Coastal Food: ಥರ ಥರದ ಮೀನೂಟಕ್ಕೆ ಫಿದಾ ಆದ ಪ್ರವಾಸಿಗರು, ಕರಾವಳಿಯಲ್ಲಿ ತಿಂಗಳು ಪೂರಾ ನಡೆಯಲಿದೆ ವಿಭಿನ್ನ ಕಾರ್ಯಕ್ರಮ! | Mangaluru Kadri Park Food Festival features 50 stalls | ಮಂಗಳೂರು ನ್ಯೂಸ್ (Mangaluru News)

Coastal Food: ಥರ ಥರದ ಮೀನೂಟಕ್ಕೆ ಫಿದಾ ಆದ ಪ್ರವಾಸಿಗರು, ಕರಾವಳಿಯಲ್ಲಿ ತಿಂಗಳು ಪೂರಾ ನಡೆಯಲಿದೆ ವಿಭಿನ್ನ ಕಾರ್ಯಕ್ರಮ! | Mangaluru Kadri Park Food Festival features 50 stalls | ಮಂಗಳೂರು ನ್ಯೂಸ್ (Mangaluru News)

Last Updated:

ಮಂಗಳೂರು ಕದ್ರಿ ಪಾರ್ಕ್‌ನಲ್ಲಿ ಕರಾವಳಿ ಉತ್ಸವದ ಅಂಗವಾಗಿ 50 ಕ್ಕೂ ಹೆಚ್ಚು ಫುಡ್ ಸ್ಟಾಲ್‌ಗಳೊಂದಿಗೆ ಫುಡ್ ಫೆಸ್ಟಿವಲ್ ಜರುಗಿದ್ದು, ಕೋಸ್ಟಲ್ ಫುಡ್ ಪ್ರಿಯರಿಗೆ ವೈವಿಧ್ಯಮಯ ರುಚಿ ಸವಿಯಲು ಅವಕಾಶವಿತ್ತು.

+

ಇಲ್ಲಿ

ಇಲ್ಲಿ ವಿಡಿಯೋ ನೋಡಿ

ಮಂಗಳೂರು: ಈ ಜನುಮವೇ ಆಹಾ ದೊರಕಿದೆ ರುಚಿ (Taste) ಸವಿಯಲು,  ಈ ಜಗವಿದೆ ನವರಸಗಳ ಉಣಬಡಿಸಲು ಎಂಬ ಒಗ್ಗರಣೆ ಚಿತ್ರದ ಹಾಡಿನ (Song) ಸಾಲಿನಂತೆ, ಇಲ್ಲಿ ಕೋರಿ ಸುಕ್ಕ, ನೀರ್ ದೋಸೆ, ಮರ್ವಾಯಿ ಪುಂಡಿ, ಸೀ ಫುಡ್ (Sea Food) ಪ್ರೀತಿಯರಿಗೆ ಬಂಗುಡೆ,  ಡಿಸ್ಕೋ, ಅಂಗಲ್ ಫ್ರೈ ಹೀಗೆ ವೆರೈಟಿ ವೆರೈಟಿ ಕೋಸ್ಟಲ್ ಫುಡ್ ಸವಿಯಲು ರೆಡಿಯಾಗಿತ್ತು.

ಜನುಮವೇ ಆಹಾ ದೊರಕಿದೆ ರುಚಿ (Taste) ಸವಿಯಲು,  ಈ ಜಗವಿದೆ ನವರಸಗಳ ಉಣಬಡಿಸಲು ಎಂಬ ಒಗ್ಗರಣೆ ಚಿತ್ರದ ಹಾಡಿನ (Song) ಸಾಲಿನಂತೆ, ಇಲ್ಲಿ ಕೋರಿ ಸುಕ್ಕ, ನೀರ್ ದೋಸೆ, ಮರ್ವಾಯಿ ಪುಂಡಿ, ಸೀ ಫುಡ್ (Sea Food) ಪ್ರೀತಿಯರಿಗೆ ಬಂಗುಡೆ,  ಡಿಸ್ಕೋ, ಅಂಗಲ್ ಫ್ರೈ ಹೀಗೆ ವೆರೈಟಿ ವೆರೈಟಿ ಕೋಸ್ಟಲ್ ಫುಡ್ ಸವಿಯಲು ರೆಡಿಯಾಗಿತ್ತು.
ಕದ್ರಿ ಪಾರ್ಕ್‌ನಲ್ಲಿ  50 ಕ್ಕೂ ಹೆಚ್ಚು ಫುಡ್‌ ಸ್ಟಾಲ್

ಉಣಬಡಿಸಲು ಫುಡ್ ಸ್ಟಾಲ್‌ಗಳು ತಯಾರಾಗಿತ್ತು. ಅಂದಹಾಗೆ ಇದು ಕರಾವಳಿ ಉತ್ಸವ ಪ್ರಯುಕ್ತ ಮಂಗಳೂರಿನ ಕದ್ರಿ ಪಾರ್ಕ್‌ನಲ್ಲಿ ನಡೆದ ಫುಡ್ ಫೆಸ್ಟಿವಲ್ ಝಲಕ್. ಮಂಗಳೂರಿನಲ್ಲಿ ಕಳೆದ ಒಂದು ತಿಂಗಳಿನಿಂದ ಜಿಲ್ಲಾಡಳಿತದ ವತಿಯಿಂದ ವಿವಿಧ ಕಾರ್ಯಕ್ರಮ ನಡೆಯುತ್ತಿದೆ. ಅದರಂತೆ ಮಂಗಳೂರಿನ ಕದ್ರಿ ಪಾರ್ಕ್‌ನಲ್ಲಿ ಆಹಾರ ಮೇಳ ಕೂಡ ಆಯೋಜಿಸಲಾಗಿತ್ತು. ಮೂರು ದಿನಗಳ ಕಾಲ ಆಹಾರ ಮೇಳ ಆಯೋಜನೆಗೊಂಡಿದ್ದು, ಸುಮಾರು 50 ಕ್ಕೂ ಹೆಚ್ಚು ಫುಡ್ ಸ್ಟಾಲ್‌ಗಳು ವಿವಿಧ ಖಾದ್ಯಗಳನ್ನು ಆಹಾರ ಪ್ರಿಯರಿಗೆ ಉಣಬಡಿಸುತ್ತಿತ್ತು.

ಥರ ಥರ ಹಿಡಿಸಿದೆ ಮನಸಿಗೆ ಮೀನು!

ಇದನ್ನೂ ಓದಿ: Guliga Daiva: ಕಾಂತಾರದಲ್ಲಿ ನೋಡಿದ ಅಷ್ಟೂ ಗುಳಿಗರನ್ನು ನೋಡೋ ಆಸೆ ಇದ್ರೆ ಈ ಜಾಗಕ್ಕೆ ನೀವು ಬರಲೇಬೇಕು!

ಕೋಸ್ಟಲ್ ಫುಡ್,  ಈ ಫುಡ್ ಫೆಸ್ಟಿವಲ್‌ನ ಮೈನ್ ಅಟ್ರಾಕ್ಷನ್ ಆಗಿತ್ತು. ಇದರ ಜೊತೆಗೆ ಕರುಕುರು ತಿಂಡಿ, ಜ್ಯೂಸ್ ಐಸ್ ಕ್ರೀಮ್ ಸಹಿತ ವಿವಿಧ ಆಹಾರಗಳು ಗ್ರಾಹಕರನ್ನು ಇಂಪ್ರೆಸ್ ಮಾಡಿತ್ತು. ಪುಟ್ಟ ಪುಟಾಣಿ ಮಕ್ಕಳು, ಕಾಲೇಜು ವಿದ್ಯಾರ್ಥಿಗಳು ಆಹಾರ ಮೇಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬಂದರು.  ಆಹಾರ ಮೇಳಕ್ಕೆ ಬಂದವರು ತಮ್ಮಿಷ್ಟದ ಫುಡ್ ಟೆಸ್ಟ್  ಮಾಡಿ ವಾವ್ ಅಂದ್ರು. ಒಟ್ಟಿನಲ್ಲಿ ಹೋಟೆಲ್ ಹೋದ್ರೆ ಇಷ್ಟು ವೆರೈಟಿ ಫುಡ್ ಒಂದೇ ಕಡೆ ಸವಿಯೋಕೆ ಆಗಲ್ಲ. ಆದ್ರಿಲ್ಲಿ ಬೇಕು ಬೇಕಾದ ಎಲ್ಲ ಫುಡ್ ಇತ್ತು. ಹೀಗಾಗಿ ನಗರವಾಸಿಗಳು ಫುಡ್ ಫೆಸ್ಟಿವಲ್ ಎಂಜಾಯ್ ಮಾಡಿದರು.