Last Updated:
6 ವರ್ಷದ ಸುರಾಗ್ ಬಾಲಕ ಬೈಕ್ ರೇಸಿಂಗ್ ನಲ್ಲಿ ತನ್ನ ಕೌಶಲ್ಯದಿಂದ ಎಲ್ಲರ ಗಮನ ಸೆಳೆದಿದ್ದಾನೆ.
ಮಂಗಳೂರು: ಒಂದನೇ ತರಗತಿ (1st Standard) ಅಂದ್ರೆ ಆ ಮಕ್ಕಳು (Children) ಇನ್ನು ಓದಲು ಶುರು ಮಾಡ್ತಾ ಇರ್ತಾರೆ. ಆಗ ಕನಸುಗಳು ಅರಳಲು ಶುರುವಾಗ್ತವೆ. ಆದ್ರೆ ಮಂಗಳೂರಿನ (Mangaluru) ಒಂದು ಅಸಾಧಾರಣ ಕಥೆಯ ತಾರೆಯಾಗಿ ಆರು ವರ್ಷದ (6 Year) ಬಾಲಕನೋರ್ವ ಇಂದು ಮಿಂಚುತ್ತಿದ್ದಾನೆ. ಮಂಗಳೂರಿನ ಮರೋಳಿಯ ಲಾಲ್ ಬಹದ್ದೂರ್ ಶಾಸ್ತ್ರಿ ಲೇ ಔಟ್ ನ ಸುದರ್ಶನ್. ಬಿ. ರೈ ಮತ್ತು ಸುಶ್ಮಿತಾ.ಎಸ್.ರೈ ದಂಪತಿ ಪುತ್ರನಾದ ಸುರಾಗ್ , ತನ್ನ ಚಿಕ್ಕ ವಯಸ್ಸಿನಲ್ಲೇ ಮೋಟೋ ಕ್ರಾಸ್ ಡರ್ಟ್ ಬೈಕ್ ರೇಸಿಂಗ್ ನಲ್ಲಿ (Bike Racing) ತನ್ನ ಕೌಶಲ್ಯ ಮತ್ತು ಧೈರ್ಯದಿಂದ ಎಲ್ಲರ ಗಮನಸೆಳೆದಿದ್ದಾನೆ.
ಹೌದು ಸುರಾಗ್ ನ ಡರ್ಟ್ ಬೈಕ್ ರೇಸಿಂಗ್ ಪಯಣವು ಆಕಸ್ಮಿಕವಾಗಿ ಆರಂಭವಾಗಿತ್ತು. ತಂದೆಯೊಂದಿಗೆ ಮೊಬೈಲ್ ರೀಲ್ಸ್ ನೋಡುತ್ತಾ ಮೋಟೋ ಕ್ರಾಸ್ ರೇಸಿಂಗ್ ನಲ್ಲಿ ಆಸಕ್ತಿ ಬೆಳೆಸಿಕೊಂಡ ಈ ಬಾಲಕ, ತನ್ನ ಆರನೇ ವರ್ಷದ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ಪಡೆದ ಕಿಡ್ ಬೈಕ್ ನೊಂದಿಗೆ ತನ್ನ ಕನಸಿನ ಮೊದಲ ಹೆಜ್ಜೆ ಇಟ್ಟಿದ್ದ. ಕೇವಲ ಎರಡು ಮೂರು ದಿನಗಳಲ್ಲಿ ಬೈಕ್ ಸವಾರಿಯ ಕೌಶಲ್ಯವನ್ನು ಕರಗತ ಮಾಡಿಕೊಂಡ ಸುರಾಗ್, ತನ್ನ ಛಲದಿಂದ ಎಲ್ಲರನ್ನೂ ಚಕಿತಗೊಳಿಸಿದ್ದ.
ತಂದೆಯ ಬೆಂಬಲದೊಂದಿಗೆ ಮಂಗಳೂರಿನ ಮೋಟೋ ರೇಸಿಂಗ್ ತಂಡದ ರೇಸರ್ ಕಿರಣ್ ಪೂಜಾರಿಯವರಿಂದ ಕೇವಲ 20 ದಿನಗಳ ತರಬೇತಿಯನ್ನು ಪಡೆದ ಸುರಾಗ್ ಬೆಳ್ತಂಗಡಿಯ ಮಡಂತ್ಯಾರು ಬಳ್ಳಮಂಜದಲ್ಲಿ ಮೊಸರು ಕುಡಿಗೆ ಪ್ರಯುಕ್ತ ನಡೆದ ಮೋಟೋ ಕ್ರಾಸ್ ಡರ್ಟ್ ಬೈಕ್ ರೇಸ್ ನಲ್ಲಿ ಭಾಗವಹಿಸಿ ಗಮನಸೆಳೆದಿದ್ದಾನೆ. 8.5 ಲಕ್ಷ ಮೌಲ್ಯದ KTM 508X ಬೈಕ್ ನ್ನ ಸುರಾಗ್ ಈ ರೇಸ್ ನಲ್ಲಿ ಬಳಸಿಕೊಂಡಿದ್ದ. ಮಡಂತ್ಯಾರಿನ ರೇಸ್ ಟ್ರ್ಯಾಕ್ ದೊಡ್ಡವರಿಗಾಗಿ ರಚಿತವಾದ ಕಾರಣ ಕಠಿಣ ಟ್ರ್ಯಾಕ್ ಆಗಿತ್ತು. ಜಡಿಮಳೆ, ಕೆಸರು ಮತ್ತು ತಿರುವುಗಳಿಂದ ಕೂಡಿದ ಈ ಟ್ರ್ಯಾಕ್ ನಲ್ಲಿ ಸುರಾಗ್ ಎರೆಉ-ಮೂರು ಬಾರಿ ಎಡವಿದರೂ, ಛಲಬಿಡದೆ ರೇಸ್ ಅನ್ನ ಪೂರ್ಣಗೊಳಿಸಿದ್ದಾನೆ.
Mangalore,Dakshina Kannada,Karnataka
September 03, 2025 6:01 PM IST