ತಂಡಕ್ಕೆ ನೆರವಾದ ತಿಲಕ್ ಶತಕ
ಎರಡು ದಿನಗಳ ಹಿಂದೆ ಪ್ರಾರಂಭವಾದ ಎಸೆಕ್ಸ್ ವಿರುದ್ಧದ ಪಂದ್ಯದಲ್ಲಿ, ತಮ್ಮ ತಂಡವು 34ಕ್ಕೆ2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಮೈದಾನಕ್ಕೆ ಇಳಿದ ತಿಲಕ್, ಉತ್ತಮ ಹಿಡಿತದಿಂದ ಬ್ಯಾಟಿಂಗ್ ಮಾಡಿ 239 ಎಸೆತಗಳಲ್ಲಿ 11 ಬೌಂಡರಿ ಮತ್ತು 3 ಸಿಕ್ಸರ್ಗಳ ಸಹಾಯದಿಂದ ತಮ್ಮ ಶತಕವನ್ನು ಪೂರೈಸಿದರು. ದುರದೃಷ್ಟವಶಾತ್, ಶತಕ ಪೂರೈಸಿದ ಕೂಡಲೇ, ಹಾರ್ಮರ್ ಡೀನ್ ಎಲ್ಗರ್ಗೆ ಕ್ಯಾಚ್ ನೀಡಿ ಔಟಾದರು.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಎಸೆಕ್ಸ್ ತಂಡ ಮೊದಲ ಇನ್ನಿಂಗ್ಸ್ ನಲ್ಲಿ 296 ರನ್ ಗಳಿಗೆ ಆಲೌಟ್ ಆಗಿತ್ತು. ಹ್ಯಾಂಪ್ಶೈರ್ ತಂಡವು 5 ವಿಕೆಟ್ಗಳ ನಷ್ಟಕ್ಕೆ 327 ರನ್ ಗಳಿಸುವ ಮೂಲಕ ತನ್ನ ಇನ್ನಿಂಗ್ಸ್ ಅನ್ನು ಮುಂದುವರಿಸಿತು (ಮೂರನೇ ದಿನದ ಮೊದಲ ಸೆಷನ್). ತಿಲಕ್ ಔಟಾದ ತಕ್ಷಣ, ಮತ್ತೊಬ್ಬ ಹ್ಯಾಂಪ್ಶೈರ್ ಆಟಗಾರ ಲಿಯಾಮ್ ಡಾಸನ್ ಕೂಡ ಶತಕ ಪೂರೈಸಿದರು. ಒಟ್ಟಾರೆ ಹ್ಯಾಂಪ್ಶೈರ್ 453 ರನ್ಗಳಿಸಿ 157 ರನ್ಗಳ ಇನ್ನಿಂಗ್ಸ್ ಮುನ್ನಡೆ ಪಡೆದುಕೊಂಡಿದೆ.
ಆಗಸ್ಟ್ 2ರ ತನಕ ಆಡಲಿರುವ ತಿಲಕ್
ತಿಲಕ್ ಹ್ಯಾಂಪ್ಶೈರ್ ಜೊತೆ ಜೂನ್ 18 ರಿಂದ ಆಗಸ್ಟ್ 2 ರವರೆಗೆ ಮಾತ್ರ ತಂಡಕ್ಕೆ ಲಭ್ಯವಿರುತ್ತಾರೆ. ಈ ಒಪ್ಪಂದದಡಿಯಲ್ಲಿ, ತಿಲಕ್ ನಾಲ್ಕು ದಿನಗಳ ಪಂದ್ಯಗಳನ್ನು ಆಡಲಿದ್ದಾರೆ. ಅವರು ವೈಟ್ಬಾಲ್ ಆಟಗಳನ್ನು ಆಡುತ್ತಾರೋ ಇಲ್ಲವೋ ಎಂಬುದು ಸ್ಪಷ್ಟವಾಗಿಲ್ಲ. ಟಿ20 ಬ್ಲಾಸ್ಟ್ ಟೂರ್ನಮೆಂಟ್ ಪ್ರಸ್ತುತ ಇಂಗ್ಲೆಂಡ್ನಲ್ಲಿ ನಡೆಯುತ್ತಿದೆ.
ತಿಲಕ್ ಅಂತರಾಷ್ಟ್ರೀಯ ಅಂಕಿ ಅಂಶ
22 ವರ್ಷದ ತಿಲಕ್ ಈ ಪಂದ್ಯಕ್ಕೂ ಮೊದಲು 18 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದು, 50 ಕ್ಕಿಂತ ಹೆಚ್ಚು ಸರಾಸರಿಯಲ್ಲಿ 1204 ರನ್ ಗಳಿಸಿದ್ದರು. ಇದರಲ್ಲಿ ಐದು ಶತಕಗಳು ಮತ್ತು ನಾಲ್ಕು ಅರ್ಧಶತಕಗಳು ಸೇರಿವೆ. ಟೀಮ್ ಇಂಡಿಯಾ ಪರ 4 ಏಕದಿನ ಮತ್ತು 25 ಟಿ20 ಪಂದ್ಯಗಳನ್ನು ಆಡಿರುವ ತಿಲಕ್, ಟಿ20ಯಲ್ಲಿ ಸ್ಪೆಷಲಿಸ್ಟ್ ಎಂಬ ಖ್ಯಾತಿಯನ್ನು ಗಳಿಸಿದ್ದಾರೆ. ಕಡಿಮೆ ಅವಧಿಯ ಕ್ರಿಕೆಟ್ನಲ್ಲಿ 2 ಶತಗಳೊಂದಿಗೆ 24 ಇನ್ನಿಂಗ್ಸ್ಗಳಲ್ಲಿ 49.93 ಸರಾಸರಿಯಲ್ಲಿ 749 ರನ್ ಗಳಿಸಿದ್ದಾರೆ.
ಇಶಾನ್ ಕಿಶನ್ ಅಬ್ಬರ
ತಿಲಕ್ಗಿಂತ ಮೊದಲು, ಇಬ್ಬರು ಯುವ ಭಾರತೀಯ ಆಟಗಾರರು ಮತ್ತು T20 ತಜ್ಞರು ಇಂಗ್ಲಿಷ್ ಕೌಂಟಿಗಳಲ್ಲಿ ಆಡಲು ಒಪ್ಪಂದಗಳಿಗೆ ಸಹಿ ಹಾಕಿದ್ದರು. ಟೀಮ್ ಇಂಡಿಯಾದ ಡೈನಮೈಟ್ ಇಶಾನ್ ಕಿಶನ್ ನಾಟಿಂಗ್ಹ್ಯಾಮ್ಶೈರ್ ತಂಡದ ಪರ, ಋತುರಾಜ್ ಗಾಯಕ್ವಾಡ್ ಯಾರ್ಕ್ಷೈರ್ ಜೊತೆ ಕೈಜೋಡಿಸಿದ್ದಾರೆ. ತಿಲಕ್ ಅವರಂತೆಯೇ ಇಶಾನ್ ಕೂಡ ತಮ್ಮ ಕೌಂಟಿ ಚೊಚ್ಚಲ ಪಂದ್ಯದಲ್ಲಿ ಗಮನ ಸೆಳೆದಿದ್ದರು. ಯಾರ್ಕ್ಷೈರ್ ವಿರುದ್ಧದ ಪಂದ್ಯದಲ್ಲಿ, ಅವರು 98 ಎಸೆತಗಳಲ್ಲಿ 12 ಬೌಂಡರಿ ಮತ್ತು ಒಂದು ಸಿಕ್ಸರ್ ನೆರವಿನಿಂದ 87 ರನ್ ಗಳಿಸಿ ಔಟಾದರು.
ನ್ಯೂಸ್ 18 ಕನ್ನಡ ಕ್ರೀಡಾ ವಿಭಾಗದಲ್ಲಿ ಕ್ರಿಕೆಟ್ ಅಪ್ಡೇಟ್ಸ್, ಮ್ಯಾಚ್ ಅಪ್ಡೇಟ್ಸ್, ಮ್ಯಾಚ್ ರಿವೀವ್ಸ್, ಲೈವ್ ಸ್ಕೋರ್ಗಳು, ಪಂದ್ಯ ವಿಶ್ಲೇಷಣೆ, ಆಟಗಾರರ ಪ್ರೊಫೈಲ್ಗಳು ಮತ್ತು ಇತರ ಕ್ರೀಡೆಗಳಿಗೆ ಸಂಬಂಧಿಸಿದ ಸುದ್ದಿಗಳನ್ನು ಪಡೆಯಿರಿ. ಹೆಚ್ಚಿನ ಸುದ್ದಿಗಳಿಗಾಗಿ ನ್ಯೂಸ್ 18 ಕನ್ನಡ ಫಾಲೋ ಮಾಡಿ
June 24, 2025 8:37 PM IST