ರಥಬೀದಿಯ ಸುತ್ತ ಮುಳಿಹುಲ್ಲಿನಿಂದ ಹೊದ್ದ ಗುಡಿಸಲುಗಳು, ಮುಳಿ ಹುಲ್ಲಿನ ಹಾಸಿನ ಛತ್ರಗಳ ಸಾಲಿನ ಮಧ್ಯೆ ರಥಬೀದಿ, ಅಂದಿನ ಜನರ ವೇಷಭೂಷಣಗಳು, ರಥಬೀದಿ ಮತ್ತು ಕ್ಷೇತ್ರದ ಸುತ್ತ ಇರುವ ದಟ್ಟವಾದ ಕಾಡುಗಳು, ಈಗಿನಂತೆ ರಸ್ತೆಗಳಿಲ್ಲದ ಕಾರಣ ಜಾತ್ರೆಗೆ ಬಂದ ಭಕ್ತಾಧಿಗಳು ನಿಲ್ಲಿಸಿರುವ ಎತ್ತಿನಗಾಡಿ ಅಂದಿನ ಜಾತ್ರೆಯ ವೈಭವವನ್ನು ತಿಳಿಸುತ್ತಿದೆ.