Chahal-Dhanashree: ಬಾಂಬೆ ಕೌಟುಂಬಿಕ ನ್ಯಾಯಾಲಯದ ಅಂಗಳದಲ್ಲಿ ಚಹಾಲ್, ಧನಶ್ರೀ ವಿಚ್ಛೇದನ ಕೇಸ್! ನಾಳೆ ನಿರ್ಧಾರವಾಗಲಿದೆ ಡಿವೋರ್ಸ್ ಭವಿಷ್ಯ! | Bombay High Court orders family court to decide divorce case of Yuzvendra Chahal Dhanashree Verma tomorrow

Chahal-Dhanashree: ಬಾಂಬೆ ಕೌಟುಂಬಿಕ ನ್ಯಾಯಾಲಯದ ಅಂಗಳದಲ್ಲಿ ಚಹಾಲ್, ಧನಶ್ರೀ ವಿಚ್ಛೇದನ ಕೇಸ್! ನಾಳೆ ನಿರ್ಧಾರವಾಗಲಿದೆ ಡಿವೋರ್ಸ್ ಭವಿಷ್ಯ! | Bombay High Court orders family court to decide divorce case of Yuzvendra Chahal Dhanashree Verma tomorrow

ನಾಳೆ ನಿರ್ಧಾರವಾಗಲಿದೆ ವಿಚ್ಛೇದನ ಭವಿಷ್ಯ!

ಭಾರತೀಯ ಕ್ರಿಕೆಟಿಗ ಯುಜ್ವೇಂದ್ರ ಚಾಹಲ್ ಮತ್ತು ನಟಿ-ನೃತ್ಯ ಸಂಯೋಜಕಿ ಧನಶ್ರೀ ವರ್ಮಾ ಅವರ ವಿಚ್ಛೇದನವನ್ನು ಗುರುವಾರ ನಿರ್ಧರಿಸುವಂತೆ ಬಾಂಬೆ ಹೈಕೋರ್ಟ್ ಬುಧವಾರ ಕುಟುಂಬ ನ್ಯಾಯಾಲಯಕ್ಕೆ ಆದೇಶಿಸಿದೆ.

ವಿಚ್ಛೇದನಕ್ಕಾಗಿ ನ್ಯಾಯಾಲದ ಮೊರೆ!

ಎರಡೂವರೆ ವರ್ಷಗಳಿಗೂ ಹೆಚ್ಚು ಕಾಲ ಪ್ರತ್ಯೇಕವಾಗಿ ವಾಸಿಸುತ್ತಿರುವ ಯುಜ್ವೇಂದ್ರ ಚಾಹಲ್ ಮತ್ತು ಧನಶ್ರೀ ವರ್ಮಾ, ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 13B ಪ್ರಕಾರ 6 ತಿಂಗಳ ಕೂಲಿಂಗ್-ಆಫ್ ಅವಧಿಯಲ್ಲಿ ತಮ್ಮ ದಾಂಪತ್ಯವನ್ನು ಕಾಪಾಡಿಕೊಳ್ಳುವ ಸಾಧ್ಯತೆಗಳನ್ನು ಅನುಮತಿಸದೆ ವಿಚ್ಛೇದನ ಪಡೆಯಲು ಅವಕಾಶ ನೀಡಬೇಕೆಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ರು.

ಐಪಿಎಲ್​​ಗೂ ಮುನ್ನವೇ ಡಿವೋರ್ಸ್​ ಪಡೆಯುವ ಪ್ಲಾನ್!

ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಭಾರತೀಯ ಕ್ರಿಕೆಟಿಗನ ಜವಾಬ್ದಾರಿಗಳನ್ನು ಗಮನದಲ್ಲಿಟ್ಟುಕೊಂಡು, ಮಾರ್ಚ್ 20 ರ ಗುರುವಾರದೊಳಗೆ ಅವರ ವಿಚ್ಛೇದನ ಅರ್ಜಿಯನ್ನು ನಿರ್ಧರಿಸುವಂತೆ ನ್ಯಾಯಮೂರ್ತಿ ಮಾಧವ್ ಜಾಮ್ದಾರ್ ಕೌಟುಂಬಿಕ ನ್ಯಾಯಾಲಯಕ್ಕೆ ಸೂಚಿಸಿದ್ದಾರೆ ಎಂದು ವರದಿ ಆಗಿದೆ.

ಚಾಹಲ್ ಐಪಿಎಲ್ 2025 ರಲ್ಲಿ ಅತ್ಯಂತ ದುಬಾರಿ ಸ್ಪಿನ್ನರ್ ಆಗಿದ್ದಾರೆ, ಪಂಜಾಬ್ ಕಿಂಗ್ಸ್ ತಂಡವನ್ನು ಸೇರಲು ₹ 18 ಕೋಟಿ ಪಡೆದರು.

ಡ್ಯಾನ್ಸ್ ಕೋರಿಯೋಗ್ರಾಫರ್ ಧನಶ್ರೀ!

ಡಿವೋರ್ಸ್ ರೂಮರ್ಸ್ ನಡುವೆ ಕ್ರಿಕೆಟಿಗ ಚಾಹಲ್ ಹಾಗೂ ಧನಶ್ರೀ ವರ್ಮಾ ಇಬ್ಬರಲ್ಲಿ ಯಾರು ಶ್ರೀಮಂತರು ಎನ್ನುವ ಚರ್ಚೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಧನಶ್ರೀ ಕೂಡ ಹಣಕಾಸಿನ ವಿಚಾರದಲ್ಲಿ ಸ್ಟ್ರಾಂಗ್ ಆಗಿದ್ದಾರೆ. ಯುಜ್ವೇಂದ್ರ ಚಾಹಲ್ ಸ್ಟಾರ್ ಕ್ರಿಕೆಟಿಗನಾಗಿದ್ರೆ, ಧನಶ್ರೀ ವೃತ್ತಿಯಲ್ಲಿ ದಂತ ವೈದ್ಯೆ ಹಾಗೂ ಡ್ಯಾನ್ಸ್ ಕೋರಿಯೋಗ್ರಾಫರ್ ಆಗಿದ್ದಾರೆ. ತನ್ನದೇ ಜನಪ್ರಿಯತೆಯನ್ನು ಗಳಿಸಿದ್ದಾರೆ

ಧನಶ್ರೀ ವರ್ಮಾ ಅವರು ತನ್ನದೇ YouTube ಚಾನಲ್ ಅನ್ನು ಸಹ ಹೊಂದಿದ್ದು, 2.5 ಮಿಲಿಯನ್ ಫಾಲೋವರ್ಸ್ ಇದ್ದಾರೆ. ಡ್ಯಾನ್ಸಿಂಗ್ ರಿಯಾಲಿಟಿ ಶೋ ‘ಝಲಕ್ ದಿಖ್ಲಾ ಜಾ’ ದಲ್ಲೂ ಭಾಗವಹಿಸಿದ್ದರು. ಸೋಶಿಯಲ್ ಮೀಡಿಯಾದಲ್ಲಿ 6 ದಶಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ. ನೃತ್ಯ ಸಂಯೋಜನೆ ಮತ್ತು ಬ್ರಾಂಡ್ ಎಂಡಾರ್ಸ್ ಮೆಂಟ್ ನಿಂದ ಕೋಟಿ ಕೋಟಿ ಹಣ ಮಾಡ್ತಿದ್ದಾರೆ. ಯುಜ್ವೇಂದ್ರ ಚಾಹಲ್ ಮತ್ತು ಧನಶ್ರೀ ವರ್ಮಾ ಡಿಸೆಂಬರ್ 22, 2020 ರಂದು ವಿವಾಹವಾದರು.  

ನವೆಂಬರ್ 2024 ರಲ್ಲಿ ಧನಶ್ರೀ ಸಿನಿಮಾ ಪ್ರಾಜೆಕ್ಟ್ ನಲ್ಲಿ ಕೆಲಸ ಮಾಡುತ್ತಿರೋದಾಗಿ ಪೋಸ್ಟ್ ಒಂದನ್ನು ಶೇರ್ ಮಾಡಿದ್ರು. ಚಿತ್ರ ಶೂಟಿಂಗ್ ಮತ್ತು ಸ್ಕ್ರಿಪ್ಟ್ ಪ್ಯಾಡ್ ನ ಒಂದು ಲುಕ್ ಅನ್ನು ಅಭಿಮಾನಿಗಳಿಗೆ ತೋರಿಸಿದ್ರು. ಅನೇಕ ಗಾಯಕರೊಂದಿಗೆ ಮ್ಯೂಸಿಕ್ ವೀಡಿಯೊಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ವರದಿ ಪ್ರಕಾರ 28 ವರ್ಷದ ಧನಶ್ರೀ ಅವರ ಆಸ್ತಿ 24 ಕೋಟಿ ರೂ ಇದೆ ಎನ್ನಲಾಗ್ತಿದೆ.

ಯುಜ್ವೇಂದ್ರ ಚಾಹಲ್ ಕೂಡ ಕೋಟಿಗಟ್ಟಲೆ ಆಸ್ತಿ ಹೊಂದಿದ್ದಾರೆ. ಐಪಿಎಲ್ 2025 ರಲ್ಲಿ ಪಂಜಾಬ್ ಕಿಂಗ್ಸ್ ಅನ್ನು ಮುನ್ನಡೆಸಲಿದ್ದು, ಐಪಿಎಲ್ ನಲ್ಲಿ ಈ ವರ್ಷ 18 ಕೋಟಿ ರೂ.ಗೆ ಮಾರಾಟವಾಗಿದ್ದಾರೆ. ಕ್ರಿಕೆಟಿಗ ಚಹಲ್ ಒಟ್ಟು ಆಸ್ತಿ 45 ಕೋಟಿ ಇದೆ. ಚಾಹಲ್ಅವರು ಬ್ರಾಂಡ್ ಎಂಡಾರ್ಸ್ ಮೆಂಟ್ ಗಳ ಮೂಲಕವೂ ಕೋಟಿ ಕೋಟಿ ಹಣ ಗಳಿಸ್ತಾರೆ.