Cricket Record: 41 ಸಿಕ್ಸರ್, 487 ರನ್ಸ್: ಟಿ20I ನಲ್ಲಿ 14.2 ಓವರ್‌ಗಳಲ್ಲಿ ದಾಖಲೆಯ 243 ರನ್ಸ್ ಚೇಸ್ ಮಾಡಿ ಗೆದ್ದ ಕ್ರಿಕೆಟ್ ಶಿಶು | Bulgaria team world record 244 run chase in T20 cricket

Cricket Record: 41 ಸಿಕ್ಸರ್, 487 ರನ್ಸ್: ಟಿ20I ನಲ್ಲಿ 14.2 ಓವರ್‌ಗಳಲ್ಲಿ ದಾಖಲೆಯ 243 ರನ್ಸ್ ಚೇಸ್ ಮಾಡಿ ಗೆದ್ದ ಕ್ರಿಕೆಟ್ ಶಿಶು | Bulgaria team world record 244 run chase in T20 cricket

Last Updated:

ಟಿ-20 ಮಾದರಿಯ ಕ್ರಿಕೆಟ್ ಬಂದಾಗಿನಿಂದ ಬ್ಯಾಟರ್‌ಗಳ ಅಬ್ಬರಕ್ಕೆ ಬೌಲರ್‌ಗಳು ಕಂಗಾಲಾಗುವುದನ್ನು ನೋಡಬಹುದಾಗಿದೆ. ಸದ್ಯ, ಕ್ರಿಕೆಟ್‌ನ ಶಿಶುವೊಂದು ಕ್ರಿಕೆಟ್ ಜಗತ್ತಿನಲ್ಲಿ ಚರಿತ್ರೆ ಸೃಷ್ಟಿಸಿದೆ.

bulgaria Cricketbulgaria Cricket
bulgaria Cricket

ಕ್ರಿಕೆಟ್‌ನಲ್ಲಿ (Cricket) ಯಾವುದನ್ನೂ ಶಾಶ್ವತ ದಾಖಲೆ ಎಂದು ಹೇಳಲು ಸಾಧ್ಯವಿಲ್ಲ. ಪ್ರತಿನಿತ್ಯ ಒಂದೊಂದು ಹೊಸ ಹೊಸ ದಾಖಲೆಗಳು ನಿರ್ಮಾಣವಾಗುತ್ತಲೇ ಇರುತ್ತದೆ. ಅದರಲ್ಲೂ ವಿಶೇಷವಾಗಿ ಟಿ-20 ಮಾದರಿಯ ಕ್ರಿಕೆಟ್ ಬಂದಾಗಿನಿಂದ ಬ್ಯಾಟರ್‌ಗಳ ಅಬ್ಬರಕ್ಕೆ ಬೌಲರ್‌ಗಳು ಕಂಗಾಲಾಗುವುದನ್ನು ನೋಡಬಹುದಾಗಿದೆ. ಅದರಂತೆ ಟಿ-20 ಕ್ರಿಕೆಟ್‌ನಲ್ಲಿ ಬಲ್ಗೇರಿಯಾ (bulgaria) ತಂಡ ವಿಶ್ವದಾಖಲೆ ನಿರ್ಮಿಸಿದೆ.

ಬಲ್ಗೇರಿಯಾ ಮತ್ತು ಜಿಬ್ರಾಲ್ಟರ್ ನಡುವೆ ಸೋಫಿಯಾದ ನ್ಯಾಷನಲ್ ಕ್ರಿಕೆಟ್ ಅಕಾಡೆಮಿ ಮೈದಾನದಲ್ಲಿ ನಡೆದ T-20 ಪಂದ್ಯದಲ್ಲಿ ರನ್‌ಗಳ ಮಳೆಯೇ ಸುರಿದಿದೆ ಮಾತ್ರವಲ್ಲ ಬ್ಯಾಟರ್‌ಗಳ ಅಬ್ಬರಕ್ಕೆ ಬೌಂಡರಿ ಸಿಕ್ಸರ್‌ಗಳ ಸುರಿಮಳೆ ಮೈದಾನದಲ್ಲಿ ಸುರಿದಿದೆ. ಈ ಪಂದ್ಯದಲ್ಲಿ, T20 ಇತಿಹಾಸದಲ್ಲಿ ಅತಿ ವೇಗದ ರನ್ ರೇಟ್ ಪ್ರತೀ ಓವರ್‌ಗೆ 17.02 ರನ್ ಗಳಿಸುವ ಮೂಲಕ ಬಲ್ಗೇರಿಯಾ ತಂಡ ಹೊಸ ದಾಖಲೆ ಬರೆದಿದೆ.

ಮೊದಲು ಬ್ಯಾಟ್ ಮಾಡಿದ ಜಿಬ್ರಾಲ್ಟರ್ ತಂಡದ ಪರ ಆರಂಭಿಕ ಆಟಗಾರ ಫಿಲಿಪ್ ರೈಕ್ಸ್ ಕೇವಲ 33 ಎಸೆತಗಳಲ್ಲಿ 8 ಸಿಕ್ಸ್ ಹಾಗೂ 4 ಬೌಂಡರಿಗಳ ನೆರವಿನಿಂದ 73 ರನ್ ಬಾರಿಸಿದರು. ಇನ್ನು ನಾಯಕ ಇಯಾನ್ ಲ್ಯಾಟಿನ್ 28 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 7 ಫೋರ್​ಗಳೊಂದಿಗೆ 52 ರನ್​ ಸಿಡಿಸಿದರು. ಇನ್ನುಳಿದ ಬ್ಯಾಟರ್​ಗಳು ಕೂಡ ಎರಡಂಕಿ ರನ್​ಗಳನ್ನು ಕಲೆಹಾಕುವ ಮೂಲಕ ರನ್​ ಗತಿ ಹೆಚ್ಚಿಸಿದರು. ಈ ಮೂಲಕ ಜಿಬ್ರಾಲ್ಟರ್ ತಂಡವು 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 243 ರನ್​ ಕಲೆಹಾಕಿತು.

244 ರನ್​ಗಳ ಕಠಿಣ ಗುರಿ

ಈ ಗುರಿಯನ್ನು ಬೆನ್ನತ್ತಿದ ಬಲ್ಗೇರಿಯಾ ಪರ ಇಸಾ ಜಾರೊ 24 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 9 ಫೋರ್​ಗಳೊಂದಿಗೆ 69 ರನ್ ಸಿಡಿಸಿದರು. ಇನ್ನು ಮಿಲೆನ್ ಗೊಗೆವ್ 27 ಎಸೆತಗಳಲ್ಲಿ 7 ಸಿಕ್ಸ್ ಹಾಗೂ 5 ಫೋರ್​ಗಳೊಂದಿಗೆ 69 ರನ್​ ಚಚ್ಚಿದರು. ಆ ಬಳಿಕ ಬಂದ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಮನನ್ ಬಶೀರ್ 21 ಎಸೆತಗಳಲ್ಲಿ 9 ಸಿಕ್ಸ್​ ಹಾಗೂ 3 ಫೋರ್​ಗಳೊಂದಿಗೆ 71 ರನ್ ಬಾರಿಸಿ ಅಬ್ಬರಿಸಿದರು. ಆ ಮೂಲಕ ಬಲ್ಗೇರಿಯಾ ತಂಡ ಜಿಬ್ರಾಲ್ಟರ್ ತಂಡದ ವಿರುದ್ಧ ಕೇವಲ 14.2 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 244 ರನ್​ ಬಾರಿಸಿ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. ಸದ್ಯ, ಇದು ವಿಶ್ವ ದಾಖಲೆಯ ಚೇಸಿಂಗ್ ಎನಿಸಿಕೊಂಡಿದೆ.

ವಿಶ್ವ ದಾಖಲೆ

ಈ ಪಂದ್ಯದಲ್ಲಿ ಬಲ್ಗೇರಿಯಾ ತಂಡ 244 ರನ್‌ಗಳನ್ನು ಕೇವಲ 14.2 ಓವರ್‌ಗಳಲ್ಲಿ ಚೇಸ್ ಮಾಡುವ ಮೂಲಕ, ಇನ್ನಿಂಗ್ಸ್‌ನಲ್ಲಿ ಪ್ರತಿ ಓವರ್‌ಗೆ 17.02 ರನ್ ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿ ದಾಖಲೆ ಬರೆದಿದ್ದಾರೆ. ಆ ಮೂಲಕ ಟಿ-20 ಕ್ರಿಕೆಟ್​ ಇತಿಹಾಸದಲ್ಲೇ 200 ಕ್ಕಿಂತ ಅಧಿಕ ರನ್‌ಗಳನ್ನು ಅತೀ ಹೆಚ್ಚಿನ ರನ್ ರೇಟ್‌ನಲ್ಲಿ ಚೇಸ್ ಮಾಡಿದ ವಿಶ್ವ ದಾಖಲೆಯನ್ನು ಬಲ್ಗೇರಿಯಾ ತಂಡ ತನ್ನದಾಗಿಸಿಕೊಂಡಿದೆ.

41 ಸಿಕ್ಸ್​, 487 ರನ್ಸ್​

ಇನ್ನು ಈ ಪಂದ್ಯದಲ್ಲಿ 487 ರನ್​ಗಳು ಮೂಡಿಬಂದಿದ್ದು ಮತ್ತೊಂದು ವಿಶೇಷ. ಜಿಬ್ರಾಲ್ಟರ್ 243 ರನ್​ಗಳನ್ನು ಕಲೆಹಾಕಿದರೆ, ಬಲ್ಗೇರಿಯಾ 244 ರನ್​ ಕಲೆಹಾಕಿತು. ಈ ಮೂಲಕ ಉಭಯ ತಂಡಗಳು ಸೇರಿ 34.1 ಓವರ್​ಗಳಲ್ಲಿ 487 ರನ್​ಗಳನ್ನು ಕಲೆಹಾಕಿ ಹೊಸ ಇತಿಹಾಸ ಬರೆದರು.