Last Updated:
ಟಾಸ್ ಸೋತು ಬ್ಯಾಟಿಂಗ್ ಮಾಡಿದ ಭಾರತ ತಂಡ ಅತ್ಯಂತ ಕಳಪೆ ಬ್ಯಾಟಿಂಗ್ ಪ್ರದರ್ಶನ ತೋರಿ ಕೇವಲ 125ಕ್ಕೆ ಆಲೌಟ್ ಆಯಿತು. ಅಭಿಷೇಕ್ ಶರ್ಮಾ 68 ರನ್ಗಳಿಸಿದರೆ, ಹರ್ಷಿತ್ ರಾಣಾ ಕೇವಲ 35 ರನ್ಗಳಿಸಿ ಟಾಪ್ ಸ್ಕೋರರ್ ಎನಿಸಿಕೊಂಡರು. 126 ರನ್ಗಳ ಗುರಿಯನ್ನ ಆಸ್ಟ್ರೇಲಿಯಾ ತಂಡ ಕೇವಲ 13.2 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.
ಆಸ್ಟ್ರೇಲಿಯಾ (India vs Australia) ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಭಾರತ ತಂಡ ಹೀನಾಯ ಸೋಲು ಕಂಡಿದೆ. ಮೊದಲ ಪಂದ್ಯ ಮಳೆಗೆ ಆಹುತಿಯಾಗಿತ್ತು. ಇದೀಗ 2ನೇ ಪಂದ್ಯದಲ್ಲಿ ಆಸ್ಟ್ರೇಲುಯಾ 4 ವಿಕೆಟ್ಗಳ ರೋಚಕ ಜಯ ಸಾಧಿಸಿದೆ. ಟಾಸ್ ಸೋತು ಬ್ಯಾಟಿಂಗ್ ಮಾಡಿದ ಭಾರತ ತಂಡ ಅತ್ಯಂತ ಕಳಪೆ ಬ್ಯಾಟಿಂಗ್ ಪ್ರದರ್ಶನ ತೋರಿ ಕೇವಲ 125ಕ್ಕೆ ಆಲೌಟ್ ಆಯಿತು. ಅಭಿಷೇಕ್ ಶರ್ಮಾ (Abhishek Sharma) 68 ರನ್ಗಳಿಸಿದರೆ, ಹರ್ಷಿತ್ ರಾಣಾ ಕೇವಲ 35 ರನ್ಗಳಿಸಿ ಟಾಪ್ ಸ್ಕೋರರ್ ಎನಿಸಿಕೊಂಡರು. 126 ರನ್ಗಳ ಗುರಿಯನ್ನ ಆಸ್ಟ್ರೇಲಿಯಾ ತಂಡ ಕೇವಲ 13.2 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.
126 ರನ್ಗಳ ಸುಲಭ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ಮೊದಲ ವಿಕೆಟ್ಗೆ ಮಾರ್ಷ್-ಹೆಡ್ ಜೋಡಿ 51 ರನ್ಗಳ ಭರ್ಜರಿ ಜೊತೆಯಾಟ ನೀಡಿತು. ಟ್ರಾವಿಸ್ ಹೆಡ್ 15 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ಸಹಿತ 28 ರನ್ಗಳಿಸಿ ವರುಣ್ ಚಕ್ರವರ್ತಿಗೆ ವಿಕೆಟ್ ಒಪ್ಪಿಸಿದರು. ನಂತರ ನಾಯಕ ಮಾರ್ಷ್ ಜೊತೆ ಸೇರಿದ ಇಂಗ್ಲಿಸ್ 38 ರನ್ ಸೇರಿಸಿದರು. ಈ ಹಂತದಲ್ಲಿ ಕಣಕ್ಕಿಳಿದ ಕುಲ್ದೀಪ್ ಯಾದವ್ 26 ಎಸೆತಗಳಲ್ಲಿ 2 ಬೌಂಡರಿ, 4 ಸಿಕ್ಸರ್ಗಳ ಸಹಿತ 46 ರನ್ಗಳಿಸಿದ್ದ ಮಾರ್ಷ್ ವಿಕೆಟ್ ಪಡೆದರು. ಮಾರ್ಷ್ ವಿಕೆಟ್ ನಂತರ ಆಸ್ಟ್ರೇಲಿಯಾ ದಿಢೀರ್ ಕುಸಿತ ಅನುಭವಿಸಿತು.
ನಂತರ ಬಂದ ಟಿಮ್ ಡೇವಿಡ್ ಕೇವಲ 2 ಎಸೆತಗಳಲ್ಲಿ 1 ರನ್ಗಳಿಸಿ ವರುಣ್ ಚಕ್ರವರ್ತಿಗೆ 2ನೇ ಬಲಿಯಾದರು. ಜೋಸ್ ಇಂಗ್ಲಿಸ್ ಹಾಗೂ ಮಿಚೆಲ್ ಓವೆನ್ 22 ರನ್ಗಳ ಜೊತೆಯಾಟ ನಡೆಸಿದರು. ಆದರೆ 20 ಎಸೆತಗಳಲ್ಲಿ 20 ರನ್ಗಳಿಸಿದ ಇಂಗ್ಲಿಸ್ ಕುಲ್ದೀಪ್ ಯಾದವ್ ಬೌಲಿಂಗ್ನಲ್ಲಿ ಎಲ್ಬಿಡಬ್ಲ್ಯೂ ಅದರು. ಇವರ ಬೆನ್ನಲ್ಲೇ ಬುಮ್ರಾ ಬೌಲಿಂಗ್ನಲ್ಲಿ 10 ಎಸೆತಗಳಲ್ಲಿ 14 ರನ್ಗಳಿಸಿದ್ದ ಓವೆನ್ ಹಾಗೂ ಮ್ಯಾಥ್ಯೂ ಶಾರ್ಟ್ ಖಾತೆ ತೆರೆಯದೇ ಬ್ಯಾಕ್ ಟು ಬ್ಯಾಕ್ ಎಸೆತದಲ್ಲಿ ಔಟ್ ಆದರು. ಸ್ಟೋಯಿನಿಸ್ ಅಜೇಯ 6 ರನ್ಗಳಿಸಿ ಆಸೀಸ್ ತಂಡವನ್ನ ಗೆಲುವಿನ ಗಡಿ ದಾಟಿಸಿದರು.
ಆಸ್ಟ್ರೇಲಿಯಾ 13.2 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು ಗೆಲುವಿನ ಗಡಿ ದಾಟಿತು. ಭಾರತದ ಪರ ಜಸ್ಪ್ರೀತ್ ಬುಮ್ರಾ 26ಕ್ಕೆ2, ವರುಣ್ ಚಕ್ರವರ್ತಿ 23ಕ್ಕೆ2, ಕುಲ್ದೀಪ್ ಯಾದವ್ 45ಕ್ಕೆ 2 ವಿಕೆಟ್ ಪಡೆದರಾದರೂ, ಅವರ ಪ್ರಯತ್ನ ಗೆಲುವಿಗೆ ಸರಿಹೋಗಲಿಲ್ಲ. 5 ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯಾ 1-0ಯಲ್ಲಿ ಮುನ್ನಡೆ ಪಡೆದುಕೊಂಡಿದೆ. ಇನ್ನು ಮೂರು ಪಂದ್ಯಗಳಿದ್ದು, ಭಾರತ ಕಮ್ಬ್ಯಾಕ್ ಮಾಡುವುದೇ ಎಂದು ಕಾದು ನೋಡಬೇಕಿದೆ.
ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಭಾರತ ತಂಡ 18.4 ಓವರ್ಗಳಲ್ಲಿ 126 ರನ್ಗಳಿಗೆ ಆಲೌಟ್ ಆಯಿತು. ಅಭಿಷೇಕ್ ಶರ್ಮಾ 37 ಎಸೆತಗಳಲ್ಲಿ 8 ಬೌಂಡರಿ, 2 ಸಿಕ್ಸರ್ಗಳ ಸಹಿತ 68 ರನ್ಗಳಿಸಿದರು. ಇವರಿಗೆ ಸಾಥ್ ನೀಡಿದ ಹರ್ಷಿತ್ ರಾಣಾ 33 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ಸಹಿತ 35 ರನ್ಗಳಿಸಿ 2ನೇ ಗರಿಷ್ಠ ಸ್ಕೋರ್ ಆದರು. ಉಳಿದ ಯಾವ ಬ್ಯಾಟರ್ ಕೂಡ ಎರಡಂಕಿ ಮೊತ್ತ ದಾಟಲಿಲ್ಲ.
ಉಪನಾಯಕ 1, ಸಂಜು ಸ್ಯಾಮ್ಸನ್ 2, ನಾಯಕ ಸೂರ್ಯಕುಮಾರ್ 1, ತಿಲಕ್ ವರ್ಮಾ 0, ಅಕ್ಷರ್ ಪಟೇಲ್ 7, ಶಿವಂ ದುಬೆ 4, ಕುಲ್ದೀಪ್ ಯಾದವ್ 0, ಜಸ್ಪ್ರೀತ್ ಬುಮ್ರಾ ಕೂಡ ಖಾತೆ ತೆರೆಯದೇ ಔಟ್ ಆದರು.
ಜೋಶ್ ಹೇಜಲ್ವುಡ್ 13ಕ್ಕೆ3, ಕ್ಷೇವಿಯರ್ ಬಾರ್ಟ್ಲೆಟ್ 39ಕ್ಕೆ2, ನೇಥನ್ ಎಲ್ಲಿಸ್ 21ಕ್ಕೆ2, ಮಾರ್ಕಸ್ ಸ್ಟೋಯಿನಿಸ್ 24ಕ್ಕೆ1 ವಿಕೆಟ್ ಪಡೆದು ಭಾರತ ತಂಡವನ್ನ ಅಲ್ಪಮೊತ್ತಕ್ಕೆ ನಿಯಂತ್ರಿಸಿದರು.
40 ಎಸೆತಗಳ ಅಂತರದಲ್ಲಿ ಪಂದ್ಯವನ್ನ ಮುಗಿಸಿದ ಆಸ್ಟ್ರೇಲಿಯಾ ಭಾರತದ ವಿರುದ್ಧ ಹೆಚ್ಚು ಎಸೆತಗಳು ಬಾಕಿ ಇರುವಂತೆ ಗೆದ್ದ 2ನೇ ನಿದರ್ಶನವಾಗಿದೆ. ಮೊದಲ ಸ್ಥಾನದಲ್ಲೂ ಆಸ್ಟ್ರೇಲಿಯಾ ತಂಡವೇ ಇದ್ದು, 2008ರಲ್ಲಿ 52 ಎಸೆತಗಳಿರುವಂತೆ ಗೆಲುವು ಸಾಧಿಸಿತ್ತು. ಆಸ್ಟ್ರೇಲಿಯಾ 2021ರಲ್ಲಿ 33 ಎಸೆತಗಳಿರುವಂತೆ ಗೆಲುವು ಸಾಧಿಸಿ 3ನೇ ಸ್ಥಾನದಲ್ಲಿದೆ.
October 31, 2025 5:29 PM IST