Coastal Temples: ಯಾಕೆ ಅಮವಾಸ್ಯೆಯಂದು ಶಿವ ಸಾನಿಧ್ಯಕ್ಕೆ ಹೋಗಬೇಕು? ತುಳುನಾಡಲ್ಲಿ ಎಲ್ಲೆಲ್ಲಿ ಪುಣ್ಯಸ್ನಾನ ಮಾಡಬಹುದು? ಇಲ್ಲಿದೆ ವಿಶೇಷ ವರದಿ | Shravana Amavasya Shastra Significance of Punya Snana in Tulunadu | ದಕ್ಷಿಣ ಕನ್ನಡ

Coastal Temples: ಯಾಕೆ ಅಮವಾಸ್ಯೆಯಂದು ಶಿವ ಸಾನಿಧ್ಯಕ್ಕೆ ಹೋಗಬೇಕು? ತುಳುನಾಡಲ್ಲಿ ಎಲ್ಲೆಲ್ಲಿ ಪುಣ್ಯಸ್ನಾನ ಮಾಡಬಹುದು? ಇಲ್ಲಿದೆ ವಿಶೇಷ ವರದಿ | Shravana Amavasya Shastra Significance of Punya Snana in Tulunadu | ದಕ್ಷಿಣ ಕನ್ನಡ

Last Updated:

ತುಳುನಾಡಿನಲ್ಲಿ ಶ್ರಾವಣ ಅಮಾವಾಸ್ಯೆ ಸೋಣ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ; ಕಾರಿಂಜೇಶ್ವರ, ನರಹರಿ ಕ್ಷೇತ್ರಗಳಲ್ಲಿ ತೀರ್ಥಸ್ನಾನ, ಪಿತೃಗಳಿಗೆ ತರ್ಪಣ, ಶಿವ ಪೂಜೆ ವಿಶೇಷ ಮಹತ್ವ ಹೊಂದಿವೆ.

+

ಇಲ್ಲಿ

ಇಲ್ಲಿ ವಿಡಿಯೋ ನೋಡಿ

ದಕ್ಷಿಣ ಕನ್ನಡ: ಅಮವಾಸ್ಯೆಯಂದು ಮನೆಯಲ್ಲಿ (House) ನಾವು ನಮ್ಮ ಗಾಡಿಗಳು, ದೇವರ ಮೂರ್ತಿಗಳನ್ನು ತೊಳೆದು ಶುಚಿ ಮಾಡುವುದು ಸಾಮಾನ್ಯ. ಪ್ರಾಂತ್ಯದಿಂದ ಪ್ರಾಂತ್ಯಕ್ಕೆ ಅದು ಬೇರೆಯದೇ ರೂಪುರೇಷೆ ಪಡೆದರೂ ಕೂಡ ಭಾರತದ (India) ಎಲ್ಲಾ ಭಾಗಗಳಲ್ಲಿಯೂ ಸಾಮಾನ್ಯವಾಗಿ ಪುಣ್ಯ ಸ್ನಾನ (Holy Bath) ಮಾಡಲಾಗುತ್ತದೆ. ಆದರೆ ಅದನ್ನು ಎಲ್ಲರೂ ಮಾಡುವುದು ವಿರಳ! ಏನಿದು ಪುಣ್ಯ ಸ್ನಾನ? ದಿನವೂ ಸ್ನಾನ ಮಾಡ್ತೀವಲ್ಲ? ಅದರಲ್ಲಿ ಪುಣ್ಯ, ಪಾಪ (Sin) ಹೇಗೆ ಬಂತು? ಎಂದು ಯೋಚಿಸುತ್ತೀರಾ? ಇಲ್ಲಿದೆ ನೋಡಿ ನಿಮ್ಮ ಪ್ರಶ್ನೆಗಳಿಗೆ ಉತ್ತರ.

ಪಿತೃಗಳ ಸಂತೃಪ್ತಿಗೆ ಅಮವಾಸ್ಯೆಯ ಪುಣ್ಯ ಸ್ನಾನವೇ ಶ್ರೇಷ್ಠ!

ನಾವು ಜೀವಮಾನದಲ್ಲಿ ಸಪ್ತನದಿಗಳಾದ ಗಂಗೆ, ಯಮುನೆ, ಕಾವೇರಿ, ಗೋದಾವರಿ, ಸರಸ್ವತಿ, ನರ್ಮದಾ, ಸಿಂಧು, ಕಾವೇರಿಗೆ ಹೋಗಲು ಸಾಧ್ಯವಾಗುತ್ತದೋ ಇಲ್ಲವೋ, ಆದರೆ ನಮ್ಮ ಊರಿನ ಹತ್ತಿರದ ಪುರಾತನ ಶಿವ ಕ್ಷೇತ್ರಗಳ ನೀರನ್ನು ಯಾವಾಗಲೂ ಆ ನದಿಗಳ ನೀರೆಂದೇ ಭಾವಿಸಬೇಕು. ಶಿವನ ಕ್ಷೇತ್ರದಲ್ಲಿ ಇರುವ ನದಿ, ಕುಂಡ, ಕೊಳ, ಹೊಳೆಯಲ್ಲಿ ಸ್ನಾನ ಮಾಡಿ ನಂತರ ಶಿವನ ದರ್ಶನ ಪಡೆಯಬೇಕು. ನದಿಯಲ್ಲಿ ಸೂರ್ಯನಿಗೆ ಅಭಿಮುಖವಾಗಿ ಅರ್ಘ್ಯ ಬಿಟ್ಟರೆ ಪುಣ್ಯ ಫಲ ಲಭಿಸುತ್ತದೆ. ಅಲ್ಲದೇ ಈ ದಿನದಂದು ಪುಣ್ಯಸ್ನಾನದಿಂದ ನಮ್ಮ ಪಿತೃಗಳು ಸಂತೃಪ್ತಿ ಸಾಗುತ್ತಾರೆ ಎಂಬುದು ಶಾಸ್ತ್ರ ವಿಹಿತ.

ತುಳುನಾಡಲ್ಲಿ ಇಲ್ಲೆಲ್ಲಾ ಪುಣ್ಯಸ್ನಾನ ಮಾಡಬಹುದು!

ನಾಡಿನೆಲ್ಲೆಡೆ ಶ್ರಾವಣ ಅಮಾವಾಸ್ಯೆಯನ್ನು ಆಚರಿಸಲು ಭಕ್ತರು ಆತುರದಿಂದ ಕಾಯುತ್ತಿದ್ದಾರೆ. ತುಳುನಾಡಿನಲ್ಲಿ ಈ ಶ್ರಾವಣ ಅಮಾವಾಸ್ಯೆಯನ್ನು ಸೋಣ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. ಆಷಾಡ ಅಮಾವಾಸ್ಯೆಯಂತೆಯೇ ತುಳುನಾಡಿನ ಜನ ಶ್ರಾವಣ ಅಮಾವಾಸ್ಯೆಯ ದಿನ ಶಿವಕ್ಷೇತ್ರಗಳಿಗೆ ತೆರಳಿ ತೀರ್ಥಸ್ನಾನವನ್ನು ಮಾಡುತ್ತಾರೆ. ಜಿಲ್ಲೆಯ ಬಂಟ್ವಾಳ ತಾಲೂಕಿನ ಕಾರಿಂಜೇಶ್ವರ ಮತ್ತು ನರಹರಿ ಬೆಟ್ಟದ ಮೇಲಿರುವ ನರಹರಿ ಕ್ಷೇತ್ರದಲ್ಲಿ ತೀರ್ಥಸ್ನಾನವನ್ನು ನೆರವೇರಿಸುವ ಜೊತೆಗೆ ಮಂಗಳೂರಿನ ಉಳ್ಳಾಲದ ಸೋಮೇಶ್ವರ ದೇವಸ್ಥಾನದ ಸಮೀಪದ ಸಮುದ್ರದಲ್ಲೂ ತೀರ್ಥಸ್ನಾನ ನೆರವೇರಿಸುತ್ತಾರೆ. ಅಲ್ಲದೆ ಪುತ್ತೂರಿನ ಕೊಡಿಪ್ಪಾಡಿ ಜನಾರ್ಧನ ಕ್ಷೇತ್ರದಲ್ಲಿ ಸ್ವಯಂಭೂ ಕಾವೇರಿ ತೀರ್ಥ, ಇರ್ದೆಯ ಬೆಂದ್ರ ತೀರ್ಥದಲ್ಲೂ ಭಕ್ತರು ತೀರ್ಥಸ್ನಾನವನ್ನು ನೆರವೇರಿಸುತ್ತಾರೆ.

ಶ್ರಾವಣ ಅಮವಾಸ್ಯೆಯ ಮಹತ್ವಗಳೇನು?

Disclaimer

ಇಲ್ಲಿ ನೀಡಿರುವ ಎಲ್ಲಾ ಮಾಹಿತಿಯನ್ನು ಜ್ಯೋತಿಷ್ಯ ಶಾಸ್ತ್ರಜ್ಞರು ಮತ್ತು ತಜ್ಞರನ್ನು ಸಂಪರ್ಕಿಸಿ ರಾಶಿ, ಧರ್ಮ ಮತ್ತು ಶಾಸ್ತ್ರಗಳಿಗೆ ಅನುಸಾರವಾಗಿ ನೀಡಲಾಗಿದೆ. ಯಾವುದೇ ಘಟನೆ-ದುರ್ಘಟನೆ ಅಥವಾ ಲಾಭ-ನಷ್ಟಗಳು ಕೇವಲ ಕಾಕತಾಳೀಯ. ಸಾರ್ವಜನಿಕ ಹಿತದೃಷ್ಟಿಯಿಂದ ಜ್ಯೋತಿಷಿಗಳ ಮಾಹಿತಿ ನೀಡಲಾಗಿದೆ. ಇಲ್ಲಿ ತಿಳಿಸಿರುವ ಯಾವುದೇ ಮಾಹಿತಿಯನ್ನು ಲೋಕಲ್ 18 ವ್ಯಕ್ತಿಗತವಾಗಿ ಸಮರ್ಥಿಸಿಕೊಳ್ಳುವುದಿಲ್ಲ.