Bengaluru: ಉದ್ಯಮಿಗಳಾಯ್ತು ಈಗ ಕ್ರಿಕೆಟರ್​ ಸರದಿ, ಬೆಂಗಳೂರಿನ ಬಗ್ಗೆ ಸುನೀಲ್ ಜೋಶಿ ಟ್ವೀಟ್​, ಸಿಎಂ, ಡಿಸಿಎಂರನ್ನ ಟ್ಯಾಗ್ ಮಾಡಿ ಹೇಳಿದ್ದೇನು?| cricketer Sunil Joshi tweeted about Bengaluru tagged the CM and DCM and said what | ರಾಜ್ಯ

Bengaluru: ಉದ್ಯಮಿಗಳಾಯ್ತು ಈಗ ಕ್ರಿಕೆಟರ್​ ಸರದಿ, ಬೆಂಗಳೂರಿನ ಬಗ್ಗೆ ಸುನೀಲ್ ಜೋಶಿ ಟ್ವೀಟ್​, ಸಿಎಂ, ಡಿಸಿಎಂರನ್ನ ಟ್ಯಾಗ್ ಮಾಡಿ ಹೇಳಿದ್ದೇನು?| cricketer Sunil Joshi tweeted about Bengaluru tagged the CM and DCM and said what | ರಾಜ್ಯ

Last Updated:

ಮಾಜಿ ಕ್ರಿಕೆಟರ್ ಸುನೀಲ್ ಜೋಶಿ​ ಕೂಡ ಬೆಂಗಳೂರಿನ ಸಮಸ್ಯೆ ಬಗ್ಗೆ ಟ್ವೀಟ್ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಟ್ಯಾಗ್ ಮಾಡಿ ಅಸಮಾಧಾನ ಹೊರಹಾಕಿದ್ದಾರೆ. 

News18News18
News18

ಬೆಂಗಳೂರು (ಅ.17): ಇತ್ತೀಚಿಗೆ ರಾಜ್ಯ ರಾಜಧಾನಿ ಬೆಂಗಳೂರು ಸಮಸ್ಯೆಗಳಿಂದಲೇ ರಾಷ್ಟ್ರಮಟ್ಟದಲ್ಲಿ ಸುದ್ದಿ ಆಗ್ತಿದೆ. ಮಹಾನಗರಿಯ ಗುಂಡಿ ಸಮಸ್ಯೆಗಳ (Pothole Problem) ಬಗ್ಗೆ ಕೆಲ ದಿನಗಳ ಹಿಂದಷ್ಟೇ ಐಟಿ ದಿಗ್ಗಜರು ಅಸಮಾಧಾನ ಹೊರ ಹಾಕಿದ್ರು. ಇದೀಗ ಮಾಜಿ ಕ್ರಿಕೆಟರ್​ ಕೂಡ ಬೆಂಗಳೂರಿನ ಟ್ರಾಫಿಕ್ ಜಾಮ್ (Bengaluru Traffic)​ ಬಗ್ಗೆ ಟ್ವೀಟ್ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಟ್ಯಾಗ್ ಮಾಡಿ ಅಸಮಾಧಾನ ಹೊರಹಾಕಿದ್ದಾರೆ. 

ಮಾಜಿ ಕ್ರಿಕೆಟರ್​ ಸುನೀಲ್ ಜೋಶಿ ಟ್ವೀಟ್​

ಕೆಐಎಎಲ್ ಏರ್ಪೋಟ್ ರಸ್ತೆಯಲ್ಲಿ ಬೆಳಗಿನ ಜಾವ ಭಾರೀ ವಾಹನಗಳ ಸಂಚಾರ ಹಿನ್ನೆಲೆ ಟ್ರಾಫಿಕ್ ಜಾಮ್ ಉಂಟಾಗಿದ್ದು, ಇದ್ರಿಂದ ಜನ ಸಾಮಾನ್ಯರಿಗೆ ಕಿರಿಕಿರಿಯಾಗ್ತಿದೆ. ಈ ಬಗ್ಗೆ ಮಾಜಿ ಕ್ರಿಕೆಟರ್ ಸುನೀಲ್ ಜೋಶಿ ಎಕ್ಸ್ ನಲ್ಲಿ ಆಕ್ರೋಶ ಹೊರಹಾಕಿದ್ದಾರೆ. ಅನುಮತಿ ಕೊಟ್ಟವರು ಯಾರು ಎಂದು ಪ್ರಶ್ನೆ ಮಾಡಿದ್ದಾರೆ.

ಸುನೀಲ್ ಜೋಶಿ ಟ್ವೀಟ್​ನಲ್ಲಿ ಏನಿದೆ?

ಸಿಎಂ ಸಿದ್ದರಾಮಯ್ಯ ಸರ್​, ಡಿಸಿಎಂ ಡಿಕೆ ಶಿವಕುಮಾರ್ ಸರ್​, ವಿಮಾನ ನಿಲ್ದಾಣ ಮಾರ್ಗದಲ್ಲಿ ದಿನದ ವೇಳೆಯಲ್ಲೂ ಸರಕು ಮತ್ತು ನಿರ್ಮಾಣ ವಾಹನಗಳನ್ನು ಹೇಗೆ ಅನುಮತಿಸಲಾಗುತ್ತಿದೆ? ಇವುಗಳಿಗೆ ರಾತ್ರಿ 10ರಿಂದ ಬೆಳಗ್ಗೆ 6ರವರೆಗೆ ಮಾತ್ರ ಚಾಲನೆಗೆ ಅನುಮತಿ ಇರಬೇಕು ಅಲ್ಲವೇ? ಈಗ ಈ ವಾಹನಗಳು ಫಾಸ್ಟ್ ಲೇನ್‌ ಗಳನ್ನು ಬಂದ್ ಮಾಡುತ್ತಿವೆ.

ಇದರಿಂದ ವಿಮಾನ ನಿಲ್ದಾಣಕ್ಕೆ ಹೋಗುವ ಅಥವಾ ಬರುವ ಪ್ರಯಾಣಿಕರಿಗೆ ಭಾರೀ ಟ್ರಾಫಿಕ್ ಜಾಮ್ ಆಗುತ್ತಿದೆ. ದಯವಿಟ್ಟು ಈ ಕುರಿತು ಕ್ರಮ ಕೈಗೊಳ್ಳಿ ಸರ್, ಸಾಮಾನ್ಯ ಜನರು ಪ್ರಯಾಣಿಸಲು ತುಂಬಾ ಕಷ್ಟ ಅನುಭವಿಸುತ್ತಿದ್ದಾರೆ ಎಂದು ಮಾಜಿ ಕ್ರಿಕೆಟರ್​ ಸುಶೀಲ್ ಜೋಶಿ ಟ್ವೀಟ್​​ನಲ್ಲಿ ಬರೆದಿದ್ದಾರೆ.

ಮಾಜಿ ಕ್ರಿಕೆಟರ್​ ಸುನೀಲ್ ಜೋಶಿ ಅವರು ತಮ್ಮ ಟ್ವೀಟ್​ ಅನ್ನು ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್​ ಅವರಿಗೂ ಟ್ಯಾಗ್ ಮಾಡಿದ್ದಾರೆ. ಈ ಬಗ್ಗೆ ಸಿಎಂ ಹಾಗೂ ಡಿಸಿಎಂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಕನ್ನಡ ಸುದ್ದಿ/ ನ್ಯೂಸ್/ರಾಜ್ಯ/

Bengaluru: ಉದ್ಯಮಿಗಳಾಯ್ತು ಈಗ ಕ್ರಿಕೆಟರ್​ ಸರದಿ, ಬೆಂಗಳೂರಿನ ಬಗ್ಗೆ ಸುನೀಲ್ ಜೋಶಿ ಟ್ವೀಟ್​, ಸಿಎಂ, ಡಿಸಿಎಂರನ್ನ ಟ್ಯಾಗ್ ಮಾಡಿ ಹೇಳಿದ್ದೇನು?