ಮೂರು ಮಾದರಿಯ ಕ್ರಿಕೆಟ್ ನಲ್ಲಿ ಆಡದಿದ್ದರು, ಟೀಂ ಇಂಡಿಯಾ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರನ್ನು ಎ ಪಸ್ಲ್ ಶ್ರೇಣಿಯಲ್ಲಿ ಬಿಸಿಸಿಐ ಮುಂದುವರಿಸಿದೆ. ಉಳಿದಂತೆ ಎ ಪ್ಲಸ್, ಎ, ಬಿ, ಸಿ ಎಂಬ ನಾಲ್ಕು ಶ್ರೇಣಿಗಳಲ್ಲಿ ಟೀಂ ಇಂಡಿಯಾ ಆಟಗಾರರನ್ನು ವಿಂಗಡಿಸಿ ಈ ಕೇಂದ್ರ ಒಪ್ಪಂದದಲ್ಲಿ ಸೇರಿಸಲಾಗಿದೆ.
ವಿಶೇಷ ಎಂದರೆ, ಐಪಿಎಲ್‌ನಲ್ಲಿ ಮಿಂಚಿ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದ ಯುವ ಆಟಗಾರರನ್ನೂ ಬಿಸಿಸಿಐ ಕೇಂದ್ರ ಒಪ್ಪಂದದಲ್ಲಿ ಸೇರಿಸಿಕೊಂಡಿದೆ. ತಿಲಕ್ ವರ್ಮಾ, ಅಭಿಷೇಕ್ ಶರ್ಮಾ, ನಿತೀಶ್ ಕುಮಾರ್ ರೆಡ್ಡಿ ಜೊತೆಗೆ ವರುಣ್ ಚಕ್ರವರ್ತಿಗೂ ಸ್ಥಾನ ದಕ್ಕಿದೆ.
ಗ್ರೇಡ್ ಏ+ ಆಟಗಾರರು: ಬಿಸಿಸಿಐ ಘೋಷಿಸಿದ ಕೇಂದ್ರ ಒಪ್ಪಂದದಲ್ಲಿ ಕೇವಲ ನಾಲ್ವರು ಮಾತ್ರ ಎ ಪ್ಲಸ್ ಗ್ರೇಡ್‌ನಲ್ಲಿದ್ದಾರೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ ಮತ್ತು ರವೀಂದ್ರ ಜಡೇಜಾ ಅವರನ್ನು ಬಿಸಿಸಿಐ ಈ ಎ ಪ್ಲಸ್ ಗ್ರೇಡ್‌ನಲ್ಲಿ ಮುಂದುವರಿಸಿದೆ.
ಇದನ್ನೂ ಓದಿ: Video: ‘20 ವರ್ಷಗಳಿಂದ ಆಡ್ತಿದ್ದೀನಿ’; ಪಂಜಾಬಿಯಲ್ಲೇ ಡೆಡ್ಲಿ ವಾರ್ನಿಂಗ್ ಕೊಟ್ಟ ಕೊಹ್ಲಿ!
ಗ್ರೇಡ್ ಎ ಆಟಗಾರರು: ಟೀಂ ಇಂಡಿಯಾದ ಹಿರಿಯ ಆಟಗಾರರಾದ ಮೊಹಮ್ಮದ್ ಸಿರಾಜ್, ಕೆಎಲ್ ರಾಹುಲ್, ಶುಭಮನ್ ಗಿಲ್, ಹಾರ್ದಿಕ್ ಪಾಂಡ್ಯ, ಮೊಹಮ್ಮದ್ ಶಮಿ ಮತ್ತು ರಿಷಭ್ ಪಂತ್ ಗ್ರೇಡ್ ಎ ನಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
ಗ್ರೇಡ್ ಬಿ ಆಟಗಾರರು: ಟೀಂ ಇಂಡಿಯಾ ಟಿ20 ನಾಯಕ ಸೂರ್ಯಕುಮಾರ್ ಯಾದವ್ ಅವರಿಗೆ ಬಿಸಿಸಿಐ ಗ್ರೇಡ್ ಬಿಯಲ್ಲಿ ಸ್ಥಾನ ಕಲ್ಪಿಸಿದೆ. ಗ್ರೇಡ್ ಬಿಯಲ್ಲಿ ಸೂರ್ಯಕುಮಾರ್ ಯಾದವ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ಯಶಸ್ವಿ ಜೈಸ್ವಾಲ್ ಮತ್ತು ಶ್ರೇಯಾಸ್ ಅಯ್ಯರ್ ಇದ್ದಾರೆ.
🚨 ???????????????? 🚨
BCCI announces annual player retainership 2024-25 – Team India (Senior Men)#TeamIndiaDetails 🔽https://t.co/lMjl2Ici3P pic.twitter.com/CsJHaLSeho
— BCCI (@BCCI) April 21, 2025
ಗ್ರೇಡ್ ಸಿ ಆಟಗಾರರು: ರಿಂಕು ಸಿಂಗ್, ತಿಲಕ್ ವರ್ಮಾ, ಋತುರಾಜ್ ಗಾಯಕ್ವಾಡ್, ಶಿವಂ ದುಬೆ, ರವಿ ಬಿಷ್ಣೋಯ್, ವಾಶಿಂಗ್ಟನ್ ಸುಂದರ್, ಮುಕೇಶ್ ಕುಮಾರ್, ಸಂಜು ಸ್ಯಾಮ್ಸನ್, ಅರ್ಶದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ, ರಜತ್ ಪಾಟಿದಾರ್, ಧ್ರುವ್ ಜುರೆಲ್, ಸರ್ಫರಾಜ್ ಖಾನ್, ನಿತೀಶ್ ಕುಮಾರ್ ರೆಡ್ಡಿ, ಇಶಾನ್ ಕಿಶನ್, ಅಭಿಷೇಕ್ ಶರ್ಮಾ, ಆಕಾಶ್ ದೀಪ್, ವರುಣ್ ಚಕ್ರವರ್ತಿ ಮತ್ತು ಹರ್ಷಿತ್ ರಾಣಾ ಸ್ಥಾನ ಪಡೆದುಕೊಂಡಿದ್ದಾರೆ.
April 21, 2025 1:10 PM IST