Bengaluru: ಬೆಂಗಳೂರಿಗರೇ ಅಲರ್ಟ್! ನಾಳೆ ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 11ರವರೆಗೆ ಹೊರಗೆ ಬರಲೇಬೇಡಿ! | Alert, Bengaluruans! Do not come out from 3 pm to 11 pm tomorrow!

Bengaluru: ಬೆಂಗಳೂರಿಗರೇ ಅಲರ್ಟ್! ನಾಳೆ ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 11ರವರೆಗೆ ಹೊರಗೆ ಬರಲೇಬೇಡಿ! | Alert, Bengaluruans! Do not come out from 3 pm to 11 pm tomorrow!

Last Updated:

ಬೆಂಗಳೂರಿಗರೇ ನೀವು ಹೊರಗೆ ಬರುವ ಮುನ್ನ ಎಚ್ಚರವಾಗಿರಿ. ಕ್ರೀಡಾಂಗಣ ಸುತ್ತ ಮುತ್ತ ವಾಹನಗಳ ನಿಲುಗಡೆ ಸ್ಥಳ ಕೊರತೆ ಇರುವುದರಿಂದ ನಾಳೆ ಆ ಭಾಗದಲ್ಲಿ ಓಡಾಡುವ ಜನರು ಬಿಎಂಟಿಸಿ, ಮೆಟ್ರೋ ಬಳಸಲು ಮನವಿ ಮಾಡಲಾಗಿದೆ. ಇನ್ನು ಓಲಾ, ಉಬರ್, ಆಟೋ ಇತ್ಯಾದಿ ಕ್ಯಾಬ್‌ಗಳು ಪಿಕ್ ಆಪ್ ಮತ್ತು ಟ್ರಾಪ್ ಮಾಡಲು ಸ್ಥಳ ನಿಗದಿ ಮಾಡಲಾಗಿದೆ.

News18News18
News18

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಸೀಸನ್ 18 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ತಂಡವು ಅತ್ಯುತ್ತಮ ಪ್ರದರ್ಶನ ನೀಡುತ್ತಿದೆ. ಕಳೆದ ಪಂದ್ಯದಲ್ಲಿ ತನ್ನ ಬದ್ದವೈರಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ತವರಿನಲ್ಲೇ ಅತಿ ದೊಡ್ಡ ಅಂತರದ ಸೋಲಿ ರುಚಿ ತೋರಿಸಿತು. ಇದಕ್ಕೂ ಮುನ್ನ ಮಾರ್ಚ್ 22 ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಆರ್​ಸಿಬಿ ಜಯ ಸಾಧಿಸುವ ಮೂಲಕ ಋತುವಿನ ಆರಂಭಿತ್ತು. ಈ ಮೂಲಕ ರಜತ್ ಪಾಟಿದಾರ್ ಸತತ ಗೆಲುವುಗಳೊಂದಿಗೆ ಆರ್‌ಸಿಬಿಯಲ್ಲಿ ತಮ್ಮ ನಾಯಕತ್ವದ ಅವಧಿಯನ್ನು ಪ್ರಾರಂಭಿಸಿದ್ದಾರೆ. ನಾಳೆ ಆರ್.ಸಿ.ಬಿ-ಜಿಟಿ‌ ಮುಖಾ-ಮುಖಿಯಾಗಲಿವೆ.

ಹೌದು ನಾಳೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್‌ಸಿಬಿ ಹಾಗೂ ಗುಜರಾತ್ ಟೈಟನ್ಸ್‌ ತಂಡಗಳು ಮಧ್ಯೆ ಹಣಾಹಣಿ ನಡೆಯಲಿದೆ. ಆರ್‌ಸಿಬಿ ತಂಡದ ಅಭಿಮಾನಿಗಳು ಸಾಗರದಂತೆ ಸ್ಟೇಡಿಯಂನತ್ತ ಹರಿದುಬರುತ್ತಿದೆ. ಹಾಗಾಗಿ ಸ್ಟೇಡಿಯಂನ ಸುತ್ತಮುತ್ತ ಸಂಚಾರಿ ಪೊಲೀಸರು ಅಲರ್ಟ್ ಆಗಿದ್ದಾರೆ. ಸ್ಟೇಡಿಯಂ ಸುತ್ತಮುತ್ತ ಟ್ರಾಫಿಕ್‌ ತಡೆಗಟ್ಟಲು ಹಲವು ಕ್ರಮಗಳನ್ನು ತೆಗೆದುಕೊಂಡಿದ್ದು, ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಲಿದ್ದಾರೆ.

ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 11 ಗಂಟೆ ವರೆಗೂ ಸ್ಟೇಡಿಯಂ ಸುತ್ತಮುತ್ತ ಪಾರ್ಕಿಂಗ್‌ಗೆ ಅವಕಾಶ ಇರುವುದಿಲ್ಲ. ಮ್ಯಾಚ್ ನೋಡಲು ಬರುವರಿಗೆ ಪ್ರತ್ಯೇಕ ಪಾರ್ಕಿಂಗ್ ಗೆ ವ್ಯವಸ್ಥೆ ಮಾಡಲಾಗಿದೆ. ಹಾಗಾಗಿ ಬೆಂಗಳೂರಿಗರೇ ನೀವು ಹೊರಗೆ ಬರುವ ಮುನ್ನ ಎಚ್ಚರವಾಗಿರಿ. ಕ್ರೀಡಾಂಗಣ ಸುತ್ತ ಮುತ್ತ ವಾಹನಗಳ ನಿಲುಗಡೆ ಸ್ಥಳ ಕೊರತೆ ಇರುವುದರಿಂದ ನಾಳೆ ಆ ಭಾಗದಲ್ಲಿ ಓಡಾಡುವ ಜನರು ಬಿಎಂಟಿಸಿ, ಮೆಟ್ರೋ ಬಳಸಲು ಮನವಿ ಮಾಡಲಾಗಿದೆ. ಇನ್ನು ಓಲಾ, ಉಬರ್, ಆಟೋ ಇತ್ಯಾದಿ ಕ್ಯಾಬ್‌ಗಳು ಪಿಕ್ ಆಪ್ ಮತ್ತು ಟ್ರಾಪ್ ಮಾಡಲು ಸ್ಥಳ ನಿಗದಿ ಮಾಡಲಾಗಿದೆ.

ಇದನ್ನೂ ಓದಿ: Snake Bite: ಹಾವು ಕಚ್ಚಿದ್ರೆ ಇದೊಂದು ತರಕಾರಿ ಮನೆಯಲ್ಲಿದ್ರೆ ತಕ್ಷಣ ವಿಷ ತೆಗೆದುಹಾಕಬಹುದಂತೆ! ಹೇಗೆ ಗೊತ್ತಾ?

ವಾಹನಗಳ ನಿಲುಗಡೆ ನಿಷೇಧ

  • ಕ್ವೀನ್ಸ್ ರಸ್ತೆಯಲ್ಲಿ, ಬಾಳೇಕುಂದ್ರಿ ವೃತ್ತದಿಂದ ಕ್ವೀನ್ಸ್ ವೃತ್ತದ ವರೆಗೆ ರಸ್ತೆಯ ಎರಡೂ ಕಡೆ
  • ಎಂ.ಜಿ ರಸ್ತೆಯಲ್ಲಿ ಅನಿಲ್ ಕುಂಬ್ಳೆ ವೃತ್ತದಿಂದ ಕ್ವೀನ್ಸ್ ವೃತ್ತದ ವರೆಗೆ ರಸ್ತೆಯ ಎರಡೂ ಕಡೆ
  • ಲಿಂಕ್ ರಸ್ತೆಯಲ್ಲಿ ಎಂ.ಜಿ ರಸ್ತೆಯಿಂದ ಕಬ್ಬನ್ ರಸ್ತೆ ವರೆಗೆ
  • ರಾಜಭವನ ರಸ್ತೆ, ಟಿ.ಚೌಡಯ್ಯ ರಸ್ತೆ ಮತ್ತು ರೇಸ್ ಕೋರ್ಸ್ ರಸ್ತೆಗಳಲ್ಲಿ
  • ಸೆಂಟ್ರಲ್ ಸ್ಟ್ರಿಟ್ ರಸ್ತೆಯ ಎರಡೂ ಕಡೆ
  • ಕಬ್ಬನ್ ರಸ್ತೆಯಲ್ಲಿ, ಸಿ.ಟಿ.ಓ. ವೃತ್ತದಿಂದ ಡಿಕೆನ್ಸ್ನ್ ರಸ್ತೆ ಜಂಕ್ಷನ್ ವರೆಗೆ ರಸ್ತೆಯ ಎರಡೂ ಕಡೆ
  • ಸೆಂಟ್ ಮಾರ್ಕ್ಸ್ ರಸ್ತೆಯಲ್ಲಿ, ಕ್ಯಾಶ್ ಫಾರ್ಮಸಿ ಜಂಕ್ಷನ್ ನಿಂದ ಅನಿಲ್ ಕುಂಬ್ಳೆ ವೃತ್ತದ ವರೆಗೆ
  • ಮ್ಯೂಸಿಯಂ ರಸ್ತೆಯಲ್ಲಿ, ಎಂ.ಜಿ ರಸ್ತೆಯಿಂದ ಸೆಂಟ್ ಮಾರ್ಕ್ಸ್ ರಸ್ತೆ ವರೆಗೆ ಹಾಗೂ ಆಶಿರ್ವಾದಂ ವೃತ್ತದ ವರೆಗೆ
  • ಕಸ್ತೂರಬಾ ರಸ್ತೆಯಲ್ಲಿ, ಕ್ವೀನ್ಸ್ ವೃತ್ತದಿಂದ ಹಡ್ಸನ್ ವೃತ್ತದ ವರೆಗೆ
  • ಮಲ್ಯ ಆಸ್ಪತ್ರೆ ರಸ್ತೆಯಲ್ಲಿ ಸಿದ್ದಲಿಂಗಯ್ಯ ವೃತ್ತದಿಂದ ಆರ್.ಆರ್.ಎಂ.ಆರ್ ವೃತ್ತದವರೆಗೆ. 10.ಕಬ್ಬನ್‌ಪಾರ್ಕ್ ಒಳಭಾಗದ ಕಿಂಗ್ ರಸ್ತೆ, ಪ್ರೆಸ್ ಕ್ಲಬ್ ಮುಂಭಾಗ, ಬಾಲಭವನ ಮುಂಭಾಗ
  • ಲ್ಯಾವೆಲ್ಲಿ ರಸ್ತೆಯಲ್ಲಿ, ಕ್ವೀನ್ಸ್ ವೃತ್ತದಿಂದ ವಿಠಲ್ ಮಲ್ಯ ರಸ್ತೆ ಜಂಕ್ಷನ್‌ವರೆಗೆ
  • ವಿಠಲ್ ಮಲ್ಯ ರಸ್ತೆ, ಸಿದ್ದಲಿಂಗಯ್ಯ ವೃತ್ತದಿಂದ ಸೆಂಟ್ ಮಾರ್ಕ್ಸ್ ರಸ್ತೆಯ ಬಿಷಪ್‌ಕಾಟನ್ ಬಾಲಕೀಯರ ಶಾಲೆಯವರೆಗೆ

ಪಾರ್ಕಿಂಗ್ ವ್ಯವಸ್ಥೆ ಎಲ್ಲೆಲ್ಲಿ?

  • ಪಂದ್ಯ ವೀಕ್ಷಣೆ ಮಾಡಲು ಬರೋರಿಗಡ ಸೆಂಟ್ ಜೋಸೆಫ್ ಹೈಸ್ಕೂಲ್ ಗ್ರೌಂಡ್, ಜೊತೆಗೆ ಯು.ಬಿ.ಸಿಟಿ ನಿಲುಗಡೆ ಸ್ಥಳದಲ್ಲಿ ವಾಹನಗಳ ನಿಲುಗಡೆಗೆ ವ್ಯವಸ್ಥೆ
  • ಶಿವಾಜಿನಗರ ಬಸ್ ನಿಲ್ದಾಣದ 1ನೇ ಮಹಡಿಯಲ್ಲಿ ಪಾರ್ಕಿಂಗ್
  • ಕೆ.ಎಸ್.ಸಿ.ಎ. ಸದಸ್ಯರ ವಾಹನಗಳನ್ನು ಸೆಂಟ್ ಜೋಸೆಫ್ ಬಾಲಕರ ಶಾಲೆ ಮೈದಾನ.

(ವರದಿ: ಮಂಜುನಾಥ್ ನ್ಯೂಸ್ 18 ಕನ್ನಡ ಬೆಂಗಳೂರು)