Ayudha Puja: ದೇವರಿಗೆ ಬಳಸುವ ರಥಕ್ಕೆ ವಿಶೇಷ ಪೂಜೆ ಸಲ್ಲಿಕೆ, ಇದು ಆಯುಧ ಹಬ್ಬದ ಸಂಭ್ರಮ! | Mahalingeshwara Temple | ದಕ್ಷಿಣ ಕನ್ನಡ

Ayudha Puja: ದೇವರಿಗೆ ಬಳಸುವ ರಥಕ್ಕೆ ವಿಶೇಷ ಪೂಜೆ ಸಲ್ಲಿಕೆ, ಇದು ಆಯುಧ ಹಬ್ಬದ ಸಂಭ್ರಮ! | Mahalingeshwara Temple | ದಕ್ಷಿಣ ಕನ್ನಡ

Last Updated:

ದಕ್ಷಿಣ ಕನ್ನಡ ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನವರಾತ್ರಿ ಆಯುಧ ಪೂಜೆಯಲ್ಲಿ ರಥ ಹಾಗೂ ಭಕ್ತರ ವಾಹನಗಳಿಗೆ ಧಾರ್ಮಿಕ ವಿಧಿ-ವಿಧಾನ ವಿಶೇಷ ಪೂಜೆ ಸಲ್ಲಿಸದಿದ್ದರೆ.

+

ಇಲ್ಲಿ

ಇಲ್ಲಿ ವಿಡಿಯೋ ನೋಡಿ

ದಕ್ಷಿಣ ಕನ್ನಡ: ನವರಾತ್ರಿ (Navaratri) ಸಂಭ್ರಮದಲ್ಲಿ ನಡೆಯುವ ಪ್ರಮುಖ ಆಚರಣೆ ಮತ್ತು ಸಂಪ್ರದಾಯಗಳಲ್ಲಿ ಆಯುಧ ಪೂಜೆಯೂ (Ayudha Puja) ಒಂದು. ದಿನಂಪ್ರತಿ ತಮ್ಮ ಅವಶ್ಯಕತೆಗಳಿಗಾಗಿ ಬಳಸುವ ಆಯುಧಗಳಿಗೆ ನವರಾತ್ರಿಯಂದು ಪೂಜೆ ಸಲ್ಲಿಸೋದು ಈ ಆಯುಧ ಪೂಜೆಯ ವಿಶೇಷತೆಯಾಗಿದೆ. ಸಣ್ಣ ಚಾಕುವಿನಿಳದ ಹಿಡಿದು ನಿತ್ಯ ಬಳಸುವ ವಾಹನಗಳ (Vehicles) ತನಕ ಎಲ್ಲದಕ್ಕೂ ಪೂಜೆ ಸಲ್ಲಿಸಲಾಗುತ್ತದೆ. ಯಾವ ರೀತಿ ಜನರು ಬಳಸುವ ವಾಹನಗಳಿಗೆ ಪೂಜೆ ಸಲ್ಲಿಸಲಾಗುತ್ತೋ, ಅದೇ ರೀತಿ ದೇವರು ಬಳಸುವ ವಾಹನಕ್ಕೂ ಪೂಜೆ ನೆರವೇರಿಸಲಾಗುತ್ತದೆ. ದೇವರು ಬಳಸುವ ರಥವನ್ನು ವಾಹನ ರೂಪದಲ್ಲಿ ಗುರುತಿಸಿಕೊಂಡು ಪೂಜೆ ಸಲ್ಲಿಸೋದು ಈ ವಾಹನ ಪೂಜೆಯ ವಿಶೇಷತೆಯಾಗಿದೆ. ಹೌದು ದಕ್ಷಿಣ ಕನ್ನಡದ (Dakshina Kannada) ಪುತ್ತೂರಿನಲ್ಲಿ (Puttur) ಈ ಆಚರಣೆ ನಡೆದಿದೆ.

ಧಾರ್ಮಿಕ ವಿಧಿ-ವಿಧಾನಗಳ ಮೂಲಕ ಶುಭ್ರ

ಆಯುಧ ಪೂಜೆಯ ಪ್ರಕಾರ ತಮ್ಮ ತಮ್ಮ ವಾಹನಗಳನ್ನು ಶುಭ್ರವಾಗಿ ತೊಳೆದು, ಅವುಗಳನ್ನು ಹೂಗಳಿಂದ ಅಲಂಕರಿಸಿ ಬಳಿಕ ವಾಹನಗಳಿಗೆ ಪೂಜೆ ಸಲ್ಲಿಸಲಾಗುತ್ತದೆ. ಆದರೆ ದೇವರ ವಾಹನವಾದ ರಥವನ್ನು ನೀರಿನಿಂದ ತೊಳೆಯುವ ಪದ್ಧತಿಯಿಲ್ಲ. ರಥವನ್ನು ಧಾರ್ಮಿಕ ವಿಧಿ-ವಿಧಾನಗಳ ಮೂಲಕವೇ ಶುಭ್ರಗೊಳಿಸಿ , ರಥವನ್ನು ಹೂವಿನಿಂದ ಅಲಂಕರಿಸಿ ಪೂಜೆ ಸಲ್ಲಿಸಲಾಗುತ್ತದೆ. ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲೂ ಇದೇ ರೀತಿಯ ಸಂಪ್ರದಾಯ ಹಿಂದಿನಿಂದಲೂ ನಡೆದುಕೊಂಡು ಬರುತ್ತಿದ್ದು, ರಥದ ಪೂಜೆಯಾದ ಬಳಿಕ ಭಕ್ತರ ವಾಹನಗಳಿಗೆ ಪೂಜೆ ಸಲ್ಲಿಸಲಾಗುತ್ತದೆ.

ಮಹಾಲಿಂಗೇಶ್ವರ ದೇವಸ್ಥಾನದ ರಥ

ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ರಥವು ರಾಜ್ಯದ ಬೃಹತ್ ರಥಗಳಲ್ಲಿ ಒಂದಾಗಿದ್ದು, ಕ್ಷೇತ್ರದಲ್ಲಿ ನಡೆಯುವ ಜಾತ್ರೋತ್ಸವ ಸಂದರ್ಭದಲ್ಲಿ ಈ ಬ್ರಹ್ಮರಥದಲ್ಲಿ ಮಹಾಲಿಂಗೇಶ್ವರ ಸ್ವಾಮಿ ವಿರಾಜಮಾನರಾಗಿ ರಥದಲ್ಲಿ ಸವಾರಿ ಮಾಡುತ್ತಾರೆ.