Last Updated:
ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಡಾ. ಭಾಸ್ಕರ ಹೆಗಡೆ ನಿವೃತ್ತಿ ಗೌರವಕ್ಕೆ ಭಾಸ್ಕರ ಪರ್ವ ಕಾರ್ಯಕ್ರಮ, ಜನವರಿ 31ರಂದು ಇಂದ್ರಪ್ರಸ್ಥ ಸಭಾಂಗಣದಲ್ಲಿ ನಡೆಯಲಿದೆ.
ದಕ್ಷಿಣ ಕನ್ನಡ: ಇವತ್ತಿಗೂ ಕೂಡ ತುಳುನಾಡಿನ (Tulunad) ಎಲ್ಲರಿಗೂ ಆಕಾಶವಾಣಿ, ವಿವಿಧ ಭಾರತಿಯಷ್ಟೇ ಅಪ್ತವಾದ ಒಂದು ರೇಡೀಯೋ ಮಾಧ್ಯಮವಿದೆ. ಅದನ್ನು ರೇಡಿಯೋ (Radio) ನಿನಾದ ಅಂತ, ಪ್ರಾದೇಶಿಕತೆಯಿಂದ ವಿದೇಶ ಸುತ್ತಿ ಬರೋ ಆ ಮಾಧ್ಯಮ ಸಂಜೆಯ ಮನರಂಜನೆಯ ಜೀವಾಳ ಅದರ ರೂವಾರಿ ಯಾರು ಗೊತ್ತೇ ಡಾ. ಭಾಸ್ಕರ್ ಹೆಗಡೆ! ಪತ್ರಿಕೋದ್ಯಮದ (Journalism) ವಿಶೇಷ ಹಾಗೂ ವಿಶಿಷ್ಟ ಚಹರೆ ಇವರು. ಈಗ ಅವರು ತಮ್ಮ ವೃತ್ತಿ ಜೀವನದ ಇಳಿ ಸಂಜೆಯ ಸನ್ನಾಹದಲ್ಲಿದ್ದು ಅವರ ವಿದ್ಯಾರ್ಥಿಗಳು ಅವರಿಗಾಗಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಹಲವು ಪತ್ರಕರ್ತರಿಗೆ (Reporter) ಜೀವ ತುಂಬಿದ ʼಭಾಸ್ಕರʼ ಎಂಬ ಅವರಿಗೆ ʼಭಾಸ್ಕರ ಪರ್ವʼದ ಅರ್ಪಣೆಯ ವಿವರ ಇಲ್ಲಿದೆ
ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಡಾ. ಭಾಸ್ಕರ ಹೆಗಡೆ ಅವರು ತಮ್ಮ 33 ವರ್ಷಗಳ ಪ್ರಾಧ್ಯಾಪಕ ವೃತ್ತಿಯಿಂದ ನಿವೃತ್ತರಾಗುತ್ತಿರುವ ಹಿನ್ನೆಲೆಯಲ್ಲಿ, ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಅಧ್ಯಾಪಕರು, ವಿದ್ಯಾರ್ಥಿ ಬಳಗ ಹಾಗೂ ಹಿರಿಯ ವಿದ್ಯಾರ್ಥಿಗಳ ಸಹಯೋಗದಲ್ಲಿ ‘ಭಾಸ್ಕರ ಪರ್ವ – ಮಾಧ್ಯಮ ಗುರುವಿಗೆ ಅಭಿನಂದನೆ’ ಎಂಬ ವಿಶೇಷ ಅಭಿನಂದನಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಸಮಾರಂಭದ ಉದ್ಘಾಟನೆ ಹಾಗೂ ಅಭಿನಂದನಾ ಗ್ರಂಥದ ಬಿಡುಗಡೆಯನ್ನು ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಡಾ. ಸತೀಶ್ ಚಂದ್ರ ಎಸ್. ಅವರು ನೆರವೇರಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಸಾಕ್ಷ್ಯ ಚಿತ್ರದ ಬಿಡುಗಡೆಯನ್ನು ಕ್ಷೇಮವನ, ಬೆಂಗಳೂರು ಇದರ ಕಾರ್ಯನಿರ್ವಹಕ ನಿರ್ದೇಶಕಿ ಶ್ರೀಮತಿ ಶ್ರದ್ಧಾ ಅಮಿತ್ ಅವರು ಮಾಡುವರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ವಿಶ್ವನಾಥ .ಪಿ ಅವರು ವಹಿಸಲಿದ್ದಾರೆ. ಸಮಾರಂಭದಲ್ಲಿ ಉಜಿರೆ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಡಾ. ಭಾಸ್ಕರ ಹೆಗಡೆ ಅವರು ಉಪಸ್ಥಿತರಿರುವರು. ಈ ಕಾರ್ಯಕ್ರಮವು ಜನವರಿ 31, ಶನಿವಾರ ಬೆಳಿಗ್ಗೆ 10 ಗಂಟೆಗೆ, ಉಜಿರೆಯ ಇಂದ್ರಪ್ರಸ್ಥ ಸಭಾಂಗಣದಲ್ಲಿ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ವಿದ್ಯಾರ್ಥಿಗಳಿಗೆ ಕೇವಲ ಪಠ್ಯವಲ್ಲದೆ, ಪ್ರಾಯೋಗಿಕ ಜ್ಞಾನ ನೀಡಲು ‘ಚಿಗುರು’ ಭಿತ್ತಿಪತ್ರಿಕೆ, ರೇಡಿಯೋ ನಿನಾದ 90.4 FM’, ‘ನಮ್ಮೂರ ವಾರ್ತೆ’ ಟಿವಿ ನ್ಯೂಸ್ ಬುಲೆಟಿನ್ ಮತ್ತು ಮಲ್ಟಿಮೀಡಿಯಾ ಸ್ಟುಡಿಯೋಗಳ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ 40ನೇ ವರ್ಷದ ಸಂಭ್ರಮದಲ್ಲಿ “ವಿಶಿಷ್ಟ ಹಳೆಯ ವಿದ್ಯಾರ್ಥಿ” ಎಂದು ಇವರನ್ನು ಗೌರವಿಸಲಾಗಿದೆ.
ಇವರ ವಿದ್ಯಾರ್ಥಿಗಳೂ ಕೂಡ ಬಲು ಫೇಮಸ್
ಇವರ ಶಿಷ್ಯರು ರಾಜ್ಯದ ಪ್ರಮುಖ ಕನ್ನಡ ದೈನಿಕಗಳು (ಉದಾಹರಣೆಗೆ: ಉದಯವಾಣಿ, ವಿಜಯವಾಣಿ, ಪ್ರಜಾವಾಣಿ), ಸುದ್ದಿ ವಾಹಿನಿಗಳು (ನ್ಯೂಸ್ 18, TV9, ಪಬ್ಲಿಕ್ ಟಿವಿ) ಮತ್ತು ಡಿಜಿಟಲ್ ಮಾಧ್ಯಮಗಳಲ್ಲಿ ಸಂಪಾದಕರು, ವರದಿಗಾರರು ಮತ್ತು ನಿರೂಪಕರಾಗಿ ಕೆಲಸ ಮಾಡುತ್ತಿದ್ದಾರೆ. ಹಲವಾರು ವಿದ್ಯಾರ್ಥಿಗಳು ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಸಾರ್ವಜನಿಕ ಸಂಪರ್ಕ ಅಧಿಕಾರಿಗಳಾಗಿ (PRO) ಸೇವೆ ಸಲ್ಲಿಸುತ್ತಿದ್ದಾರೆ. ದೇಶ-ವಿದೇಶಗಳ ಕಾರ್ಪೊರೇಟ್ ಸಂಸ್ಥೆಗಳಲ್ಲಿ ಮತ್ತು ವಿವಿಧ ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕರಾಗಿಯೂ ಇವರ ಶಿಷ್ಯರು ಗುರುತಿಸಿಕೊಂಡಿದ್ದಾರೆ.
Dakshina Kannada,Karnataka