Cricket: ಒಂದು ಎಸೆತಕ್ಕೆ ಬಂದಿತ್ತು 286 ರನ್! ಯಾವ ಕಾಲಕ್ಕೂ ಈ ದಾಖಲೆ ಬ್ರೇಕ್ ಆಗಲ್ಲ; ನಂಬಲಸಾಧ್ಯವಾದರೂ ಇದು ಸತ್ಯ! | The Unlikely Record: 286 Runs in One Ball, A Feat That May Never Be Repeated

Cricket: ಒಂದು ಎಸೆತಕ್ಕೆ ಬಂದಿತ್ತು 286 ರನ್! ಯಾವ ಕಾಲಕ್ಕೂ ಈ ದಾಖಲೆ ಬ್ರೇಕ್ ಆಗಲ್ಲ; ನಂಬಲಸಾಧ್ಯವಾದರೂ ಇದು ಸತ್ಯ! | The Unlikely Record: 286 Runs in One Ball, A Feat That May Never Be Repeated

Last Updated:

ಫೀಲ್ಡಿಂಗ್ ತಂಡದ ಆಟಗಾರರು ಚೆಂಡನ್ನು ಕೆಳಗಿಳಿಸಲು ಮರವನ್ನೇ ಕಡಿಯಲು ಕೊಡಲಿಗಳನ್ನು ತಂದರು, ಆದರೆ ಇದೂ ಕೂಡ ಸಾಧ್ಯವಾಗಲಿಲ್ಲ. ಕೊನೆಗೆ, ಚೆಂಡನ್ನು ಕೆಳಗಿಳಿಸಲು ಬಂದೂಕುಗಳನ್ನು ಬಳಸಲು ಯತ್ನಿಸಲಾಯಿತು. ಚೆಂಡು ಒಂದು ಕಡೆ ಮರದಲ್ಲಿ ನೇತಾಡುತ್ತಿತ್ತು, ಇನ್ನೊಂದೆಡೆ ಬ್ಯಾಟ್ಸ್‌ಮನ್‌ಗಳು ರನ್‌ ಗಳಿಸುತ್ತಲೇ ಇದ್ದರು. ಅಂತಿಮವಾಗಿ, ಚೆಂಡು ಕೆಳಗೆ ಬಿದ್ದಾಗ, ವಿಕ್ಟೋರಿಯಾ ತಂಡದ ಬ್ಯಾಟ್ಸ್‌ಮನ್‌ಗಳು 286 ರನ್‌ಗಳನ್ನು ಗಳಿಸಿದ್ದರು!

ಸಾಂದರ್ಭಿಕ ಚಿತ್ರಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಇಂಗ್ಲೆಂಡ್ (England) ವಿರುದ್ಧ ಎಡ್ಜ್‌ಬಾಸ್ಟನ್‌ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಕೊನೆಯ ದಿನಕ್ಕೆ ಕಾಲಿಟ್ಟಿರುವ ಭಾರತ ತಂಡವು ಗೆಲುವಿನ ದವಡೆಯಲ್ಲಿದೆ. ಇಂಗ್ಲೆಂಡ್‌ಗೆ 608 ರನ್‌ಗಳ ಗುರಿಯನ್ನು ಬೆನ್ನಟ್ಟಿತ್ತಿದೆ., ಆದರೆ ಒಂದೇ ದಿನದಲ್ಲಿ ಇಷ್ಟೊಂದು ರನ್‌ ಗಳಿಸುವುದು ಬಹುತೇಕ ಅಸಾಧ್ಯವೆಂದೇ ತಜ್ಞರು ಭಾವಿಸಿದ್ದಾರೆ. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಯಾವುದೇ ತಂಡವು 500 ರನ್‌ಗಳಿಗಿಂತ ಹೆಚ್ಚಿನ ಗುರಿಯನ್ನು ಯಶಸ್ವಿಯಾಗಿ ಚೇಸ್ ಮಾಡಿಲ್ಲ. ಇಂತಹ ಸಂದರ್ಭದಲ್ಲಿ, 536 ರನ್‌ಗಳನ್ನು ಒಂದು ದಿನದಲ್ಲಿ ಗಳಿಸುವುದು ಎವರೆಸ್ಟ್ ಶಿಖರವನ್ನೇ ಏರಿದಂತೆ ಕಷ್ಟಕರ. ಆದರೆ, ಕ್ರಿಕೆಟ್‌ನಲ್ಲಿ ಪವಾಡಗಳು ಸಂಭವಿಸದೇ ಇರುವುದಿಲ್ಲ. ಇಂತಹ ಒಂದು ಐತಿಹಾಸಿಕ ಘಟನೆ 1894ರಲ್ಲಿ ಆಸ್ಟ್ರೇಲಿಯಾದಲ್ಲಿ ಒಂದೇ ಎಸೆತದಲ್ಲಿ 286 ರನ್‌ ಗಳಿಕೆಯಾಗಿತ್ತು ಎಂಬ ಕಥೆಯನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದು.

ಒಂದೇ ಎಸೆತಕ್ಕೆ 286 ರನ್‌

ಕ್ರಿಕೆಟ್‌ನ ಆರಂಭಿಕ ದಿನಗಳಾದ 1894ರಲ್ಲಿ, ಆಸ್ಟ್ರೇಲಿಯಾದ ವಿಕ್ಟೋರಿಯಾ ಮತ್ತು ಸ್ಕ್ರಾಚ್ XI ತಂಡಗಳ ನಡುವಿನ ಒಂದು ಪಂದ್ಯದ ವರದಿಯನ್ನು ಲಂಡನ್‌ನ ಪಾಲ್-ಮಾಲ್ ಗೆಜೆಟ್ ಪತ್ರಿಕೆಯಲ್ಲಿ ಪ್ರಕಟಿಸಲಾಗಿತ್ತು. ಈ ಪಂದ್ಯದಲ್ಲಿ ಒಂದೇ ಎಸೆತದಲ್ಲಿ 286 ರನ್‌ಗಳನ್ನು ಗಳಿಸಲಾಗಿತ್ತು ಎಂಬ ಅಚ್ಚರಿಯ ಕಥೆಯಿದೆ. ಆ ದಿನಗಳಲ್ಲಿ ಟೆಸ್ಟ್ ಕ್ರಿಕೆಟ್‌ನ್ನು ಕೇವಲ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳು ಮಾತ್ರ ಆಡುತ್ತಿದ್ದವು, ಮತ್ತು ಕ್ರಿಕೆಟ್‌ನ ನಿಯಮಗಳು ಇಂದಿನಷ್ಟು ಕಟ್ಟುನಿಟ್ಟಾಗಿರಲಿಲ್ಲ.

ಮರದಲ್ಲಿ ಸಿಲುಕಿದ ಚೆಂಡು

ಪಂದ್ಯದ ಸಂದರ್ಭದಲ್ಲಿ, ವಿಕ್ಟೋರಿಯಾ ತಂಡದ ಬ್ಯಾಟ್ಸ್‌ಮನ್ ಒಬ್ಬರು ಬಲವಾಗಿ ಚೆಂಡನ್ನು ಹೊಡೆದಾಗ, ಚೆಂಡು ಮೈದಾನದ ಬೌಂಡರಿ ಗೆರೆಯ ಒಳಗಿರುವ ಒಂದು ದೊಡ್ಡ ಮರದ ಕೊಂಬೆಗಳಲ್ಲಿ ಸಿಲುಕಿಕೊಂಡಿತು. ಆಗಿನ ಕ್ರಿಕೆಟ್ ನಿಯಮಗಳ ಪ್ರಕಾರ, ಚೆಂಡು ಮೈದಾನದ ಒಳಗಿರುವವರೆಗೆ ಅದನ್ನು “ಲಾಸ್ಟ್ ಬಾಲ್” (ಮಿಸ್ಸಿಂಗ್) ಎಂದು ಘೋಷಿಸಲಾಗುತ್ತಿರಲಿಲ್ಲ. ಚೆಂಡು ಮರದಲ್ಲಿ ಸಿಲುಕಿರುವುದರಿಂದ, ಬ್ಯಾಟ್ಸ್‌ಮನ್‌ಗಳು ರನ್‌ ಗಳಿಸಲು ಶುರು ಮಾಡಿದರು. ಎದುರಾಳಿ ತಂಡದ ಆಟಗಾರರು ಚೆಂಡನ್ನು ಮರದಿಂದ ತೆಗೆಯಲು ಯತ್ನಿಸಿದರಾದರೂ, ಅವರ ಪ್ರಯತ್ನಗಳು ವಿಫಲವಾದವು.

ಕೊಡಲಿಯಿಂದ ಬಂದೂಕು ಬಳಕೆ

ಎದುರಾಳಿ ತಂಡದ ಫೀಲ್ಡರ್‌ಗಳು ಚೆಂಡನ್ನು ಕೆಳಗಿಳಿಸಲು ಕೋಲುಗಳನ್ನು ಬಳಸಿದರು, ಆದರೆ ಚೆಂಡು ತೆಗೆಯಲು ಸಾಧ್ಯವಾಗಲಿಲ್ಲ. ಈ ವಿಚಿತ್ರ ಸನ್ನಿವೇಶದಲ್ಲಿ, ಕೆಲವರು ಅಂಪೈರ್‌ಗೆ ದೂರು ನೀಡಿದರೂ, ಅಂಪೈರ್‌ಗಳು “ಚೆಂಡು ಕಣ್ಣಿಗೆ ಕಾಣುತ್ತಿದೆ, ಆದ್ದರಿಂದ ಇದನ್ನು ಮಿಸ್ಸಿಂಗ್ ಚೆಂಡು ಎಂದು ಘೋಷಿಸಲಾಗದು ಎಂದು ತೀರ್ಪು ನೀಡಿದರು. ಇದರಿಂದ ಬ್ಯಾಟ್ಸ್‌ಮನ್‌ಗಳು ಓಡುವುದನ್ನು ಮುಂದುವರೆಸಿದರು.

ಫೀಲ್ಡಿಂಗ್ ತಂಡದ ಆಟಗಾರರು ಚೆಂಡನ್ನು ಕೆಳಗಿಳಿಸಲು ಮರವನ್ನೇ ಕಡಿಯಲು ಕೊಡಲಿಗಳನ್ನು ತಂದರು, ಆದರೆ ಇದೂ ಕೂಡ ಸಾಧ್ಯವಾಗಲಿಲ್ಲ. ಕೊನೆಗೆ, ಚೆಂಡನ್ನು ಕೆಳಗಿಳಿಸಲು ಬಂದೂಕುಗಳನ್ನು ಬಳಸಲು ಯತ್ನಿಸಲಾಯಿತು. ಚೆಂಡು ಒಂದು ಕಡೆ ಮರದಲ್ಲಿ ನೇತಾಡುತ್ತಿತ್ತು, ಇನ್ನೊಂದೆಡೆ ಬ್ಯಾಟ್ಸ್‌ಮನ್‌ಗಳು ರನ್‌ ಗಳಿಸುತ್ತಲೇ ಇದ್ದರು. ಅಂತಿಮವಾಗಿ, ಚೆಂಡು ಕೆಳಗೆ ಬಿದ್ದಾಗ, ವಿಕ್ಟೋರಿಯಾ ತಂಡದ ಬ್ಯಾಟ್ಸ್‌ಮನ್‌ಗಳು 286 ರನ್‌ಗಳನ್ನು ಗಳಿಸಿದ್ದರು.

ಆಗಿನ ನಿಯಮಗಳ ವಿಶೇಷತೆ

1894ರ ಸಮಯದಲ್ಲಿ ಕ್ರಿಕೆಟ್‌ನ ನಿಯಮಗಳು ಇಂದಿನಂತಿರಲಿಲ್ಲ. ಒಂದು ಎಸೆತದಲ್ಲಿ ಗಳಿಸಬಹುದಾದ ರನ್‌ಗಳಿಗೆ ಯಾವುದೇ ಮಿತಿಯಿರಲಿಲ್ಲ. ಚೆಂಡು ಮೈದಾನದ ಒಳಗಿರುವವರೆಗೆ, ಬ್ಯಾಟ್ಸ್‌ಮನ್‌ಗಳು ರನ್‌ ಗಳಿಸುವುದನ್ನು ಮುಂದುವರೆಸಬಹುದಿತ್ತು. ಈ ಘಟನೆಯಂತಹ ಅಪರೂಪದ ಸಂದರ್ಭಗಳಲ್ಲಿ, 8-10 ರನ್‌ ಗಳಿಸುವುದು ಸಾಮಾನ್ಯವಾಗಿತ್ತಾದರೂ, 286 ರನ್‌ಗಳಂತಹ ದೊಡ್ಡ ಮೊತ್ತವು ಕ್ರಿಕೆಟ್ ಇತಿಹಾಸದಲ್ಲಿ ಒಂದು ಅಚ್ಚರಿಯ ದಾಖಲೆಯಾಗಿ ಉಳಿದಿದೆ.