲ್ಲಿ ತಿಲಕ್ ಹಾಗೂ ಸೂರ್ಯಕುಮಾರ್ ಆಡಲಿದ್ದಾರೆ. 5ರಲ್ಲಿ ಶಿವಂ ದುಬೆ, 6ರಲ್ಲಿ ಸಂಜು ಸ್ಯಾಮ್ಸನ್​ , 7ರಲ್ಲಿ ಹಾರ್ದಿಕ್ ಪಾಂಡ್ಯ, 8ರಲ್ಲಿ ಅಕ್ಷರ್ ಪಟೇಲ್ ಆಡಲಿದ್ದಾರೆ. ಒಂದು ವೇಳೆ ಆರಂಭಿಕ ವಿಕೆಟ್ ಬೇಗ ಬಿದ್ದರೆ ಸಂಜು 3ರಲ್ಲಿ ಆಡಲಿದ್ದಾರೆ.

ಹೆಡ್​ ಡು ಹೆಡ್

ಭಾರತ ಮತ್ತು ಯುನೈಟೆಡ್ ನಡುವೆ ಕೇವಲ ಒಂದೇ ಒಂದು ಟಿ20 ಪಂದ್ಯ ನಡೆದಿದೆ. 2016ರ ಏಷ್ಯಾಕಪ್​​ನಲ್ಲಿ ಎರಡು ತಂಡಗಳು ಮುಖಾಮುಕಿಯಾಗಿದ್ದು, ಯುಎಇ ಕೇವಲ 81 ರನ್​ಗಳಿಸಿತ್ತು. ಈ ಗುರಿಯನ್ನ ಟೀಮ್ ಇಂಡಿಯಾ 10.1 ಓವರ್​ಗಳಲ್ಲಿ ತಲುಪಿತ್ತು.

ಎರಡು ತಂಡಗಳ ಪ್ಲೇಯಿಂಗ್ ಇಲೆವೆನ್

ಯುನೈಟೆಡ್ ಅರಬ್ ಎಮಿರೇಟ್ಸ್ ಪ್ಲೇಯಿಂಗ್ XI: ಮುಹಮ್ಮದ್ ವಸೀಮ್ (ನಾಯಕ), ಮೊಹಮ್ಮದ್ ಜುಹೈಬ್ ಖಾನ್, ಆಸಿಫ್ ಖಾನ್, ಅಲಿಶನ್ ಶರಾಫು, ರಾಹುಲ್ ಚೋಪ್ರಾ (WK), ಧ್ರುವ ಪರಾಶರ್, ಹೈದರ್ ಅಲಿ, ಮುಹಮ್ಮದ್ ರೋಹಿದ್ ಖಾನ್, ಹರ್ಷಿತ್ ಕೌಶಿಕ್, ಜುನೈದ್ ಸಿದ್ದಿಕ್, ಸಿಮ್ರಂಜೀತ್ ಸಿಂಗ್ ಕಾಂಗ್

ಭಾರತ ಪ್ಲೇಯಿಂಗ್ XI: ಅಭಿಷೇಕ್ ಶರ್ಮಾ, ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ಸಂಜು ಸ್ಯಾಮ್ಸನ್ (ವಿಕೀ), ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

Asia Cup: UAE ವಿರುದ್ಧ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಭಾರತ! ಸ್ಯಾಮ್ಸನ್​ಗೆ​​ ಹಿಂಬಡ್ತಿ, ಪ್ಲೇಯಿಂಗ್ ಇಲೆವೆನ್ ಹೀಗಿದೆ ನೋಡಿ