Last Updated:
ಸಚಿನ್, ವಿರಾಟ್ ಕೊಹ್ಲಿ (virat Kohli), ಧೋನಿ, ರೋಹಿತ್ ಶರ್ಮಾ (Rohit Sharma) ಸೇರಿ ಹಲವಾರು ಸ್ಟಾರ್ ಕ್ರಿಕೆಟಿಗರು ಲವ್ ಮ್ಯಾರೇಜ್ (Love Marriage) ಆಗಿದ್ದಾರೆ. ಅದರಲ್ಲಿ ಸಚಿನ್, ಕೊಹ್ಲಿ ಅಂತಹವರ ಲವ್ ಸ್ಟೋರೀಸ್ ಸಖತ್ ಆಸಕ್ತಿದಾಯಕವಾಗಿದೆ.
ಕ್ರಿಕೆಟಿಗರ ಲವ್ ಸ್ಟೋರಿಗಳು (Love Story) ಯಾವ ಸಿನಿಮಾ ಕಥೆಗಳಿಗೂ ಕಡಿಮೆ ಇರಲ್ಲ. ಸಚಿನ್, ವಿರಾಟ್ ಕೊಹ್ಲಿ (virat Kohli), ಧೋನಿ, ರೋಹಿತ್ ಶರ್ಮಾ (Rohit Sharma) ಸೇರಿ ಹಲವಾರು ಸ್ಟಾರ್ ಕ್ರಿಕೆಟಿಗರು ಲವ್ ಮ್ಯಾರೇಜ್ (Love Marriage) ಆಗಿದ್ದಾರೆ. ಅದರಲ್ಲಿ ಸಚಿನ್, ಕೊಹ್ಲಿ ಅಂತಹವರ ಲವ್ ಸ್ಟೋರೀಸ್ ಸಖತ್ ಆಸಕ್ತಿದಾಯಕವಾಗಿದೆ. ಆದರೆ 90ರ ದಶಕತ ಕ್ರಿಕೆಟಿಗರೊಬ್ಬರ ಲವ್ ಸ್ಟೋರಿ ಕೂಡ ಯಾವ ಸಿನಿಮಾಗೂ ಕಡಿಮೆ ಇಲ್ಲ ಎನ್ನುವುದಕ್ಕೆ ಸಾಕ್ಷಿಯಾಗಿದೆ. 15 ವರ್ಷಕ್ಕೆ ಪ್ರಥಮ ದರ್ಜೆ ಕ್ರಿಕೆಟ್ ಆಡಿದ್ದ ಕ್ರಿಕೆಟರ್ ಕೇವಲ 21 ವಯಸ್ಸಿಗೆ ತನಗಿಂತ 2 ವರ್ಷ ದೊಡ್ಡವಳನ್ನ ಪ್ರೀತಿಸಿ ವಿವಾಹವಾಗಿದ್ದರು. ಇವರ ಕಥೆಗೆ ಏಕೆ ಆಸಕ್ತಿದಾಯಕ ಎಂದರೆ ಇಬ್ಬರು ಬೇರೆ ಬೇರೆ ಧರ್ಮದವರಾಗಿದ್ದಾರೆ.
15 ವರ್ಷಕ್ಕೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಕರೀಮ್
ಹೌದು, ಅವರ ಹೆಸರು ಸಬಾ ಕರೀಮ್, ಭಾರತದ ಮಾಜಿ ಕ್ರಿಕೆಟಿಗ ಮತ್ತು ವಿಕೆಟ್ ಕೀಪರ್, ತಮ್ಮ ಆಸಕ್ತಿದಾಯಕ ಪ್ರೇಮಕಥೆ ಮತ್ತು ಕ್ರಿಕೆಟ್ ವೃತ್ತಿಜೀವನದಿಂದ ಗಮನ ಸೆಳೆದಿದ್ದಾರೆ. ಬಿಹಾರದ ಪಾಟ್ನಾದಲ್ಲಿ ಜನಿಸಿದ ಸಬಾ, ತಮ್ಮ 15ನೇ ವಯಸ್ಸಿನಲ್ಲಿ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. 1982ರಲ್ಲಿ ಬಿಹಾರ ಪರ ತಮ್ಮ ಮೊದಲ ಪ್ರಥಮ ದರ್ಜೆ ಪಂದ್ಯವನ್ನಾಡಿದ ಅವರು, ನಂತರ ಬಂಗಾಳ ತಂಡಕ್ಕಾಗಿ ಆಡಿದರು. 100ಕ್ಕೂ ಹೆಚ್ಚು ಪ್ರಥಮ ದರ್ಜೆ ಪಂದ್ಯಗಳಲ್ಲಿ 7,000ಕ್ಕಿಂತ ಹೆಚ್ಚು ರನ್ ಗಳಿಸಿದ ಸಬಾ, 1990-91ರ ರಣಜಿ ಟ್ರೋಫಿಯಲ್ಲಿ ಒರಿಸ್ಸಾ ವಿರುದ್ಧ 234 ರನ್‌ಗಳ ಗರಿಷ್ಠ ಸ್ಕೋರ್ ದಾಖಲಿಸಿದರು.
ಅಂತಾರಾಷ್ಟ್ರೀಯ ಕ್ರಿಕೆಟ್ ಕರಿಯರ್
1996ರಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ಸಬಾ ಭಾರತ ತಂಡದ ಪರ ಏಕದಿನ ಕ್ರಿಕೆಟ್‌ಗೆ (ODI) ಪಾದಾರ್ಪಣೆ ಮಾಡಿದರು. ಮೊದಲ ಪಂದ್ಯದಲ್ಲೇ 55 ರನ್ ಗಳಿಸಿ ಗಮನ ಸೆಳೆದರು, ಇದು ಅವರ ಅಂತರರಾಷ್ಟ್ರೀಯ ವೃತ್ತಿಯ ಅತ್ಯುತ್ತಮ ಸ್ಕೋರ್ ಆಗಿತ್ತು. 1996ರಿಂದ 2000ರವರೆಗೆ ಅವರು ಒಂದು ಟೆಸ್ಟ್ ಮತ್ತು 34 ಏಕದಿನ ಪಂದ್ಯಗಳನ್ನಾಡಿದರು. ಆದರೆ, 2000ರ ಏಷ್ಯಾ ಕಪ್‌ನಲ್ಲಿ ವಿಕೆಟ್ ಕೀಪಿಂಗ್ ವೇಳೆ ಕಣ್ಣಿಗೆ ಗಾಯವಾದದ್ದು ಅವರ ವೃತ್ತಿಜೀವನಕ್ಕೆ ದೊಡ್ಡ ಆಘಾತವಾಯಿತು. ಈ ಗಾಯದಿಂದಾಗಿ ಅವರ ಕ್ರಿಕೆಟ್ ವೃತ್ತಿ ಅಲ್ಪಕಾಲಿಕವಾಯಿತು, ಮತ್ತು 2001ರಲ್ಲಿ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದರು.
ಸಬಾ ಕರೀಮ್ ಲವ್ ಸ್ಟೋರಿ
ಸಬಾ ಕರೀಮ್ ತಮ್ಮ ರಣಜಿ ಆಡುತ್ತಿದ್ದ ಸಮಯದಲ್ಲಿ ದೆಹಲಿಗೆ ಸ್ಥಳಾಂತರಗೊಂಡಿದ್ದರು. ಇಲ್ಲಿ ಅವರು ಸ್ನೇಹಿತನ ಮೂಲಕ ರಶ್ಮಿಯನ್ನು ಭೇಟಿಯಾದರು. ಅವರಿಬ್ಬರೂ ಮಾತನಾಡುತ್ತಿದ್ದರು ಮತ್ತು ನಂತರ ಪರಸ್ಪರ ಭೇಟಿಯಾಗಲು ಪ್ರಾರಂಭಿಸಿದರು ಮತ್ತು ನಿಧಾನವಾಗಿ ವಿಷಯಗಳು ಪ್ರೀತಿಗೆ ತಿರುಗಿದವು. ಸಬಾ ಮುಸ್ಲಿಂ ಮತ್ತು ರಶ್ಮಿ ಹಿಂದೂ ಆಗಿದ್ದರಿಂದ ಎರಡೂ ಕುಟುಂಬಗಳು ಈ ಸಂಬಂಧವನ್ನು ಒಪ್ಪಲಿಲ್ಲ. ಎರಡು ವರ್ಷಗಳ ಕಾಲ ಮನೆಯವರನ್ನು ಮನವೊಲಿಸಿದ ನಂತರ ವಿವಾಹವಾದರು. ಸಬಾ ತಮ್ಮ ಕುಟುಂಬವನ್ನು ದೀರ್ಘಕಾಲ ಮನವೊಲಿಸಿದ ನಂತರ, 1989ರಲ್ಲಿ ರಶ್ಮಿಯೊಂದಿಗೆ ವಿವಾಹವಾದರು.
ಕಾಮೆಂಟರಿ, ಕೋಚಿಂಗ್ನಲ್ಲಿ ಮುಂದುವರಿಕೆ
ಸಬಾ ಕರೀಮ್‌ರ ಜೀವನವು ಕ್ರಿಕೆಟ್ ಮತ್ತು ಪ್ರೀತಿಯ ಸುಂದರ ಸಂಯೋಜನೆಯಾಗಿದೆ. ಅವರ ಗಾಯದಿಂದ ಕ್ರಿಕೆಟ್ ವೃತ್ತಿ ಸೀಮಿತವಾದರೂ, ಪ್ರೇಮಕಥೆಯಲ್ಲಿ ಅವರು ತಮ್ಮ ಧೈರ್ಯ ಮತ್ತು ಸಂಕಲ್ಪವನ್ನು ತೋರಿದರು. ನಿವೃತ್ತಿಯ ನಂತರ, ಸಬಾ ಕಾಮೆಂಟರಿ, ಕೋಚಿಂಗ್, ಮತ್ತು ಕ್ರಿಕೆಟ್ ಆಡಳಿತದಲ್ಲಿ ತೊಡಗಿಕೊಂಡಿದ್ದಾರೆ, ತಮ್ಮ ಜೀವನದ ಎರಡೂ ಕ್ಷೇತ್ರಗಳಲ್ಲಿ ಗುರುತು ಮೂಡಿಸಿದ್ದಾರೆ.
Cricketer Love story: 15 ವರ್ಷಕ್ಕೆ ಕ್ರಿಕೆಟ್‌ಗೆ ಪದಾರ್ಪಣೆ, 21ಕ್ಕೆ ಮದುವೆ! ಧರ್ಮವನ್ನ ಲೆಕ್ಕಿಸದೇ ತನಗಿಂತ ದೊಡ್ಡವಳನ್ನ ಮದುವೆಯಾಗಿದ್ರು ಈ ಕ್ರಿಕೆಟರ್!