Last Updated:
ಮಂಗಳೂರು ದಸರಾ ಸಮಯದಲ್ಲಿ ಬುರುಡೆ ಪ್ರಕರಣವನ್ನು ಆಧರಿಸಿದ ವೇಷ ತಂಡಗಳು ಜನರ ಆಕರ್ಷಣೆಯ ಕೇಂದ್ರವಾಗಿವೆ, ವಿಡಿಯೋಗಳು ವೈರಲ್ ಆಗುತ್ತಿವೆ.
ದಕ್ಷಿಣ ಕನ್ನಡ: ಮೈಕ್ ಹಿಡಿದು ತುಳುವಿನಲ್ಲಿ (Tulu) ವರದಿ ನೀಡುತ್ತಿರುವ ವರದಿಗಾರ, ಸಲಾಕೆ ಹಿಡಿದು ನೆಲ ಅಗೆಯುತ್ತಿರುವ ಕೂಲಿಕಾರ (Wage Worker) ಕೊನೆಗೆ ಕೈಯಲ್ಲಿ ಬುರುಡೆ (Scull) ಹಿಡಿದು ಏನೋ ಸೂಚಿಸುತ್ತಿರುವ ಮುಸುಕುಧಾರಿ ವ್ಯಕ್ತಿ. ಇದು ಮಂಗಳೂರಿನಲ್ಲಿ (Mangaluru) ಕಂಡು ಬಂದ ದೃಶ್ಯ. ಇದೇನಪ್ಪಾ ಮತ್ತೊಮ್ಮೆ ಎಸ್. ಐ. ಟಿ. ನೆಲ ಅಗಿಯೋಕೆ ಶುರು ಮಾಡ್ತಾ? ಎಂದು ಯೋಚಿಸುತ್ತಿದ್ದೀರಾ? ಅಸಲಿ ಮಾಹಿತಿ ಇಲ್ಲಿದೆ ನೋಡಿ.
ದಸರಾದ ಒಂಬತ್ತು ದಿನಗಳಲ್ಲಿ ಜನರನ್ನು ಹೆಚ್ಚು ಆಕರ್ಷಿಸುವ ಮತ್ತು ಮನೋರಂಜನೆ ನೀಡುವುದು ವೇಷ ತಂಡಗಳು. ಆಯಾಯ ವರ್ಷದಲ್ಲಿ ನಡೆಯುವ ಪ್ರಮುಖ ವಿದ್ಯಮಾನಗಳು ದಸರಾದ ಒಂಬತ್ತು ದಿನಗಳು ವೇಷದ ಮೂಲಕ ಗಮನಸೆಳೆಯುತ್ತವೆ. ಇಂತಹುದೇ ಒಂದು ವೇಷ ಈ ಬಾರಿ ಕರಾವಳಿಯಾದ್ಯಂತ ಜನರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಹೌದು, ದಕ್ಷಿಣಕನ್ನಡ ಜಿಲ್ಲೆಯ ಧರ್ಮಸ್ಥಳದ ಬುರುಡೆ ಪ್ರಕರಣವನ್ನು ಮರುಸೃಷ್ಟಿಗೊಳಿಸುವ ಪ್ರಯತ್ನ ಈ ಬಾರಿ ವೇಷದ ಮೂಲಕ ನಡೆದಿದೆ. ಧರ್ಮಸ್ಥಳ ಪರಿಸರದ ಕಾಡುಗಳಲ್ಲಿ ಬುರುಡೆಗಾಗಿ ಉತ್ಖನನ ಮಾಡುವುದನ್ನು ಇಡೀ ಜಗತ್ತು ನೋಡಿದೆ. ಮತ್ತು ಅದೇ ವಿಚಾರ ಎಲ್ಲೆಡೆ ಚರ್ಚೆಗೂ ಕಾರಣವಾಗಿತ್ತು.
ಮಂಗಳೂರಿನೆಲ್ಲೆಡೆ ಓಡಾಡುತ್ತಿದೆ ಬುರುಡೆ ಗ್ಯಾಂಗ್!
ಇದೀಗ ಈ ವಿದ್ಯಮಾನದ ವೇಷವನ್ನು ತಂಡವೊಂದು ಹೋಲುವ ಮೂಲಕ ಗಮನಸೆಳೆದಿದೆ. ಎಲ್ಲೆಡೆ ಈ ವೇಷದ ವಿಡಿಯೋ ವೈರಲ್ ಆಗುತ್ತಿದ್ದು, ವಿಭಿನ್ನ ರೀತಿಯ ಚರ್ಚೆಗಳೂ ನಡೆಯಲು ಆರಂಭಿಸಿವೆ. ದಸರಾದ ಒಂಬತ್ತು ದಿನಗಳ ಕಾಲ ಈ ವೇಷ ಹಾಕಿಯೇ ಜೀವನ ಸಾಗಿಸುವ ಹಲವು ಮಂದಿ ಇದ್ದು, ಪ್ರಸ್ತುತ ಚರ್ಚೆಯ ವಿಷಯವನ್ನೇ ತಮ್ಮ ವೇಷದ ಮೂಲಕ ಗಮನಸೆಳೆಯುವ ಮೂಲಕ ಜೀವನ ನಿರ್ವಹಣೆಗಾಗಿ ಸಾಕಾಗುವಷ್ಟು ಹಣವನ್ನೂ ಸಂಪಾದಿಸುತ್ತಾರೆ.
Dakshina Kannada,Karnataka
October 03, 2025 3:31 PM IST