Chahal-Dhanashree: ಕೋಟಿ ಕೋಟಿ ಜೀವನಾಂಶ ಕೊಡಲು ಒಪ್ಪಿದ್ರಾ ಚಹಾಲ್​? ವಿಚ್ಛೇದನಕ್ಕೆ ಧನಶ್ರೀ ಡಿಮ್ಯಾಂಡ್ ಮಾಡಿದ ಹಣ ಎಷ್ಟು? | bollywood yuzvendra chahal agrees to alimony to dhanashree verma

Chahal-Dhanashree: ಕೋಟಿ ಕೋಟಿ ಜೀವನಾಂಶ ಕೊಡಲು ಒಪ್ಪಿದ್ರಾ ಚಹಾಲ್​? ವಿಚ್ಛೇದನಕ್ಕೆ ಧನಶ್ರೀ ಡಿಮ್ಯಾಂಡ್ ಮಾಡಿದ ಹಣ ಎಷ್ಟು? | bollywood yuzvendra chahal agrees to alimony to dhanashree verma

ಇಂದೇ ಚಹಾಲ್​ ಹಾಗೂ ಧನಶ್ರೀ ಡಿವೋರ್ಸ್ ಭವಿಷ್ಯ!

ಮಾರ್ಚ್​ 20ರಂದು ಚಹಾಲ್​ ಹಾಗೂ ಧನಶ್ರೀ ವಿಚ್ಛೇದನದ ಅರ್ಜಿ ವಿಚಾರಣೆ ನಡೆಸಿ ನಿರ್ಧಾರ ತಿಳಿಸುವಂತೆ ಬಾಂಬೆ ಹೈಕೋರ್ಟ್, ಕೌಟುಂಬಿಕ ನ್ಯಾಯಾಲಯಕ್ಕೆ ಆದೇಶ ನೀಡಿದೆ.

ಎರಡೂವರೆ ವರ್ಷಗಳಿಗೂ ಹೆಚ್ಚು ಕಾಲ ಪ್ರತ್ಯೇಕವಾಗಿ ವಾಸಿಸುತ್ತಿರುವ ಯುಜ್ವೇಂದ್ರ ಚಾಹಲ್ ಮತ್ತು ಧನಶ್ರೀ ವರ್ಮಾ, ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 13B ಪ್ರಕಾರ 6 ತಿಂಗಳ ಕೂಲಿಂಗ್-ಆಫ್ ಅವಧಿಯಲ್ಲಿ ತಮ್ಮ ದಾಂಪತ್ಯವನ್ನು ಕಾಪಾಡಿಕೊಳ್ಳುವ ಸಾಧ್ಯತೆಗಳನ್ನು ಅನುಮತಿಸದೆ ವಿಚ್ಛೇದನ ಪಡೆಯಲು ಅವಕಾಶ ನೀಡಬೇಕೆಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ರು.

4.75 ಕೋಟಿ ಜೀವನಾಂಶ

ಕ್ರಿಕೆಟಿಗ ಯುಜ್ವೇಂದ್ರ ಚಾಹಲ್ ನೃತ್ಯ ನಿರ್ದೇಶಕಿ ಧನಶ್ರೀ ವರ್ಮಾ ಅವರಿಗೆ ಶಾಶ್ವತ ಜೀವನಾಂಶವಾಗಿ 4.75 ಕೋಟಿ ರೂ.ಗಳನ್ನು ನೀಡಲು ಒಪ್ಪಿಕೊಂಡಿದ್ದಾರೆ ಎಂದು ಬಾರ್ & ಬೆಂಚ್ ವರದಿ ಮಾಡಿದೆ. ಇದರಲ್ಲಿ 2.37 ಕೋಟಿ ರೂ.ಗಳನ್ನು ಈಗಾಗಲೇ ಧನ್ಯಾಗೆ ನೀಡಲಾಗಿದೆಯಂತೆ.

60 ಕೋಟಿ ರೂಪಾಯಿ ಜೀವನಾಂಶಕ್ಕೆ ಬೇಡಿಕೆ!

ಯುಜ್ವೇಂದ್ರ ಚಾಹಲ್ ಮತ್ತು ಧನಶ್ರೀ ವರ್ಮಾ ತಮ್ಮ 4 ವರ್ಷಗಳ ದಾಂಪತ್ಯಕ್ಕೆ ವಿಚ್ಛೇದನದ ಮುದ್ರೆ ಹೊತ್ತಿದ್ದಾರೆ. ಇಬ್ಬರೂ ಪರಸ್ಪರ ಒಪ್ಪಿಗೆಯ ಮೂಲಕ ವಿಚ್ಛೇದನ ಪಡೆಯಲು ಒಪ್ಪಿಕೊಂಡಿದ್ದಾರೆ. ಧನಶ್ರೀ , ಚಹಾಲ್ ಅವರಿಂದ 60 ಕೋಟಿ ರೂಪಾಯಿ ಜೀವನಾಂಶ ಕೇಳಿದ್ದಾರೆ ಎಂಬ ಹಲವಾರು ವರದಿಗಳು ಹರಿದಾಡಿತ್ತು. ವರ್ಮಾ ಕುಟುಂಬದ ಸದಸ್ಯರೊಬ್ಬರು ಜೀವನಾಂಶ ವರದಿಗಳನ್ನು ತಳ್ಳಿಹಾಕಿದ್ರು. ಯಾವುದೇ ಜೀವನಾಂಶವನ್ನು ಕೇಳಿಲ್ಲ ಎಂದು ಹೇಳಿದ್ರು.

ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಭಾರತೀಯ ಕ್ರಿಕೆಟಿಗನ ಜವಾಬ್ದಾರಿಗಳನ್ನು ಗಮನದಲ್ಲಿಟ್ಟುಕೊಂಡು, ಮಾರ್ಚ್ 20 ರ ಗುರುವಾರದೊಳಗೆ ಅವರ ವಿಚ್ಛೇದನ ಅರ್ಜಿಯನ್ನು ನಿರ್ಧರಿಸುವಂತೆ ನ್ಯಾಯಮೂರ್ತಿ ಮಾಧವ್ ಜಾಮ್ದಾರ್ ಕೌಟುಂಬಿಕ ನ್ಯಾಯಾಲಯಕ್ಕೆ ಸೂಚಿಸಿದ್ದಾರೆ ಎಂದು ವರದಿ ಆಗಿದೆ.

ಡಿವೋರ್ಸ್ ರೂಮರ್ಸ್ ನಡುವೆ ಕ್ರಿಕೆಟಿಗ ಚಾಹಲ್ ಹಾಗೂ ಧನಶ್ರೀ ವರ್ಮಾ ಇಬ್ಬರಲ್ಲಿ ಯಾರು ಶ್ರೀಮಂತರು ಎನ್ನುವ ಚರ್ಚೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಧನಶ್ರೀ ಕೂಡ ಹಣಕಾಸಿನ ವಿಚಾರದಲ್ಲಿ ಸ್ಟ್ರಾಂಗ್ ಆಗಿದ್ದಾರೆ. ಯುಜ್ವೇಂದ್ರ ಚಾಹಲ್ ಸ್ಟಾರ್ ಕ್ರಿಕೆಟಿಗನಾಗಿದ್ರೆ, ಧನಶ್ರೀ ವೃತ್ತಿಯಲ್ಲಿ ದಂತ ವೈದ್ಯೆ ಹಾಗೂ ಡ್ಯಾನ್ಸ್ ಕೋರಿಯೋಗ್ರಾಫರ್ ಆಗಿದ್ದಾರೆ. ತನ್ನದೇ ಜನಪ್ರಿಯತೆಯನ್ನು ಗಳಿಸಿದ್ದಾರೆ.

24 ಕೋಟಿ ಒಡತಿ ಧನಶ್ರೀ

ನವೆಂಬರ್ 2024 ರಲ್ಲಿ ಧನಶ್ರೀ ಸಿನಿಮಾ ಪ್ರಾಜೆಕ್ಟ್ ನಲ್ಲಿ ಕೆಲಸ ಮಾಡುತ್ತಿರೋದಾಗಿ ಪೋಸ್ಟ್ ಒಂದನ್ನು ಶೇರ್ ಮಾಡಿದ್ರು. ಚಿತ್ರ ಶೂಟಿಂಗ್ ಮತ್ತು ಸ್ಕ್ರಿಪ್ಟ್ ಪ್ಯಾಡ್ ನ ಒಂದು ಲುಕ್ ಅನ್ನು ಅಭಿಮಾನಿಗಳಿಗೆ ತೋರಿಸಿದ್ರು. ಅನೇಕ ಗಾಯಕರೊಂದಿಗೆ ಮ್ಯೂಸಿಕ್ ವೀಡಿಯೊಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ವರದಿ ಪ್ರಕಾರ 28 ವರ್ಷದ ಧನಶ್ರೀ ಅವರ ಆಸ್ತಿ 24 ಕೋಟಿ ರೂ ಇದೆ ಎನ್ನಲಾಗ್ತಿದೆ.

ದುಬಾರಿ ಸ್ಪಿನ್ನರ್ ಯುಜ್ವೇಂದ್ರ ಚಹಾಲ್

ಯುಜ್ವೇಂದ್ರ ಚಹಾಲ್ ಕೂಡ ಕೋಟಿಗಟ್ಟಲೆ ಆಸ್ತಿ ಹೊಂದಿದ್ದಾರೆ. ಐಪಿಎಲ್ 2025 ರಲ್ಲಿ ಪಂಜಾಬ್ ಕಿಂಗ್ಸ್ ಅನ್ನು ಮುನ್ನಡೆಸಲಿದ್ದು, ಐಪಿಎಲ್ ನಲ್ಲಿ ಈ ವರ್ಷ 18 ಕೋಟಿ ರೂ.ಗೆ ಮಾರಾಟವಾಗಿದ್ದಾರೆ. ಕ್ರಿಕೆಟಿಗ ಚಹಲ್ ಒಟ್ಟು ಆಸ್ತಿ 45 ಕೋಟಿ ಇದೆ. ಚಾಹಲ್ಅವರು ಬ್ರಾಂಡ್ ಎಂಡಾರ್ಸ್ ಮೆಂಟ್ ಗಳ ಮೂಲಕವೂ ಕೋಟಿ ಕೋಟಿ ಹಣ ಗಳಿಸ್ತಾರೆ. ಚಾಹಲ್ ಐಪಿಎಲ್ 2025 ರಲ್ಲಿ ಅತ್ಯಂತ ದುಬಾರಿ ಸ್ಪಿನ್ನರ್ ಆಗಿದ್ದಾರೆ, ಪಂಜಾಬ್ ಕಿಂಗ್ಸ್ ತಂಡವನ್ನು ಸೇರಲು ₹ 18 ಕೋಟಿ ಪಡೆದರು.