Last Updated:
ಹರಿಣಗಳ ವಿರುದ್ಧದ ಮೊದಲ ಟಿ20 ಗೆಲುವು ಆಸ್ಟ್ರೇಲಿಯಾಕ್ಕೆ ಚುಟುಕು ಕ್ರಿಕೆಟ್‌ನಲ್ಲಿ ಸತತ ಒಂಬತ್ತನೇ ಗೆಲುವಾಗಿದೆ . ಇದಕ್ಕೂ ಮೊದಲು, ಆಸ್ಟ್ರೇಲಿಯಾ ಟಿ20ಯಲ್ಲಿ ಸತತ 8 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು, ಅಸ್ಟ್ರೇಲಿಯಾದ ಅತ್ಯುತ್ತಮ ಸಾಧನೆಯಾಗಿತ್ತು. ಫೆಬ್ರವರಿ 2024 ರಿಂದ ಜೂನ್ 2024 ರವರೆಗೆ ಈ ದಾಖಲೆಯನ್ನು ನಿರ್ಮಿಸಿತ್ತು. ಜೊತೆಗೆ ಟಿ20ಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಸ್ಟ್ರೇಲಿಯಾದ ಸತತ ಆರನೇ ಗೆಲುವು ಇದಾಗಿದೆ .
ಆಸ್ಟ್ರೇಲಿಯಾ ತಂಡ ಟಿ20 (Australia) ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದೊಡ್ಡ ಸಾಧನೆ ಮಾಡಿದೆ . ತವರಿನಲ್ಲಿ ನಡೆಯುತ್ತಿರುವ ಮೊದಲ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ದಕ್ಷಿಣ ಆಫ್ರಿಕಾವನ್ನು (South Africa) 17 ರನ್‌ಗಳಿಂದ ಸೋಲಿಸಿತು . ಈ ಗೆಲುವಿನೊಂದಿಗೆ ಆಸ್ಟ್ರೇಲಿಯಾ ತಂಡ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ . ಇದು ಟಿ20ಯಲ್ಲಿ ಆಸ್ಟ್ರೇಲಿಯಾದ ಸತತ ಒಂಬತ್ತನೇ ಗೆಲುವಾಗಿದೆ . ಇದಕ್ಕೂ ಮೊದಲು, ಆಸ್ಟ್ರೇಲಿಯಾ ಟಿ20ಯಲ್ಲಿ ಸತತ 8 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು, ಅಸ್ಟ್ರೇಲಿಯಾದ ಅತ್ಯುತ್ತಮ ಸಾಧನೆಯಾಗಿತ್ತು. ಫೆಬ್ರವರಿ 2024 ರಿಂದ ಜೂನ್ 2024 ರವರೆಗೆ ಈ ದಾಖಲೆಯನ್ನು ನಿರ್ಮಿಸಿತ್ತು. ಜೊತೆಗೆ ಟಿ20ಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಸ್ಟ್ರೇಲಿಯಾದ ಸತತ ಆರನೇ ಗೆಲುವು ಇದಾಗಿದೆ .
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡವು 15 ರನ್ ಗಳಿಸಿದ್ದಾಗಲೇ ಟ್ರಾವಿಸ್ ಹೆಡ್ (2) ವಿಕೆಟ್ ಕಳೆದುಕೊಂಡು ದೊಡ್ಡ ಆಘಾತ ಅನುಭವಿಸಿತು. ಇದಾದ ನಂತರ , ಜೋಶ್ ಇಂಗ್ಲಿಸ್ (0) ಮತ್ತು ನಾಯಕ ಮಿಚೆಲ್ ಮಾರ್ಷ್ (13) ಕೂಡ ಔಟಾದರು . ತಂಡವು 30 ರನ್‌ಗಳಿಗೆ ಮೂವರು ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ವಿಕೆಟ್‌ಗಳನ್ನು ಕಳೆದುಕೊಂಡಿತು. ಆದರೂ ಕ್ಯಾಮರೂನ್ ಗ್ರೀನ್ ಮತ್ತು ಟಿಮ್ ಡೇವಿಡ್ ಅವರೊಂದಿಗೆ ನಾಲ್ಕನೇ ವಿಕೆಟ್‌ಗೆ 40 ರನ್ ಸೇರಿಸುವ ಮೂಲಕ ಆಸ್ಟ್ರೇಲಿಯಾದ ಇನ್ನಿಂಗ್ಸ್ ಅನ್ನು ನಿಭಾಯಿಸಲು ಪ್ರಯತ್ನಿಸಿದರು.
ಆದರೆ ಗ್ರೀನ್ 13 ಎಸೆತಗಳಲ್ಲಿ 4 ಸಿಕ್ಸರ್, 3 ಬೌಂಡರಿಗಳ ಸಹಿತ 35 ರನ್ ಗಳಿಸಿ ಔಟಾದರು, ನಂತರ ಡೇವಿಡ್, ಬೆನ್ ದ್ವಾರ್ಶುಯಿಸ್ (17) ಅವರೊಂದಿಗೆ ಏಳನೇ ವಿಕೆಟ್‌ಗೆ 59 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು ಮತ್ತು ತಂಡವನ್ನು ಬೃಹತ್ ಸ್ಕೋರ್‌ನತ್ತ ಕೊಂಡೊಯ್ದರು. ಟಿಮ್ ಡೇವಿಡ್ 52 ಎಸೆತಗಳಲ್ಲಿ ಎಂಟು ಸಿಕ್ಸರ್‌ಗಳು ಮತ್ತು ನಾಲ್ಕು ಬೌಂಡರಿಗಳ ಸಹಾಯದಿಂದ 83 ರನ್‌ಗಳ ಇನ್ನಿಂಗ್ಸ್ ಆಡಿ ಸ್ಪರ್ಧಾತ್ಮ ಮೊತ್ತ ದಾಖಲಿಸಲು ನೆರವಾದರು.
ದಕ್ಷಿಣ ಆಫ್ರಿಕಾ ಪರ, ಯುವ ವೇಗಿ ಕ್ವೆನಾ ಎಂಫಾಕ ಗರಿಷ್ಠ ನಾಲ್ಕು ವಿಕೆಟ್ ಪಡೆದರು . ಕಗಿಸೊ ರಬಾಡ ಎರಡು ವಿಕೆಟ್ ಪಡೆದರು .
ಇದಕ್ಕೆ ಉತ್ತರವಾಗಿ, ದಕ್ಷಿಣ ಆಫ್ರಿಕಾ ತಂಡವು 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ ಕೇವಲ 161 ರನ್ ಗಳಿಸಲು ಸಾಧ್ಯವಾಯಿತು. ಹರಿಣಪಡೆ ಕೂಡ 48 ರನ್‌ಗಳ ಹೊತ್ತಿಗೆ, ದಕ್ಷಿಣ ಆಫ್ರಿಕಾ ನಾಯಕ ಐಡೆನ್ ಮಾರ್ಕ್ರಾಮ್ (12), ಲುವಾನ್-ಡ್ರೆ ಪ್ರಿಟೋರಿಯಸ್ (14) ಮತ್ತು ಡೆವಾಲ್ಡ್ ಬ್ರೆವಿಸ್ (2) ಅವರ ವಿಕೆಟ್‌ಗಳನ್ನು ಕಳೆದುಕೊಂಡಿತ್ತು . ರಯಾನ್ ರಿಕಲ್ಟನ್ ಟ್ರಿಸ್ಟಾನ್ ಸ್ಟಬ್ಸ್ ಅವರೊಂದಿಗೆ ನಾಲ್ಕನೇ ವಿಕೆಟ್‌ಗೆ 72 ರನ್‌ಗಳ ಪಾಲುದಾರಿಕೆಯನ್ನು ನೀಡುವ ಮೂಲಕ ತಂಡಕ್ಕೆ ಗೆಲುವಿನ ಆಸೆಯನ್ನ ಮೂಡಿಸಿದ್ದರು. ಆದರೆ ಸ್ಟಬ್ಸ್ 37 ರನ್ ಗಳಿಸಿದ ನಂತರ ಔಟಾದರು. ರಿಕಲ್ಟನ್ ಕೊನೆಯವರೆಗೂ ಹೋರಾಡಿ 55 ಎಸೆತಗಳಲ್ಲಿ 71 ರನ್ ಸೇರಿಸಿದರಾದರೂ ಕೊನೆಯ ಓವರ್ನಲ್ಲಿ 21 ರನ್ ಅಗತ್ಯವಿದ್ದಾಗ ಮ್ಯಾಕ್ಸ್ವೆಲ್ ಹಿಡಿದ ಕ್ಯಾಚ್ಗೆ ಬಲಿಯಾದರು .
August 10, 2025 9:27 PM IST