Bengaluru: ಇಂದು ಮಧ್ಯಾಹ್ನ ಮನೆಯಿಂದ ಆಚೆ ಬರೋ ಮುನ್ನ 2 ಸಲ ಯೋಚಿಸಿ!RCB Unbox Event 2025: Bengaluru Residents, Think Twice Before Stepping Out Afternoon

Bengaluru: ಇಂದು ಮಧ್ಯಾಹ್ನ ಮನೆಯಿಂದ ಆಚೆ ಬರೋ ಮುನ್ನ 2 ಸಲ ಯೋಚಿಸಿ!RCB Unbox Event 2025: Bengaluru Residents, Think Twice Before Stepping Out Afternoon

Last Updated:

RCB Unbox Event: ಇವತ್ತೇನಾದ್ರೂ ನೀವು ಮನೆಯಿಂದ ಮಧ್ಯಾಹ್ನ ಹೊರ ಬರಬೇಕು ಅಂದ್ರೆ, ಚಿನ್ನಸ್ವಾಮಿ ಸ್ಟೇಡಿಯಂ ಸುತ್ತ ಮುತ್ತ ಹೋಗ್ಬೇಕು ಅಂದ್ರೆ ಎರಡು ಸಲ ಯೋಚಿಸಿ. ಯಾಕೆ ಅಂತೀರಾ? ಮುಂದೆ ಓದಿ…

ಬೆಂಗಳೂರುಬೆಂಗಳೂರು
ಬೆಂಗಳೂರು

ಆರ್‌ಸಿಬಿ ಅನ್‌ಬಾಕ್ಸ್ ಅಂದ್ರೆ ಅಭಿಮಾನಿಗಳಿಗೆಲ್ಲಾ ಹಬ್ಬ. ಈ ವರ್ಷ 2025ರ ಐಪಿಎಲ್‌ಗಾಗಿ ಆರ್‌ಸಿಬಿ ಹೊಸ ಜೆರ್ಸಿಯನ್ನೂ ಇದೇ ಕಾರ್ಯಕ್ರಮದಲ್ಲಿ ಅನಾವರಣ ಮಾಡಲಿದ್ದಾರೆ. ತಾರೆಯರನ್ನ ನೋಡಬೇಕು, ಹೊಸ ಜೆರ್ಸಿ ಹೇಗಿದೆ ಅಂತ ನೋಡಬೇಕು ಅಂತಿದ್ದೀರಾ?

ಆರ್‌ಸಿಬಿ ವೆಬ್‌ಸೈಟ್ ಅಥವಾ ಆ್ಯಪ್‌ನಲ್ಲಿ 99 ರೂಪಾಯಿ ಕೊಟ್ಟು ನೋಂದಣಿ ಮಾಡಿಕೊಂಡ್ರೆ ಈ ಕಾರ್ಯಕ್ರಮವನ್ನ ನೇರಪ್ರಸಾರದಲ್ಲಿ ವೀಕ್ಷಿಸಬಹುದು. ಈ ಸಲದ ಆರ್‌ಸಿಬಿ ಅನ್‌ಬಾಕ್ಸ್ ಕಾರ್ಯಕ್ರಮದಲ್ಲಿ ಆಸ್ಟ್ರೇಲಿಯಾದ ಫೇಮಸ್ ಡಿಜೆ ಟಿಮ್ಮಿ ಟ್ರಂಪೆಟ್ ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

The state government warned to issue a notice to the RCB team

ಜೊತೆಗೆ ಕನ್ನಡದ ಹೆಮ್ಮೆಯ ಗಾಯಕರಾದ ಸಂಜಿತ್ ಹೆಗ್ಡೆ, ಐಶ್ವರ್ಯ ರಂಗರಾಜನ್, ರ‍್ಯಾಪರ್ ಆಲ್ ಓಕೆ, ಸವಾರಿ ಬ್ಯಾಂಡ್ ಮತ್ತು ಬೆಸ್ಟ್ ಕೆಪ್ಟ್ ಸೀಕ್ರೆಟ್ ತಂಡದವರು ಕೂಡ ಸಂಗೀತದ ಮೋಡಿ ಮಾಡಲಿದ್ದಾರೆ. ಹೊಸ ತಂಡ, ಹೊಸ ಜೆರ್ಸಿ, ಹೊಸ ಉತ್ಸಾಹದ ಜೊತೆಗೆ ಈ ಸಂಗೀತ ಕಾರ್ಯಕ್ರಮ ಆರ್‌ಸಿಬಿ ಅಭಿಮಾನಿಗಳಿಗೆ ಮರೆಯಲಾಗದ ಅನುಭವ ನೀಡೋದು ಗ್ಯಾರಂಟಿ.

ಆದರೆ ವಿಚಾರ ಆರ್‌ಸಿಬಿ ಅಂದ್ರೆ ಕೇಳ್ಬೇಕಾ? ನಮಗೆಲ್ಲಾ ಆರ್‌ಸಿಬಿ ಅಂದ್ರೆ ಏನು ಅಂತ ಎಲ್ಲರಿಗೂ ಗೊತ್ತಿದೆ. ಆರ್‌ಸಿಬಿ ಅಂದ್ರೆ ಕೇವಲ ಐಪಿಎಲ್‌ ತಂಡವಲ್ಲ. ಅದು ನಮ್ಮ ಎಮೋಷನ್‌. ಹೀಗಾಗಿ ಇಂದು ಬೆಂಗಳೂರಿನಲ್ಲಿ ಸಾಕಷ್ಟು ಮಂದಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸೇರಲಿದ್ದಾರೆ. ಹೀಗಾಗಿ ಇಲ್ಲಿ ಸುತ್ತ-ಮುತ್ತ ಟ್ರಾಫಿಕ್‌ ಹೆಚ್ಚಾಗಬಹುದು.

ಕಳೆದ ಬಾರಿ ಅನ್‌ಬಾಕ್ಸ್ ಕಾರ್ಯಕ್ರಮ ನಡೆದಾಗಲೂ ಚಿನ್ನಸ್ವಾಮಿ ಸ್ಟೇಡಿಯಂ ಸುತ್ತ-ಮುತ್ತ ಟ್ರಾಫಿಕ್‌ ಸಮಸ್ಯೆ ಉಂಟಾಗಿತ್ತು. ಇಂದು ಮಧ್ಯಾಹ್ನದಿಂದಲೇ ಅಭಿಮಾನಿಗಳು ಸ್ಟೇಡಿಯಂನತ್ತ ಸೇರಲಿದ್ದಾರೆ. ಹೀಗಾಗಿ ಮಧ್ಯಾಹ್ನದಿಂದಲೇ ಟ್ರಾಫಿಕ್‌ ಸಮಸ್ಯೆ ಉಂಟಾಗಬಹುದು.

ಐಪಿಎಲ್ ಇತಿಹಾಸದಲ್ಲಿ ಒಂದೇ ತಂಡದಲ್ಲಿ 17 ವರ್ಷಗಳಿಂದ ಆಡುತ್ತಿರುವ ಏಕೈಕ ಆಟಗಾರ ವಿರಾಟ್ ಕೊಹ್ಲಿ. 2008ರಿಂದ ಆರ್‌ಸಿಬಿ ಪರ ಆಡುತ್ತಿರುವ ಅವರು, 252 ಪಂದ್ಯಗಳಲ್ಲಿ 8,004 ರನ್ ಗಳಿಸಿ ಐಪಿಎಲ್‌ನ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ಕೊಹ್ಲಿ ಇನ್ನೂ ಆರ್‌ಸಿಬಿ ತಂಡದ ಪ್ರಮುಖ ಆಟಗಾರರಾಗಿದ್ದಾರೆ. ವಿರಾಟ್‌ 18ನೇ ಸೀಸನ್‌ ಕೂಡ ಆರ್‌ಸಿಬಿ ಪರ ಇಡಲಿದ್ದಾರೆ. ಇಂದು ವಿರಾಟ್‌ ಕೊಹ್ಲಿ ನೋಡಲು ಸಾಕಷ್ಟು ಮಂದಿ ಬರಲಿದ್ದಾರೆ.

ಕಳೆದ ಮೂರು ಆವೃತ್ತಿಗಳ ಜೆರ್ಸಿ ಬಿಡುಗಡೆ ಸಮಾರಂಭದಲ್ಲಿ, ಎಬಿ ಡಿವಿಲಿಯರ್ಸ್, ಕ್ರಿಸ್ ಗೇಲ್ ಮತ್ತು ಆರ್ ವಿನಯ್ ಕುಮಾರ್ ಅವರಂತಹ ದಿಗ್ಗಜರು ಕೀರ್ತಿಯ ಹಾಲ್ ಆಫ್ ಫೇಮ್‌ಗೆ ಸೇರ್ಪಡೆಯಾಗಿದ್ದಾರೆ.ಈ ವರ್ಷ ನಡೆಯಲಿರುವ ಆರ್‌ಸಿಬಿ ಅನ್‌ಬಾಕ್ಸ್ ಕಾರ್ಯಕ್ರಮದಲ್ಲಿ ನಾಯಕ ರಜತ್ ಪಾಟಿದಾರ್ ಮತ್ತು ವಿರಾಟ್ ಕೊಹ್ಲಿ ಭಾಗವಹಿಸಲಿದ್ದಾರೆ.