Cheteshwar Pujara: ಕ್ರಿಕೆಟ್ ವೃತ್ತಿ ಜೀವನದಲ್ಲಿ ನಾನು ಎದುರಿಸಿದ ಅತ್ಯಂತ ಕಠಿಣ ಬೌಲರ್‌ಗಳಿವರು; ಬೋಲ್ಟ್, ಸ್ಟಾರ್ಕ್ ಹೊರಗಿಟ್ಟು ನಾಲ್ವರನ್ನು ಹೆಸರಿಸಿದ ಪೂಜಾರ? | Cheteshwar Pujara Names The 4 Toughest Bowlers He Faced in his Cricket Career | ಕ್ರೀಡೆ

Cheteshwar Pujara: ಕ್ರಿಕೆಟ್ ವೃತ್ತಿ ಜೀವನದಲ್ಲಿ ನಾನು ಎದುರಿಸಿದ ಅತ್ಯಂತ ಕಠಿಣ ಬೌಲರ್‌ಗಳಿವರು; ಬೋಲ್ಟ್, ಸ್ಟಾರ್ಕ್ ಹೊರಗಿಟ್ಟು ನಾಲ್ವರನ್ನು ಹೆಸರಿಸಿದ ಪೂಜಾರ? | Cheteshwar Pujara Names The 4 Toughest Bowlers He Faced in his Cricket Career | ಕ್ರೀಡೆ

Last Updated:

ನಿವೃತ್ತಿಯ ಬಳಿಕ ಮಾತನಾಡಿದ ಪೂಜಾರ, ತಮ್ಮ ವೃತ್ತಿಜೀವನದಲ್ಲಿ ಎದುರಿಸಿದ ಅತ್ಯಂತ ಕಠಿಣ ಬೌಲರ್‌ಗಳು ಯಾರೆಂದು ಹೆಸರಿಸಿದ್ದಾರೆ. 37 ವರ್ಷದ ಪೂಜಾರ ತಾವು ಎದುರಿಸಿದ ನಾಲ್ವರು ಕಠಿಣ ಬೌಲರ್‌ಗಳ ಹೆಸರನ್ನು ಸೂಚಿಸಿದ್ದಾರೆ.

ಚೇತೇಶ್ವರ್ ಪೂಜಾರಚೇತೇಶ್ವರ್ ಪೂಜಾರ
ಚೇತೇಶ್ವರ್ ಪೂಜಾರ

ಚೇತೇಶ್ವರ ಪೂಜಾರ (Cheteshwar Pujara) ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿನ ತಮ್ಮ 14 ವರ್ಷಗಳ ಸುಧೀರ್ಘ ಪ್ರಯಾಣಕ್ಕೆ ನಿನ್ನೆ (ಆಗಸ್ಟ್ 24) ರಂದು ನಿವೃತ್ತಿ ಘೋಷಣೆ ಮಾಡಿದ್ದಾರೆ. ಸುಮಾರು ಎರಡು ದಶಕಗಳ ಕಾಲ ವೃತ್ತಿಪರ ಕ್ರಿಕೆಟ್ ಆಡಿದ ಬಳಿಕ ಅವರು ನಿವೃತ್ತಿ ಘೋಷಣೆ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ (Social Media) ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ. ವಿಶೇಷವಾಗಿ ಅವರು ಟೆಸ್ಟ್ ಸ್ಪೆಷಲಿಸ್ಟ್ (Test Specialist) ಆಗಿ ಗುರುತಿಸಿಕೊಂಡಿದ್ದು, ಏಕಕಾಲದಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ಗುಡ್ ಬೈ ಹೇಳಿದ್ದಾರೆ.

ತಮ್ಮ ವೃತ್ತಿಜೀವನದಲ್ಲಿ ಅವರು 5 ಏಕದಿನ ಪಂದ್ಯಗಳಲ್ಲಿ ಆಡಿದ್ದಾರೆ. ಯಾವುದೇ ಟಿ-20 ಪಂದ್ಯಗಳಲ್ಲಿ ಆಡಿಲ್ಲ. ಬಲಗೈ ಬ್ಯಾಟ್ಸ್‌ಮನ್ 100 ಟೆಸ್ಟ್ ಪಂದ್ಯಗಳನ್ನು ಆಡಿರುವ 13 ಭಾರತೀಯ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಅವರು ನಿವೃತ್ತಿಗೆ ಮುನ್ನಾ ಬರೋಬ್ಬರಿ 104 ಪಂದ್ಯಗಳಲ್ಲಿ ಆಡಿದ್ದಾರೆ. ಇದರಲ್ಲಿ ಅವರು 19 ಶತಕಗಳನ್ನು ಗಳಿಸಿದ್ದಾರೆ ಮತ್ತು 43.60 ಸರಾಸರಿಯಲ್ಲಿ 7195 ರನ್ ಗಳಿಸಿದ್ದಾರೆ.

ಚೇತೇಶ್ವರ ಪೂಜಾರ ಎದುರಿಸಿದ ಅತ್ಯಂತ ಕಠಿಣ ಬೌಲರ್

ನಿವೃತ್ತಿಯ ಬಳಿಕ ಮಾತನಾಡಿದ ಪೂಜಾರ, ತಮ್ಮ ವೃತ್ತಿಜೀವನದಲ್ಲಿ ಎದುರಿಸಿದ ಅತ್ಯಂತ ಕಠಿಣ ಬೌಲರ್‌ಗಳು ಯಾರೆಂದು ಹೆಸರಿಸಿದ್ದಾರೆ. 37 ವರ್ಷದ ಪೂಜಾರ ತಾವು ಎದುರಿಸಿದ ನಾಲ್ವರು ಕಠಿಣ ಬೌಲರ್‌ಗಳ ಹೆಸರನ್ನು ಸೂಚಿಸಿದ್ದಾರೆ. ಅವರು ಯಾವುದೇ ಸ್ಪಿನ್ನರ್ ಹೆಸರನ್ನು ಉಲ್ಲೇಖಿಸಲಿಲ್ಲ. ಅವರು ದಕ್ಷಿಣ ಆಫ್ರಿಕಾದ ವೇಗಿಗಳಾದ ಡೇಲ್ ಸ್ಟೇನ್ ಮತ್ತು ಮಾರ್ನೆ ಮಾರ್ಕೆಲ್, ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮ್ಮಿನ್ಸ್ ಹಾಗೂ ಇಂಗ್ಲೆಂಡ್‌ನ ತಂಡದ ಮಾಜಿ ವೇಗಿ ಜೇಮ್ಸ್ ಆಂಡರ್ಸನ್ ಅವರ ಹೆಸರನ್ನು ಸೂಚಿಸಿದ್ದಾರೆ.

ನಾಲ್ವರು ವೇಗಿಗಳ ಹೆಸರು ಸೂಚಿಸಿದ ಪುಜಾರ

“ನನ್ನ ವೃತ್ತಿಜೀವನದುದ್ದಕ್ಕೂ, ಡೇಲ್ ಸ್ಟೇನ್, ಮಾರ್ನೆ ಮಾರ್ಕೆಲ್, ಜೇಮ್ಸ್ ಆಂಡರ್ಸನ್ ಮತ್ತು ಪ್ಯಾಟ್ ಕಮ್ಮಿನ್ಸ್ ನಾನು ಎದುರಿಸಿದ ಅತ್ಯಂತ ಸವಾಲಿನ ಬೌಲರ್‌ಗಳಾಗಿದ್ದಾರೆ” ಎಂದು ಪೂಜಾರ ಟೈಮ್ಸ್ ಆಫ್ ಇಂಡಿಯಾ ಜೊತೆಗಿನ ಸಂವಾದದಲ್ಲಿ ಹೇಳಿದರು . ಇನ್ನೂ ಇದೇ ಸಂದರ್ಭದಲ್ಲಿ ಅವರು ಆಡಿದ ಅತ್ಯುತ್ತಮ ನಾಯಕನ ಹೆಸರನ್ನು ಹೇಳುವಂತೆ ಕೇಳಿದಾಗ, ಸ್ಟಾರ್ ಬ್ಯಾಟರ್ ಯಾವುದೇ ಒಬ್ಬರ ಹೆಸರನ್ನು ತೆಗೆದುಕೊಳ್ಳಲಿಲ್ಲ. ಮತ್ತು ತಮ್ಮ ಅದ್ಭುತ ವೃತ್ತಿಜೀವನದಲ್ಲಿ ಅವರು ಆಡಿದ ಎಲ್ಲಾ ನಾಯಕರನ್ನು ಹೊಗಳಿದರು.

ಇದನ್ನೂ ಓದಿ: ODIನ ಒಂದೇ ಇನಿಂಗ್ಸ್‌ನಲ್ಲಿ 3 ಬ್ಯಾಟರ್ಸ್ ಶತಕ! 4897 ಪಂದ್ಯಗಳಲ್ಲಿ ಕೇವಲ 5 ಬಾರಿ ಮಾತ್ರ ಸಾಧ್ಯವಾಗಿದೆ ಈ ರೆಕಾರ್ಡ್!

“ಒಬ್ಬರನ್ನು ಪ್ರತ್ಯೇಕಿಸುವುದು ಕಷ್ಟ. ನಾನು ನನ್ನ ಟೆಸ್ಟ್ ಪ್ರಯಾಣವನ್ನು ಮಹಿ ಭಾಯ್ (ಎಂಎಸ್ ಧೋನಿ) ಅಡಿಯಲ್ಲಿ ಪ್ರಾರಂಭಿಸಿದೆ, ನಂತರ ವಿರಾಟ್ ಮತ್ತು ರೋಹಿತ್ ಅಡಿಯಲ್ಲಿ ಆಡಿದೆ. ಐಪಿಎಲ್‌ನಲ್ಲಿ ದಾದಾ (ಸೌರವ್ ಗಂಗೂಲಿ) ಪರ ಆಡುವ ಅವಕಾಶವೂ ನನಗೆ ಸಿಕ್ಕಿತು, ಮತ್ತು ಅಜಿಂಕ್ಯ (ರಹಾನೆ) 2016-17ರಲ್ಲಿ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ನಮ್ಮನ್ನು ಮುನ್ನಡೆಸಿದರು. ಪ್ರತಿಯೊಬ್ಬ ನಾಯಕನಿಗೂ ತನ್ನದೇ ಆದ ಸಾಮರ್ಥ್ಯವಿತ್ತು, ಮತ್ತು ನಾನು ಅವರೆಲ್ಲರ ಅಡಿಯಲ್ಲಿ ಆಡುವುದನ್ನು ಆನಂದಿಸಿದೆ” ಎಂದು ಪೂಜಾರ ಹೇಳಿದರು.

ಪೂಜಾರ ಕೊನೆಯ ಬಾರಿಗೆ ಎರಡು ವರ್ಷಗಳ ಹಿಂದೆ 2023 ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯೂಟಿಸಿ) ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಓವಲ್‌ನಲ್ಲಿ ಭಾರತ ಪರ ಆಡಿದ್ದರು. ಅವರು ದೇಶೀಯ ಕ್ರಿಕೆಟ್‌ನಲ್ಲಿ ಆಡುವುದನ್ನು ಮುಂದುವರೆಸಿದರೂ, ಕಳೆದ ವರ್ಷ ಭಾರತೀಯ ಕ್ರಿಕೆಟ್ ತಂಡವು ಪ್ರಸಾರ ಮತ್ತು ವೀಕ್ಷಕ ವಿವರಣೆಯ ಪಾತ್ರಗಳಲ್ಲಿ ತೊಡಗಿಕೊಂಡಿತು.

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

Cheteshwar Pujara: ಕ್ರಿಕೆಟ್ ವೃತ್ತಿ ಜೀವನದಲ್ಲಿ ನಾನು ಎದುರಿಸಿದ ಅತ್ಯಂತ ಕಠಿಣ ಬೌಲರ್‌ಗಳಿವರು; ಬೋಲ್ಟ್, ಸ್ಟಾರ್ಕ್ ಹೊರಗಿಟ್ಟು ನಾಲ್ವರನ್ನು ಹೆಸರಿಸಿದ ಪೂಜಾರ?