CSK: ಸೋಲಿನ ಸುಳಿಯಲ್ಲಿರುವ ಸಿಎಸ್‌ಕೆಗೆ ಮತ್ತೊಂದು ಬಿಗ್ ಶಾಕ್! ಸ್ಟಾರ್ ಆಟಗಾರನ ತಂದೆ ನಿಧನ, ಬ್ಯಾಟರ್ ತವರಿಗೆ ವಾಪಸ್ | Chennai Super Kings Devon Conway father passes team pays tribute

CSK: ಸೋಲಿನ ಸುಳಿಯಲ್ಲಿರುವ ಸಿಎಸ್‌ಕೆಗೆ ಮತ್ತೊಂದು ಬಿಗ್ ಶಾಕ್! ಸ್ಟಾರ್ ಆಟಗಾರನ ತಂದೆ ನಿಧನ, ಬ್ಯಾಟರ್ ತವರಿಗೆ ವಾಪಸ್ | Chennai Super Kings Devon Conway father passes team pays tribute

Last Updated:

ಚೆನ್ನೈ ಆಟಗಾರರು ಮೈದಾನದಲ್ಲಿ ಕಳಪೆ ಪ್ರದರ್ಶನ ನೀಡುತ್ತಿದ್ದು, ಈ ನಡುವೆ ತಂಡದ ಆಟಗಾರರೊಬ್ಬರ ತಂದೆ ನಿಧನ ಹೊಂದಿದ್ದು, ಅವರು ತವರಿಗೆ ಮರಳಿದ್ದಾರೆ.

ಸಿಎಸ್‌ಕೆಸಿಎಸ್‌ಕೆ
ಸಿಎಸ್‌ಕೆ

ಐಪಿಎಲ್ 2025 ರಲ್ಲಿ (IPL) ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡ ನಿರಾಶಾದಾಯಕ ಪ್ರದರ್ಶನನೀಡುತ್ತಿದೆ. ಚೆನ್ನೈ (Chennai) ತಂಡ ಪದೇ ಪದೇ ಸೋಲುತ್ತಿದೆ. ಇದರಿಂದಾಗಿ ತಂಡವು ಪಾಯಿಂಟ್ ಟೇಬಲ್‌‌ನಲ್ಲಿ ಕೊನೆಯ ಸ್ಥಾನದಲ್ಲಿದೆ. ಚೆನ್ನೈ ಆಟಗಾರರು ಮೈದಾನದಲ್ಲಿ ಕಳಪೆ ಪ್ರದರ್ಶನ ನೀಡುತ್ತಿದ್ದು, ಈ ನಡುವೆ ತಂಡದ ಆಟಗಾರರೊಬ್ಬರ ತಂದೆ ನಿಧನ ಹೊಂದಿದ್ದು, ಅವರು ತವರಿಗೆ ಮರಳಿದ್ದಾರೆ.

ಡಿವೋನ್ ಕಾನ್ವೆ ತಂದೆ ನಿಧನ

ಆ ಆಟಗಾರ ಬೇರೆ ಯಾರೂ ಅಲ್ಲ ಅವರು ಡಿವೋನ್ ಕಾನ್ವೆ ತಂದೆ. ಅವರ ತಂದೆ ಡೆಂಟನ್ ನಿಧನರಾಗಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳ ಮೂಲಕ ಈ ಬಗ್ಗೆ ಮಾಹಿತಿ ನೀಡಿದೆ. ಏಪ್ರಿಲ್ 11 ರಿಂದ ಡೆವೊನ್ ಕಾನ್ವೇ ಸಿಎಸ್‌ಕೆ ಪರ ಆಡಿಲ್ಲ. ಸಿಎಸ್‌ಕೆ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಕಾನ್ವೇ ಮತ್ತು ಅವರ ತಂದೆಯ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಗೌರವ ಸಲ್ಲಿಸಿದೆ.

ನ್ಯೂಜಿಲೆಂಡ್ ಪರ ಆಡುವ ಡೆವೊನ್ ಕಾನ್ವೇ ಮೂಲತಃ ದಕ್ಷಿಣ ಆಫ್ರಿಕಾದವರು. ಉತ್ತಮ ಕ್ರಿಕೆಟ್ ಆಡಲು ಅವಕಾಶ ಪಡೆಯಲು ಅವರು ತಮ್ಮ ಕುಟುಂಬದೊಂದಿಗೆ ನ್ಯೂಜಿಲೆಂಡ್‌ಗೆ ಬಂದು ನೆಲೆಸಿದರು. ಏಪ್ರಿಲ್ 20 ರ ಭಾನುವಾರದಂದು ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ CSK ಆಟಗಾರರು ತೋಳಿಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಮೈದಾನಕ್ಕೆ ಇಳಿದಿದ್ದರು.

ಇದನ್ನೂ ಓದಿ: IPL 2025: ಸಿಎಸ್‌ಕೆ ಮಾಡಿದ ‘ಆ’ ಒಂದು ತಪ್ಪಿನಿಂದಲೇ ಇಂದು ಈ ಗತಿ ಬಂದಿದೆ! ಚಿನ್ನತಲಾ ಕಿಡಿಕಾರಿದ್ದು ಯಾರ ವಿರುದ್ಧ?

ಆದರೆ ಇದಕ್ಕೆ ಕಾರಣ ಏನೆಂದು ಆ ಸಮಯದಲ್ಲಿ ಅರ್ಥವಾಗಲಿಲ್ಲ. ಕಾನ್ವೇ ಅವರ ತಂದೆಯ ಮರಣದ ನಂತರ ಸಿಎಸ್‌ಕೆ ಆಟಗಾರರು ಶೋಕದಲ್ಲಿದ್ದಾರೆ ಎಂಬುದು ಸಿಎಸ್‌ಕೆ ಹಾಕಿರುವ ಪೋಸ್ಟ್ ಮೂಲಕ ಸ್ಪಷ್ಟವಾಗಿದೆ. ಇನ್ನೂ ಐಪಿಎಲ್ 2025 ರಲ್ಲಿ ಕಾನ್ವೇ ಇದುವರೆಗೆ ಕೇವಲ 3 ಪಂದ್ಯಗಳನ್ನು ಆಡಿದ್ದಾರೆ, ಇದರಲ್ಲಿ ಅವರು 127.3 ಸ್ಟ್ರೈಕ್ ರೇಟ್‌ನಲ್ಲಿ 94 ರನ್ ಗಳಿಸಿದ್ದಾರೆ.

ಸಿಎಸ್‌‌ಕೆಯಿಂದ ಭಾವನಾತ್ಮಕ ಪೋಸ್ಟ್

ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಸಿಎಸ್‌ಕೆ “ಡೆವೊನ್ ಕಾನ್ವೇ ಅವರ ತಂದೆ ನಿಧನರಾಗಿದ್ದಾರೆ, ಈ ಕಷ್ಟದ ಸಮಯದಲ್ಲಿ ಕಾನ್ವೇ ಕುಟುಂಬದ ದುಃಖವನ್ನು ನಾವು ಹಂಚಿಕೊಳ್ಳುತ್ತೇವೆ” ಎಂದು ಸಿಎಸ್‌ಕೆ ಪೋಸ್ಟ್ ಮಾಡಿದೆ. ಕಾನ್ವೇ ಕೊನೆಯ ಬಾರಿಗೆ ಏಪ್ರಿಲ್ 11 ರಂದು ಚೆನ್ನೈನಲ್ಲಿ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಆಡಿದ್ದರು. ಇದಾದ ನಂತರ, ಲಕ್ನೋ ಮತ್ತು ಮುಂಬೈ ವಿರುದ್ಧದ ಪಂದ್ಯಗಳಲ್ಲಿ ಕಾನ್ವೇ ಸಿಎಸ್‌ಕೆಯ ಆಡುವ ಹನ್ನೊಂದರಲ್ಲಿ ಇರಲಿಲ್ಲ. ಈ ಋತುವಿನಲ್ಲಿ ಸಿಎಸ್‌ಕೆ ಕಾನ್ವೇಗೆ ಹೆಚ್ಚಿನ ಅವಕಾಶಗಳನ್ನು ನೀಡಿಲ್ಲ.