Last Updated:
ಭಾರತಕ್ಕೆ ಏಷ್ಯಾ ಕಪ್ ಹಸ್ತಾಂತರಿಸುವ ಬಗ್ಗೆ ಪತ್ರ ಬರೆಯುವ ಮೂಲಕ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿಗೆ ಬಿಸಿಸಿಐ ಲಾಸ್ಟ್ ವಾರ್ನಿಂಗ್ ಕೊಟ್ಟಿದೆ.
ಏಷ್ಯಾ ಕಪ್ (Asia Cup) ಟ್ರೋಫಿಯ ವಿವಾದ ಕೊನೆಗೊಳ್ಳುವ ಹಂತದಲ್ಲಿದೆ. ಭಾರತ (India) ಕ್ರಿಕೆಟ್ (Cricket) ನಿಯಂತ್ರಣ ಮಂಡಳಿ (ಬಿಸಿಸಿಐ) ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಮತ್ತು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಅಧ್ಯಕ್ಷ ಮೊಹ್ಸಿನ್ ನಖ್ವಿ (Mohsin Naqvi)ಗೆ ಅಂತಿಮ ಎಚ್ಚರಿಕೆ ನೀಡಿದೆ. ಏಷ್ಯಾ ಕಪ್ ಟ್ರೋಫಿಯನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಬಿಸಿಸಿಐ (BCCI) ಪತ್ರವನ್ನು ಬರೆದಿದೆ ಎಂದು ವರದಿಯಾಗಿದೆ. ಏಷ್ಯಾ ಕಪ್ ಫೈನಲ್ನಲ್ಲಿ ಪಾಕಿಸ್ತಾನವನ್ನು ಹೀನಾಯವಾಗಿ ಸೋಲಿಸುವ ಮೂಲಕ ಭಾರತ ಚಾಂಪಿಯನ್ ಆಗಿತ್ತು. ಆದರೆ ಟೀಮ್ ಇಂಡಿಯಾ ಟ್ರೋಫಿ ಇಲ್ಲದೆಯೇ ತವರಿಗೆ ಮರಳಿತು.
ಏಷ್ಯಾ ಕಪ್ 2025ರ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ವಿವಾದ ಭುಗಿಲೆದ್ದಿತು. ಪಾಕಿಸ್ತಾನ ಕ್ರಿಕೆಟ್ ಮಂಡಳಿ ಟೀಮ್ ಇಂಡಿಯಾ ಆಟಗಾರರು ಹ್ಯಾಂಡ್‌ಶೇಕ್ ಮಾಡಿಲ್ಲ ಎಂದು ಆರೋಪ ಮಾಡಿತು. ಬಳಿಕ ಪಾಕಿಸ್ತಾನ ಆಟಗಾರರು ಮೈದಾನದಲ್ಲಿ ಅಸಭ್ಯ ವರ್ತನೆ ಮಾಡಿದರು. ಈ ಬಗ್ಗೆ ಬಿಸಿಸಿಐ ಕೂಡ ಐಸಿಸಿಗೆ ದೂರ ನೀಡಿತ್ತು.
ಏಷ್ಯಾ ಕಪ್ 2025 ರ ಫೈನಲ್ ಗೆಲುವಿನ ಬಳಿಕ ಮೊಹ್ಸಿನ್ ನಖ್ವಿ ಕೈಯಿಂದ ಟ್ರೋಫಿ ಸ್ವೀಕರಿಸಲು ಟೀಮ್ ಇಂಡಿಯಾ ಆಟಗಾರರು ನಿರಾಕರಿಸಿದರು. ಇದರಿಂದ ಕೋಪಗೊಂಡ ಮೊಹ್ಸಿನ್ ನಖ್ವಿ ತನ್ನೊಂದಿಗೆ ಟ್ರೋಫಿ ಮತ್ತು ಮೆಡೆಲ್ಗಳನ್ನು ತೆಗೆದುಕೊಂಡು ಹೋದರು. ಅಲ್ಲಿಂದ ಇಲ್ಲಿವರೆಗೆ ಏಷ್ಯಾ ಕಪ್ ಟ್ರೋಫಿ ಭಾರತದ ಕೈ ಸೇರಿಲ್ಲ. ಹೀಗಾಗಿ ಎಸಿಸಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಟ್ರೋಫಿಯನ್ನು ಭಾರತಕ್ಕೆ ವರ್ಗಾಯಿಸಬೇಕೆಂದು ಬಿಸಿಸಿಐ ತನ್ನ ಪತ್ರದಲ್ಲಿ ಸ್ಪಷ್ಟವಾಗಿ ಹೇಳಿದೆ.
ವರದಿಗಳ ಪ್ರಕಾರ, ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರು ನಖ್ವಿ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದಾರೆ. ಯಾವುದೇ ಪ್ರತಿಕ್ರಿಯೆ ಸಿಗದಿದ್ದರೆ, ಅಧಿಕೃತ ಮೇಲ್ ಮೂಲಕ ಐಸಿಸಿಗೆ ವಿಷಯವನ್ನು ತಿಳಿಸುವುದಾಗಿ ಬಿಸಿಸಿಐ ಎಚ್ಚರಿಸಿದೆ. ಏಷ್ಯಾ ಕಪ್ ಟ್ರೋಫಿ ಪ್ರಸ್ತುತ ದುಬೈನಲ್ಲಿರುವ ಎಸಿಸಿ ಕಚೇರಿಯಲ್ಲಿದೆ. ಅಕ್ಟೋಬರ್ 10 ರಂದು, ನಖ್ವಿಯವರ ಅನುಮೋದನೆಯಿಲ್ಲದೆ ಏಷ್ಯಾ ಕಪ್ ಟ್ರೋಫಿಯನ್ನು ಸ್ಥಳಾಂತರಿಸಬಾರದು ಅಥವಾ ಯಾರಿಗೂ ಹಸ್ತಾಂತರಿಸಬಾರದು ಎಂದು ಕಟ್ಟುನಿಟ್ಟಿನ ಸೂಚನೆಗಳು ಜಾರಿಯಲ್ಲಿವೆ.
ಇಂದಿನವರೆಗೆ ಏಷ್ಯಾ ಕಪ್ ಟ್ರೋಫಿ ದುಬೈನಲ್ಲಿರುವ ಎಸಿಸಿ ಕಚೇರಿಯಲ್ಲಿದೆ. ನಖ್ವಿ ತನ್ನ ಅನುಮತಿ ಮತ್ತು ವೈಯಕ್ತಿಕ ಉಪಸ್ಥಿತಿಯಿಲ್ಲದೆ ಅದನ್ನು ಯಾರಿಗೂ ಹಸ್ತಾಂತರಿಸಬಾರದು ಅಥವಾ ವರ್ಗಾಯಿಸಬಾರದು ಎಂದು ಸ್ಪಷ್ಟ ಸೂಚನೆಗಳನ್ನು ನೀಡಿದ್ದಾರೆ. ಭಾರತ ತಂಡ ಅಥವಾ ಬಿಸಿಸಿಐಗೆ ವೈಯಕ್ತಿಕವಾಗಿ ಟ್ರೋಫಿಯನ್ನು ಹಸ್ತಾಂತರಿಸುವುದಾಗಿ ನಖ್ವಿ ಹೇಳಿದ್ದಾರೆ.
October 21, 2025 4:44 PM IST