Last Updated:
2008ರ ಐಪಿಎಲ್‌ನ ಮೊದಲ ಆವೃತ್ತಿಯ ಆರಂಭಿಕ ಪಂದ್ಯದಲ್ಲಿ KKR ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧ ಆಡಿತು. ಮೆಕಲಮ್ ಕೇವಲ 73 ಎಸೆತಗಳಲ್ಲಿ 158* ರನ್‌ಗಳನ್ನು ಗಳಿಸಿದರು, ಇದರಲ್ಲಿ 10 ಬೌಂಡರಿಗಳು ಮತ್ತು 13 ಸಿಕ್ಸರ್‌ಗಳು ಸೇರಿದ್ದವು.
ನ್ಯೂಜಿಲೆಂಡ್‌ನ ಮಾಜಿ ನಾಯಕ ಮತ್ತು ಪ್ರಸ್ತುತ ಇಂಗ್ಲೆಂಡ್‌ನ ಮುಖ್ಯ ಕೋಚ್ ಬ್ರೆಂಡನ್ ಮೆಕಲಮ್ (Brendon McCullum), 2008ರ ಐಪಿಎಲ್‌ನ ಮೊದಲ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ (KKR) ತಂಡಕ್ಕಾಗಿ ಆಡಿದ 158 ರನ್‌ಗಳ ಐತಿಹಾಸಿಕ ಇನ್ನಿಂಗ್ಸ್‌ನ ಬಗ್ಗೆ ಮಾತನಾಡಿದ್ದಾರೆ. ಈ ಇನ್ನಿಂಗ್ಸ್ ಅವರ ಜೀವನವನ್ನೇ ಬದಲಾಯಿಸಿತು ಎಂದು ಅವರು ಹೇಳಿದ್ದಾರೆ. ಆದರೆ ಆ ಪಂದ್ಯಕ್ಕೆ ಮುಂಚೆ ಅವರು ತೀವ್ರ ಕಳಪೆ ಫಾರ್ಮ್‌ನಲ್ಲಿದ್ದರು. ಆದರೆ ಆ ಒಂದು ಇನ್ನಿಂಗ್ಸ್ ತಮ್ಮ ಜೀವನವನ್ನೇ ಬದಲಾಯಿಸಿತು ಎಂದಿದ್ದಾರೆ.
2008ರ ಐಪಿಎಲ್‌ನ ಮೊದಲ ಆವೃತ್ತಿಯ ಆರಂಭಿಕ ಪಂದ್ಯದಲ್ಲಿ KKR ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧ ಆಡಿತು. ಮೆಕಲಮ್ ಕೇವಲ 73 ಎಸೆತಗಳಲ್ಲಿ 158* ರನ್‌ಗಳನ್ನು ಗಳಿಸಿದರು, ಇದರಲ್ಲಿ 10 ಬೌಂಡರಿಗಳು ಮತ್ತು 13 ಸಿಕ್ಸರ್‌ಗಳು ಸೇರಿದ್ದವು. ಈ ವಿಧ್ವಂಸಕ ಇನ್ನಿಂಗ್ಸ್ ಐಪಿಎಲ್‌ನ ಮೊದಲ ದಿನವೇ ಕ್ರಿಕೆಟ್ ಲೋಕದ ಗಮನ ಸೆಳೆಯಿತು. ಈ ಇನ್ನಿಂಗ್ಸ್ ಮೆಕಲಮ್‌ರನ್ನು ರಾತ್ರೋ ರಾತ್ರಿ ಸ್ಟಾರ್ ಮಾಡಿತ್ತು. ಮೆಕಲಮ್ ಮಾತ್ರವಲ್ಲ, ಐಪಿಎಲ್ ಕೂಡ ಮೊದಲ ದಿನವೇ ಕ್ರಿಕೆಟ್ ಜಗತ್ತಿಗೆ ಪರಿಚಿತವಾಗಿತ್ತು.
‘ಫಾರ್ ದಿ ಲವ್ ಆಫ್ ಕ್ರಿಕೆಟ್’ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಮೆಕಲಮ್, ಪಂದ್ಯಕ್ಕೆ ಮುಂಚೆ ತಾನು ಕಳಪೆ ಫಾರ್ಮ್‌ನಲ್ಲಿದ್ದೆ‘ ಎಂದು ಹೇಳಿದ್ದಾರೆ. ತಮ್ಮ ಹಿಂದಿನ ಐದು T20I ಇನ್ನಿಂಗ್ಸ್‌ಗಳಲ್ಲಿ ಕೇವಲ 26, 9, 13, 9 ಮತ್ತು 5 ರನ್ ಸಿಡಿಸಿದ್ದರು. ” ನಾನು ಯಾವ ಫಾರ್ಮ್‌ನಲ್ಲಿರಲಿಲ್ಲ. ಪಂದ್ಯಕ್ಕೆ ಮುಂಚೆ ನನಗೆ ರನ್ ಎಲ್ಲಿಂದ ಬರುತ್ತದೆ ಎಂದು ಗೊತ್ತಿರಲಿಲ್ಲ. ಐಪಿಎಲ್‌ನ ಗ್ಲಾಮರ್, ಒತ್ತಡ, ದೊಡ್ಡ ಕ್ರೌಡ್‌ನಿಂದ ನಾನು ತುಂಬಾ ಗಾಬರಿಯಾಗಿದ್ದೆ. ಮೊದಲ 8 ಎಸೆತಗಳಲ್ಲಿ ಒಂದು ರನ್ ಕೂಡ ಮಾಡಿರಲಿಲ್ಲ. ಬ್ಯಾಟ್‌ನ ಯಾವ ರೀತಿ ಹಿಡಿಯಬೇಕು ಎಂದೇ ಗೊತ್ತಿರಲಿಲ್ಲ” ಎಂದು ಅವರು ತಮ್ಮ ಆರಂಭಿಕ ಒತ್ತಡದ ಬಗ್ಗೆ ಹಂಚಿಕೊಂಡಿದ್ದಾರೆ.
“ನಾನು ಇದನ್ನು ಲಘುವಾಗಿ ಹೇಳುತ್ತಿಲ್ಲ. ಈ ಇನ್ನಿಂಗ್ಸ್ ನನ್ನ ಜೀವನವನ್ನು ಬದಲಾಯಿಸಿತು” ಎಂದು ಮೆಕಲಮ್ ಹೇಳಿದ್ದಾರೆ. ನ್ಯೂಜಿಲೆಂಡ್‌ನಿಂದ ಬಂದ ಅವರಿಗೆ, ಕ್ರಿಕೆಟ್ ರಗ್ಬಿಗಿಂತ ಎರಡನೇ ಸ್ಥಾನದಲ್ಲಿತ್ತು. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇನ್ನೂ ಸ್ಥಿರವಾಗಿರದ ಸಮಯದಲ್ಲಿ ಐಪಿಎಲ್‌ಗೆ ಆಯ್ಕೆಯಾದರು. ಡ್ರೆಸ್ಸಿಂಗ್ ರೂಂನಲ್ಲಿ ರಿಕಿ ಪಾಂಟಿಂಗ್, ಸೌರವ್ ಗಂಗೂಲಿಯಂತಹ ದಿಗ್ಗಜರ ಜೊತೆ ಇದ್ದಾಗ, “ನಾನು ಇಲ್ಲಿ ಹೇಗೆ ಓಪನಿಂಗ್ ಸಿಗುತ್ತಾ?” ಎಂದು ಅನುಮಾನ ಇತ್ತು. ಆದರೆ ನನಗೆ ಆ ಇನ್ನಿಂಗ್ಸ್ ಅವರ ವೃತ್ತಿಜೀವನಕ್ಕೆ ದೊಡ್ಡ ತಿರುವು ನೀಡಿತು.
2008ರ ಐಪಿಎಲ್ ಆವೃತ್ತಿಯಲ್ಲಿ ಮೆಕಲಮ್ 4 ಪಂದ್ಯಗಳಲ್ಲಿ 188 ರನ್‌ಗಳನ್ನು ಗಳಿಸಿದ್ದರು, ಅವರು 62.66ರ ಸರಾಸರಿ, 204.54ರ ಸ್ಟ್ರೈಕ್ ರೇಟ್ನಲ್ಲಿ ರನ್ಗಳಿಸಿದರು. ಒಟ್ಟಾರೆ ಐಪಿಎಲ್ ವೃತ್ತಿಜೀವನದಲ್ಲಿ, KKR, RCB, ಗುಜರಾತ್ ಲಯನ್ಸ್, ಕೊಚ್ಚಿ ಟಸ್ಕರ್ಸ್ ಕೇರಳ, ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK) ಹಾಗೂ ಆರ್ಸಿಬಿ ತಂಡಗಳಿಗೆ ಆಡಿ, 109 ಪಂದ್ಯಗಳಲ್ಲಿ 2,880 ರನ್‌ಗಳನ್ನು ಮಾಡಿದ್ದಾರೆ. ಇದರಲ್ಲಿ 2 ಶತಕಗಳು ಮತ್ತು 13 ಅರ್ಧಶತಕಗಳು ಸೇರಿವೆ, ಸರಾಸರಿ 27.69 ಮತ್ತು ಸ್ಟ್ರೈಕ್ ರೇಟ್ 131ಕ್ಕಿಂತ ಹೆಚ್ಚಿದೆ. 2012ರಲ್ಲಿ KKR ಜೊತೆ ಒಂದು ಐಪಿಎಲ್ ಟ್ರೋಫಿಯನ್ನು ಗೆದ್ದಿದ್ದಾರೆ.
ಮೆಕಲಮ್‌ರ 158* ರನ್‌ಗಳ ಇನ್ನಿಂಗ್ಸ್ ಐಪಿಎಲ್‌ನ ಮೊದಲ ಆವೃತ್ತಿಯ ಯಶಸ್ಸಿಗೆ ದೊಡ್ಡ ಕಾರಣವಾಯಿತು. ಈ ಇನ್ನಿಂಗ್ಸ್ ಐಪಿಎಲ್‌ನ ಗ್ಲಾಮರ್, ರೋಮಾಂಚಕ ಕ್ರಿಕೆಟ್ ಮತ್ತು ಜಾಗತಿಕ ಗಮನವನ್ನು ತಂದಿತು. ಅವರ ಈ ಧಾವಂತದ ಆಟವು ಐಪಿಎಲ್‌ನ್ನು ವಿಶ್ವದ ಅತ್ಯಂತ ಜನಪ್ರಿಯ T20 ಲೀಗ್ ಆಗಿ ಸ್ಥಾಪಿಸಲು ಸಹಾಯ ಮಾಡಿತು.
September 13, 2025 4:59 PM IST