Last Updated:
ಭಗವತಿ ದೇವಿಯು ಪ್ರಪ್ರಥಮವಾಗಿ ಕೇರಳದ ಕೊಡಂಗಲೂರು ಕ್ಷೇತ್ರದಲ್ಲಿ ನೆಲೆಯಾಗುತ್ತಾಳೆ. ಅಲ್ಲಿಂದ ಭಗವತಿಯ ನೌಕೆಯ ಮೂಲಕ ಪ್ರಕೃತಿ ರಮಣೀಯವಾದ ಕಡಲ ಕಿನಾರೆಯಿರುವ ಸಸಿಹಿತ್ಲು ಕ್ಷೇತ್ರಕ್ಕೆ ಬಂದು ನೆಲೆಯಾಗುತ್ತಾಳೆ ಎನ್ನುವುದು ಕ್ಷೇತ್ರದ ಇತಿಹಾಸ.
ದಕ್ಷಿಣಕನ್ನಡ ಜಿಲ್ಲೆಯ(Dakshina Kannada District) ಅತ್ಯಂತ ಪ್ರಸಿದ್ಧ ದೇವಿ ಕ್ಷೇತ್ರಗಳಲ್ಲಿ ಹಳೆಯಂಗಡಿಯ ಕಡಲ ತಡಿಯಲ್ಲಿರುವ ಸಸಿಹಿತ್ಲು ಭಗವತೀ ಕ್ಷೇತ್ರವೂ ಒಂದು. ಊರ ಮತ್ತು ಪರವೂರಿನ ಲಕ್ಷಾಂತರ ಸಂಖ್ಯೆಯ ಭಕ್ತಾದಿಗಳನ್ನು ಹೊಂದಿರುವ ಈ ಕ್ಷೇತ್ರ ನವದುರ್ಗಾ ಕ್ಷೇತ್ರಗಳಲ್ಲಿ(Navadurga Kshetra) ಒಂದು. ಭಕ್ತಾದಿಗಳಿಂದ(Devotees) ಬೇಕಾದ ಎಲ್ಲಾ ರೀತಿಯ ಧನ-ಧಾನ್ಯಗಳು ಈ ಕ್ಷೇತ್ರಕ್ಕೆ ಬಂದರೂ ಈ ಕ್ಷೇತ್ರ ಇಂದಿಗೂ ಭಗವತಿ ದೇವಿ ಇಲ್ಲಿ ನೆಲೆಯಾದ ದಿನಗಳನ್ನೇ ಮೆಲುಕು ಹಾಕುವಂತೆ ಇದೆ.
ಸಮುದ್ರದಿಂದ ಬಂದು ನೆಲೆಸಿದ ದೇವಿ!
ಹೌದು, ಕೋಟ್ಯಾಂತರ ರೂಪಾಯಿಗಳನ್ನು ಖರ್ಚು ಮಾಡಿ ಈ ದೇವಸ್ಥಾನಕ್ಕೆ ಹಲವು ಬಾರಿ ಜೀರ್ಣೋದ್ಧಾರಗಳನ್ನು ಮಾಡಲಾಗಿದ್ದರೂ, ಈ ದೇವಸ್ಥಾನಕ್ಕೆ ಹಾಸುಗಲ್ಲನ್ನು ಮಾತ್ರ ಹಾಕಲಾಗಿಲ್ಲ. ಈ ದೇವಸ್ಥಾನದ ಒಳಗೆ ಎಲ್ಲಾ ಕಡೆಯೂ ಮರಳೇ ತುಂಬಿದ್ದು, ಭಗವತಿ ದೇವಿ ಈ ಕ್ಷೇತ್ರಕ್ಕೆ ಸಮುದ್ರದ ಮೂಲಕ ಬಂದು ನೆಲೆಯಾದ ಹಿನ್ನೆಲೆಯಲ್ಲಿ ದೇವಿ ಮೆಟ್ಟಿದ ಮರಳು ಎನ್ನುವ ನಂಬಿಕೆಯಿಂದ ಈ ಕ್ಷೇತ್ರದಲ್ಲಿ ನೆಲಹಾಸನ್ನು ಈವರೆಗೂ ಹಾಕಿಲ್ಲ.
ಇದನ್ನೂ ಓದಿ: Tsuchinshan-ATLAS: ಶತಮಾನದ ಧೂಮಕೇತುವನ್ನ ಕಣ್ತುಂಬಿಕೊಂಡ ಜನತೆ!
ಮೊದಲು ಕೇರಳದಲ್ಲಿ ನೆಲೆಸಿದ್ದ ದೇವಿ
ಜಿಲ್ಲೆಯ ಅತ್ಯಂತ ಪುರಾತನ ಕ್ಷೇತ್ರಗಳಲ್ಲಿ ಒಂದಾದ ಸಸಿಹಿತ್ಲು ಭಗವತೀ ಕ್ಷೇತ್ರಕ್ಕೆ ಸಾವಿರ ವರ್ಷಕ್ಕೂ ಮಿಕ್ಕಿದ ಇತಿಹಾಸವಿದೆ. ಅಸುರ ದಾರುಕಾಸುರನನ್ನು ಸಂಹರಿಸಿದ ಬಳಿಕ ಶಿವ-ಪಾರ್ವತಿಯರ ಆಜ್ಞೆಯಂತೆ ಭೂಲೋಕಕ್ಕೆ ಬಂದ ಸಪ್ತ ಮಾತೃಕೆಯರಲ್ಲಿ ಪ್ರಮುಖಳಾದ ಭಗವತಿ ದೇವಿಯು ಪ್ರಪ್ರಥಮವಾಗಿ ಕೇರಳದ ಕೊಡಂಗಲೂರು ಕ್ಷೇತ್ರದಲ್ಲಿ ನೆಲೆಯಾಗುತ್ತಾಳೆ. ಅಲ್ಲಿಂದ ಭಗವತಿಯ ನೌಕೆಯ ಮೂಲಕ ಪ್ರಕೃತಿ ರಮಣೀಯವಾದ ಕಡಲ ಕಿನಾರೆಯಿರುವ ಸಸಿಹಿತ್ಲು ಕ್ಷೇತ್ರಕ್ಕೆ ಬಂದು ನೆಲೆಯಾಗುತ್ತಾಳೆ ಎನ್ನುವುದು ಕ್ಷೇತ್ರದ ಇತಿಹಾಸ.
2014ರಲ್ಲಿ ನಡೆದಿದ್ದ ಬ್ರಹ್ಮಕಲಶೋತ್ಸವ!
ಕಡಲ ತಡಿಯಲ್ಲೇ ಇರುವ ಸಸಿಹಿತ್ಲು ಕ್ಷೇತ್ರ ಅತ್ಯಂತ ಕಾರಣಿಕದ ಕ್ಷೇತ್ರವಾಗಿಯೂ ಗುರುತಿಸಿಕೊಂಡಿದೆ. ನವರಾತ್ರಿಯ ಒಂಬತ್ತು ದಿನಗಳು ಇಲ್ಲಿ ದೇವಿಗೆ ವಿಶೇಷ ಪೂಜೆಗಳು ನೆರವೇರುತ್ತವೆ. ಲಕ್ಷಾಂತರ ಸಂಖ್ಯೆಯ ಭಕ್ತಾಧಿಗಳು ಇಲ್ಲಿ ದೇವಿಯ ದರ್ಶನವನ್ನು ಪಡೆಯುತ್ತಾರೆ. 2014 ರಂದು ಈ ಕ್ಷೇತ್ರದ ಬ್ರಹ್ಮಕಲಶೋತ್ಸವ ನಡೆದಿತ್ತು. ಆ ಸಂದರ್ಭದಲ್ಲೂ ನೆಲಹಾಸುಗೆಯನ್ನು ಹಾಗೆಯೇ ಬಿಡಲಾಗಿತ್ತು. ಕ್ಷೇತ್ರಕ್ಕೆ ಬರುವ ಮಕ್ಕಳು ಈ ಮರಳಿನಲ್ಲಿ ಆಟವಾಡಿ ಆನಂದಿಸುತ್ತಾರೆ.
Dakshina Kannada,Karnataka
October 23, 2024 12:25 PM IST