Chess: ಹಾಲಿ ಚೆಸ್‌ ಚಾಂಪಿಯನ್‌ ಡಿ. ಗುಕೇಶ್‌ ಅವರಿಗೆ ಸೋಲುಣಿಸಿದ ಟರ್ಕಿಶ್ ಪ್ರತಿಭೆ‌: ಗುಕೇಶ್‌ ಮಣಿಸಿದ ಗುರೆಲ್‌ಗೆ ಭರ್ಜರಿ ಸ್ವಾಗತ  | Ediz Gurel Abhimanyu Mishra lose to Gukesh in FIDE Grand Swiss | ಕ್ರೀಡೆ

Chess: ಹಾಲಿ ಚೆಸ್‌ ಚಾಂಪಿಯನ್‌ ಡಿ. ಗುಕೇಶ್‌ ಅವರಿಗೆ ಸೋಲುಣಿಸಿದ ಟರ್ಕಿಶ್ ಪ್ರತಿಭೆ‌: ಗುಕೇಶ್‌ ಮಣಿಸಿದ ಗುರೆಲ್‌ಗೆ ಭರ್ಜರಿ ಸ್ವಾಗತ  | Ediz Gurel Abhimanyu Mishra lose to Gukesh in FIDE Grand Swiss | ಕ್ರೀಡೆ

Last Updated:

FIDE ಗ್ರ್ಯಾಂಡ್ ಸ್ವಿಸ್‌ನಲ್ಲಿ Ediz Gurel ಮತ್ತು Abhimanyu Mishra 16 ವರ್ಷದ ವಯಸ್ಸಿನಲ್ಲಿ ವಿಶ್ವ ಚಾಂಪಿಯನ್ D Gukesh ಅವರನ್ನು ಸೋಲಿಸಿ ಚೆಸ್ ಲೋಕದಲ್ಲಿ ಸಂಚಲನ ಮೂಡಿಸಿದ್ದಾರೆ.

News18News18
News18

ವಿಶ್ವ ಚದುರಂಗದಾಟ (Chess) ಪ್ರತಿನಿತ್ಯ ಓರ್ವ ಚೆಸ್‌ ಪ್ರತಿಭೆಯನ್ನು ತನ್ನ ಪಟ್ಟಿಗೆ ಸೇರಿಸಿಕೊಳ್ಳುತ್ತಿದೆ. ಅಭಿಮನ್ಯು ಮಿಶ್ರಾ (Abhimanyu Mishra), ವೊಲೊಡಾರ್ ಮುರ್ಜಿನ್, ಪ್ರಣವ್ ವಿ (Pranv V), ಎರ್ಡೋಗ್ಮಸ್ ಯಾಗಿಜ್ ಕಾನ್ ಮತ್ತು ಫೌಟಿನೊ ಓರೊ ಅವರಂತಹ ಆಟಗಾರರು (Players) ವಿಶ್ವ ಚೆಸ್‌ನಲ್ಲಿ ಮುಂಚೂಣಿಯಲ್ಲಿದ್ದು, ಅತ್ಯುತ್ತಮ ಪ್ರತಿಭೆಗಳಾಗಿ ಗುರುತಿಸಿಕೊಳ್ಳುತ್ತಿದ್ದಾರೆ

ಹಾಲಿ ಚೆಸ್‌ ಚಾಂಪಿಯನ್‌ಗೆ ಸೋಲುಣಿಸಿದ ಟರ್ಕಿಶ್ ಪ್ರತಿಭೆ

ಈ ಚೆಸ್‌ ಅಗ್ರಗಣ್ಯರ ಪಟ್ಟಿಗೆ ಹೊಸದಾಗಿ ಸೇರಿದ್ದಾರೆ ಮತ್ತೊಬ್ಬ ಟರ್ಕಿಶ್ ಪ್ರತಿಭೆ. ಹೌದು, ಚೆಸ್‌ ಲೋಕದಲ್ಲಿ 16 ವರ್ಷದ ಟರ್ಕಿಯ ಎಡಿಜ್ ಗುರೆಲ್ ಹೆಸರು ಸದ್ಯಕ್ಕೆ ರಾರಾಜಿಸುತ್ತಿದೆ.  ಕಳೆದ ವಾರ ಗುರೆಲ್‌ ಚೆಸ್‌ ಆಟದಲ್ಲಿ ಹೊಸ ಮೈಲಿಗಲ್ಲನ್ನು ಪಡೆದುಕೊಂಡಿದ್ದಾರೆ. ಹಾಲಿ ಚಾಂಪಿಯನ್‌ ಡಿ. ಗುಕೇಶ್ ಅವರನ್ನು ಸೋಲಿಸುವ ಮೂಲಕ ವೃತ್ತಿಜೀವನದ ಅತಿದೊಡ್ಡ ಗೆಲುವುಗಳಲ್ಲಿ ಒಂದನ್ನು ಗಳಿಸಿದ್ದಾರೆ.

ಇತ್ತೀಚೆಗೆ ಮುಕ್ತಾಯಗೊಂಡ FIDE ಗ್ರ್ಯಾಂಡ್ ಸ್ವಿಸ್ ಪಂದ್ಯಾವಳಿಯಲ್ಲಿ, ಕೇವಲ ಮೂರು ವರ್ಷ ಅಂತರವಿರುವ ಈ ಇಬ್ಬರೂ ಆಟಗಾರರು ಏಳನೇ ಸುತ್ತಿನ ಆಟದಲ್ಲಿ ಮುಖಾಮುಖಿಯಾಗಿದ್ದರು. ಅಲ್ಲಿ ಗುರೆಲ್ ಭಾರತೀಯ ಚೆಸ್‌ ಚಾಂಪಿಯನ್‌ ಗುಕೇಶ್‌ ವಿರುದ್ಧ ಗೆದ್ದು ಬೀಗಿದ್ದಾರೆ. ಈ ಸೋಲು ಗುಕೇಶ್‌ಗೆ ಗ್ರ್ಯಾಂಡ್ ಸ್ವಿಸ್‌ನಲ್ಲಿ ಸತತ ಮೂರನೇ ಸೋಲನ್ನುಂಟುಮಾಡಿತು.

ವಿಶ್ವ ಚಾಂಪಿಯನ್‌ ಮಣಿಸಿದ ಗುರೆಲ್‌ಗೆ ಭರ್ಜರಿ ಸ್ವಾಗತ 

ಇನ್ನೂ ವಿಶ್ವ ಚಾಂಪಿಯನ್‌ ಮಣಿಸಿದ ಗುರೆಲ್‌ಗೆ ಮನೆ, ಶಾಲೆ ವತಿಯಿಂದ ಭರ್ಜರಿ ಸ್ವಾಗತ ಸಿಕ್ಕಿದೆ. ಗುರೆಲ್‌ ಓದುತ್ತಿರುವ ಎಮಿನ್ ಓರ್ನೆಕ್ ಎಗಿಟಿಮ್ ಕುರುಮ್ಲಾರಿ ಶಾಲೆಯಲ್ಲಿ ಗುರೆಲ್‌ಗೆ ಗ್ರ್ಯಾಂಡ್‌ ಆಗಿ ವೆಲ್‌ಕಮ್‌ ಮಾಡಲಾಗಿದೆ. ಹೂವಿನ ಬೊಕ್ಕೆ ನೀಡಿ, ಚಪ್ಪಾಳೆ, ಡೊಳ್ಳುಗಳಿಂದ ಸ್ವಾಗತಿಸಿ ಬಾವುಟ ಹಾರಿಸಿ ಶುಭಾಷಯ ಕೋರಿದೆ ಶಾಲಾ ಮಂಡಳಿ. ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ವಿದ್ಯಾರ್ಥಿಗಳು, ಶಿಕ್ಷಕರು ಗುರೆಲ್‌ಗೆ ಅಭಿನಂದನೆ ತಿಳಿಸಿದ್ದಾರೆ.

ಗುರೆಲ್ ಗ್ರ್ಯಾಂಡ್ ಸ್ವಿಸ್‌ನಲ್ಲಿ ಗುಕೇಶ್ ಅವರನ್ನು ಬಿಳಿ ಕಾಯಿಗಳಿಂದ ಸೋಲಿಸಿದರು ಮತ್ತು ಇದೊಂದು ಅದ್ಭುತ ಆಟವಾಗಿತ್ತು ಎಂದು  ಗುಕೇಶ್ ವಿರುದ್ಧದ ಗೆಲುವಿನ ನಂತರ FIDE ಗೆ ನೀಡಿದ ಸಂದರ್ಶನದಲ್ಲಿ ಗುರೆಲ್ ಹೇಳಿದರು.

“ವಿಶ್ವ ಚಾಂಪಿಯನ್‌ ಜೊತೆ ಆಡಿದ್ದು ನನ್ನ ಅದೃಷ್ಟ”

ಕ್ಲಾಸಿಕಲ್ ಚೆಸ್‌ ಕದನದಲ್ಲಿ ವಿಶ್ವ ಚಾಂಪಿಯನ್ ಅವರನ್ನು ಭೇಟಿಯಾದ ಬಗ್ಗೆ ಕೇಳಿದಾಗ, ಗುರೆಲ್ ಮಾತನಾಡಿ, ” ಗುಕೇಶ್‌ ಅವರನ್ನು ನೋಡಿದ್ದು ತುಂಬಾ ಸಂತೋಷವಾಯಿತು. ನಾನು ಈ ಆಟದಲ್ಲಿ ಸೋತಿದ್ದರೂ ಈ ಕ್ಷಣ ನನಗೆ ಅಮೂಲ್ಯವಾಗುತ್ತಿತ್ತು.

ವಿಶ್ವ ಚಾಂಪಿಯನ್ ಜೊತೆ ಆಟ ಆಡುವುದು ಯಾವಾಗಲೂ ಅದ್ಭುತವಾಗಿರುತ್ತದೆ. ಈ ಟೂರ್ನಮೆಂಟ್‌ನಲ್ಲಿ ಗುಕೇಶ್ ಅಷ್ಟು ‌ಉತ್ತಮ ಪ್ರದರ್ಶನ ನೀಡಲಿಲ್ಲ. ಆದರೆ ಚೆಸ್‌ ಕಲೆ ಅವರಿಗೆ ಕರಗತವಾಗಿದೆ, ಎಲ್ಲವನ್ನೂ ನಿಭಾಯಿಸುವ ಶಕ್ತಿ ಅವರಿಗಿದೆ” ಎಂದು ಗುರೆಲ್‌ ಹೊಗಳಿದರು. ಗುಕೇಶ್‌ ಅದ್ಭುತ ಆಟಗಾರ, ಅವರು ವಿಶ್ವ ಚಾಂಪಿಯನ್‌, ಅವರು ಮುಂದೆ ಆಟವಾಡಿದ್ದು ನಿಜಕ್ಕೂ ಅದೃಷ್ಟ ಎಂದು ಗುರೆಲ್‌ ಹೇಳಿದ್ದಾನೆ.

ಗುಕೇಶ್‌ ವಿರುದ್ಧ ಜಯಗಳಿಸಿದ್ದ ಅಭಿಮನ್ಯು ಮಿಶ್ರಾ

ಇದೇ ಪಂದ್ಯಾವಳಿಯಲ್ಲಿ ಅಭಿಮನ್ಯು ಮಿಶ್ರಾ ಅವರು ಚೆಸ್ ಆಟದಲ್ಲಿ ಗುಕೇಶ್‌ಗೆ ಸೋಲುಣಿಸಿದ್ದರು. ಉಜ್ಬೇಕಿಸ್ತಾನ್‌ನ ಸಮರ್ಕಂಡ್‌ನಲ್ಲಿ ನಡೆದ FIDE ಗ್ರ್ಯಾಂಡ್ ಸ್ವಿಸ್ ಪಂದ್ಯಾವಳಿಯ 5ನೇ ಸುತ್ತಿನಲ್ಲಿ 16 ವರ್ಷದ ಅಮೇರಿಕನ್ ಆಟಗಾರ ಪ್ರಸ್ತುತ ವಿಶ್ವ ಚಾಂಪಿಯನ್ ಡಿ ಗುಕೇಶ್ ಅವರನ್ನು ಸೋಲಿಸಿ ಚದುರಂಗದ ಅಂತರಂಗ ಭೇದಿಸಿದ್ದರು.

ವಿಶ್ವದ ಅತ್ಯಂತ ಕಿರಿಯ ಗ್ರ್ಯಾಂಡ್‌ಮಾಸ್ಟರ್ ಆಗಿರುವ 16 ವರ್ಷದ ಅಭಿಮನ್ಯು ಮಿಶ್ರಾ, 61-ನಡೆಗಳ ಹೋರಾಟದ ನಂತರ ಹಾಲಿ ವಿಶ್ವ ಚಾಂಪಿಯನ್ ಡೊಮ್ಮರಾಜು ಗುಕೇಶ್ ಅವರನ್ನು ಸೋಲಿಸಿದ್ದರು. ಇಷ್ಟೇ ಅಲ್ಲದೇ ಚೆಸ್ ಆಟದಲ್ಲಿ ಅತ್ಯುತ್ತಮ ಆಟಗಾರನನ್ನು ಸೋಲಿಸಿದ್ದು ಜೀವಮಾನದ ಕ್ಷಣವಾಗಿದೆ ಎಂದು 16 ವರ್ಷದ ಮಿಶ್ರಾ ಹೇಳಿದರು.

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

Chess: ಹಾಲಿ ಚೆಸ್‌ ಚಾಂಪಿಯನ್‌ ಡಿ. ಗುಕೇಶ್‌ ಅವರಿಗೆ ಸೋಲುಣಿಸಿದ ಟರ್ಕಿಶ್ ಪ್ರತಿಭೆ‌: ಗುಕೇಶ್‌ ಮಣಿಸಿದ ಗುರೆಲ್‌ಗೆ ಭರ್ಜರಿ ಸ್ವಾಗತ