Last Updated:
ಬನ್ನಂಜೆ ಗೋವಿಂದಾಚಾರ್ಯರ 90ನೇ ವರ್ಷದ ನೆನಪಿಗಾಗಿ ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನ ದೇಶದಾದ್ಯಂತ ವಿಶ್ವ ಬನ್ನಂಜೆ 90 ರ ನಮನ ಕಾರ್ಯಕ್ರಮಗಳನ್ನು ಉಡುಪಿ മുതൽ ಹರಿದ್ವಾರವರೆಗೆ ಆಯೋಜಿಸಿದೆ.
ದಕ್ಷಿಣ ಕನ್ನಡ: ಶ್ರೇಷ್ಠ ದಾರ್ಶನಿಕ, ತತ್ವಜ್ಞಾನಿ, ಕಾದಂಬರಿಕಾರ (Novelist), ಪತ್ರಕರ್ತ (Journalist) ಹೀಗೆ ಎಲ್ಲಾ ರಂಗದಲ್ಲೂ ತನ್ನ ಛಾಪನ್ನು ಮೂಡಿಸಿರುವ ಬನ್ನಂಜೆ ಗೋವಿಂದಾಚಾರ್ಯರ (Bannanje Govindacharya) ನೆನಪಿಗಾಗಿ ಈ ವರ್ಷ ವಿಶ್ವ ಬನ್ನಂಜೆ 90 ರ ನಮನ ಎನ್ನುವ ಕಾರ್ಯಕ್ರಮವನ್ನು ದೇಶದೆಲ್ಲೆಡೆ ಆಯೋಜಿಸಲು ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನ (ರಿ) ಬೆಂಗಳೂರು ಉದ್ದೇಶಿಸಿದೆ. ಬನ್ನಂಜೆ ಗೋವಿಂದಾಚಾರ್ಯರು ಬದುಕುಳಿಯುತ್ತಿದ್ದಲ್ಲಿ ಅಕ್ಟೋಬರ್ ಅವರಿಗೆ 90 ವರ್ಷಗಳಾಗುತ್ತದೆ (90 Years) ಎನ್ನುವ ಕಾರಣಕ್ಕೆ ವಿಶ್ವ ಬನ್ನಂಜೆ 90 ರ ನಮನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಈಗಾಗಲೇ ದೇಶದ ಎಲ್ಲೆಡೆ ಸುಮಾರು 20 ಕಾರ್ಯಕ್ರಮಗಳನ್ನು ನಡೆಸಲು ಪ್ರತಿಷ್ಠಾನ ತೀರ್ಮಾನಿಸಿದ್ದು, ಬನ್ನಂಜೆಯವರ ತವರು ಜಿಲ್ಲೆ ಉಡುಪಿಯಿಂದ ಈ ಕಾರ್ಯಕ್ರಮಗಳು ಆರಂಭಗೊಂಡು ಹರಿದ್ವಾರದವರೆಗೆ ಈ ಕಾರ್ಯಕ್ರಮಗಳು ನಡೆಯಲಿವೆ. ಉಡುಪಿ, ಎಂ.ಜಿ.ಎಂ, ಮೂಡಬಿದಿರೆ, ಮಂಗಳೂರು, ಸುಬ್ರಹ್ಮಣ್ಯ, ಪುತ್ತೂರು, ಗುಲ್ಬರ್ಗಾ,ಬಿಜಾಪುರ ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ಬನ್ನಂಜೆ ನಮನ ಕಾರ್ಯಕ್ರಮಗಳು ನಡೆಯಲಿದ್ದು, ಬನ್ನಂಜೆ ಅಭಿಮಾನಿಗಳು ದೇಶದೆಲ್ಲೆಡೆ ಈ ಕಾರ್ಯಕ್ರಮಗಳನ್ನು ಆಯೋಜಿಸಲಿದ್ದು, ಹರಿದ್ವಾರದಲ್ಲಿ ಕೊನೆಯ ಕಾರ್ಯಕ್ರಮ ನಡೆಯಲಿದೆ.
ಓರ್ವ ಪ್ರಖ್ಯಾತ ಪ್ರವಚನಕಾರರಾಗಿಯೂ ಗುರುತಿಸಿಕೊಂಡಿದ್ದ ಬನ್ನಂಜೆ ಗೋವಿಂದಾಚಾರ್ಯರು ದೇಶದೆಲ್ಲೆಡೆ ಸಂಚರಿಸಿ ತಮ್ಮ ಅಗಾಧ ಪಾಂಡಿತ್ಯವನ್ನು ತಮ್ಮ ಅನುಯಾಯಿಗಳಿಗೆ ಧಾರೆ ಎರೆದಿದ್ದಾರೆ. ಶಂಕರಾಚಾರ್ಯ, ಮಧ್ವಾಚಾರ್ಯರ ಕೃತಿಗಳನ್ನು ಸಿನಿಮಾ ರೂಪಕ್ಕೆ ಭಾಷಾಂತರಿಸಿದ್ದ ಬನ್ನಂಜೆ , ಉಡುಪಿಯ ಪಲಿಮಾರು ಮಠದಲ್ಲಿದ್ದ ಸುಮಾರು 500 ವರ್ಷಗಳ ಹಳೆಯದಾದ ತಾಳೆಗರಿ ಲಿಪಿಗಳನ್ನು ಭಾಷಾಂತರಿಸಿ,
Dakshina Kannada,Karnataka
October 07, 2025 12:49 PM IST