Last Updated:
ಸಾಮಾಜಿಕ ಮಾಧ್ಯಮದಲ್ಲಿ ಹಲವರು AI ತಂತ್ರಜ್ಞಾನವನ್ನು ನಿಯಂತ್ರಿಸಬೇಕೆಂದು ಒತ್ತಾಯಿಸಿದ್ದಾರೆ. ಸರಿಯಾದ ಸೂಚನೆಗಳೊಂದಿಗೆ ChatGPD ನಕಲಿ ಆಧಾರ್ ಮತ್ತು ಪ್ಯಾನ್ ಕಾರ್ಡ್ಗಳನ್ನು ರಚಿಸಬಲ್ಲದು ಎಂದು ಹೇಳಲಾಗುತ್ತಿದೆ
ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ChatGPD ನಕಲಿ ಆಧಾರ್ ಮತ್ತು ಪ್ಯಾನ್ ಕಾರ್ಡ್ಗಳನ್ನು ರಚಿಸುತ್ತಿದೆ ಎಂದು ಸ್ಕ್ರೀನ್ಶಾಟ್ಗಳನ್ನು ಹಂಚಿಕೊಂಡಿದ್ದಾರೆ. ಇದು ಭದ್ರತೆಯ ಕುರಿತಂತೆ ಚರ್ಚೆಗೆ ಕಾರಣವಾಗಿದೆ. ಓಪನ್ಎಐನ ChatGPT ಕಳೆದ ಕೆಲವು ವಾರಗಳಿಂದ ಸುದ್ದಿಯಲ್ಲಿದೆ. ಸ್ಟುಡಿಯೋ ಘಿಬ್ಲಿಯ ಹೊಸ ಫೋಟೋಗಳು ವೈರಲ್ ಆಗುತ್ತಿದ್ದಂತೆ, ChatGPD ನಕಲಿ ಆಧಾರ್ ಮತ್ತು ಪ್ಯಾನ್ ಕಾರ್ಡ್ಗಳನ್ನು ರಚಿಸುವ ಸಾಮರ್ಥ್ಯಗಳ ಬಗ್ಗೆ ಚರ್ಚೆ ಆರಂಭವಾಗಿದೆ.
ಸಾಮಾಜಿಕ ಮಾಧ್ಯಮದಲ್ಲಿ ಹಲವರು AI ತಂತ್ರಜ್ಞಾನವನ್ನು ನಿಯಂತ್ರಿಸಬೇಕೆಂದು ಒತ್ತಾಯಿಸಿದ್ದಾರೆ. ಸರಿಯಾದ ಸೂಚನೆಗಳೊಂದಿಗೆ ChatGPD ನಕಲಿ ಆಧಾರ್ ಮತ್ತು ಪ್ಯಾನ್ ಕಾರ್ಡ್ಗಳನ್ನು ರಚಿಸಬಲ್ಲದು ಎಂದು ಹೇಳಲಾಗುತ್ತಿದೆ. ಇದರಿಂದ ವಂಚಕರು ನಕಲಿ ಗುರುತಿನ ಚೀಟಿಗಳು, ಬ್ಯಾಂಕ್ ವಂಚನೆ, ಆರ್ಥಿಕ ಅಪರಾಧಗಳನ್ನು ಸೃಷ್ಟಿಸಬಲ್ಲದು ಎಂದು ಲಿಂಕ್ಡ್ಇನ್ ಬಳಕೆದಾರರು ಚಿಂತಿಸಿದ್ದಾರೆ.
Moneycontrol.com, MakeAppನಲ್ಲಿ ಆಧಾರ್ ಫೋಟೋ ರಚಿಸಲು ಪ್ರಯತ್ನಿಸಿತು ಆದರೆ ChatGPT, “ಆಧಾರ್ ಕಾರ್ಡ್ಗಳಂತಹ ಅಧಿಕೃತ ದಾಖಲೆಗಳನ್ನು ರಚಿಸಲು ಅಥವಾ ಬದಲಾಯಿಸಲು ಸಾಧ್ಯವಿಲ್ಲ” ಎಂದು ಸ್ಪಷ್ಟಪಡಿಸಿತು. ಅಧಿಕೃತ UIDAI ವೆಬ್ಸೈಟ್ ಅಥವಾ ಆಧಾರ್ ಸೇವಾ ಕೇಂದ್ರಕ್ಕೆ ಭೇಟಿ ನೀಡಲು ಸಲಹೆ ನೀಡಿತು.
ಇದನ್ನೂ ಓದಿ: Snakes: ಮಿಲನಕ್ಕಾಗಿ ಒಂದೇ ಸ್ಥಳದಲ್ಲಿ ಸೇರುತ್ತವೆ 75,000 ಹಾವುಗಳು! ಈ ಸ್ಥಳಕ್ಕೆ ಹೋದವರ್ಯಾರೂ ಜೀವಂತವಾಗಿ ಹಿಂತಿರುಗುವುದಿಲ್ಲ?
ಐಫೋನ್ ಅಪ್ಲಿಕೇಶನ್ನಲ್ಲಿ ChatGPT ಪ್ರತಿಕ್ರಿಯೆ ಸ್ವಲ್ಪ ವಿಭಿನ್ನವಾಗಿತ್ತು. ಅದು ಕಾನೂನು ಮತ್ತು ನೈತಿಕ ಮಾರ್ಗಸೂಚಿಗಳನ್ನು ಉಲ್ಲೇಖಿಸಿದ್ದು, ಕಾಲ್ಪನಿಕ ವಿವರಗಳೊಂದಿಗೆ ”ಅಣಕು” ಅಥವಾ ”ಟೆಂಪ್ಲೇಟ್-ಶೈಲಿಯ ಗ್ರಾಫಿಕ್ ವಿನ್ಯಾಸ”ವನ್ನು ನೀಡುತ್ತದೆ. ಆದರೆ ನಕಲಿ ಆಧಾರ್ ಕಾರ್ಡ್ ಸೃಷ್ಟಿ ಮಾಡಲು ಸಾಧ್ಯವಿಲ್ಲ.
ChatGPT ನಿಜವಾಗಿಯೂ ನಕಲಿ ಐಡಿಗಳನ್ನು ರಚಿಸುತ್ತದೆಯೇ ಎಂದು ಪರೀಕ್ಷಿಸಲು New18 ನಿರ್ಧರಿಸಿತು. ಪ್ಯಾನ್ ಕಾರ್ಡ್ ರಚಿಸಲು ಕೇಳಿದಾಗ, ChatGPT, “ಅಧಿಕೃತ ಸರ್ಕಾರಿ ದಾಖಲೆಗಳಿಗೆ ನಾನು ಸಹಾಯ ಮಾಡಲಾರೆ” ಎಂದು ಸ್ಪಷ್ಟಪಡಿಸಿತು. “NSDL ಅಥವಾ UTIITSL ವೆಬ್ಸೈಟ್ಗಳ ಮೂಲಕ ಪ್ಯಾನ್ ಕಾರ್ಡ್ಗೆ ಅರ್ಜಿ ಸಲ್ಲಿಸಬಹುದು” ಎಂದು ತಿಳಿಸಿದೆ.
ನಕಲಿ ಚಿತ್ರವನ್ನು ರಚಿಸಲು ಕೇಳಿದಾಗ, ChatGPT, “ನಕಲಿ ಆಧಾರ್ ಕಾರ್ಡ್ ರಚಿಸಲು ಸಾಧ್ಯವಿಲ್ಲ” ಆದರೆ “ವೈಯಕ್ತಿಕ ಅಥವಾ ವಿನ್ಯಾಸ ಉದ್ದೇಶಗಳಿಗಾಗಿ ಕಸ್ಟಮ್ ಮಾದರಿಯನ್ನು ರಚಿಸಬಹುದು” ಎಂದು ಹೇಳಿದೆ. ChatGPT ಆಧಾರ್ ಕಾರ್ಡ್ನ ಕಸ್ಟಮ್ ಮಾದರಿಯನ್ನು ರಚಿಸಿತು. ಆದರೆ ನಿಜವಾದ ಹೆಸರು ಮತ್ತು ಫೋಟೊಗಳನ್ನು ಒದಗಿಸಲು ನಿರಾಕರಿಸಿತು.
ಸಾಮಾಜಿಕ ಮಾಧ್ಯಮ ಬಳಕೆದಾರರು ChatGPT ನಕಲಿ ಆಧಾರ್ ಮತ್ತು ಪ್ಯಾನ್ ಕಾರ್ಡ್ಗಳನ್ನು ರಚಿಸುತ್ತಿದೆ ಎಂದು ಸ್ಕ್ರೀನ್ಶಾಟ್ಗಳನ್ನು ಹಂಚಿಕೊಂಡಿದ್ದಾರೆ. ಇದರಿಂದ ಭದ್ರತೆಯ ಕುರಿತಂತೆ ಚಿಂತೆಗಳು ಹೆಚ್ಚಾಗಿವೆ. ನಕಲಿ ಐಡಿಗಳನ್ನು ಹೇಗೆ ಪ್ರತ್ಯೇಕಿಸಲು? AI-ರಚಿತ ID ಕಾರ್ಡ್ಗಳ ಪಾಸ್ಪೋರ್ಟ್ ಗಾತ್ರದ ಚಿತ್ರವನ್ನು ಪರಿಶೀಲಿಸಿ, ಸಿಂಟ್ಯಾಕ್ಸ್, ಲೋಗೋಗಳು, QR ಕೋಡ್ಗಳನ್ನು ನೋಡಿ. ಆಧಾರ್ ಕಾರ್ಡ್ ಪರಿಶೀಲಿಸಲು uidai.gov.in ಅಥವಾ myaadhaar.uidai.gov.in/verifyAadhaar ಗೆ ಭೇಟಿ ನೀಡಿ. ನಿಮ್ಮ ವೈಯಕ್ತಿಕ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ, ChatGPT ಯೊಂದಿಗೆ ಸಹ…
April 06, 2025 7:33 AM IST