Last Updated:
2 ಟೆಸ್ಟ್ ಪಂದ್ಯವನ್ನ ಗೆಲ್ಲಲು ಭಾರತ 355 ರನ್ ಪಡೆದುಕೊಂಡಿದೆ. ಕೊನೆಯ ದಿನವಾದ ಇಂದು ಗೆಲ್ಲಲೇಬೇಕೆಂದು ಬ್ಯಾಟಿಂಗ್ ಮಾಡುತ್ತಿದೆ. ಅದರಲ್ಲೂ ನಾಯಕ ಆಯುಷ್ ಮ್ಹಾತ್ರೆ ಸ್ಫೋಟಕ ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ.
ಭಾರತ ಅಂಡರ್ 19 ತಂಡದ ನಾಯಕ ಆಯುಷ್ ಮ್ಹಾತ್ರೆ (Ayush Mhatre) ಇಂಗ್ಲೆಂಡ್ ಅಂಡರ್ 19 (England U19) ಕ್ರಿಕೆಟ್ ತಂಡದ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಅದ್ಭುತ ಇನ್ನಿಂಗ್ಸ್ ಆಡಿದ್ದಾರೆ. ಕೊನೆಯ ದಿನವಾದ ಇಂದು ಟೀಮ್ ಇಂಡಿಯಾ 355 ರನ್ಗಳ ಗುರಿ ಪಡೆದಿದ್ದು, ಪಂದ್ಯವನ್ನ ಗೆಲ್ಲಲೇಲೆ ಬೇಕೆಂಬ ಹಠದಲ್ಲಿ ಬ್ಯಾಟಿಂಗ್ ಮಾಡುತ್ತಿದೆ. ಆರಂಭಿಕರಾದ ವೈಭವ್ ಸೂರ್ಯವಂಶಿ ಗೋಲ್ಡನ್ ಡಕ್ ಆದರು. ಆದರೆ ನಾಯಕ ಆಯುಷ್ ಮ್ಹಾತೆ ಟೆಸ್ಟ್ನಲ್ಲಿ ತಮ್ಮ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಶತಕ ಸಿಡಿಸಿ ಮುನ್ನುಗ್ಗುತ್ತಿದ್ದಾರೆ.
ಮೊದಲು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ 309 ರನ್ಗಳಿಸಿತ್ತು. ಇದಕ್ಕೆ ಉತ್ತರವಾಗಿ ಭಾರತ ತಂಡ ವಿಹಾನ್ ಮೆಲ್ಹೋತ್ರ (120) ಶತಕದ ನೆರವಿನಿಂದ 58.1 ಓವರ್ಗಳಲ್ಲಿ 279 ರನ್ಗಳಿಸಿತ್ತು. ಮೊದಲ ಇನ್ನಿಂಗ್ಸ್‌ನಲ್ಲಿ 30 ರನ್ಗಳ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿ 62 ಓವರ್ಗಳಲ್ಲಿ 324 ರನ್ಗಳಿಸಿತ್ತು. ಆರಂಭಿಕ ಬ್ಯಾಟರ್ ಬೆನ್ ಡಾಕಿನ್ಸ್ (136) ಶತಕ ಹಾಗೂ ಆಡಮ್ ಜಾರ್ಜ್ ಥಾಮಸ್ (91) ಅರ್ಶತಕ ನೆರವಿನಿಂದ 62 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 324 ರನ್ಗಳಿಸಿ ಡಿಕ್ಲೇರ್ ಘೋಷಿಸಿಕೊಂಡಿತು. ಒಟ್ಟಾರೆ ಭಾರತಕ್ಕೆ ಗೆಲ್ಲಲು 355 ರನ್ಗಳ ಗುರಿ ನೀಡಿತು.
355 ರನ್ಗಳ ಗುರಿ ಬೆನ್ನಟ್ಟಿದ ಟೀಮ್ ಇಂಡಿಯಾ ಖಾತೆ ತೆರೆಯುವ ಮುನ್ನವೇ ಸ್ಫೋಟಕ ಆಟಗಾರ ವೈಭವ್ ಸೂರ್ಯವಂಶಿ ಗೋಲ್ಡನ್ ಡಕ್ ಆದರು. ಆದರೆ 2ನೇ ವಿಕೆಟ್ಗೆ ಒಂದಾದ 82 ಎಸೆತಗಳಲ್ಲಿ 100 ರನ್ಗಳ ಜೊತೆಯಾಟ ನಡೆಸಿ ಭರ್ಜರಿ ಜೊತೆಯಾಟ ಕಮ್ಬ್ಯಾಕ್ ದೊರಕಿಸಿಕೊಟ್ಟರು. ಮ್ಹಾತ್ರೆ ಕೇವಲ 25 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ನಂತರ ಅದೇ ಆಟವನ್ನು ಮುಂದುವಿರಿಸಿ 64 ಎಸೆತಗಳಲ್ಲಿ ಶತಕ ಪೂರೈಸಿದರು. ಇದು ಅಂಡರ್ 19 ಕ್ರಿಕೆಟ್ ಇತಿಹಾಸದಲ್ಲೇ 3ನೇ ವೇಗದ ಟೆಸ್ಟ್ ಶತಕವಾಗಿದೆ.
ಭಾರತದವರೇ ಆದ ವೈಭವ್ ಸೂರ್ಯವಂಶಿ ಕಳೆದ ವರ್ಷ ಆಸ್ಟ್ರೇಲಿಯಾ ವಿರುದ್ಧ 52 ಎಸೆತಗಳಲ್ಲಿ ಶತಕ ಸಿಡಿಸಿರುವುದು ವಿಶ್ವದಾಖಲೆಯಾಗಿದೆ. 2ನೇ ಸ್ಥಾನದಲ್ಲಿ ಪಾಕಿಸ್ತಾನದ ಕಮ್ರನ್ ಗುಲಾಮ್ 53 ಎಸೆತಗಳಲ್ಲಿ ಸಿಡಿಸಿರುವ ಶತಕ 2ನೇ ಸ್ಥಾನದಲ್ಲಿದೆ. ಇದೀಗ ಮ್ಹಾತ್ರೆ 64 ಎಸೆತಗಳಲ್ಲಿ ಶತಕ ಸಿಡಿಸಿ 3ನೇ ವೇಗದ ಶತಕ ಸಿಡಿಸಿದ್ದಾರೆ. ಬಾಂಗ್ಲಾದೇಶದ ತಮೀಮ್ ಇಕ್ಬಾಲ್ 68, ಭಾರತದ ರಾಜ್ ಅಂಗದ ಬಾವಾ 69, ಆಸ್ಟ್ರೇಲಿಯಾದ ಶಾನ್ ಮಾರ್ಷ್ 70 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದಾರೆ.
ಒಟ್ಟಾರೆ ಇಂಡಿಯನ್ ಕ್ಯಾಪ್ಟನ್ 80 ಎಸೆತಗಳಲ್ಲಿ 13 ಬೌಂಡರಿ, 6 ಸಿಕ್ಸರ್ ಸಹಿತ 120 ರನ್ಗಳಿಸಿ ರಾಲ್ಫಿ ಆಲ್ಬರ್ಟ್ ಬೌಲಿಂಗ್ನಲ್ಲಿ ಮೇಯ್ಸ್ಗೆ ಕ್ಯಾಚ್ ನೀಡಿ ಔಟ್ ಆದರು. ಏಕದಿನ ಸರಣಿಯಲ್ಲಿ ವೈಫಲ್ಯ ಅನುಭವಿಸಿದ್ದ ಮ್ಹಾತ್ರೆ ಟೆಸ್ಟ್ ಸರಣಿಯಲ್ಲಿ ಏಕದಿನಕ್ಕೂ ವೇಗವಾಗಿ ಬ್ಯಾಟಿಂಗ್ ಮಾಡಿ ಫಾರ್ಮ್ಗೆ ಮರಳಿದ್ದಾರೆ. ಮೊದಲ ಟೆಸ್ಟ್ ನಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ 102(115) ಹಾಗೂ 32 ರನ್ಗಳಿಸಿದ್ದರು. 2ನೇ ಟೆಸ್ಟ್ನ ಇನ್ನಿಂಗ್ಸ್‌ನಲ್ಲಿ 80 ರನ್ಗಳಿಸಿದ್ದರು.
July 23, 2025 10:06 PM IST
Ayush Mhatre: 13 ಬೌಂಡರಿ, 6 ಸಿಕ್ಸರ್ಸ್, ಟೆಸ್ಟ್ನಲ್ಲಿ ಟಿ20ಯಂತೆ ಬ್ಯಾಟ್ ಬೀಸಿದ ಕ್ಯಾಪ್ಟನ್ ಆಯುಷ್! 64 ಎಸೆತಗಳಲ್ಲಿ ಶತಕ ಸಿಡಿಸಿ ದಾಖಲೆ