Belthangady: ದೀಪಾವಳಿಗೆ ದೋಸೆ ಹಬ್ಬ- ಲಕ್ಷಕ್ಕೂ ಅಧಿಕ ದೋಸೆಗಳನ್ನು ಸವಿದ ಜನ | Deepavali Celebration Dosa festival at Belthangady

Belthangady: ದೀಪಾವಳಿಗೆ ದೋಸೆ ಹಬ್ಬ- ಲಕ್ಷಕ್ಕೂ ಅಧಿಕ ದೋಸೆಗಳನ್ನು ಸವಿದ ಜನ | Deepavali Celebration Dosa festival at Belthangady

Last Updated:

ಉಪ್ಪಿನಕಾಯಿ, ಉದ್ದಿನದೋಸೆ, ಚಟ್ನಿ ಮತ್ತು ತರಕಾರಿ ಕೂರ್ಮವನ್ನು ಜನರಿಗೆ ಬಡಿಸಲಾಗುತ್ತದೆ. ಈ ದೋಸೆ ಹಬ್ಬಕ್ಕೆ ಇಡೀ ಬೆಳ್ತಂಗಡಿಯೇ ಪಾಲ್ಗೊಂಡಿತ್ತು.

X

ವಿಡಿಯೋ ಇಲ್ಲಿ ನೋಡಿ

ಆಹಾ..! ದೋಸೆ(Dosa) ಎರೆಯುವ ಸಂಭ್ರಮ ನೋಡಿ. ನಿಮಿಷಕ್ಕೆ ಹತ್ತು ದೋಸೆಗಳು ರೆಡಿಯಾಗುತ್ತಿದ್ರೆ, ಜನ ಬಾಯಿ ಚಪ್ಪರಿಸಿಕೊಂಡು ದೋಸೆ ಖಾಲಿ ಮಾಡುತ್ತಿದ್ರು. ದೀಪಾವಳಿಯ ಸಂಭ್ರಮದ(Deepavali Celebration) ನಡುವೆ ಬೆಳ್ತಂಗಡಿಯಲ್ಲಿ(Belthangady) ನಡೆದ ದೋಸೆ ಹಬ್ಬದಲ್ಲಿ ಜನ ಸಂಭ್ರಮ ಸಡಗರದಿಂದ ಪಾಲ್ಗೊಂಡಿದ್ದರು. ದೀಪಾವಳಿ ಹಬ್ಬದ ಪ್ರಯುಕ್ತ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ(MLA Harish Poonja) ನೇತೃತ್ವದಲ್ಲಿ ಬೆಳ್ತಂಗಡಿ ಬಿಜೆಪಿ ಯುವ ಮೋರ್ಚಾ ಕಳೆದ ಐದು ವರ್ಷಗಳಿಂದ ದೋಸೆ ಹಬ್ಬವನ್ನು ನಡೆಸುತ್ತಿದೆ.

ದೋಸೆ ಸಂಸ್ಕೃತಿ ಮರೆಯಬಾರದು

ದೇಶದಲ್ಲಿ ದೀಪಾವಳಿ ಹಬ್ಬವನ್ನು ಹಲವು ಬಗೆಯಲ್ಲಿ ಆಚರಣೆ ಮಾಡಲಾಗುತ್ತದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮನೆಗಳಲ್ಲಿ ಅನಾದಿಕಾಲದಿಂದಲೂ ದೋಸೆ ಮಾಡೋದು ವಾಡಿಕೆ. ಉದ್ದಿನ ದೋಸೆಯನ್ನು ಮಾಡಿ ಮನೆಮಂದಿಯೆಲ್ಲಾ ಖುಷಿಯಿಂದ ಒಟ್ಟಿಗೆ ತಿನ್ನೋದು ದೀಪಾವಳಿಯ ವೈಶಿಷ್ಟ್ಯ. ಇಂತಹ ದೋಸೆ ಸಂಸ್ಕೃತಿ ಅಧುನಿಕ ಕಾಲದ ವೇಗದಲ್ಲಿ ಮರೆತುಹೋಗಬಾರದು ಎಂಬ ದೃಷ್ಟಿಯಿಂದ ಕಳೆದ ಐದು ವರ್ಷಗಳಿಂದ ದೋಸೆ ಹಬ್ಬವನ್ನು ಬೆಳ್ತಂಗಡಿಯಲ್ಲಿ ಮಾಡಲಾಗುತ್ತಿದೆ. ಉಪ್ಪಿನಕಾಯಿ, ಉದ್ದಿನದೋಸೆ, ಚಟ್ನಿ ಮತ್ತು ತರಕಾರಿ ಕೂರ್ಮವನ್ನು ಜನರಿಗೆ ಬಡಿಸಲಾಗುತ್ತದೆ. ಈ ದೋಸೆ ಹಬ್ಬಕ್ಕೆ ಇಡೀ ಬೆಳ್ತಂಗಡಿಯೇ ಪಾಲ್ಗೊಂಡಿತ್ತು.

ಇದನ್ನೂ ಓದಿ: Deepavali Celebration: ಮೈಸೂರಿನ ಈ ಗ್ರಾಮದಲ್ಲಿ ಅದ್ದೂರಿ ದೀಪಾವಳಿ ಆಚರಣೆ- ಗಮನ ಸೆಳೆದ ದನಗಳ ಓಟ

ದೋಸೆ ಸವಿದ ಹಿರಿಯರು-ಕಿರಿಯರು

ಕಳೆದ ವರ್ಷ ಅರವತ್ತು ಸಾವಿರಕ್ಕೂ ಅಧಿಕ ಜನರು ದೋಸೆ ಹಬ್ಬದಲ್ಲಿ ಪಾಲ್ಗೊಂಡು ದೋಸೆಗಳನ್ನು ಸವಿದಿದ್ದರು. ಸುಮಾರು ಹದಿನೈದು ಕ್ವಿಂಟಾಲ್ ಅಕ್ಕಿಯಿಂದ ಲಕ್ಷಕ್ಕೂ ಅಧಿಕ ದೋಸೆಗಳನ್ನು ತಯಾರಿಸಲಾಗಿತ್ತು. ಹತ್ತು ಮಂದಿ ಬಾಣಸಿಗರ ತಂಡ ನಿಮಿಷಕ್ಕೆ ಹತ್ತರಂತೇ ಗರಿ ಗರಿ ದೋಸೆಗಳನ್ನು ತಯಾರು ಮಾಡಿದ್ರೆ, ಜನರೂ ಸಹ ವಯಸ್ಸಿನ ಬೇಧವಿಲ್ಲದೇ ಯಾವುದೇ ಹಮ್ಮು-ಬಿಮ್ಮಿಲ್ಲದೇ ದೋಸೆಗಳನ್ನು ಸವಿದಿದ್ದಾರೆ.‌ ದೋಸೆ ಹಬ್ಬದ ಪ್ರಯುಕ್ತ ಇಡೀ ದಿನ ದೋಸೆ ತಯಾರಿಸಿ ನೀಡಲಾಯಿತು‌.ಇದರ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು, ಗೋಪೂಜೆಯೂ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಿದವು.

ಒಟ್ಟಿನಲ್ಲಿ ದೀಪಾವಳಿಯ ಪರ್ವಕಾಲದಲ್ಲಿ ಜನ ದೋಸೆ ಪರಂಪರೆಯನ್ನು ಮರೆಯಬಾರದು ಎಂಬ ದೃಷ್ಠಿಯಿಂದ ಶಾಸಕ ಪೂಂಜಾ ನೇತೃತ್ವದ ತಂಡ ಸತತ ಐದು ವರ್ಷಗಳಿಂದ ದೋಸೆ ಹಬ್ಬವನ್ನು ಮಾಡುತ್ತಿದೆ. ಜನರು ಮನೆಯಲ್ಲಿ ದೋಸೆ ತಿಂದು, ದೋಸೆ ಹಬ್ಬದಲ್ಲೂ ಸಕುಟುಂಬಿಕರಾಗಿ ಭಾಗವಹಿಸಿ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಿದ್ದಾರೆ.