Attukal Bhagavathy Temple: ಕೇರಳದ ಈ ಕ್ಷೇತ್ರ ಮಹಿಳೆಯರ ಶಬರಿಮಲೆ- ಇಲ್ಲಿನ ಅಟುಕಲ್ ಪೊಂಗಲ್ ಸೇವೆ ಸಖತ್‌ ಫೇಮಸ್! | Attukal Bhagavathy Temple: Sabarimala of women in this area of ​​Kerala

Attukal Bhagavathy Temple: ಕೇರಳದ ಈ ಕ್ಷೇತ್ರ ಮಹಿಳೆಯರ ಶಬರಿಮಲೆ- ಇಲ್ಲಿನ ಅಟುಕಲ್ ಪೊಂಗಲ್ ಸೇವೆ ಸಖತ್‌ ಫೇಮಸ್! | Attukal Bhagavathy Temple: Sabarimala of women in this area of ​​Kerala

Last Updated:

ಈ ಸೇವೆಯ ಮುಖ್ಯ ಆಕರ್ಷಣೆ ಮಹಿಳೆಯರೆಲ್ಲಾ ಸೇರಿ ಕ್ಷೇತ್ರದ ಸುತ್ತಮುತ್ತ ಅಡುಗೆ ಮಾಡಿ, ಅದನ್ನು ದೇವಿಗೆ ಸಮರ್ಪಿಸುವುದಾಗಿದೆ. ಕಿಲೋಮೀಟರ್ ಗಟ್ಟಲೆ ಈ ಅಡುಗೆ ಸಾಲು ಇಲ್ಲಿ ಕಂಡು ಬರುತ್ತಿದ್ದು, ಅಕ್ಕಿಯಿಂದ ಮಾಡಿದ ತಿಂಡಿ‌ ಅಥವಾ ಪಾಯಸವನ್ನು ಇಲ್ಲಿ ತಯಾರಿಸುತ್ತಾರೆ.

X

ವಿಡಿಯೋ ಇಲ್ಲಿ ನೋಡಿ

ಕೇರಳ: ಕೇರಳ ರಾಜ್ಯದ ಶಬರಿಮಲೆ(Sabarimala) ಯಾವ ರೀತಿಯಲ್ಲಿ ದೇಶದಾದ್ಯಂತ ಪ್ರಖ್ಯಾತಿ ಪಡೆದಿದೆಯೋ, ಅದೇ ರೀತಿಯಲ್ಲಿ ತಿರುವನಂತಪುರಂನಲ್ಲಿರುವ(Tiruvanantapuram) ಅಟುಕಲ್ ಭಗವತಿ(Attukal Bhagavathy Temple) ಕ್ಷೇತ್ರವೂ ಅತ್ಯಂತ ಪ್ರಸಿದ್ಧಿ ಪಡೆದ ದೇವಿ ಕ್ಷೇತ್ರವಾಗಿದೆ. ಯಾವ ರೀತಿ ಶಬರಿಮಲೆ ಪುರುಷ ಭಕ್ತರ ಸಂಖ್ಯೆಗೆ ಹೆಸರಾಗಿದೆಯೋ, ಅದೇ ರೀತಿ ಈ ಆಟುಕಲ್ ಭಗವತೀ ಕ್ಷೇತ್ರವನ್ನು ಮಹಿಳೆಯರ ಶಬರಿಮಲೆ ಎಂದು ಕರೆಯುತ್ತಾರೆ.

ವರ್ಷದಲ್ಲಿ 10 ದಿನಗಳ ಕಾಲ ಇಲ್ಲಿ ದೇವಿಗೆ ವಿಶೇಷ ಪೂಜೆ-ಪುನಸ್ಕಾರಗಳು ನಡೆಯುತ್ತಿದ್ದು, ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಲಕ್ಷಾಂತರ ಸಂಖ್ಯೆಯ ಮಹಿಳೆಯರು ಭಾಗಿಯಾಗುವ ಮೂಲಕ ಗಿನ್ನಿಸ್ ಬುಕ್ ಆಫ್ ರೆಕಾರ್ಡ್‌ನಲ್ಲೂ ಈ ಕ್ಷೇತ್ರ ದಾಖಲಾಗಿದೆ. 10 ದಿನಗಳ ಕಾಲ‌ ನಡೆಯುವ ದೇವಿ ಸೇವೆಯಲ್ಲಿ ಅಟುಕಲ್ ಪೊಂಗಲ್ ಇಲ್ಲಿನ ಅತ್ಯಂತ ವಿಶಿಷ್ಟ ಮತ್ತು ಪ್ರಸಿದ್ಧಿ ಪಡೆದ ಸೇವೆಯಾಗಿದೆ. ಈ ಸೇವೆಯ ಮುಖ್ಯ ಆಕರ್ಷಣೆ ಮಹಿಳೆಯರೆಲ್ಲಾ ಸೇರಿ ಕ್ಷೇತ್ರದ ಸುತ್ತಮುತ್ತ ಅಡುಗೆ ಮಾಡಿ, ಅದನ್ನು ದೇವಿಗೆ ಸಮರ್ಪಿಸುವುದಾಗಿದೆ. ಕಿಲೋಮೀಟರ್ ಗಟ್ಟಲೆ ಈ ಅಡುಗೆ ಸಾಲು ಇಲ್ಲಿ ಕಂಡು ಬರುತ್ತಿದ್ದು, ಅಕ್ಕಿಯಿಂದ ಮಾಡಿದ ತಿಂಡಿ‌ ಅಥವಾ ಪಾಯಸವನ್ನು ಇಲ್ಲಿ ತಯಾರಿಸುತ್ತಾರೆ.

ಇದನ್ನೂ ಓದಿ: Tulu Movie: ಮಲಯಾಳಿಗಳು ಸೇರಿ‌ ನಿರ್ಮಿಸಿದ ಮಹಿಳಾ ಪ್ರಧಾನ ತುಳುಚಿತ್ರ‌ ‘ಮೀರಾ’ ನಾಳೆ‌ ಬಿಡುಗಡೆ!

ಅಡುಗೆ ಬೇಯಿಸಲು ಬೇಕಾದ ಇಟ್ಟಿಗೆ, ಮಣ್ಣಿನ ಪಾತ್ರೆ, ಕಟ್ಟಿಗೆ ಎಲ್ಲವನ್ನೂ ಮಹಿಳೆಯರೇ ತಮ್ಮೊಂದಿಗೆ ತರಬೇಕಾಗುತ್ತದೆ. ಅಡುಗೆ ಮಾಡಲು ಬೇಕಾದ ಬೆಂಕಿಯನ್ನು ದೇವಿ ದೇವಸ್ಥಾನದಿಂದಲೇ ಮುಖ್ಯ‌ ಅರ್ಚಕರು ಮೊದಲು ನೀಡುತ್ತಾರೆ. ಆ ಬಳಿಕ ಅದೇ ಬೆಂಕಿಯನ್ನು ಬಳಸಿಕೊಂಡು ಸಾಲಿನಲ್ಲಿರುವ ಎಲ್ಲಾ ಅಡಿಗೆಗೆ ಬಳಸಲಾಗುತ್ತದೆ.

ಲಕ್ಷಾಂತರ ಸಂಖ್ಯೆಯಲ್ಲಿ ಮಹಿಳೆಯರು ಈ ಅಡುಗೆ ಸೇವೆಯಲ್ಲಿ ಭಾಗಿಯಾಗುವ ಕಾರಣ ಅಡುಗೆಯ ಸಾಲು ಕ್ಷೇತ್ರವನ್ನು ದಾಟಿ ರಸ್ತೆ ಬದಿಯವರೆಗೂ ವಿಸ್ತರಿಸುತ್ತದೆ. ವಿಶೇಷವೆಂದರೆ ಭಕ್ತರು ತಾವು ದೇವಿಯ‌ ಮುಂದೆ ಬೇಡಿದ ಬೇಡಿಕೆಗಳು ಈಡೇರಿದ ಬಳಿಕವೇ ಈ ಅಟುಕಲ್ ಪೊಂಗಲ್ ಸೇವೆಯನ್ನು ನೆರವೇರಿಸುತ್ತಾರೆ.