Last Updated:
ಆಸ್ಟ್ರೇಲಿಯಾ ಪ್ರವಾಸದ ಸಮಯದಲ್ಲಿ ಭಾರತದ ಟಿ20 ಪಂದ್ಯಕ್ಕೂ ಅಡ್ಡಿಯಾಗಿ ರದ್ದಾಗಯವಂತೆ ಮಾಡಿದ. ಆದರೆ, ಮಳೆಯಿಂದಾಗಿ ಪಂದ್ಯಗಳು ರದ್ದಾದಾಗ, ಅಲ್ಲಿಯವರೆಗೆ ಆಟಗಾರರು ಗಳಿಸಿದ ರನ್‌ಗಳು ಮತ್ತು ವಿಕೆಟ್‌ಗಳನ್ನು ದಾಖಲೆಗಳಲ್ಲಿ ಸೇರಿಸಲಾಗುತ್ತದೆಯೇ? ಅಥವಾ ಪರಿಗಣಿಸುವುದಿಲ್ಲವೇ? ಎಂಬುದನ್ನ ಈ ಸುದ್ದಿಯಲ್ಲಿ ತಿಳಿಯೋಣ.
ಮಳೆಯಿಂದಾಗಿ (Rain) ಕ್ರಿಕೆಟ್ ಪಂದ್ಯಗಳು ರದ್ದಾದರೂ, ನಿಲ್ಲಿಸಿದರೂ ಅಭಿಮಾನಿಗಳು ತೀವ್ರ ನಿರಾಶೆಗೊಳ್ಳುತ್ತಾರೆ. ಇತ್ತೀಚೆಗೆ, ಮಳೆಯಿಂದ ಕೆಲವು ಪಂದ್ಯಗಳು ರದ್ದಾಗಿದ್ದನ್ನ ನೋಡಿದ್ದೇವೆ. ಭಾರತದಲ್ಲಿ ಡೆಯುತ್ತಿರುವ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ (Women’s World Cup) ಈಗಾಗಲೇ ಕೆಲವು ಪ್ರಮುಖ ಪಂದ್ಯಗಳನ್ನು ನುಂಗಿಹಾಕಿರುವ ವರುಣ, ಆಸ್ಟ್ರೇಲಿಯಾ ಪ್ರವಾಸದ ಸಮಯದಲ್ಲಿ ಭಾರತದ ಟಿ20 ಪಂದ್ಯಕ್ಕೂ ಅಡ್ಡಿಯಾಗಿ ರದ್ದಾಗಯವಂತೆ ಮಾಡಿದ. ಆದರೆ, ಮಳೆಯಿಂದಾಗಿ ಪಂದ್ಯಗಳು ರದ್ದಾದಾಗ, ಅಲ್ಲಿಯವರೆಗೆ ಆಟಗಾರರು ಗಳಿಸಿದ ರನ್‌ಗಳು ಮತ್ತು ವಿಕೆಟ್‌ಗಳನ್ನು ದಾಖಲೆಗಳಲ್ಲಿ ಸೇರಿಸಲಾಗುತ್ತದೆಯೇ? ಅಥವಾ ಪರಿಗಣಿಸುವುದಿಲ್ಲವೇ? ಇದಕ್ಕೆ ಸಂಬಂಧಿಸಿದ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ನಿಯಮಗಳು ಏನೇಳುತ್ತೆ? ಎಂಬುದನ್ನ ಈ ಸುದ್ದಿಯಲ್ಲಿ ತಿಳಿಯೋಣ.
ಮಳೆಯಿಂದಾಗಿ ಪಂದ್ಯ ರದ್ದಾದರೂ ಫಲಿತಾಂಶ ಬರದಿದ್ದರೂ, ಅಲ್ಲಿಯವರೆಗೆ ಆಟಗಾರರು ಗಳಿಸಿದ ಎಲ್ಲಾ ರನ್‌ಗಳು, ತೆಗೆದುಕೊಂಡ ವಿಕೆಟ್‌ಗಳು ಮತ್ತು ಕ್ಯಾಚ್‌ಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಬ್ಯಾಟಿಂಗ್ ಸರಾಸರಿ ಮತ್ತು ಬೌಲಿಂಗ್ ಸರಾಸರಿಯನ್ನು ಲೆಕ್ಕಾಚಾರ ಮಾಡುವಾಗ, ಬ್ಯಾಟ್ಸ್ಮನ್ಗಳನ್ನ ನಾಟ್ ಔಟ್ ಎಂದು ಪರಿಗಣಿಸಲಾಗುತ್ತದೆ. ಇದು ಆಟಗಾರರ ಸರಾಸರಿಯನ್ನು ಮತ್ತಷ್ಟು ಸುಧಾರಿಸಲು ನೆರವಾಗುತ್ತದೆ.
ಐದು ಪಂದ್ಯಗಳ ಟಿ20 ಸರಣಿಯ ಭಾಗವಾಗಿದ್ದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯವನ್ನು ಬುಧವಾರ ಮಳೆಯಿಂದಾಗಿ ರದ್ದುಗೊಳಿಸಲಾಯಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ, ಮಳೆಯಿಂದಾಗಿ ಪಂದ್ಯ ನಿಂತಾಗ 9.4 ಓವರ್‌ಗಳಲ್ಲಿ ವಿಕೆಟ್ ನಷ್ಟಕ್ಕೆ 97 ರನ್ ಗಳಿಸಿತ್ತು. ಅಭಿಷೇಕ್ ಶರ್ಮಾ (19) ಔಟಾದರು. ಶುಭ್‌ಮನ್ ಗಿಲ್ (37 ನಾಟೌಟ್) ಮತ್ತು ಸೂರ್ಯಕುಮಾರ್ ಯಾದವ್ (39 ಬ್ಯಾಟಿಂಗ್) ಅಜೇಯರಾಗಿ ಉಳಿದರು. ನೇಥನ್ ಎಲಿಸ್ ಒಂದು ವಿಕೆಟ್ ಪಡೆದರು. ಸೂರ್ಯಕುಮಾರ್ 150 ಸಿಕ್ಸರ್ ಪೂರೈಸಿದ್ದರು.
ಮಳೆ ನಿಲ್ಲದ ಕಾರಣ, ಹಲವಾರು ಬಾರಿ ಮೈದಾನವನ್ನು ಪರಿಶೀಲಿಸಿದ ಅಂಪೈರ್‌ಗಳು ಪಂದ್ಯವನ್ನು ಕೈಬಿಟ್ಟರು. ಇದರೊಂದಿಗೆ, ಈ ಮೊದಲ ಟಿ20 ಪಂದ್ಯವು ಫಲಿತಾಂಶ ರಹಿತ ಪಂದ್ಯವಾಗಿ ದಾಖಲಾಯಿತು. ಮತ್ತೊಂದೆಡೆ, ಅಭಿಷೇಕ್ ಶರ್ಮಾ, ಶುಭ್‌ಕುಮಾಮನ್ ಗಿಲ್ ಮತ್ತು ಸೂರ್ಯರ್ ಯಾದವ್ ಗಳಿಸಿದ ರನ್‌ಗಳು ಅವರ ವೈಯಕ್ತಿಕ ದಾಖಲೆಗೆ ಸೇರಿಕೊಂಡವು. ನೇಥನ್ ಎಲ್ಲಿಸ್ ಅವರ ವಿಕೆಟ್ ಕೂಡ ಅವರ ಖಾರೆಗೆ ಸೇರಿದವು.
ಪಂದ್ಯ ರದ್ದಾದರೂ, ಆಟಗಾರರ ಸ್ಕೋರ್‌ಗಳು ದಾಖಲೆಗೆ ಸೇರುತ್ತವೆ. ಮಳೆಯಿಂದಾಗಿ ನಿಲ್ಲಿಸಲಾದ ಪಂದ್ಯಗಳಲ್ಲಿ, ಬ್ಯಾಟ್ಸ್‌ಮನ್‌ಗಳು ಶತಕ ಗಳಿಸಿದರೂ ಅಥವಾ ಔಟಾದರೂ, ಅವರನ್ನು ದಾಖಲೆಗಳಲ್ಲಿ ಸೇರಿಸಲಾಗುತ್ತದೆ. ಇದನ್ನು ಸಾಮಾನ್ಯ ಪಂದ್ಯದಂತೆ ಪರಿಗಣಿಸಲಾಗುತ್ತದೆ.
October 30, 2025 3:45 PM IST