ಟ್ರಾವಿಸ್ ಹೆಡ್ 103 ಎಸೆತಗಳಲ್ಲಿ 142 ರನ್ಗಳನ್ನು (17 ಬೌಂಡರಿ, 5 ಸಿಕ್ಸರ್ಗಳು) ಗಳಿಸಿದರು. ಮಿಚೆಲ್ ಮಾರ್ಷ್ 106 ಎಸೆತಗಳಲ್ಲಿ 100 ರನ್ಗಳನ್ನು (2 ಸಿಕ್ಸರ್ಗಳು) ಗಳಿಸಿದರು. ಕ್ಯಾಮರೂನ್ ಗ್ರೀನ್ಗೆ ಈ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಕೇವಲ 47 ಎಸೆತಗಳಲ್ಲಿ ಶತಕವನ್ನು ಪೂರೈಸಿ, ಆಸ್ಟ್ರೇಲಿಯಾದ ಒಡಿಐ ಇತಿಹಾಸದ ಎರಡನೇ ವೇಗದ ಶತಕವನ್ನು ಗಳಿಸಿದರು. ಗ್ರೀನ್ 55 ಎಸೆತಗಳಲ್ಲಿ 118* ರನ್ಗಳನ್ನು (ಅಜೇಯ) ಗಳಿಸಿದರು, ಇದರಲ್ಲಿ 8 ಸಿಕ್ಸರ್ಗಳು ಮತ್ತು 6 ಬೌಂಡರಿಗಳು ಸೇರಿದ್ದವು. ಗ್ರೀನ್ನ ಈ ಶತಕವು ಒಡಿಐ ಇತಿಹಾಸದ 11ನೇ ವೇಗದ ಶತಕವಾಗಿದೆ.
ಮೂವರು ಆಟಗಾರರ ಶತಕಗಳ ನೆರವಿನಿಂದ ಆಸ್ಟ್ರೇಲಿಯಾ ತಂಡ ಏಕದಿನ ಕ್ರಿಕೆಟ್ ಹಲವು ದಾಝಲೆ ಬ್ರೇಕ್ ಮಾಡಿತು. ಒಡಿಐ ಕ್ರಿಕೆಟ್ನ 4,897 ಪಂದ್ಯಗಳ ಇತಿಹಾಸದಲ್ಲಿ, ಒಂದೇ ಇನಿಂಗ್ಸ್ನಲ್ಲಿ ಮೊದಲ ಮೂರು ಬ್ಯಾಟ್ಸ್ಮನ್ಗಳು ಶತಕ ಗಳಿಸಿದ ಎರಡನೇ ಸಂದರ್ಭವಿದು. ಇದಕ್ಕಿಂತ ಮೊದಲು 2015ರಲ್ಲಿ ದಕ್ಷಿಣ ಆಫ್ರಿಕಾದ ಹಾಶಿಮ್ ಅಮ್ಲಾ (153*), ರಿಲೀ ರಾಸೊವ್ (128) ಮತ್ತು ಎಬಿ ಡಿವಿಲಿಯರ್ಸ್ (149) ವೆಸ್ಟ್ ಇಂಡೀಸ್ ವಿರುದ್ಧ ಈ ಸಾಧನೆ ಮಾಡಿದ್ದರು.
ಇನ್ನು ಆಸ್ಟ್ರೇಲಿಯಾ ಏಕದಿನ ಇತಿಹಾಸದಲ್ಲಿ ಮೂರನೇ ಬಾರಿ 400ರ ಗಡಿ ದಾಟಿತು. ಒಟ್ಟಾರೆ ಏಕದಿನ ಕ್ರಿಕೆಟ್ ಯಾವ ತಂಡ 400ರ ಗಡಿ ದಾಟಿದೆ ಎಂಬುದನ್ನ ಈ ಕೆಳಗೆ ನೀಡಲಾಗಿದೆ.
ಒಡಿಐ ಕ್ರಿಕೆಟ್ನಲ್ಲಿ 400ಕ್ಕೂ ಅಧಿಕ ರನ್ಗಳ ಮೊತ್ತಗಳ ಪಟ್ಟಿ
- ಆಸ್ಟ್ರೇಲಿಯಾ 434/4 ರನ್ಗಳು vs ದಕ್ಷಿಣ ಆಫ್ರಿಕಾ -2006, ಮಾರ್ಚ್ 12, 2006
ದಕ್ಷಿಣ ಆಫ್ರಿಕಾ 438/9 ರನ್ಗಳುvs ಆಸ್ಟ್ರೇಲಿಯಾ 2006-ಮಾರ್ಚ್ 12, 2006
ಶ್ರೀಲಂಕಾ 443/9 ರನ್ಗಳು vs ನೆದರ್ಲ್ಯಾಂಡ್ಸ್-ಜುಲೈ 4, 2006
ದಕ್ಷಿಣ ಆಫ್ರಿಕಾ 418/5 ರನ್ಗಳು vs ಜಿಂಬಾಬ್ವೆ-ಸೆಪ್ಟೆಂಬರ್ 20, 2006
ಭಾರತ 413/5 ರನ್ಗಳು vs ಬರ್ಮುಡಾ-ಮಾರ್ಚ್ 19, 2007
ನ್ಯೂಜಿಲೆಂಡ್ 402/2 ರನ್ಗಳು vs ಐರ್ಲೆಂಡ್, ಜುಲೈ 1, 2008
ಭಾರತ 414/7 ರನ್ಗಳು vs ಶ್ರೀಲಂಕಾ,ಡಿಸೆಂಬರ್ 15, 2009
ಶ್ರೀಲಂಕಾ 411/8 ರನ್ಗಳು vs ಭಾರತ,ಡಿಸೆಂಬರ್ 15, 2009
ಭಾರತ 401/3 ರನ್ಗಳು vs ದಕ್ಷಿಣ ಆಫ್ರಿಕಾ, ಫೆಬ್ರವರಿ 24, 2010
ಭಾರತ 418/5 ರನ್ಗಳು vs ವೆಸ್ಟ್ ಇಂಡೀಸ್, ಡಿಸೆಂಬರ್ 8, 2011
ಭಾರತ 404/5 ರನ್ಗಳು vs ಶ್ರೀಲಂಕಾ, ನವೆಂಬರ್ 13, 2014
ದಕ್ಷಿಣ ಆಫ್ರಿಕಾ 439/2 ರನ್ಗಳು vs ವೆಸ್ಟ್ ಇಂಡೀಸ್,ಜನವರಿ 18, 2015
ದಕ್ಷಿಣ ಆಫ್ರಿಕಾ 408/5 ರನ್ಗಳು vs ವೆಸ್ಟ್ ಇಂಡೀಸ್,ಫೆಬ್ರವರಿ 27, 2015
ದಕ್ಷಿಣ ಆಫ್ರಿಕಾ 411/4 ರನ್ಗಳು vs ಐರ್ಲೆಂಡ್,ಮಾರ್ಚ್ 3, 2015
ಮಾರ್ಚ್ 4, 2015- ಆಸ್ಟ್ರೇಲಿಯಾ 417/6 ರನ್ಗಳು vs ಆಫ್ಘಾನಿಸ್ತಾನ, ಮಾರ್ಚ್ 3, 2015
ಇಂಗ್ಲೆಂಡ್ 408/9 ರನ್ಗಳು vs ನ್ಯೂಜಿಲೆಂಡ್, ಜೂನ್ 9, 2015
ದಕ್ಷಿಣ ಆಫ್ರಿಕಾ 438/4 ರನ್ಗಳು vs ಭಾರತ,ಅಕ್ಟೋಬರ್ 25, 2015
ಇಂಗ್ಲೆಂಡ್ 444/3 ರನ್ಗಳು vs ಪಾಕಿಸ್ತಾನ,ಆಗಸ್ಟ್ 30, 2016
ಇಂಗ್ಲೆಂಡ್ 481/6 ರನ್ಗಳು vs ಆಸ್ಟ್ರೇಲಿಯಾ,ಜೂನ್ 19, 2018
ಇಂಗ್ಲೆಂಡ್ 418/6 ರನ್ಗಳು vs ವೆಸ್ಟ್ ಇಂಡೀಸ್,ಫೆಬ್ರವರಿ 22, 2019
ವೆಸ್ಟ್ ಇಂಡೀಸ್ 421/10 ರನ್ಗಳು vs ನ್ಯೂಜಿಲೆಂಡ್, ಜೂನ್ 24, 2019
ಇಂಗ್ಲೆಂಡ್ 498/4 ರನ್ಗಳು vs ನೆದರ್ಲ್ಯಾಂಡ್ಸ್, ಜೂನ್ 17, 2022
ಭಾರತ 409/8 ರನ್ಗಳು vs ಬಾಂಗ್ಲಾದೇಶ,ಡಿಸೆಂಬರ್ 10, 2022
ಜಿಂಬಾಬ್ವೆ 408/6 ರನ್ಗಳು vs ಯುನೈಟೆಡ್ ಸ್ಟೇಟ್ಸ್, ಜೂನ್ 26, 2023
ದಕ್ಷಿಣ ಆಫ್ರಿಕಾ 416/5 ರನ್ಗಳು vs ಆಸ್ಟ್ರೇಲಿಯಾ,ಸೆಪ್ಟೆಂಬರ್ 15, 2023
ದಕ್ಷಿಣ ಆಫ್ರಿಕಾ 428/5 ರನ್ಗಳು vs ಶ್ರೀಲಂಕಾ, ಅಕ್ಟೋಬರ್ 7, 2023
ನ್ಯೂಜಿಲೆಂಡ್ 401/6 ರನ್ಗಳು vs ಪಾಕಿಸ್ತಾನ, ನವೆಂಬರ್ 4, 2023
ಭಾರತ 410/4 ರನ್ಗಳು vs ನೆದರ್ಲ್ಯಾಂಡ್ಸ್, ನವೆಂಬರ್ 12, 202
ಇಂಗ್ಲೆಂಡ್ 400/8 ರನ್ಗಳು vs ವೆಸ್ಟ್ ಇಂಡೀಸ್ ಮೇ 29, 2025
ಆಸ್ಟ್ರೇಲಿಯಾ 431/2 ರನ್ಗಳು vs ದಕ್ಷಿಣ ಆಫ್ರಿಕಾ- ಆಗಸ್ಟ್ 24, 2025
August 24, 2025 4:33 PM IST